ಉತ್ತರಾಖಂಡ : ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯ ನೌಕರರಿಗೆ ಅನುಮತಿ

Update: 2024-09-06 16:35 GMT

Photo: PTI

ಡೆಹ್ರಾಡೂನ್ : ಉತ್ತರಾಖಂಡ ಸರಕಾರವು ರಾಜ್ಯ ನೌಕರರು ಆರೆಸ್ಸೆಸ್ನ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವುದಕ್ಕೆ ಅನುಮತಿಯನ್ನು ನೀಡಿದೆ. ರಾಜಕೀಯ ಸಂಘಟನೆಗಳ ಪಟ್ಟಿಯಿಂದ ಆರೆಸ್ಸೆಸ್ ಅನ್ನು ಕೈಬಿಡುವ ಆದೇಶವನ್ನು ಕೇಂದ್ರ ಸರಕಾರವು ಪ್ರಕಟಿಸಿದ ಎರಡು ತಿಂಗಳ ಬಳಿಕ ಉತ್ತರಾಖಂಡ ಸರಕಾರವು ಈ ಪ್ರಕಟಣೆಯನ್ನು ನೀಡಿದೆ.

ಆರೆಸ್ಸೆಸ್ನ ಶಾಖೆಗಳು ಹಾಗೂ ಅದರ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ರಾಜ್ಯ ಸರಕಾರಿ ನೌಕರರು ಪಾಲ್ಗೊಳ್ಳುವುದು ‘ಉತ್ತರಾಖಂಡ ರಾಜ್ಯ ನೌಕರರ ನಡವಳಿಕೆ ನಿಯಮಗಳು 2002’ರ ಉಲ್ಲಂಘನೆಯೆಂದು ಪರಿಗಣಿಸಲಾಗುವುದಿಲ್ಲವೆಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆನಂದ ಬರ್ದನ್ ಪ್ರಕಟಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರಿ ಉದ್ಯೋಗಿಯು ಆರೆಸ್ಸೆಸ್ ನ ಶಾಖಾ ಮತ್ತಿತರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ಕೊಡುಗೆಯನ್ನು ನೀಡಬಹುದಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News