ಮಂಜ್ರಾಬಾದ್‌ನಿಂದ ಅರಬ್ಬಿಸಮುದ್ರ, ಬಂಗಾಲಕೊಲ್ಲಿಗೆ...

Update: 2016-01-03 18:02 GMT

ಮಂಜ್ರಾಬಾದ್ ಕೋಟೆಯ ಪಶ್ಚಿಮಭಾಗದಲ್ಲಿ ಬಿದ್ದ ಮಳೆಯ ನೀರು ಎತ್ತಿನಹಳ್ಳ, ಕೆಂಪು ಹಳ್ಳ, ಎಳನೀರು ನದಿ, ಗುಂಡ್ಯನದಿಯೊಂದಿಗೆ ಕುಮಾರಧಾರಾ ಮೂಲಕ ನೇತ್ರಾವತಿ ಸೇರಿ ಅನಂತರ ಉಳ್ಳಾಲ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಪೂರ್ವಭಾಗದಲ್ಲಿ ಬಿದ್ದ ನೀರು ಹೇಮಾವತಿ ನದಿಯ ಮೂಲಕ ಕಾವೇರಿ ನದಿಗೆ ಸಂಗಮವಾಗಿ ಚೆನ್ನೈ ಬಳಿ ಬಂಗಾಳ ಕೊಲ್ಲಿ ಸೇರುತ್ತದೆ.
ಕೋಟೆಯ ಮೇಲೆ ಬೀಳುವ ನೀರು ಇಬ್ಭಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಜಗತ್ತಿನ ಏಕೈಕ ಕೋಟೆ ಎಂದರೆ ಅದು ಸಕಲೇಶಪುರದ ಮಂಜ್ರಾಬಾದ್ ಕೋಟೆಯಾಗಿದೆ.
  ಸಮುದ್ರಮಟ್ಟದಿಂದ ಮಂಜ್ರಾಬಾದ್ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳ ಪಡುವ ಮಲೇಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭೂ ಗಡಿ ರೇಖೆಯ ಮಧ್ಯದ ಬೆಟ್ಟದಲ್ಲಿ ನಿರ್ಮಿತವಾಗಿರುವ ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆನೀರು ಪಶ್ಚಿಮ ಮುಖವಾಗಿ ಅರಬ್ಬಿ ಸಮುದ್ರಕ್ಕೂ ಪೂರ್ವ ಮುಖವಾಗಿ ಬಂಗಾಳ ಕೊಲ್ಲಿ ಸೇರುತ್ತದೆ. ಮಂಜ್ರಾಬಾದ್ ಕೋಟೆಯ ಪಶ್ಚಿಮಭಾಗದಲ್ಲಿ ಬಿದ್ದ ಮಳೆಯ ನೀರು ಎತ್ತಿನಹಳ್ಳ, ಕೆಂಪು ಹಳ್ಳ, ಎಳನೀರು ನದಿ, ಗುಂಡ್ಯನದಿಯೊಂದಿಗೆ ಕುಮಾರಧಾರ ಮೂಲಕ ನೇತ್ರಾವತಿ ಸೇರಿ ಅನಂತರ ಉಳ್ಳಾಲ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಪೂರ್ವಭಾಗದಲ್ಲಿ ಬಿದ್ದ ನೀರು ಹೇಮಾವತಿ ನದಿಯ ಮೂಲಕ ಕಾವೇರಿ ನದಿಗೆ ಸಂಗಮವಾಗಿ ಚೆನ್ನೈ ಬಳಿ ಬಂಗಾಳ ಕೊಲ್ಲಿ ಸೇರುತ್ತದೆ.ಂದು ನಿರ್ದಿಷ್ಟ ಪ್ರದೇಶಕ್ಕೆ ಬೀಳುವ ಮಳೆಯ ನೀರು ಎರಡು ಸಾಗರಗಳಿಗೆ ಇಬ್ಭಾಗವಾಗಿ ಹರಿಯುತ್ತದೆ ಎನ್ನುವ ಮಾಹಿತಿಯನ್ನು ಆಧರಿಸಿ ಈ ಬೆಟ್ಟವನ್ನೇ ಕೋಟೆ ಕಟ್ಟಲು ಆಯ್ಕೆ ಮಾಡಿಕೊಳ್ಳಲು ಇದೂ ಒಂದು ಕಾರಣವಾಗಿರಬಹುದು.ೋಟೆಯ ಮೇಲೆ ಬೀಳುವ ನೀರು ಎರಡು ಪ್ರಮುಖ ಸಾಗರಗಳಿಗೆ ಸೇರುವಂತಹ ಏಕೈಕ ಕೋಟೆ ಮಂಜ್ರಾಬಾದ್ ಕೋಟೆಯಾಗಿದ್ದು, ಇದನ್ನು ಮೈಸೂರು ಹುಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ್ದಾರೆ. ಈ ಬಗ್ಗೆ ಸರಕಾರ ಮತ್ತಷ್ಟು ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.
ನೀರು ಇಬ್ಭಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಸ್ಥಳವಾಗಿ ಸಕಲೇಶಪುರ ತಾಲೂಕು ಬಿಸ್ಲೆ ಸಮೀಪ ಮಂಕನಹಳ್ಳಿಯಲ್ಲಿ ಬ್ರಿಟಿಷರು ರಿಡ್ಜ್ ನಿರ್ಮಿಸಿರುವ ವೇ ಆಫ್ ಬೆಂಗಾಲ್ ಮತ್ತು ಅರೇಬಿಯನ್ ಸೀ ಎಂಬ ನಾಮ ಫಲಕವನ್ನು ನೋಡಬಹುದಾಗಿದೆ.
ಸಕಲೇಶಪುರಕ್ಕೆ ಹತ್ತಿರವಾಗಿ ಕಂಡುಬರುವ ಪ್ರದೇಶ ವೆಂದರೆ 5 ಕಿ.ಮೀ. ದೂರದಲ್ಲಿರುವ ದೋಣಿಗಾಲ್ ಸಮೀಪದ ಮಂಜ್ರಾಬಾದ್ ದರ್ಗಾದ ಮುಂಭಾಗವಾಗಿದೆ.
ದರ್ಗಾದ ಕಾಣಿಕೆ ಹುಂಡಿ ಮುಂಭಾಗದ ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿ ಮೇಲೆ ಬೀಳುವ ನೀರು ಇಬ್ಭಾಗವಾಗಿ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸೇರುತ್ತದೆ.


