ವಯನಾಡ್‌ ಭೂಕುಸಿತ: ಮೃತರ ಸಂಖ್ಯೆ 93ಕ್ಕೆ ಏರಿಕೆ

Update: 2024-07-30 11:55 GMT

Photo: PTI

ತಿರುವನಂತಪುರಂ: ಇಂದು ಮುಂಜಾನೆ ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.

ಈ ದುರಂತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 30 ಮತ್ತು 31ರಂದು ಶೋಕಾಚರಣೆ ನಡೆಸಲು ನಿರ್ಧರಿಸಿದೆ. ಈ ಸಂದರ್ಭ ರಾಜ್ಯದ ಎಲ್ಲ ಕಡೆ ರಾಷ್ಟ್ರಧ್ವಜ ಅರ್ಧದಲ್ಲಿ ಹಾರಾಡಲಿದೆ. ಈ ಎರಡೂ ದಿನಗಳಂದು ನಡೆಯಬೇಕಿದ್ದ ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಮತ್ತು ಇತರ ಆಚರಣೆಗಳನ್ನು ಮುಂದೂಡಲಾಗಿದೆ.

ಭೂಕುಸಿತಗಳ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಆಹಾರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ರಾಜ್ಯದ ನಾಗರಿಕ ಸರಬರಾಜು ಇಲಾಖೆ ಕ್ರಮಕೈಗೊಂಡಿದೆ.

ಭೂಕುಸಿತದಿಂದ ವೈಥಿರಿ, ವೆಲ್ಲರಿಮಲ ಮತ್ತು ಮೆಪ್ಪಾಡಿ ಬಾಧಿತವಾಗಿದೆ. ಈ ಪ್ರದೇಶದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು, ಚೂರಲ್ಮಲ ಮತ್ತು ಮುಂಡಕ್ಕೈ ಸಂಪರ್ಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಆ ಸ್ಥಳಕ್ಕೆ ತಲುಪುವುದು ಕಷ್ಟಕರವಾಗಿದೆ. ಸದ್ಯ ಮುಂಡಕ್ಕೈನಲ್ಲಿ ಎನ್‌ಡಿಆರ್‌ಎಫ್‌ನ 20 ಸದಸ್ಯರ ತಂಡವವನ್ನು ನಿಯೋಜಿಸಲಾಗಿದ್ದು ಸೇತುವೆ ಕುಸಿತದಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಲ್ಲಿ ತೊಡಕುಂಟಾಗಿದೆ. ಮುಂಡಕ್ಕೈನಲ್ಲಿ ಭೂಕುಸಿತದಿಂದ ಉಂಟಾದ ಹಾನಿಯ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News