ಬಿಜೆಪಿಗರೇ, ಎಚ್ಚರ!ನೀವು ತುರ್ತು ಪರಿಸ್ಥಿತಿಯಕಾಲ ವಲಯದೊಳಗಿದ್ದೀರಿ!!

Update: 2015-12-20 07:00 GMT

ಮ್ಮ ಹಣಕಾಸು ಸಚಿವರೂ ಹಾಗೂ ವ್ಯಂಗ್ಯವೆಂದರೆ ನಮ್ಮ ಮೇಲ್ಮನೆಯ ನಾಯಕರೂ ಆಗಿರುವಂಥವರು ಒಂದು ಟಿಪ್ಪಣಿ ಮಾಡಿದ್ದಾರೆ, ಅದರಲ್ಲಿ ಅವರು ಹೇಳಿರುವುದೇನೆಂದರೆ: ಸಂಸದೀಯ ಪ್ರಜಾತಂತ್ರದಲ್ಲಿ.... ‘‘ನೇರವಾಗಿ ಚುನಾಯಿತರಾದವರ ಮನೆಯ ಪರಿಜ್ಞಾನವು ಪರೋಕ್ಷವಾಗಿ ಆಯ್ಕೆಯಾದ ಮನೆಯವರಿಂದ ಪ್ರಶ್ನಿಸಲ್ಪಡುತ್ತಿದೆ.’’ ಇದೇ ಸಂದರ್ಭದಲ್ಲಿ ಇನ್ನೂ ಕೆಲವರು ರಾಜ್ಯಸಭೆಯನ್ನು ಇನ್ನಷ್ಟು ದುರ್ಬಲಗೊಳಿಸುವಂತಹ ‘ತೋರಿಕೆ ಸುಧಾರಣೆಗೆ’ ಕರೆನೀಡಿದ್ದಾರೆ.ಇದೇ ಹೊತ್ತಿನಲ್ಲಿ, ಟ್ವಿಟರ್‌ನಲ್ಲಿ ಮೇಲ್ನೋಟಕ್ಕೆ ನಂಬುವಂಥ ಆಕರ್ಷಕ ತಂತ್ರಗಳನ್ನು ಬಳಸಿ ತೂರಿಬಿಡುವ ಇಂತಹ ಮಾತುಗಳು ಕೇವಲ ಅಪಾಯಕಾರಿ ಮಾತ್ರವಲ್ಲ ಅವು ನಮ್ಮ ಒಕ್ಕೂಟ ಪ್ರಜಾತಂತ್ರದ ಬೇರುಗಳ ವಿರುದ್ಧವಾಗಿರುವಂಥವು.

ಇವರು ನಿಜಾರ್ಥದಲ್ಲಿ, ನಾನು ಇತ್ತೀಚೆಗೆ ಸಂಸತ್ತಿನ ಚರ್ಚೆಯಲ್ಲಿ ಹೇಳಿದಂತೆ ‘ಉಡಾೆ ಸಂವಿಧಾನವಾದ’ಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಸರಕಾರ ಮತ್ತು ಅದರ ಭಟ್ಟಂಗಿಗಳು ರಾಜ್ಯಸಭೆಯಲ್ಲಿ ಅವರಿಗಿರುವ ಬಹುಮತದ ಕೊರತೆಯಿಂದಾಗಿ, ಸಭೆ ಅವರಿಗೆ ಬೇಕಾದಂತೆ ವರ್ತಿಸದೆ ಇರುವುದರಿಂದ ದಿಕ್ಕೆಟ್ಟು ಹೀಗೆಲ್ಲ ಚೀರಾಡುತ್ತಿದ್ದಾರೆ, ಇದು ಅಪಾಯದ ಸೂಚನೆಯಾಗಿದೆ. ನವಂಬರ್-6ರ ಸಂವಿಧಾನ ದಿನದ ಸಂಸ್ಮರಣಾದಿನ ಮತ್ತು ಡಿಸೆಂಬರ್-6ರ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಅಂಬೇಡ್ಕರ್‌ರವರ 125ನೇ ಹುಟ್ಟು ಹಬ್ಬದ ದಿನಗಳ ಸಂದರ್ಭದಲ್ಲಿ ಸಹ ಇದು ನಡೆದಿದೆ. 26ನೆ ನವಂಬರ್, 1949 ಏಕೆ ‘ಸಂವಿಧಾನ ದಿನ’ ಎಂದು ಗುರುತಿಸುವಷ್ಟು ಮಹತ್ವ ಪಡೆಯಿತು? ಅಂದು ಸಂವಿಧಾನ ಸಭೆ ಸಂವಿಧಾನದ ಕರಡನ್ನು ಅಂಗೀಕರಿಸಿ, ಅಳವಡಿಸಿಕೊಂಡಿತು. ಇದು ಮೂರು ತಿಂಗಳ ನಂತರದ 26ನೆ ಜನವರಿ, 1950ರಿಂದ ಆಚರಣೆಗೆ ಬಂದಿತು. ಈ ಸಂವಿಧಾನ ಸಭೆಯ ಸದಸ್ಯರು ರಾಜ್ಯ ಶಾಸಕಾಂಗದಿಂದ ಚುನಾಯಿತರಾದ ‘ಪರೋಕ್ಷವಾಗಿ ಆಯ್ಕೆಯಾದ ಮನೆಯವರು.

