ಭಾರತದಲ್ಲಿನ ವೇತನವು ಪಾಕಿಸ್ತಾನ, ನೈಜೀರಿಯ ದೇಶಗಳಿಗಿಂತ ಕಡಿಮೆ ಇದೆ: ಪವನ್ ಖೇರಾ

Update: 2024-07-16 11:24 GMT

ಪವನ್ ಖೇರಾ | PTI



ಹೊಸದಿಲ್ಲಿ: ಭಾರತದಲ್ಲಿನ ವೇತನವು ಪಾಕಿಸ್ತಾನ, ನೈಜೀರಿಯ ದೇಶಗಳಿಗಿಂತ ಕಡಿಮೆ ಇದೆ ಎಂದು ಜಾಗತಿಕ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೆಲಾಸಿಟಿ ಗ್ಲೋಬಲ್ 2024 ಬಿಡುಗಡೆ ಮಾಡಿರುವ ಜಗತ್ತಿನಲ್ಲೇ ಅತ್ಯಂತ ಕಡಿಮೆ ವೇತನ ಹೊಂದಿರುವ ಅಗ್ರ 10 ದೇಶಗಳ ಪೈಕಿ ಅತ್ಯಂತ ಕಳಪೆ ಶ್ರೇಯಾಂಕವನ್ನು ಭಾರತ ಹೊಂದಿದೆ. ಈ ವರದಿಯ ಚಿತ್ರವನ್ನು ಹಂಚಿಕೊಂಡಿರುವ ಪವನ್ ಖೇರಾ, "ಪ್ರಧಾನಿ ಮೋದಿಯವರು ಭಾರತವನ್ನು ವಿಶ್ವದ ಮೂರನೆ ದೊಡ್ಡ ಆರ್ಥಿಕತೆಯನ್ನಾಗಿಸುವ ಕನಸನ್ನು ಮಾರಾಟ ಮಾಡುತ್ತಿದ್ದರೂ, ವಾಸ್ತವ ಅದಕ್ಕಿಂತ ಸಾಕಷ್ಟು ಭಿನ್ನವಾಗಿದೆ" ಎಂದು ಹೇಳಿದ್ದಾರೆ.

ಅತ್ಯಂತ ಕಡಿಮೆ ಕನಿಷ್ಠ ವೇತನವಿರುವ ದೇಶಗಳ ಕುರಿತು ನಡೆಸಲಾಗಿರುವ ಜಾಗತಿಕ ಸಮೀಕ್ಷೆಯಲ್ಲಿ ಭಾರತವು ಶ್ರೀಲಂಕಾ (28 ಡಾಲರ್) ಹಾಗೂ ಕಿರ್ಗಿಸ್ತಾನ್ (28 ಡಾಲರ್‌)ಗಿಂತ ಮಾತ್ರ ಮೇಲಿದೆ. ಭಾರತದಲ್ಲಿ ಕನಿಷ್ಠ ಮಾಸಿಕ ವೇತನ 45 ಡಾಲರ್ (ರೂ. 3,760.61) ಇದ್ದರೆ, ನೈಜೀರಿಯಾದ ಕನಿಷ್ಠ ಮಾಸಿಕ ವೇತನ 76 ಡಾಲರ್ (ರೂ.‌6,351.25) ಹಾಗೂ ಪಾಕಿಸ್ತಾನದ ಕನಿಷ್ಠ ಮಾಸಿಕ ವೇತನ 114 ಡಾಲರ್ (ರೂ. 9,526.88) ಇದೆ.

ಕಾಂಗ್ರೆಸ್ ಪಕ್ಷವು ನಿರುದ್ಯೋಗ ಪ್ರಮಾಣ ಏರಿಕೆಯ ವಿಷಯವನ್ನು ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ವಿರುದ್ಧ ಮುಗಿಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News