ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕರು
Update: 2016-01-04 18:26 GMT
ಮಂಜೇಶ್ವರ, ಜ.4: ದಾರಿಯಲ್ಲಿ ಸಿಕ್ಕಿದ 10 ಪವನ್ ಚಿನ್ನಾಭರಣಗಳನ್ನು ವಾರಸುದಾರರಿಗೆ ಮರಳಿಸಿದ ಮಂಜೇಶ್ವರ ಕುಂಜತ್ತೂರಿನ ಎಸ್.ಟಿ.ಯು. ಸಂಘಟನೆಯ ಆಟೊ ಚಾಲಕರಾದ ನಾಸಿರ್, ಇಮ್ರಾನ್, ಇಜಾಝ್ ಪ್ರಾಮಾಣಿಕತೆ ಮೆರೆದು ಗಮನ ಸೆಳೆದಿದ್ದಾರೆ. ಮಂಜೇಶ್ವರ ಸಮೀಪದ ಕೆದುಂಬಾಡಿಯ ಮೂಸಾ ಎಂಬವರ ಪತ್ನಿ ರೊಹರಾ ಕುಂಜತ್ತೂರಿನ ಸಭಾಂಗಣವೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮರಳುವ ವೇಳೆ ಚಿನ್ನಾಭರಣವನ್ನೊಳಗೊಂಡ ಬ್ಯಾಗ್ ಕಾಣೆಯಾಗಿತ್ತು. ವಾರಸುದಾರರ ಬಗ್ಗೆ ಮಾಹಿತಿ ಪಡೆದ ಆಟೊ ಚಾಲಕರು ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ ನೇತೃತ್ವದಲ್ಲಿ ಚಿನ್ನಾಭರಣಗಳನ್ನು ಮರಳಿಸಿದರು.