ಇದು ರಾಜ್ಯ ಸಭೆಯ ಪೂರ್ವಗಾಮಿ ಕ್ರಿಯೆಯಾಗಿತ್ತು’ಈಗ ಯಾರು ರಾಜ್ಯ ಸಭೆಯನ್ನು ಹಾಸ್ಯ ಮಾಡಿ ಅದರ ಮಹತ್ವವನ್ನು ಹೀಗಳೆಯಲು ಪ್ರಯತ್ನಿಸುತ್ತಿದ್ದಾರೋ ಅವರು ಸಂವಿಧಾನದ ತಳಹದಿಯನ್ನೇ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥ. ಬಹುಶಃ ಇದನ್ನು ತಡವಾಗಿ ಅರ್ಥಮಾಡಿಕೊಂಡ ಕಾರಣದಿಂದಲೇ ಇರಬೇಕು ಪ್ರಧಾನ ಮಂತ್ರಿಗಳು ಸಂವಿಧಾನ ದಿನದ ಭಾಷಣದಲ್ಲಿ ರಾಜ್ಯಸಭೆಯ ಮಹತ್ವವನ್ನು ಪ್ರಶಂಸಿಸಿದ್ದು!! ಈಗ ಪ್ರಧಾನಿಯವರು ಅವರ ಮಾತುಗಳಿಗೆ ಬದ್ಧರಾಗಿ ದುಷ್ಟತರ್ಕ ಮತ್ತು ಕುಚೇಷ್ಟೆಗಳ ಮೂಲಕ ರಾಜ್ಯಸಭೆಯ ಮೇಲೆ ಮಾಡುತ್ತಿರುವ ದಾಳಿಯನ್ನು ಕೊನೆಗೊಳಿಸಬೇಕಿದೆ. ಯಾರು ರಾಜ್ಯಸಭೆಯ ಪ್ರಶ್ನಾಕಾರವನ್ನು ಪ್ರಶ್ನಿಸುತ್ತಿದ್ದಾರೋ ಮತ್ತು ನಿರ್ಧಾರಗಳ ಬಗ್ಗೆ ಮರು ಚಿಂತಿಸುವಂತೆ ಹೇಳುತ್ತಿದ್ದಾರೋ ಅವರು ಅಪ್ರಾಮಾಣಿಕರಾಗಿರಬೇಕು.

