ಗಾಂಧಿವಾದಕ್ಕೆಬೆಲೆ ಬರುವಂತೆ ಬದುಕಿದ ಗೋವಿಂದೇಗೌಡ

Update: 2016-01-06 17:46 GMT

ಸರಳ ಸಜ್ಜನಿಕೆಯಿಂದ ಮಲೆನಾಡ ಗಾಂಧಿ ಎಂದು ಹೆಸರಾಗಿದ್ದ ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೊವಿಂದೇಗೌಡ(90) ಇಂದು ಮಧ್ಯಾಹ್ನ ಕೊಪ್ಪ ಪಟ್ಟಣದ ‘ಮಣಿಪುರ’ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗೌಡರು, ಒಬ್ಬ ಪುತ್ರ, ಐವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ, ನುಡಿದಂತೆ ನಡೆದ, ಸರಳ ಸಜ್ಜನಿಕೆಯಿಂದ ‘ಮಲೆನಾಡ ಗಾಂಧಿ’ ಎಂದು ಹೆಸರು ಗಳಿಸಿದ್ದ ಗೋವಿಂದೇಗೌಡರು ಜನಿಸಿದ್ದು (1926) ಎನ್.ಆರ್.ಪುರ ತಾಲೂಕಿನ ಕಾನೂರು ಗ್ರಾಮದ ಹಿಣಚಿಯಲ್ಲಿ. ತಂದೆ ಗಿಡ್ಡೇಗೌಡ, ತಾಯಿ ಬೋಬಮ್ಮರ ಕೃಷಿಕ ಕುಟುಂಬದಿಂದ ಬಂದ ಗೌಡರು, ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡವರು, ಅನಕ್ಷರಸ್ಥ ತಂದೆಯ ಆಶ್ರಯದಲ್ಲಿ ಬೆಳೆದರು. ಹಳ್ಳಿಯ ಪರಿಸರ, ಕೃಷಿಕ ಬದುಕು ಮನೆಯ ಬಡತನದ ಬವಣೆಯನ್ನು ಬದಿಗಿರಿಸಿತ್ತು. ೃಷಿ ಕೆಲಸ ಮಾಡಿಕೊಂಡೇ ಕಾನೂರು, ಕೊಪ್ಪದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಗೌಡರು, ಓದುವಾಗಲೇ ಕೊಪ್ಪದ ಸಂತೆಯಲ್ಲಿ ವ್ಯಾಪಾರ ಮಾಡಿ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ ಸ್ವಾಭಿಮಾನಿ ಬಾಲಕ ಎಂದು ಹೆಸರಾದವರು. ಮುಂದೆ ಚಿಕ್ಕಮಗಳೂರಿನಲ್ಲಿ ಪ್ರೌಢಶಾಲೆ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮುಗಿಸಿ ದೇಶದ ಸ್ಥಿತಿಗತಿಯನ್ನು ಅರಿತು ಅರಗಿಸಿಕೊಳ್ಳುವ ವಿದ್ಯಾವಂತರಾದರು. ಸಂದರ್ಭದಲ್ಲಿ ದೇಶ ಸ್ವಾತಂತ್ರ ಚಳವಳಿಯ ತುರುಸಿನಲ್ಲಿತ್ತು. ಗೋವಿಂದೇಗೌಡರ ವಯೋಸಹಜ ಮನಸ್ಸು ಸ್ವಾತಂತ್ರ ಹೋರಾಟದತ್ತ ತುಡಿಯುತ್ತಿತ್ತು. ಇದಕ್ಕೆ ಪೂರಕವಾಗಿ ಬೆಳೆಗದ್ದೆ ಪುಟ್ಟೇಗೌಡರ ಪ್ರಭಾವ ಪ್ರೇರೇಪಿಸಿತು. ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕಿದರು. ವಿದ್ಯಾರ್ಥಿ ನಾಯಕರಾದರು. ತಾಲೂಕಿನ ಮುಂದಾಳು ಎನಿಸಿಕೊಂಡರು. ಮೈಸೂರು ಚಳವಳಿಯಲ್ಲಿ ಭಾಗವಹಿಸಿ ಎಲ್ಲರ ಕಣ್ಣಿಗೂ ಬಿದ್ದರು. ರಲ್ಲಿ ಶಾಂತ ಎಂಬುವರನ್ನು ವಿವಾಹವಾದ ಗೋವಿಂದೇಗೌಡರು, ಹೋರಾಟಗಾರ ಪುಟ್ಟೇಗೌಡ, ಹಿತೈಷಿ ತಹಶೀಲ್ದಾರ್ ವೆಂಕಟರಾಮಯ್ಯನವರ ಒತ್ತಡಕ್ಕೆ ಒಳಗಾಗಿ 1952ರಲ್ಲಿ ಮೊತ್ತ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ಕೊಪ್ಪ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ರಾಜಕಾರಣಿಯಾದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸು. ಆ ನಂತರ ಗೌಡರು ಕೊಪ್ಪ ಪುರಸಭೆಗೆ ಎರಡು ಅವಧಿಗೆ ಅಧ್ಯಕ್ಷರಾದರು. ತಾಲೂಕು ಅಭಿವೃದ್ಧಿ ಮಂಡಳಿ, ಎಪಿಎಂಸಿಯ ಅಧ್ಯಕ್ಷರೂ ಆದರು. ಜನಪರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಒಳಗಾದರು ಮತ್ತು ಜನಪ್ರಿಯ ನಾಯಕರಾಗಿ ರೂಪುಗೊಂಡರು.