ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಯುವ ಚೆಸ್ ಮಾಂತ್ರಿಕ ಪ್ರಜ್ಞಾನಂದ

Update: 2023-08-31 17:11 GMT

ಪ್ರಜ್ಞಾನಂದ , ನರೇಂದ್ರ ಮೋದಿ | Photo: twitter \ @rpragchess

ಹೊಸದಿಲ್ಲಿ: ಭಾರತದ ಹದಿಹರೆಯದ ಚೆಸ್ ಮಾಂತ್ರಿಕ ರಮೇಶ್‍ಬಾಬು ಪ್ರಜ್ಞಾನಂದ ಗುರುವಾರ ಪ್ರಧಾನಿ ನರೇಂದ್ರ ಮೋದಿಯನ್ನು ಹೊಸದಿಲ್ಲಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು.

ಈ ಸಂದರ್ಭದಲ್ಲಿ, ಪ್ರಧಾನಿ ತನಗೆ ನೀಡಿರುವ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಪ್ರಜ್ಞಾನಂದ ಕೃತಜ್ಞತೆ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಚೆಸ್ ವಿಶ್ವಕಪ್‍ನಲ್ಲಿ ಪ್ರಜ್ಞಾನಂದ ಫೈನಲ್‍ವರೆಗೆ ತಲುಪಿದ್ದಾರೆ. ಫೈನಲ್‍ನಲ್ಲಿ ಅವರನ್ನು ವಿಶ್ವದ ನಂಬರ್ ವನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‍ಸನ್ ಸೋಲಿಸಿದ್ದಾರೆ.

“ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲಿ ಭೇಟಿಯಾಗುವ ದೊಡ್ಡ ಗೌರವ ನನಗೆ ಸಿಕ್ಕಿತು. ನನಗೆ ಮತ್ತು ನನ್ನ ಹೆತ್ತವರಿಗೆ ನೀಡಿರುವ ಬೆಂಬಲಕ್ಕಾಗಿ ನಿಮಗೆ ಕೃತಜ್ಞತೆಗಳು’’ ಎಂದು ಅವರು ಭೇಟಿಯ ಬಳಿಕ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಇಂದು ವಿಶೇಷ ಅತಿಥಿಗಳನ್ನು ಭೇಟಿ ಮಾಡಿದೆ. ಪ್ರಜ್ಞಾನಂದ, ನಿಮ್ಮನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಭೇಟಿಯಾಗಿರುವುದಕ್ಕೆ ಸಂತೋಷವಾಗಿದೆ. ನೀವು ಗೀಳು ಮತ್ತು ಕಠಿಣ ಪರಿಶ್ರಮದ ಸಾಕಾರ ರೂಪ. ಭಾರತಯ ಯುವಜನ ಏನನ್ನೂ ಜಯಿಸಬಲ್ಲರು ಎನ್ನುವುದನ್ನು ನಿಮ್ಮ ಉದಾಹರಣೆ ತೋರಿಸಿದೆ. ನಿಮ್ಮ ಬಗ್ಗೆ ಅಭಿಮಾನ ಪಡುತ್ತೇನೆ’’ ಎಂದು ಬರೆದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News