ವಕ್ಫ್ ತಿದ್ದುಪಡಿ ಮಸೂದೆ | ನಿಗದಿತ ಅವಧಿಯಲ್ಲಿ ಜಂಟಿ ಸಂಸದೀಯ ಸಮಿತಿ ತನ್ನ ಕೆಲಸ ಮುಕ್ತಾಯಗೊಳಿಸಲಿದೆ : ಕಿರಣ್ ರಿಜಿಜು ವಿಶ್ವಾಸ

Update: 2024-09-25 13:16 GMT

ಕಿರಣ್ ರಿಜಿಜು | PC : PTI 

ಹೊಸದಿಲ್ಲಿ: ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸಮಾಲೋಚನೆಗೆ ದೀರ್ಘಾವಧಿ ಸಮಯ ಹಿಡಿಯುತ್ತಿದೆಯಾದರೂ, ವಕ್ಫ್ ತಿದ್ದುಪಡಿ ಕಾಯ್ದೆಯ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯು ನಿಗದಿತ ಅವಧಿಯಲ್ಲಿ ತನ್ನ ವರದಿ ಸಲ್ಲಿಸಲಿದೆ ಎಂಬ ವಿಶ್ವಾಸವಿದೆ ಎಂದು ಬುಧವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನಕ್ಕೂ ಮುನ್ನ ವರದಿಯನ್ನು ಸಲ್ಲಿಸುವಂತೆ ಜಂಟಿ ಸಂಸದೀಯ ಸಮಿತಿಗೆ ಸಮಯಾವಕಾಶವನ್ನು ನಿಗದಿಗೊಳಿಸಲಾಗಿದ್ದು, ಈ ಗಡುವಿನಲ್ಲಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

“ಜಂಟಿ ಸಂಸದೀಯ ಸಮಿತಿಯು ಕೆಲಸ ಮಾಡುತ್ತಿರುವ ವೇಗವನ್ನು ನೋಡಿದರೆ, ಅವರು ಷರತ್ತು ಮತ್ತು ನಿಯಮಗಳಿಗೆ ಒಳಪಟ್ಟು ನಿಗದಿತ ಅವಧಿಯಲ್ಲಿ ತಮ್ಮ ವರದಿಯನ್ನು ಸಲ್ಲಿಸಲು ಸಾಧ್ಯವಾಗಬೇಕು. ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದೊಳಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಬೇಕಿದೆ. ಅವರು ಅದನ್ನು ಪೂರೈಸಲಿದ್ದಾರೆ” ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 100 ದಿನಗಳ ಅವಧಿ ಪೂರೈಸಿದ ಪ್ರಯುಕ್ತ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕಿರಣ್ ರಿಜಿಜು ಹೇಳಿದ್ದಾರೆ.

ಆದರೆ, ಚಳಿಗಾಲದ ಅಧಿವೇಶನದ ದಿನಾಂಕಗಳನ್ನು ಈವರೆಗೆ ಪ್ರಕಟಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News