ಲೋಕಸಭೆಯಲ್ಲಿ ಪ್ರಶ್ನಾತೀತ ಬಹುಮತವಿರುವ ಕಾರಣ ಸರಕಾರ ಮಸೂದೆಗಳ ಮೇಲೆ ಮಸೂದೆಗಳನ್ನು ಅನುಮೋದಿಸಿ ಹಾಕಿದೆ. ಭೂಕಾಯ್ದೆ ಮತ್ತು ಸೇವಾ ತೆರಿಗೆ ನಿಯಮಗಳಿಗೆ ಸಂವಿಧಾನ ತಿದ್ದುಪಡಿ ಮಾಡಲು ಹೊರಟಿದ್ದು ಇವುಗಳಲ್ಲಿ ಮುಖ್ಯವಾದವು. ಈ ಎರಡೂ ಮಸೂದೆಗಳನ್ನು ರಾಜ್ಯಸಭೆ ಎಚ್ಚರಿಕೆಯಿಂದ ಪರ್ಯಾಲೋಚಿಸಿ ಆ ಎರಡೂ ಮಸೂದೆಗಳಲ್ಲಿರುವ ಕೊರತೆ-ಲೋಪದೋಷಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾತ್ರ ಮಾಡಿದೆ.ಇದು ನಿಜ, ರಾಜ್ಯಸಭೆ ಪರೋಕ್ಷವಾಗಿ ಆಯ್ಕೆಯಾದವರ ಮನೆ. ಅಂದರೆ, ಯಾರು ಜನರಿಂದ ಆಯ್ಕೆಯಾಗಿರುತ್ತಾರೋ ಅಂತಹ ಶಾಸಕರನ್ನು ಮತ್ತು ಅವರನ್ನು ಆಯ್ಕೆ ಮಾಡಿದ ರಾಜ್ಯಗಳ ಜನರನ್ನು ಪ್ರತಿನಿಸುತ್ತದೆ. ಆದರೆ ಲೋಕಸಭೆಯಿಂದ ಕಳುಹಿಸಲಾದ ಭೂ ಮಸೂದೆ ಮತ್ತು ಜಿಎಸ್‌ಟಿಗಳು ಆಯಾ ರಾಜ್ಯಗಳ ಆರ್ಥಿಕತೆಯ ಸ್ವರೂಪ ಮತ್ತು ಸ್ಥಳೀಯ ನಡವಳಿಕೆಗಳ ಮೇಲೆ ನಿರ್ಭರವಾಗಿರುತ್ತವೆ. ಹಾಗಾಗಿ, ರಾಜ್ಯಗಳ ಪ್ರತಿನಿಯಾಗಿ ರಾಜ್ಯಸಭೆಗೆ (ಯಾವ ಕಾರಣಗಳಿಂದ ರಚಿಸಲಾಗಿದೆಯೋ ಆ ಕಾರಣದಿಂದ) ಇದನ್ನು ಪರಿಶೀಲಿಸುವ ಅರ್ಹತೆ ಇದೆಯೋ ಇಲ್ಲವೋ? ಇದು ನಮ್ಮ ಸಂವಿಧಾನ ವಿಸಿರುವ ನಿಯಮವಲ್ಲವೇ? ಅಥವಾ ಸರಕಾರ ಒಂದು ವಿಭಾಗದ ವ್ಯಾಪ್ತಿಗೆ ಸೇರಿದ ವಿಷಯಗಳ ಮೇಲೆ ಬೇರೊಂದು ವಿಭಾಗ ಕ್ರಮ ಕೈಗೊಂಡಾಗ ಆ ಕ್ರಮವನ್ನು ತಿದ್ದುಪಡಿ ಮಾಡುವ ಯಾ ರದ್ದು ಮಾಡುವ ಅಕಾರವನ್ನು ಎಲ್ಲ ವಿಭಾಗಗಳಿಗೂ ನೀಡುವ ಮೂಲಕ ಪ್ರತಿಯೊಂದು ವಿಭಾಗಗಳ ಮೇಲೂ ಸಂವಿಧಾನ ವಿಸಿರುವ ಪರಿಮಿತಿ ಅಥವಾ ನಿರ್ಬಂಧಗಳಲ್ಲವೇ?2014ರ ವರೆಗೆ ರಾಜ್ಯಸಭೆಯಲ್ಲಿ ತನಗೆ ಬಹುಮತವಿದ್ದಾಗ ರಾಜ್ಯ ಸಭೆಯ ಬಗ್ಗೆ ಯಾವ ತಕರಾರುಗಳೂ ಇಲ್ಲದೆ ಸುಭಿಕ್ಷವಾಗಿ ಬದುಕಿದ್ದ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ ದೊರೆತು ರಾಜ್ಯಸಭೆಯಲ್ಲಿ ಇಲ್ಲವಾದಾಗ.... ಹಠಾತ್ತಾಗಿ ಈ ಸಮಸ್ಯೆಗಳೆಲ್ಲಾ ಹುಟ್ಟಿಕೊಂಡಿದ್ದು ಹೇಗೆ?ಇದೇ ಈ ಎಲ್ಲ ಸಮಸ್ಯೆಗಳ ಮೂಲ.