ರುದ್ರ ರಮಣೀಯ ಸೂರ್ಯೋದಯ ಮತ್ತು ಸೂರ್ಯಾಸ್ತ:
ಮಂಜ್ರಾಬಾದ್ ಕೋಟೆಯ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆ ಒಂದು ರೋಮಾಂಚನ ಅನುಭವವಾಗಿದೆ. ಮುಂಜಾನೆಯ ವೇಳೆ ಕೆಲವೇ ಸಮಯದಲ್ಲ್ಲಿ ಮಂಜು ಕರಗಿ ಕಣ್ಣಿನ ಮುಂದೆ ಪ್ರಕೃತಿ ಸೌಂದರ್ಯದ ರಾಶಿ ತೆರೆದುಕೊಳ್ಳುತ್ತದೆ. ಸಂಜೆಯ ಸೂರ್ಯಾಸ್ತ ಸುಂದರ ಅನುಭವ ನೀಡುತ್ತದೆ.
ದುಃಖಕರ ವಿಚಾರವೆಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಇಲ್ಲಿ ಅವಕಾಶವಿಲ್ಲದಂತಾಗಿದೆ.

Writer - ಮಲ್ನಾಡ್ ಮೆಹಬೂಬ್

contributor

Editor - ಮಲ್ನಾಡ್ ಮೆಹಬೂಬ್

contributor

Similar News