ಬರ ತಂದಿಟ್ಟ ದುರಂತ

Update: 2015-12-11 05:46 GMT

ತನ್ನ ಮೊಮ್ಮಿಗ ಸುಲ್ತಾನ್ ರೊಟ್ಟಿ ತಟ್ಟುತ್ತ ಕುಳಿತಿರುವಾಗ ಶಾಂತಿ ಹಸಿವಿನ ಹಿಂಸೆಯನ್ನು ಮರೆತು ಹೊದಿಕೆಯಲ್ಲಿ ಮುದುಡಿ ಮಲಗಿದ್ದಾಳೆ. ಅವಳ ಮಗ ಮತ್ತು ಸೊಸೆ 300 ಕಿಲೋಮೀಟರ್ ದೂರದ ಭೋಪಾ ಲದ ಸಿಹೋರ್‌ನಲ್ಲಿ ದಿನಗೂಲಿ ನೌಕರರಾಗಿ ದುಡಿಯಲು ಹೋಗಿದ್ದಾರೆ- ಅವರ ನಾಲ್ಕು ಮಕ್ಕಳಲ್ಲಿ ಇಬ್ಬರನ್ನು ಅಜ್ಜ-ಅಜ್ಜಿಯರ ಜೊತೆಯಲ್ಲಿಯೇ ಬಿಟ್ಟು. ಬುಂದೇಲಖಂಡ ಪ್ರಾಂತ್ಯದಲ್ಲಿರುವ ಈ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ಗಡಿಯಲ್ಲಿರುವ ಲಲಿತಪುರದ ಬದೌನ ಎಂಬ ಈ ಶಾಂತಿಯ ಊರಿನಲ್ಲಿ ಕೆಲಸವಿಲ್ಲ. ಫೆೆಬ್ರವರಿ ಮತ್ತು ಮಾರ್ಚ್‌ಚಿಂಗಳಲ್ಲಿನ ಚಳಿಗಾಲದ ಗೋಧಿಯ ಫಸಲನ್ನು ಅಕಾಲಿಕ ಮಳೆ ಮತ್ತು ಆಲಿಕಲ್ಲುಗಳು ನಾಮಾವಶೇಷ ಮಾಡಿಹಾಕಿದೆ. ಮುಂಗಾರಿನ ಬೆಳೆಯಾದ ಉರದ್ ಬೇಳೆ ಮಳೆಗಾಲ ಕೈಕೊಟ್ಟು ಮುರುಟಿಹೋಗಿರುವ ದೃಶ್ಯ ಎಲ್ಲೆಲ್ಲೂ. ಎರಡು ಬಾರಿ ಬೆಳೆಗಳು ಕೈಕೊಟ್ಟ ಸಂಕಷ್ಟ ಸಾಲದು ಎಂಬಂತೆ ಮಣ್ಣು ಶುಷ್ಕವಾಗಿ ಚಳಿಗಾಲದ ಗೋಧಿ ಬೇಸಾಯವೂ ಸಾಧ್ಯವಾಗುತ್ತಿಲ್ಲ. ಹಾಗೊಮ್ಮೆ ಮಾಡಿದವರೂ ಸ್ವಲ್ಪವೇ ಪ್ರಮಾಣದಲ್ಲಿ ಬೇಸಾಯ ನಡೆಸುತ್ತಿದ್ದಾರೆ. ಶಾಂತಿಯಂತಹ ಸಿಹೋರ್‌ನ ಆದಿವಾಸಿಗೆ ಅವಳದ್ದೇ ಆದ ಭೂಮಿಯಿಲ್ಲ. ಬೇರೆಯವರ ಭೂಮಿಯಲ್ಲೂ ದುಡಿಯಲು ಅವಕಾಶ ವಿಲ್ಲದೆ, ಹೆಚ್ಚೇನೂ ಮಾಡಲಿಲ್ಲ, ತಿನ್ನಲು ಆಹಾರವೂ ಇಲ್ಲ. ನಿಧಾನಕ್ಕೆ ಎದ್ದು ಕೂರುತ್ತ ಶಾಂತಿ ನನಗೆ ಈಗ ನಾಲ್ಕು ಐದು ರೊಟ್ಟಿ ಯಾದರೂ ಹೊಟ್ಟೆ ತುಂಬಲು ಬೇಕು. ಆದರೆ ನನಗೆ ಅಷ್ಟು ಸಿಗುತ್ತಿಲ್ಲ. ಒಂದೂವರೆ ಎರಡು ರೊಟ್ಟಿ ಸಿಕ್ಕರೆ ಅದೇ ಹೆಚ್ಚು ಎಂದು ಕಷ್ಟಪಟ್ಟು ಉಸುರುತ್ತಾಳೆ. ಮಕ್ಕಳು ತಿಂದ ಮೇಲೆ ಏನು ಉಳಿಯುವುದೋ ಅದನ್ನು ತಿನ್ನುವೆ ಎಂಬ ಅವಳ ಮಾತು ಹತಾಶೆಯಿಂದ ನಡುಗುತ್ತದೆ. ನಮ್ಮ ಮಾತನ್ನು ಕೇಳುತ್ತ ನಿಂತಿದ್ದ ಶಾಂತಿಗಿಂತಲೂ ಸ್ವಲ್ಪ ಸಣ್ಣವ ಳಾದ ಕುಂದನ್ ದೇವಿ ನಾವು ಏನು ತಿನ್ನುತ್ತಿದ್ದೇವೆ ಎಂಬುದನ್ನು ನಿಮಗೆ ತೋರಿಸುತ್ತೇನೆ ಎಂದು ಒಳಗೆ ಹೋಗಿ ತಂದದ್ದು ಇದು: ಅಲ್ಲಿ ಗೋಧಿಯ ಹಿಟ್ಟು ಮತ್ತು ಯಾವುದೋ ಕಾಡಿನ ಎಲೆಗಳ ಮಿಶ್ರಣದಿಂದ ಮಾಡಿದ ಒಂದಿಷ್ಟು ರೊಟ್ಟಿಗಳಿದ್ದವು. ಶಾಂತಿಯ ಮನೆಯ ಸಣ್ಣ ಜಗಲಿ ನೆರೆಹೊರೆಯವರಿಂದ ಕಿಕ್ಕಿರಿದು ತುಂಬಿತ್ತು. ಅವರಲ್ಲಿ ಯಾರೋ ಒಬ್ಬ ಹುಲ್ಲು ತಿನ್ನುತ್ತಾ ಇದ್ದೇವೆ, ನಾವು ಹುಲ್ಲು! ಎಂದು ಚೀರಿದ. ಅಷ್ಟರಲ್ಲಿ ಬುಟ್ಟಿ ಹೊತ್ತು ಸಾಗುತ್ತಿದ್ದ ವಯ ಸ್ಸಾದ ಮಹಿಳೆಯೊಬ್ಬಳು ಕಂಡಳು. ಅವಳ ಹೆಸರು ಬಿನಿಯಾ ಬಾಯಿ. ಅದರಲ್ಲಿ, ರೈತನೊಬ್ಬ ಗೋಧಿಯನ್ನು ಕಣಮಾಡಿಯಾದ ಮೇಲೆ ಉಳಿದ ಬೇಳೆಕಾಳುಗಳ ಹೊಟ್ಟು ತುಂಬಿತ್ತು. ಮತ್ತು ಒಂದಿಷ್ಟು ಅಕ್ಕಿ ಯಂತಹ ಧಾನ್ಯಗಳೂ, ಸಮಾಯಿ ಎಂಬ ಕಳೆಯ ಬೀಜಗಳೂ ಇದ್ದವು. ಬಟ್ಟೆಯನ್ನು ನೆಲಕ್ಕೆ ಒತ್ತಿ ಅದು ಹಿಡಿದುಕೊಳ್ಳುವ ಈ ಬೀಜಗಳನ್ನು ದಿನವಿಡೀ ಕಷ್ಟಪಟ್ಟು ಆಯ್ದುಕೊಂಡು ಆಕೆ ಹೊತ್ತುತಂದಿದ್ದಳು. ಬಟ್ಟೆಯನ್ನು ನೆಲಕ್ಕೆ ಒತ್ತಿದಾಗ ಅದು ಈ ಬೀಜಗಳನ್ನು ಹಿಡಿದುಕೊಳ್ಳುತ್ತದೆ, ಅದನ್ನು ಮನೆಗೆ ತಂದು ಕುಟ್ಟಿ ಪುಡಿಮಾಡಿ, ಬೇಳೆಗಳ ಹೊಟ್ಟಿನೊಂದಿಗೆ ಕಲೆಸಿ ಈ ರೊಟ್ಟಿಗಳನ್ನು ತಯಾರಿಸುವಳು ಅವಳು. ಸಮಾಯಿ ಕಳೆಯನ್ನು ತಿಂದು ಬದುಕುತ್ತಿರುವುದು ಇದೇ ಮೊದಲಲ್ಲ. ಆದರೆ ಇದಕ್ಕಿಂತ ಹಿಂದೆ ಯಾವಾಗಲೂ ಅವುಗಳನ್ನು ಹೆಕ್ಕಿತರಲು