ಈ ಬಿಜೆಪಿ ಸರಕಾರ ‘ಸಹಕಾರಿ ಒಕ್ಕೂಟ ವ್ಯವಸ್ಥೆ’ ಬಗ್ಗೆ ಭಾರೀ ಉದ್ಘೋಷಗಳನ್ನು ಮಾಡಿತ್ತು. ಆದರೆ ತೃಣಮೂಲ ಕಾಂಗ್ರೆಸ್ ಇದನ್ನು ‘ಕಾರ್ಯಾತ್ಮಕ ಒಕ್ಕೂಟ ವ್ಯವಸ್ಥೆ’ ಎಂದು ಚಲಾವಣೆಗೆ ತರಲು ಸೂಚಿಸಿತ್ತು. ಈ ರಾಜ್ಯಸಭೆಯ ಕುರಿತ ವರ್ತನೆಗಳು ‘ಕಾರ್ಯಾತ್ಮಕ ಒಕ್ಕೂಟ ವ್ಯವಸ್ಥೆ’ಯ ಪರೀಕ್ಷೆಗಳಾಗಿವೆ. ಹೊರಜಗತ್ತಿನಲ್ಲಿ ನಮಗೆ ಕಾಣುವ ರಾಜ್ಯಸಭೆಯ ಮಾದರಿಗಳು ನಂಬಿಕೆ ಹುಟ್ಟಿಸುವಂತಿಲ್ಲ. ಒಂದು ಕಡೆ ಹೇಗೆ ‘ಹೌಸ್ ಆ್ ಲಾರ್ಡ್’ ನೂರು ವರ್ಷಗಳ ಹಿಂದೆ ರೆಕ್ಕೆ ಮುದುರಿಕೊಂಡಿತು ಎಂಬ ಕಥೆಗಳಿವೆ. ಆದರೆ ಇದು ಚುನಾಯಿತ ಸಭೆಯಲ್ಲ ಎಂಬುದು ನೆನಪಿನಲ್ಲಿರಬೇಕು. ಅಲ್ಲಿದ್ದವರೆಲ್ಲಾ ಆನುವಂಶಿಕವಾಗಿ ಇಲ್ಲವೇ ನಾಮ ನಿರ್ದೇಶನದಿಂದ ಬಂದವರಾಗಿದ್ದರು. ಹಾಗೂ ಅದಕ್ಕೆ ಒಕ್ಕೂಟ ವ್ಯವಸ್ಥೆಯೊಂದರಲ್ಲಿ ಪ್ರಾದೇಶಿಕ ಯಾ ರಾಜ್ಯಗಳ ಹಿತಾಸಕ್ತಿಯನ್ನು ಪ್ರತಿನಿಸುವ ಯಾ ಕಾಪಾಡುವ ಹೊಣೆಗಾರಿಕೆಯೂ ಇರಲಿಲ್ಲ. ಇಂಗ್ಲೆಂಡಿಗೆ ಭಾರತದ ವಿಸ್ತಾರವಾಗಲಿ, ವೈವಿಧ್ಯವಾಗಲಿ ಇರಲಿಲ್ಲ.

