ಭಾರತೀಯರನ್ನು ಬಲವಂತವಾಗಿ ಉಕ್ರೇನ್-ರಷ್ಯಾ ಯುದ್ಧದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ನಮಗೆ ಅರಿವಿದೆ : ಕೇಂದ್ರ ಸರಕಾರ

Update: 2024-02-23 13:04 GMT

Photo: NDTV 

ಹೊಸದಿಲ್ಲಿ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಕೆಲವು ಭಾರತೀಯರು ಬಲವಂತವಾಗಿ ಬಳಕೆಯಾಗುತ್ತಿದ್ದಾರೆ ಎಂಬ ಬಗ್ಗೆ ಅರಿವಿದ್ದು, ಆ ಭಾರತೀಯರ ಬಿಡುಗಡೆಗಾಗಿ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಸರಕಾರವು ಸ್ಪಷ್ಟಪಡಿಸಿದೆ.

ಹತ್ತಾರು ಭಾರತೀಯರನ್ನು ವಂಚನೆಯಿಂದ ರಷ್ಯಾ ಸೇನೆಯ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವರದಿಗಳು ನಿನ್ನೆ ಮುನ್ನೆಲೆಗೆ ಬಂದಿದ್ದವು. ಯಾವುದೇ ಸಂಶಯ ವ್ಯಕ್ತಪಡಿಸದ ಭಾರತೀಯರಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ತಪ್ಪಾದ ಭಾಷಾಂತರದ ಮೂಲಕ ಅವರ ಪ್ರಾಥಮಿಕ ತಿಳಿವಳಿಕೆಗೆ ವಿರುದ್ಧವಾಗಿ ರಷ್ಯಾ ಸೇನೆಯ ಸೇವೆಗೆ ಅವರನ್ನು ಬಳಸಿಕೊಳ್ಳಲಾಗಿತ್ತು.

ಈ ಕುರಿತು ಇಂದು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, "ಭಾರತೀಯರು ರಷ್ಯಾ ಸೇನೆಯ ಸಹಾಯಕರ ಹುದ್ದೆಗೆ ಸಹಿ ಮಾಡಿದ್ದಾರೆ ಎಂಬ ಸಂಗತಿಯು ನಮಗೆ ತಿಳಿದಿದೆ. ಅವರ ಮುಂಚಿತ ಬಿಡುಗಡೆಗಾಗಿ ಭಾರತೀಯ ರಾಜತಾಂತ್ರಿಕರು ಸೂಕ್ತ ರಷ್ಯಾ ಪ್ರಾಧಿಕಾರಗಳೊಂದಿಗೆ ನಿಯಮಿತವಾಗಿ ಈ ವಿಷಯವನ್ನು ಚರ್ಚಿಸುತ್ತಿದ್ದಾರೆ. ಎಲ್ಲ ಭಾರತೀಯರೂ ಈ ಕುರಿತು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು ಹಾಗೂ ಈ ಸಂಘರ್ಷದಿಂದ ದೂರ ಉಳಿಯಬೇಕು ಎಂದು ನಾವು ಮನವಿ ಮಾಡುತ್ತೇವೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News