ಮಹತ್ವಾಕಾಂಕ್ಷಿ ಮಹಿಳಾ ನಾಯಕಿಯರನ್ನು ಬೆಂಬಲಿಸಲು ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಗೆ ಒಂದು ಅವಕಾಶ ಒದಗಿಸಿದೆ : ರಾಹುಲ್ ಗಾಂಧಿ

Update: 2024-09-15 11:07 GMT

Photo : PTI

ಹೊಸದಿಲ್ಲಿ : ಈಗಾಗಲೇ ಬೆಳೆದಿರುವ ಮತ್ತು ಮಹತ್ವಾಕಾಂಕ್ಷಿ ಮಹಿಳೆಯರನ್ನು ರೂಪಿಸಲು ಹಾಗೂ ಬೆಂಬಲಿಸಲು ಮಹಿಳಾ ಮೀಸಲಾತಿ ಕಾಯ್ದೆಯು ಕಾಂಗ್ರೆಸ್ ಪಕ್ಷಕ್ಕೆ ಒಂದು ಅವಕಾಶ ಒದಗಿಸಿದೆ ಎಂದು ರವಿವಾರ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ 40ನೇ ವಾರ್ಷಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಭಾರತ್ ಜೋಡೊ ಹಾಗೂ ಭಾರತ್ ನ್ಯಾಯ್ ಜೋಡೊ ಯಾತ್ರೆಗಳನ್ನು ಮಾಡಿದಾಗ ಬದಲಾವಣೆ ತರುವ ದೃಢತೆ ಹೊಂದಿರುವ ಅನೇಕ ಅದ್ಭುತ ಮಹಿಳೆಯರನ್ನು ಭೇಟಿ ಮಾಡಿದೆ ಎಂದು ಸ್ಮರಿಸಿದರು.

“ಹಲವಾರು ಮಹಿಳೆಯರಿಗೆ ಸಮಾಜವನ್ನು ಬದಲಿಸಬೇಕೆಂಬ ಉತ್ಸಾಹ, ದೃಢತೆ ಮತ್ತು ಬದ್ಧತೆ ಇದೆ. ಅನ್ಯಾಯದ ವಿರುದ್ಧ ಇರುವ ತೀಕ್ಷ್ಣ ಮತ್ತು ನಿರ್ಭಿಡೆ ಧ್ವನಿಗಳ ಪೈಕಿ ಕೆಲವು ಮಹಿಳೆಯರದ್ದಾಗಿದೆ” ಎಂದು ಅವರು ಶ್ಲಾಘಿಸಿದರು.

ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ಅರ್ಥಪೂರ್ಣ ಅವಕಾಶ ನಿರಾಕರಿಸಲು ಈ ದಿನಗಳಲ್ಲಿ ಯಾವುದೇ ಕಾರಣಗಳಿಲ್ಲ ಎಂದೂ ಅವರು ಪ್ರತಿಪಾದಿಸಿದರು.

ಇದೇ ವೇಳೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಘಟಕವನ್ನು ಹಂತಹಂತವಾಗಿ ಕಟ್ಟಿದ ಹಿಂದಿನ ಹಾಗೂ ಹಾಲಿ ಮಹಿಳಾ ನಾಯಕರು ಹಾಗೂ ಸದಸ್ಯರನ್ನು ರಾಹುಲ್ ಗಾಂಧಿ ಅಭಿನಂದಿಸಿದರು.

1984ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಘಟಕವು, ಈಗ ಕಾಂಗ್ರೆಸ್ ಪಕ್ಷದ ಮುಂಚೂಣಿ ಸಂಘಟನೆಯಾಗಿ ಬೆಳೆದು ನಿಂತಿರುವುದನ್ನೂ ಅವರು ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News