ನಮ್ಮಂಥ ಹಲವು ರಾಜ್ಯಗಳ ಚಿತ್ರಬಂಧವೂ ಅಲ್ಲಿಲ್ಲ. ಇನ್ನೂ ಸ್ಥಳೀಯ ಸಮಸ್ಯೆಗಳಿಗೆ ಸಂಬಂಸಿದಂತೆ ಹೇಳುವುದಾದರೆ, ಅವರ ಸ್ಕಾಟ್‌ಲ್ಯಾಂಡಿನ ಪಾರ್ಲಿಮೆಂಟಿಗೆ ಅಪಾರ ಅಕಾರವಿತ್ತು. ಅದು ಎಲ್ಲದಕ್ಕೂ ‘ಸಾಮಾನ್ಯ ಸಭೆ’ಯ ಮುಂದಕ್ಕಾಗಲಿ ಇಲ್ಲವೇ ಲಂಡನ್ನಿನ ಬ್ರಿಟಿಷ್ ಸರಕಾರದ ಮುಂದಕ್ಕಾಗಲಿ ಹೋಗುವ ಅಗತ್ಯವಿರಲಿಲ್ಲ. ಭಾರತದಲ್ಲಿನ ಪರಿಸ್ಥಿತಿ ಖಂಡಿತ ಹಾಗಿಲ್ಲ. ಒಕ್ಕೂಟ ವ್ಯವಸ್ಥೆಯ ಬಗ್ಗೆ ಎಷ್ಟೇ ಸಿಹಿಯಾದ ಮಾತುಗಳನ್ನಾಡಲಿ, ದೇಶದ ಎಲ್ಲ ರಾಜ್ಯಗಳೂ ದಿಲ್ಲಿಯ ಕಪಿಮುಷ್ಟಿಯಲ್ಲಿರುವುದು ಸುಳ್ಳಲ್ಲ. ಅನೇಕ ಸಾರಿ ನಾವು ಯಾವುದನ್ನು ವಿರೋಸುತ್ತೇವೋ ಅದರ ಪ್ರತಿಬಿಂಬಗಳಾಗಿರುತ್ತವೆ ಎಂದು ಹೇಳಲಾಗುತ್ತದೆ. ಸದ್ಯಕ್ಕೆ ದೇಶದ ರಾಜಕೀಯ ಮತ್ತು ಸಂಸತ್ತಿನಲ್ಲಿ ಏಕಪಕ್ಷ ಪ್ರಾಬಲ್ಯವನ್ನು ಹೊಂದಿರುವ ಸರಕಾರಕ್ಕೆ ರಾಜ್ಯಸಭೆಯನ್ನು ಹೇಗಾದರೂ ಆಳಬಹುದು ಎಂಬ ಹಮ್ಮು ಇದ್ದಂತಿದೆ. ಇಂಥ ನಾಚಿಕೆಗೇಡಿನ ಪ್ರಸಂಗ ಆರಂಭವಾಗಿದ್ದು 1976ರಲ್ಲಿ. ಯಾವಾಗ ಆಳುವ ಸರಕಾರಕ್ಕೆ ಸಂವಿಧಾನ ತಿದ್ದುಪಡಿಯ ಮೂಲಕ ಎಲ್ಲರನ್ನೂ ಹತ್ತಿಕ್ಕಿ ಮುಂದೊತ್ತುವ ಅಕಾರವನ್ನು ನೀಡಲಾಯಿತೋ ಆಗಲೇ ರಾಜ್ಯ ಸಭೆಯನ್ನು ‘ಮೂಲಭೂತ ಪ್ರಶ್ನೆಗಳನ್ನು ಕೇಳಬೇಡಿ’ ಎಂಬ ಸ್ಥಿತಿಗೆ ತರಲಾಗಿತ್ತು. ಈಗ ಮತ್ತೆ ಆ ಕಾಲ ಬಂದಂತಿದೆ.

ಈ ತುರ್ತು ಪರಿಸ್ಥಿತಿ ಕಾಲ ಭಾರತದ ಮೇಲೆ ಮತ್ತೆ ಎರಗುವ ಬಗ್ಗೆ ಆಡಳಿತಾರೂಢ ಬಿಜೆಪಿಯ ಹಿರಿಯ ಧುರೀಣರೇ ದೇಶಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ, ತುರ್ತು ಪರಿಸ್ಥಿತಿಯ ಕಾಲದ ರಬ್ಬರ್ ಸ್ಟಾಂಪ್ ರೂಪಕ್ಕೆ ರಾಜ್ಯಸಭೆಯನ್ನು ಇಳಿಸುವ ಆಡಳಿತ ಪಕ್ಷದ ಪ್ರಯತ್ನ ನಿಂತಿಲ್ಲ. ಹೆಚ್ಚುಕಡಿಮೆ ಈ ಜಗತ್ತಿನ 175 ರಾಷ್ಟ್ರಗಳು ಸಂವಿಧಾನವನ್ನು ಹೊಂದಿವೆ. ಅವುಗಳ ಸರಾಸರಿ ಆಯಸ್ಸು 17 ವರ್ಷಗಳು. ಅನೇಕ ಬೆಂಕಿ ಬಿರುಗಾಳಿಗಳ ಮಳೆಯನ್ನು ಎದುರಿಸಿ ನಿಂತಿರುವ ಭಾರತದ ಸಂವಿಧಾನಕ್ಕೆ ಆ ಸರಾಸರಿ ಆಯಸ್ಸಿನ ನಾಲ್ಕು ಪಟ್ಟು ಹೆಚ್ಚು ವಯಸ್ಸಾಗಿದೆ. ಇದನ್ನು ವಿಕಾಸವಾಗಲು ಬಿಡಬೇಕೇ ಹೊರತು ಅದರ ಅಂತಃಸತ್ವವನ್ನೇ ನಾಶಮಾಡುವುದಲ್ಲ, ಇಂಥ ಅಂತಃಸತ್ವಗಳಲ್ಲಿ ರಾಜ್ಯಸಭೆಯೂ ಒಂದಾಗಿದೆ.

Writer - ಡೆರಿಕ್ ಓಬ್ರಿಯನ್

contributor

Editor - ಡೆರಿಕ್ ಓಬ್ರಿಯನ್

contributor

Similar News