ಎರಡು ಊರುಗಳನ್ನು ದಾಟಿ ಹೋಗುವಷ್ಟು ದೂರ ಕ್ರಮಿಸಬೇಕಾಗಿರಲಿಲ್ಲ. ಈ ಬಾರಿಯ ಮಳೆ ಎಷ್ಟರ ಮಟ್ಟಿಗೆ ಕೈಕೊಟ್ಟಿದೆ ಎಂದರೆ ಕಳೆ ಕೂಡಾ ಬೆಳೆಯುತ್ತಿಲ್ಲ. ಮರೆಯಾದ ಮಳೆಲಲಿತಪುರಕ್ಕೆ ಬರ ಹೊಸದೇನಲ್ಲ. ಸುಮಾರು 150 ವರ್ಷಗಳ ಹಿಂದೆ ಇಂಥದ್ದೇ ಒಂದು ಸತತ 2 ವರ್ಷಗಳವರೆಗೆ ಬರಗಾಲ ಬಂದಿದ್ದನ್ನು ವಿಲಿಯಂ ವಿಲ್ಸನ್ ಹಂಟರ್ ಇಂಪೀರಿಯಲ್ ಗೆಜೆಟ್ ನಲ್ಲಿ ದಾಖಲಿಸಿದ್ದ.
ಲಲಿತಪುರವು ಆಲಿಕಲ್ಲು, ಮಿಡತೆಗಳ ಕಾಟ, ಗಿಡಗಳಿಗೆ ಸಂಬಂಧಿ ಸಿದ ರೋಗಬಾಧೆಗಳ ಕಾರಣದಿಂದ ಫಸಲನ್ನು ಕಳೆದುಕೊಳ್ಳುವುದು ಎಂದಿನ ವಿಷಯವಾಗಿದೆ. ಆದರೆ ಅದಕ್ಕಿಂತ ಮುಖ್ಯವಾದ ಕಾರಣ ಬರ. 1868-69ರ ಮಹಾನ್ ಕ್ಷಾಮಕ್ಕೆ ಇದೇ ಕಾರಣವಾಗಿತ್ತು. 1868 ರ ಖಾರಿಪ್ ಬೆಳೆಯು ನಾಶವಾಗಿ ಹೋಗಲು ಇದೇ ಪ್ರಮುಖವಾದ ಕಾರಣವಾಗಿತ್ತು. ಮಳೆಯ ಆವಶ್ಯಕತೆ ಮತ್ತು ನೀರಿನ ಕೊರತೆಯಿಂದ 1869ರ ರಾಬಿ ಫಸಲು ಸಹ ಸಹಜಕ್ಕಿಂತ ಕೇವಲ ಅರೆಪಾಲು ಫಸಲನ್ನಷ್ಟೇ ನೀಡಿತ್ತು ಇತ್ತೀಚೆಗೆ ಅಂದರೆ 2002ರಿಂದ ಬುಂದೇಲಖಂಡದ ಇತರೇ ಜಿಲ್ಲೆ ಗಳಂತೆ ಲಲಿತಪುರವೂ, ಮಳೆಯ ಅಸಹಜ ಸುರಿಯುವಿಕೆಯಿಂದಾಗಿ ಕ್ಷಾಮಕ್ಕೆ ಸಿಲುಕಿದೆ. ಈ ಸಮಸ್ಯೆ ಎಷ್ಟರಮಟ್ಟಿಗೆ ಬಿಗಡಾಯಿಸಿತೆಂದರೆ ಕೇಂದ್ರ ಸರಕಾರವು ಇದರ ಪರಿಹಾರಾರ್ಥ 7,266 ಕೋಟಿ ರೂ.ಗಳ ಪರಿಹಾರ ಪ್ಯಾಕೆಜ್ ಅನ್ನು ಬುಂದೇಲಖಂಡದ ಮರುನಿರ್ಮಾಣಕ್ಕಾಗಿ 2009ರಲ್ಲಿ ಘೋಷಿಸಬೇಕಾಯಿತು. ಆದರೆ ಈ ವರ್ಷ ಆಗಿರುವಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಅವರು ಯಾರು ನೋಡಿದ ನೆನಪಿಲ್ಲ. ಇದು ಎಲ್ಲ ವರ್ಷಗಳಲ್ಲೇ ಅತ್ಯಂತ ಕಡಿಮೆಯಾದ್ದಾಗಿದೆ. ಬದುಹಾನ ಗ್ರಾಮದ ಲಲಿತ ದೇವಿ ಹೇಳುವಂತೆ ಮುಂಗಾರಿನ ಮಳೆ ಚಳಿಗಾಲದ ಮಳೆಯಷ್ಟು ಪ್ರಮಾಣದಲ್ಲಿ ಸುರಿಯಿತು. ಅದೂ ಕೆಲವೇ ಗಂಟೆಗಳು ಸುರಿದ ಒಂದೆರಡು ಮಳೆಯಷ್ಟೇ. ಪುರಕಲನ್ ಗ್ರಾಮದ ಬಾಬುಲಾಲ್ ಸುರಿದ ನೀರು ಹರಿದು ಹೋಗುವಷ್ಟು ಪ್ರಮಾ ಣದಲ್ಲೂ ಇರಲಿಲ್ಲ ಎನ್ನುತ್ತಾರೆ. ಎನ್.ಜಿ.ಓ ಒಂದರ ಕಾರ್ಯಕರ್ತ ಮನ್ವೇಂದ್ರ ಈ ಬಾರಿಯ ಸ್ಥಿತಿ ಬರಕ್ಕಿಂತ ಒಂದು ಹೆಜ್ಜೆ ಹೆಚ್ಚಿನದ್ದೇ ಎಂದು ಹೇಳುತ್ತಾರೆ. ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳೇ ಜನರ ಅಭಿಪ್ರಾಯವನ್ನು ಸಮರ್ಥವಾಗಿ ತೋರಿಸುತ್ತವೆ. ಅದರ ಪ್ರಕಾರ ಜೂನ್ 1 ಮತ್ತು ಸೆಪ್ಟಂಬರ್ 30ರ ವರೆಗೆ ಲಲಿತಪುರ ಜಿಲ್ಲೆಯಲ್ಲಿ ಕೇವಲ 321.3 ಮಿ.ಮೀ. ಮಳೆಯಾಗಿದ್ದು, ಇದು ಸಹಜ ಪ್ರಮಾಣ ಕ್ಕಿಂತ 65% ಕಡಿಮೆಯಾಗಿದ್ದು. ಈ ಮಳೆಯ ಕೊರತೆಯು ಕುಡಿಯುವ ನೀರಿನ ಮೂಲಗಳ ಮೇಲೂ ಪರಿಣಾಮ ಬೀರಿದೆ. ಲಲಿತಪುರದ ತಾಲಬೆಹೆತ್ ಭಾಗದ ಮುಕ್ತೌರ ಗ್ರಾಮದ 10 ಪಂಪುಗಳಲ್ಲಿ ಕೇವಲ ಎರಡರಲ್ಲಿ ಮಾತ್ರವೇ ನೀರಿದೆ. ಉಳಿದವು ಬತ್ತಿಹೋಗಿವೆ. ಒಂದರ ಮೇಲೊಂದರಂತೆ ಈ ಊರಿನ ಮಹಿಳೆಯರು ನೀರಿಗಾಗಿ ದೂರದೂರಕ್ಕೆ ನಡೆಯಲು ತೊಡಗಿರುವ ವರದಿಗಳು ಬರುತ್ತಿವೆ. ಸಂಗೀತಾಳ ಮನೆಯ ಸಮೀಪವಿರುವ ಪಂಪಿನಲ್ಲಿ ನೀರೇ ಇಲ್ಲ. ಒಂದು ಕಿಲೋಮೀಟರು ದೂರವಿರುವ ಕೈಪಂಪಿನಿಂದ ಆಕೆ 18 ಕೊಡಗಳಷ್ಟು ನೀರನ್ನು ಹೊತ್ತುಕೊಂಡು ಬಂದು ಕುಟುಂಬದ ಅಗತ್ಯಕ್ಕೆ ತುಂಬಿಸಿಕೊಳ್ಳುತ್ತಾಳೆ. ಸಮಸ್ಯೆ ನೀರಿಗಷ್ಟೇ ಸೀಮಿತವಾಗಿಲ್ಲ. ಆಹಾರ ಧಾನ್ಯಗಳೂ ಖಾಲಿ ಯಾಗುತ್ತಿವೆ. ಸಿಹೋರ್ ಆದಿವಾಸಿಗಳು ಸಮಾಯಿಯ ಕಳೆಬೀಜ ಗಳಿಂದ ರೊಟ್ಟಿಗಳನ್ನು ತಯಾರಿಸಿಕೊಳ್ಳುತ್ತಿದ್ದರೆ, ಸಣ್ಣ ಹಿಡುವಳಿಯಿರುವ ಇತರೆ ಸಮುದಾಯಗಳು ಗೋಮ ಎಂಬ ಕಳೆಯ ಎಲೆಗಳನ್ನು ತರಕಾರಿಗಳ ಬದಲಿಗೆ ತಿನ್ನುತ್ತಿದ್ದಾರೆ. ಎರಡು ಎಕರೆಗಿಂತ ಕಡಿಮೆ ಹೊಲವಿರುವ ಮುಕ್ತೋರಾದ ಬೇನಿ ಬಾಯಿ ಎಂಬ ಮಹಿಳೆ ತನ್ನ ಹೊಲದ ತುದಿಯಲ್ಲಿ ಬೆಳೆದ ಗೋಮಾಸಸ್ಯಗಳನ್ನು ತೋರಿಸುತ್ತ ‘ನಾವು ನಮ್ಮ ಸಾಕುಪ್ರಾಣಿಗಳ ಆಹಾರವನ್ನು ತಿನ್ನುತ್ತಿದ್ದೇವೆ’ ಎಂದಳು. ಈ ಎಲೆಗಳ ರುಚಿ ಹೇಗಿರುತ್ತದೆ ಎಂಬ ಪ್ರಶ್ನೆಗೆ ನಕ್ಕು ‘ನೀವು ಅದಕ್ಕೆ ಎಷ್ಟು ಉಪ್ಪು ಖಾರ ಸೇರಿಸುತ್ತೀರ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ’ ಎಂದಳು. ಈ ಗೋಮಾ ಎಂಬುದು ಹೊಲದ ಸುತ್ತಲು ಬೆಳೆಯುವ ಒಂದು ಕಳೆ. ಗಿರಿಜಾ ದೇವಿ ಎಂಬ ಅಹಿರವಾಲ್ ಉಪಜಾತಿಯ ದಲಿತಮಹಿಳೆ ಇದನ್ನೇ ಹೀಗೆ ಹೇಳುತ್ತಾಳೆ: ನಾಲ್ಕು ಜನ ತಿನ್ನಲು ಕೂರುತ್ತಾರೆ. ಹಿಟ್ಟು ನೋಡಿದರೆ ಇಷ್ಟೇ ಇದೆ. ತಗೊಳ್ಳಪ್ಪಾ ಈಗ ಒಂದು, ಎರಡು ತಿನ್ನಿ. ಸದ್ಯದ ಈ ಕಾಲ ಕಳೆಯೋಣ. ಬೆಳಗ್ಗೆೆ ಏನು ಮಾಡ್ತೀರಿ ಎಂದು ಕೇಳಿದೆ ನಾನು. ನನ್ನನ್ನು ವಿಚಿತ್ರ ವಾಗಿ ನೋಡಿ ಆಕೆ ನಕ್ಕಳು. ಮತ್ತೆ ಹಾಲು? ಎಂದು ನಾನು ಹಿಂಜರಿ ಯುತ್ತಲೇ ಕೇಳಿದೆ. ನಿನಗೆ ಅಲ್ಲಿ ಕಟ್ಟಿದ ದನಗಳು ಕಾಣುತ್ತವೆಯೇ? ಅವುಗಳು ಕಟ್ಟಿಗೆಯಂತೆ ಬಡಕಲಾಗಿವೆ. ಸುತ್ತೆಲ್ಲಾದರೂ ಹುಲ್ಲು ಕಂಡೆಯಾ ನೀನು? ಎಂದು ಒರಟಾಗಿ ಹೇಳಿದಳು. 2011 ರ ಸಮೀಕ್ಷೆಯ ಪ್ರಕಾರ ಲಲಿತಪುರದಲ್ಲಿ 12,21,592 ಜನರಿದ್ದಾರೆ. ಅದರಲ್ಲಿ ಕಾಲುಭಾಗದಷ್ಟು, ಅಂದರೆ, 3,12,129 ಜನ ದಲಿತರು ಮಾತು ಆದಿವಾಸಿಗಳು. ಅದರಲ್ಲಿ ಒಂದಿಷ್ಟು ಜನರಾದರೂ ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎಂದಾದರೆ, ಹಸಿವು