ಹಿಂದುಳಿದ ವರ್ಗಗಳಲ್ಲಿರುವ ಶ್ರೀಮಂತ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಯಾಕೆ ಹೊರಗಿಡಬಾರದು?: ಸುಪ್ರೀಂ ಕೋರ್ಟ್ ಪ್ರಶ್ನೆ

Update: 2024-02-07 16:37 GMT

Photo: PTI

ಹೊಸದಿಲ್ಲಿ: ಹಿಂದುಳಿದ ವರ್ಗಗಳಲ್ಲಿರುವ ಶ್ರೀಮಂತ ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಿಂದ ಯಾಕೆ ಹೊರಗಿಡಬಾರದು ? ಹಾಗೂ ಸಾಮಾನ್ಯ ವರ್ಗದೊಂದಿಗೆ ಸ್ಪರ್ಧಿಸುವಂತೆ ಮಾಡಬಾರದು ? ಎಂದು 7 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮಂಗಳವಾರ ಪ್ರಶ್ನಿಸಿದೆ.

‘‘ಅವರನ್ನು ಮೀಸಲಾತಿ ಪಟ್ಟಿಯಿಂದ ಯಾಕೆ ಹೊರಗಿಡಬಾರದು? ಇದರಲ್ಲಿ ಕೆಲವು ಉಪ ಜಾತಿಗಳು ಉತ್ತಮ ಸಾಧನೆ ಮಾಡಿವೆ ಹಾಗೂ ಮುಂದುವರಿದಿವೆ. ಅವರು ಮೀಸಲಾತಿಯಿಂದ ಹೊರ ಬರಬೇಕು ಹಾಗೂ ಸಾಮಾನ್ಯ ವರ್ಗದವರೊಂದಿಗೆ ಸ್ಪರ್ಧಿಸಬೇಕು. ಅವರು ಅಲ್ಲಿ ಏಕೆ ಇರಬೇಕು?’’ ಎಂದು ಸಾಂವಿಧಾನಿಕ ಪೀಠದ 7 ಮಂದಿ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾಯಮೂರ್ತಿ ವಿಕ್ರಮ್ ನಾಥ್ ಪ್ರಶ್ನಿಸಿದರು.

ಈ ಮುಂದುವರಿದ ಉಪ ಜಾತಿಗಳು ತುಲನಾತ್ಮಕವಾಗಿ ಹೆಚ್ಚು ಅಂಚಿನಲ್ಲಿರುವ ಅಥವಾ ಹೆಚ್ಚು ಹಿಂದುಳಿದಿರುವ ಜಾತಿಗಳಿಗೆ ಅವಕಾಶ ಕಲ್ಪಿಸಲು ಮೀಸಲಾತಿಯ ವ್ಯಾಪ್ತಿಯಿಂದ ನಿರ್ಗಮಿಸಬಹುದು ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು. ಈಗಲೂ ಹಿಂದುಳಿದಿರುವ ಉಳಿದ ಉಪ ಜಾತಿಗಳಿಗೆ ಅವರು ಮೀಸಲಾತಿಯನ್ನು ನೀಡಲಿ ಎಂದು ವಿಕ್ರಮ್ ನಾಥ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News