ಕೇಂದ್ರ ಸರಕಾರದ ಸೂಚನೆ ಬೆನ್ನಲ್ಲೇ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದ ವಿವಾದಾತ್ಮಕ ಸಂಚಿಕೆ ತೆಗೆದು ಹಾಕಿದ ಯೂಟ್ಯೂಬ್

Update: 2025-02-11 11:16 IST
ಕೇಂದ್ರ ಸರಕಾರದ ಸೂಚನೆ ಬೆನ್ನಲ್ಲೇ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ವಿವಾದಾತ್ಮಕ ಸಂಚಿಕೆ ತೆಗೆದು ಹಾಕಿದ ಯೂಟ್ಯೂಬ್

Photo credit: livemint.com

  • whatsapp icon

ಹೊಸದಿಲ್ಲಿ: ಕೇಂದ್ರ ಸರಕಾರದ ಸೂಚನೆ ಹಿನ್ನೆಲೆ ಹಾಸ್ಯನಟ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' (India’s Got Latent) ಕಾರ್ಯಕ್ರಮದ ವಿವಾದಾತ್ಮಕ ಸಂಚಿಕೆಯನ್ನು ಯೂಟ್ಯೂಬ್ ತೆಗೆದು ಹಾಕಿದೆ.

'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ರಣವೀರ್ ಅಲ್ಲಾಬಾಡಿಯಾ ಅಶ್ಲೀಲ ಹಾಸ್ಯಗಳನ್ನು ಮಾಡಿದ್ದಾರೆ. ಕಾರ್ಯಕ್ರಮ ವೀಕ್ಷಿಸಿದ ಅನೇಕರು ರಣವೀರ್ ಅಲ್ಲಾಬಾಡಿಯಾ ಅವರ ಹೇಳಿಕೆ ಅಸಭ್ಯ ಮತ್ತು ಆಕ್ರಮಣಕಾರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ಕುರಿತು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ, ಅಪೂರ್ವ ಮಖಿಜಾ, ಸಮಯ್ ರೈನಾ ಮತ್ತು 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದ ಆಯೋಜಕರ ವಿರುದ್ಧ ಮುಂಬೈ ಪೊಲೀಸ್ ಕಮಿಷನರ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಎಫ್ ಐಆರ್ ಕೂಡ ದಾಖಲಿಸಿಕೊಂಡಿದ್ದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರರಾದ ಕಾಂಚನ್ ಗುಪ್ತಾ ಈ ಕುರಿತು ಪ್ರತಿಕ್ರಿಯಿಸಿ, ಭಾರತ ಸರ್ಕಾರದ ಆದೇಶದ ನಂತರ ರಣವೀರ್ ಅಲ್ಲಾಬಾಡಿಯಾ ಅವರ ಅಶ್ಲೀಲ ಮತ್ತು ವಿಕೃತ ಕಾಮೆಂಟ್ ಗಳಿರುವ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಎಪಿಸೋಡ್ ಗೆ YouTube ನಿರ್ಬಂಧಿಸಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News