ಹೈದರಾಬಾದ್: ಅಸದುದ್ದೀನ್‌ ಉವೈಸಿ ವಿರುದ್ಧ ಕಾಂಗ್ರೆಸ್‌ ನಿಂದ ಟೆನಿಸ್‌ ತಾರೆ ಸಾನಿಯಾ ಮಿರ್ಝಾ ಕಣಕ್ಕೆ?

Update: 2024-03-30 06:56 GMT

ಅಸದುದ್ದೀನ್‌ ಉವೈಸಿ (Photo: PTI)| ಸಾನಿಯಾ ಮಿರ್ಝಾ (Photo: X \ @MirzaSania)

ಹೈದರಾಬಾದ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಪಕ್ಷವು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್‌ ಉವೈಸಿ ಅವರ ವಿರುದ್ಧ ಟೆನಿಸ್‌ ತಾರೆ ಸಾನಿಯಾ ಮಿರ್ಝಾ ಅವರನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ ಎಂದು ಮೂಲಗಳು ಉಲ್ಲೇಖಿಸಿ hindustantimes.com ವರದಿ ಮಾಡಿದೆ.

ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿಯು ಗೋವಾ, ತೆಲಂಗಾಣ, ಉತ್ತರ ಪ್ರದೇಶ, ಜಾರ್ಖಂಡ್‌ ಮತ್ತು ದಾಮನ್‌ ಹಾಗೂ ದಿಯು ಇಲ್ಲಿನ 18 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಈ ಸಭೆಯಲ್ಲಿ ಸಾನಿಯಾ ಮಿರ್ಝಾ ಅವರ ಹೆಸರೂ ಚರ್ಚೆಗೆ ಬಂದಿತ್ತೆನ್ನಲಾಗಿದೆ.

ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯನ್ನು ಬಂಡವಾಳವಾಗಿಸಿ ಹೈದರಾಬಾದ್‌ ಕ್ಷೇತ್ರವನ್ನು ತನ್ನ ಮಡಿಲಿಗೆ ಸೇರಿಸುವ ಉದ್ದೇಶ ಕಾಂಗ್ರೆಸ್‌ ಪಕ್ಷಕ್ಕಿದೆ ಎನ್ನಲಾಗಿದೆ. ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಕೊನೆಯ ಬಾರಿಗೆ 1980ರಲ್ಲಿ ಜಯ ಗಳಿಸಿತ್ತು. ಆಗ ಕೆ ಎಸ್‌ ನಾರಾಯಣ್‌ ಸಂಸದರಾಗಿ ಆಯ್ಕೆಯಾಗಿದ್ದರು.

ಭಾರತ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಹಾಗೂ ಕಾಂಗ್ರೆಸ್‌ ನಾಯಕ ಮುಹಮ್ಮದ್‌ ಅಝರುದ್ದೀನ್‌ ಅವರು ಸಾನಿಯಾ ಹೆಸರು ಪ್ರಸ್ತಾಪಿಸಿದ್ದರೆನ್ನಲಾಗಿದೆ. ಅಝರುದ್ದೀನ್‌ ಅವರ ಪುತ್ರ ಮುಹಮ್ಮದ್‌ ಅಸದುದ್ದೀನ್‌ ಅವರು ಸಾನಿಯಾ ಮಿರ್ಝಾ ಅವರ ಸೋದರಿ ಅನಮ್‌ ಮಿರ್ಝಾ ಅವರನ್ನು 2019ರಲ್ಲಿ ವಿವಾಹವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News