ರೈಲ್ ಜಿಹಾದ್ ಹೆಸರಲ್ಲಿ ವಂದೇಭಾರತ್ ಕಿಟಕಿ ಬದಲಿಕೆ ವಿಡಿಯೊ ಶೇರ್!
ಹೊಸದಿಲ್ಲಿ: ರೈಲ್ವೆ ಕಿಟಕಿಯ ಗಾಜನ್ನು ಸುತ್ತಿಗೆಯಿಂದ ಒಡೆಯುತ್ತಿರುವ ವಿಡಿಯೊವೊಂದನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಜಿಹಾದಿ ಕೃತ್ಯ ಅಥವಾ ಉಗ್ರರ ಕೃತ್ಯ ಎಂದು
ಭಿಕುಮ್ಹಾತ್ರೆ ಎಂಬ ಎಕ್ಸ್ ಖಾತೆಯಿಂದ ಇದನ್ನು ಶೇರ್ ಮಾಡಲಾಗಿದ್ದು, ಕಿಟಕಿ ಒಡೆಯುತ್ತಿರುವ ವ್ಯಕ್ತಿಯನ್ನು ರೈಲ್ ಜಿಹಾದಿ ಎಂದು ಬಿಂಬಿಸಲಾಗಿದೆ.
ಡಾ.ಮೌತ್ ಮ್ಯಾಟರ್ಸ್ʼ ಎಂಬ ಹ್ಯಾಂಡಲ್ ಮಾಡಿದ ಪೋಸ್ಟನ್ನು ಬಲಪಂಥೀಯ ಪ್ರಚಾರ ಹ್ಯಾಂಡಲ್ ʼದ ಜೈಪುರ ಡಯಲಾಗ್ʼ ಮರು ಹಂಚಿಕೊಂಡಿದ್ದು, "ಜಿಹಾದಿಗಳು ವ್ಯವಸ್ಥಿತವಾಗಿ ನಮ್ಮ ರೈಲ್ವೆಯನ್ನು ನಾಶಪಡಿಸುತ್ತಿದ್ದಾರೆ. ಈ ಬಗ್ಗೆ ನಾವೇನು ಮಾಡುತ್ತಿದ್ದೇವೆ?" ಎಂದು ಪ್ರಶ್ನಿಸಿದ್ದರು. ಅಂತೆಯೇ ರುಬಿಕಾ ಜೆ.ಲಿಯಾಕತ್ ಸೆಟೈರ್ ಖಾತೆಯಿಂದಲೂ ಇದನ್ನು ಹಂಚಿಕೊಂಡಿದ್ದು, 2.7 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ ಹಾಗೂ 1000 ಬಾರಿ ಇದನ್ನು ಮರು ಶೇರ್ ಮಾಡಲಾಗಿದೆ. ಹಲವು ಬಲಪಂಥೀಯ ಎಕ್ಸ್ ಖಾತೆಗಳು ಇದನ್ನು ಮರು ಹಂಚಿಕೊಂಡಿವೆ.
ಆದರೆ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಮಂದಿರಮೂರ್ತಿ ಎಂಬವರು, ಇದು ಹಾಳಾದ ಕಿಟಕಿಯನ್ನು ಬದಲಾಯಿಸುವ ಪ್ರಕ್ರಿಯೆ ಎಂದು ಹೇಳಿದ್ದರು. ಇವರು ತಿರುನಲ್ವೇಲಿ ಕೋಚಿಂಗ್ ಡಿಪೋದ ಹಿರಿಯ ಸೆಕ್ಷನ್ ಎಂಜಿನಿಯರ್ ಹಾಗೂ ವಂದೇಭಾರತ್ ಎಕ್ಸ್ ಪ್ರೆಸ್ ತಿರುನಲ್ವೇಲಿ ಜಂಕ್ಷನ್ ರೈಲುನಿಲ್ದಾಣದ ಉಸ್ತುವಾರಿ ಹೊಣೆ ಹೊಂದಿದವರು ಎಂದು ಇವರ ಸ್ವ-ವಿವರದಿಂದ ತಿಳಿದುಬರುತ್ತದೆ.
ಮೂಲವಾಗಿ ಈ ವಿಡಿಯೊ ಯೂಟ್ಯೂಬ್ ನಲ್ಲಿ ಮಾರ್ಚ್ 19, 2024ರಂದು ಪೋಸ್ಟ್ ಆಗಿತ್ತು ಎನ್ನುವುದು ಸತ್ಯಶೋಧನೆಯಿಂದ ತಿಳಿದುಬಂದಿದೆ. ಕಿಟಕಿ ಬದಲಾಯಿಸುವ ಮೊದಲ ಹಂತವಾಗಿ ಹಾನಿಗೀಡಾದ ಕಿಟಕಿಯನ್ನು ಒಡೆಯಲಾಗುತ್ತದೆ. ವಿಡಿಯೊದಲ್ಲಿ ಕಿಟಕಿ ಬದಲಾಯಿಸುತ್ತಿರುವ ವ್ಯಕ್ತಿ ಬಿಹಾರದ ಅರಾ ಪ್ರದೇಶ ಮನೀಶ್ ಕುಮಾರ್ ಎನ್ನುವುದು ಕೂಡಾ ದೃಢಪಟ್ಟಿದೆ.