ನಾವು ಮೂಢನಂಬಿಕೆಗಳನ್ನು ಪ್ರಶ್ನಿಸಬೇಕಿದೆ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರಬೇಕಿದೆ: ಉದಯನಿಧಿ ಸ್ಟಾಲಿನ್

Update: 2023-09-11 10:52 GMT

ಉದಯನಿಧಿ ಸ್ಟಾಲಿನ್ (PTI)

ಕುಡಲೂರು: ಬಿಜೆಪಿಯಿಂದ ವ್ಯಾಪಕ ಟೀಕೆಗಳ ಬಳಿಕ ಸನಾತನ ಧರ್ಮ ಕುರಿತು ತನ್ನ ಹೇಳಿಕೆಗೆ ಇನ್ನಷ್ಟು ಬಲವಾಗಿ ಅಂಟಿಕೊಂಡಿರುವ ಡಿಎಂಕೆ ಯುವಘಟಕದ ನಾಯಕ ಹಾಗೂ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು, ಮೂಢನಂಬಿಕೆಗಳನ್ನು ಪ್ರಶ್ನಿಸಬೇಕಾದ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ರವಿವಾರ ಇಲ್ಲಿ ಶಾಸಕ ಸಬಾ ರಾಜೇಂದ್ರನ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಮಾತನಾಡಿದ ಸ್ಟಾಲಿನ್, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ರಾಜಕೀಯ ಲಾಭಗಳಿಕೆಗಾಗಿ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಹಾಗೂ ವದಂತಿಗಳು ಮತ್ತು ದ್ವೇಷವನ್ನು ಹರಡಿದ್ದಾರೆ. ನಾವು ಅಂಧಶ್ರದ್ಧೆಗಳು, ಕುರುಡು ನಂಬಿಕೆಗಳನ್ನು ಪ್ರಶ್ನಿಸುವ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರಬೇಕಾದ ಅಗತ್ಯವಿದೆ. 2021ರಲ್ಲಿ ತಮಿಳುನಾಡಿನಲ್ಲಿ ನಾವು ಕಂಡಿದ್ದ ಬದಲಾವಣೆಯಂತೆ 2024ರಲ್ಲಿ ದಿಲ್ಲಿಯಲ್ಲಿ ಅಧಿಕಾರ ಬದಲಾವಣೆಯನ್ನು ನಾವು ಕಾಣಬೇಕಿದೆ’ ಎಂದು ಹೇಳಿದರು.

ಸೆ.2ರಂದು ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭ ಸ್ಟಾಲಿನ್,‘ಸನಾತನ ಧರ್ಮದ ಮೂಲೋತ್ಪಾಟನೆ ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದು ಹೇಳಿದ್ದರು. ಅವರ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News