ಡಿಸೆಂಬರ್ 2ನೇ ವಾರದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ ಸಾಧ್ಯತೆ
Update: 2023-11-08 14:50 GMT
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ ಎರಡನೇ ವಾರದಲ್ಲಿ ಆರಂಭವಾಗುವ ಹಾಗೂ ಕ್ರಿಸ್‌ಮಸ್‌ಗೆ ಮುನ್ನ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಬುಧವಾರ ತಿಳಿಸಿವೆ.
ಡಿಸೆಂಬರ್ 3ರಂದು ಐದು ರಾಜ್ಯಗಳ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ಅಧಿವೇಶನ ಆರಂಭವಾಗಲಿದೆ ಎಂದು ಅದು ತಿಳಿಸಿದೆ.
ಈ ಅಧಿವೇಶನದಲ್ಲಿ ಐಪಿಸಿ, ಸಿಆರ್‌ಪಿಸಿ ಹಾಗೂ ಎವಿಡೆನ್ಸ್ ಆ್ಯಕ್ಟ್ ಅನ್ನು ಬದಲಾಯಿಸುವಂತೆ ಕೋರುವ ಮೂರು ಪ್ರಮುಖ ಮಸೂದೆಗಳು ಪರಿಶೀಲನೆ ನಡೆಯಲಿದೆ. ಈ ಮಸೂದೆಗೆ ಸಂಬಂಧಿಸಿದ ಮೂರು ವರದಿಗಳಿಗೆ ಗೃಹ ಖಾತೆಯ ಸ್ಥಾಯಿ ಸಮಿತಿ ಈಗಾಗಲೇ ಅನುಮೋದನೆ ನೀಡಿದೆ.
ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್‌ನ 3ನೇ ವಾರದಲ್ಲಿ ಆರಂಭವಾಗುತ್ತದೆ ಹಾಗೂ ಡಿಸೆಂಬರ್ 25ಕ್ಕಿಂತ ಮುನ್ನ ಅಂತ್ಯಗೊಳ್ಳುತ್ತದೆ.