ಕೇಜ್ರಿವಾಲ್ ಜಾಮೀನು ಷರತ್ತು ಬಹಿರಂಗಪಡಿಸಿದ ಅಭಿಷೇಕ್ ಸಿಂಘ್ವಿ ಹೇಳಿದ್ದೇನು?

Update: 2024-09-15 03:13 GMT

ಅರವಿಂದ್ ಕೇಜ್ರಿವಾಲ್ | ಅಭಿಷೇಕ್ ಸಿಂಘ್ವಿ (PC: PTI)

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದರೂ ಕಡತಗಳಿಗೆ ಸಹಿ ಮಾಡುವಂತಿಲ್ಲ ಎಂಬ ತಪ್ಪುಮಾಹಿತಿಯನ್ನು ವ್ಯವಸ್ಥಿತವಾಗಿ ಹರಿದು ಬಿಡಲಾಗುತ್ತಿದೆ ಎಂದು ಮದ್ಯನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರ ಪರ ವಕೀಲರಾಗಿರುವ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಹಣ ದುರುಪಯೋಗ ತಡೆ ಕಾಯ್ದೆ (ಪಿಎಂಎಲ್ಎ) ಪ್ರಕರಣದಲ್ಲಿ ಜುಲೈ 12ರಂದು ದೇಶದ ಅತ್ಯುನ್ನತ ಕೋರ್ಟ್ ನೀಡಿದ್ದ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೇಜ್ರಿವಾಲ್ ಅವರ ಬಂಧನದ ಕಾನೂನು ಬದ್ಧತೆಯ ವಿಚಾರದಲ್ಲಿ ನ್ಯಾಯಮೂರ್ತಿಗಳ ನಡುವೆ ಭಿನ್ನ ಅಭಿಪ್ರಾಯಗಳಿದ್ದರೂ, ಜಾಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಸಾಂಘ್ವಿ ಈ ಸ್ಪಷ್ಟನೆ ನೀಡಿದ್ದಾರೆ.

"ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಿದ್ದರೂ ಕಡತಗಳಿಗೆ ಸಹಿ ಮಾಡುವಂತಿಲ್ಲ ಎಂಬ ತಪ್ಪುಮಾಹಿತಿ ರವಾನೆಯಗುತ್ತಿದೆ. ಇಂದಿನ ಆದೇಶ ಜುಲೈ 12ರಂದು ನೀಡಿದ್ದ ಆದೇಶಕ್ಕೆ ಯಾವ ಅಲ್ಪವಿರಾಮ ಅಥವಾ ಪೂರ್ಣವಿರಾಮವನ್ನು ಕೂಡಾ ನೀಡಿಲ್ಲ. ವಾಸ್ತವವಾಗಿ ಕೇಜ್ರಿವಾಲ್ ಯಾವುದೇ ಖಾತೆಗಳನ್ನು ಹೊಂದಿಲ್ಲ. ಅವರು ಯಾವುದೇ ಕಡತಗಳಿಗೆ ಸಹಿಮಾಡುವಂತಿಲ್ಲ. ಅವರು ಸಹಿ ಮಾಡಲೇಬೇಕಾದ ಮತ್ತು ಅವರು ಸಹಿ ಮಾಡುವ ವರ್ಗಗಳ ಕಡತಗಳು ಲೆಫ್ಟಿನೆಂಟ್ ಗವರ್ನರ್ ಗೆ ಹೋಗುವಂಥವು" ಎಂದು ಇಂಡಿಯಾ ಟುಡೇ ಟಿವಿ ಜತೆ ಮಾತನಾಡಿದ ಅವರು ವಿವರಿಸಿದರು.

ಜುಲೈ 12ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನ್ವಯ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ಗೆ ಹೋಗುವ ಎಲ್ಲ ಕಡತಗಳಿಗೆ ಸಹಿ ಮಾಡಬಹುದು. ಇತರ ಕಡತಗಳಿಗ ಅವರ ಸಚಿವರು ಸಹಿ ಮಾಡುತ್ತಾರೆ. ಅವರು ಕಾರ್ಯ ನಿರ್ವಹಿಸುವಂತಿಲ್ಲ ಎಂದು ಹೇಳುವುದು ರಾಜಕೀಯವಾಗುತ್ತದೆ. ಇಂಥ ತಂತ್ರಗಳನ್ನು ಬಳಸಿಕೊಂಡು ಚುನಾಯಿತ ಮುಖ್ಯಮಂತ್ರಿಯನ್ನು ವಜಾ ಮಾಡುವಂತಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News