ಅಲ್ಲವಾದರೂ ಅವರೆಲ್ಲ ಪೌಷ್ಟಿಕತೆಯ ಕೊರತೆಯಿಂದಂತೂ ಬಳಲುತ್ತಿರುತ್ತಾರೆ. ಬುಂದೇಲಖಂಡದಲ್ಲಿ 13 ಜಿಲ್ಲೆಗಳಿವೆ. ಅದರಲ್ಲಿ 7 ಉತ್ತರಪ್ರದೇಶದ ಲ್ಲಿಯೂ, 6 ಮಧ್ಯಪ್ರದೇಶದಲ್ಲಿಯೂ ಇವೆ. ಕಳೆದ ವಾರ ರಾಜಕಾರಣಿ ಯೋಗೇಂದ್ರ ಯಾದವ್ ಸ್ವರಾಜ್ ಅಭಿಯಾನವೆಂಬ ಹೆಸರಿನ ಅಡಿ ಯಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದರು. 7 ಜಿಲ್ಲೆಗಳ 109 ಗ್ರಾಮಗಳ 1,206 ಕುಟುಂಬಗಳಕುರಿತು ಆ ಸಮೀಕ್ಷೆ ಇದೆ. 86 ಪ್ರತಿಶತದಷ್ಟು ಜನ ತಾವು ಬೇಳೆಯ ಸೇವನೆಯನ್ನು ನಿಲ್ಲಿಸಿದ್ದೇ ವೆ ಎಂದು ಹೇಳಿದರು. ಶೇ.79ರಷ್ಟು ಜನ ತಾವು ರೊಟ್ಟಿಯನ್ನು ಉಪ್ಪುಅಥವಾ ಚಟ್ನಿಯ ಜೊತೆ ಸೇವಿಸುತ್ತಿದ್ದೇವೆ ಎಂದರೆ, ಶೇ.84 ದಷ್ಟು ಜನರು ತಾವು ಮಕ್ಕಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದ್ದೇವೆಎಂದಿದ್ದಾರೆ. ಈ ಕಾರ್ಯಕರ್ತರಿಗೆ ಸರಿಯಾದ ತರಬೇತಿಯಿರಲಿಲ್ಲ ವಾಗಿ ಅವರ ಸಮೀಕ್ಷೆಯ ಮಾದರಿ ಆಷ್ಟು ಸಮರ್ಪಕವಾಗಿಲ್ಲ. ಆದರು ಈ ಸಮಿಕ್ಷೆ ಈ ಭಾಗದಲ್ಲಿರುವ ಆಹಾರ ಕೊರತೆಯ ಸಮಸ್ಯೆಯನ್ನಂತೂ ತೋರಿಸುತ್ತದೆ. ಪೂರ್ತಿಯಾಗಿ ಕೈಕೊಟ್ಟ ಬೆಳೆ ಅಸಮರ್ಪಕ ಮುಂಗಾರಿನ ಕಾರಣದಿಂದ ಒಣಗಿಹೋದ ಎಳ್ಳುಕಾ ಳುಗಳು ಭೂಮಿಯಲ್ಲಿ ಹಾಗೆ ಉಳಿದುಹೋದವು. ಸರಕಾರವು ಎಳ್ಳು ಮುಂಗಾರಿಗೆ ಸೂಕ್ತವಾದ ಬೆಳೆ ಎಂದೇನೋ ಪ್ರಚಾರ ಮಾಡಿತ್ತು, ಆದರೆ, ಈ ಸೊರಗಿದ ಮಳೆಗಾಲವನ್ನು ತಡೆದುಕೊಳ್ಳಲು ಅದು ಶಕ್ತವಾಗಿರಲಿಲ್ಲ. ಈಗ ರೈಕ್ವಾರ್ ಗೋಧಿ ಬೆಳೆಯಲು 10,000 ರೂ. ಸಾಲ ತೆಗೆದು ಕೊಂಡಿದ್ದು, ಅದಕ್ಕೆ ಆತ ಪ್ರತಿ ತಿಂಗಳೂ 300 ರೂ. ಬಡ್ಡಿ ಕಟ್ಟಬೇಕಿದೆ. ಮನೆಯಲ್ಲಿ ಕೂಡಿಟ್ಟಿರುವ ದವಸ ಮುಂದಿನ ಮಳೆಗಾಲದವರೆಗೆ ಸಾಕಾಗಬಹುದು. ಆದರೆ ಈ ಬಾರಿಯೂ ಮಳೇ ಕೈಕೊಟ್ಟರೆ, ಸಾಲ ತೀರಿಸಲಾಗದ ಪರಿಸ್ಥಿತಿಯ ಜೊತೆಗೆ ತಿನ್ನಲು ದವಸವೂ ಇರದ ಪರಿಸ್ಥಿತಿ ಬರುತ್ತದೆ. ಭವಿಷ್ಯದ ಚಿಂತೆಗಳು ಭೂತಕಾಲದ ನೆನಪುಗಳನ್ನು ಮರುಕಳಿಸುತ್ತಿವೆ. ರೈಕ್ವಾರ್ ತಾನು ಚಿಕ್ಕವನಿದ್ದಾಗ ಏನು ತಿನ್ನುತ್ತಿದ್ದೆ ಎಂಬುದನ್ನು ನೆನಪಿಸಿ ಕೊಳ್ಳುತ್ತಾರೆ. ಸಮಾಯಿ ಮತ್ತು ಫಿಕರ್ ಕಳೆಗಳಿಂದ ಮಾಡಿದ ರೊಟ್ಟಿಗಳು ಅವು. ನಾವು ಮಕ್ಕಳಾಗಿದ್ದಾಗ ಅದನ್ನು ತಿಂದ ಅನುಭವವಿ ರುವುದರಿಂದ ಅದನ್ನು ಸಹಿಸಿಕೊಳ್ಳಬಲ್ಲೆವು. ಆದರೆ, ನಮ್ಮ ಮಕ್ಕಳಿಗೆ ಅದನ್ನು ತಿಂದು ಗೊತ್ತಿಲ್ಲವಾಗಿ, ಅವರು ಸಹಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ ಎನ್ನುತ್ತಾರೆ ಅವರು. ಪುಣ್ಯಕ್ಕೆ ಈ ಬಾರಿ ಪರಿಚಿತರೊಬ್ಬರು ದಿಲ್ಲಿಯಲ್ಲಿ ಮತ್ತು ಭೋಪಾಲ ದಲ್ಲಿ ಮನೆಕೆಲಸಕ್ಕೆ ಜನಬೇಕಾಗಿದ್ದಾರೆಂದು ಸುದ್ಧಿ ಕಳಿಸಿದ್ದಾರೆ. ರೈಕ್ವಾರ್ ತನ್ನ ಮೂವರು ಮಕ್ಕಳಲ್ಲಿ 18 ಮತ್ತು 15 ವರ್ಷದ ಇಬ್ಬರನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದಾನೆ. ಅವರಿಗೆ ಅಲ್ಲಿ ಊಟ ಮತ್ತು ಬಟ್ಟೆ ಸಿಗುತ್ತಿದೆ. ಮತ್ತು ಅವರು ಕಳುಹಿಸುವ ಹಣ ನಮ್ಮ ಸಮಸ್ಯೆಗಳಿಗೆ ಸ್ವಲ್ಪ ತೇಪೆ ಹಚ್ಚುತ್ತದೆ ಎಂದು ಹೇಳುತ್ತಾರೆ ಅವರು. ಜಲೀಮ್ ರೈಕ್ವಾರ್ ಈ ವರ್ಷ ತನ್ನ ಹೊಲದ ಸ್ವಲ್ಪ ಭಾಗವನ್ನಷ್ಟೇ ಉಳುಮೆ ಮಾಡಿದ್ದಾರೆ. ಅದಕ್ಕೂ ಸಹ ಆತ ಸ್ಥಳೀಯ ದಲ್ಲಾಳಿಯಿಂದ ಸಾಲ ಪಡೆದುಕೊಳ್ಳಬೇಕಾಯಿತು

Writer - ಸುಪ್ರಿಯಾ ಶರ್ಮ

contributor

Editor - ಸುಪ್ರಿಯಾ ಶರ್ಮ

contributor

Similar News