ೊಪ್ಪ ತಾಲೂಕಿಗಷ್ಟೇ ಸೀಮಿತವಾಗಿದ್ದ ಗೋವಿಂದೇಗೌಡರ ಸಮಾಜಸೇವೆ ಮತ್ತು ಹೋರಾಟದ ಬದುಕು 1983ರಲ್ಲಿ, ಮೊತ್ತ ಮೊದಲ ಬಾರಿಗೆ ರಾಜ್ಯ ರಾಜಕಾರಣ ಪ್ರವೇಶಿಸಿತು. ಕೊಪ್ಪ-ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಬೇಗಾನೆ ರಾಮಯ್ಯ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿ ನಾಡಿನಾದ್ಯಂತ ಪರಿಚಯವಾಗುವಂತಾಯಿತು. ರ ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದ ಗೌಡರು, ಅಂದಿನ ಜನತಾ ಪಕ್ಷದ ಮುಂಚೂಣಿ ನಾಯಕರಾದ ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಮತ್ತು ಎಸ್.ಆರ್.ಬೊಮ್ಮಾಯಿಯವರ ಆಪ್ತವಲಯಕ್ಕೆ ಸೇರ್ಪಡೆಯಾದರು. ಹೆಗಡೆಯವರ ಸಚಿವ ಸಂಪುಟದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಾಥಮಿಕ ಹಾಗೂ ವಯಸ್ಕರ ಶಿಕ್ಷಣ ಸಚಿವರಾಗಿ, ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಉತ್ತಮ ಹೆಸರು ಸಂಪಾದಿಸಿದರು. ನಂತರ 1988ರಲ್ಲಿ ಎಸ್.ಆರ್.ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ನುರಿತ ಕೆಲಸಗಾರರೆನಿಸಿಕೊಂಡರು. 1989ರ ವಿಧಾನಸಭಾ ಚುನಾವಣೆಯಲ್ಲಿ, ಜನತಾ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದಾಗಿ ಸೋತರು. ಸೋತಾಗ ಸುಮ್ಮನೆ ಕೂರದೆ, ಮತದಾರರನ್ನು ದೂಷಿಸದೆ, ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ಸಂದರ್ಭದಲ್ಲಿಯೇ ಗೋವಿಂದೇಗೌಡರು ಗಾಂಧಿ ಮಾರ್ಗವನ್ನು ತಮ್ಮ ಬದುಕಿಗೂ ಅನ್ವಯಿಸಿಕೊಂಡು ದೊಡ್ಡವರಾಗಿದ್ದು. ಬೇರೆ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಹಪಹಪಿಸದೆ, ವಾಮಮಾರ್ಗ ಅನುಸರಿಸದೆ, ಸೋಲನ್ನು ಸವಾಲಾಗಿ ಸ್ವೀಕರಿಸಿದ್ದು. ಮಾಜಿ ಮಂತ್ರಿ ಎಂಬ ಹಮ್ಮು ಬಿಮ್ಮುಗಳಿಲ್ಲದೆ ಸರಳವಾಗಿ ಬದುಕಿ ಗಾಂಧಿಗೆ ಗೌರವ ತಂದಿದ್ದು. ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆದ್ದರು. ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು, ಈ ಅವಧಿಯಲ್ಲಿ ನಿಜವಾಗಿಯೂ ಕರ್ನಾಟಕ ನೆನಪಿಟ್ಟುಕೊಳ್ಳುವಂತಹ ಕ್ರಾಂತಿಕಾರಿ ಕೆಲಸಗಳನ್ನೇ ಮಾಡಿದರು. 90 ಸಾವಿರ ಶಿಕ್ಷಕರನ್ನು ನೇಮಕ ಮಾಡಿದರು, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರು, ವರ್ಗಾವಣೆಯಲ್ಲಿ ಪಾರದರ್ಶಕತೆ ತಂದರು. ಶಿಕ್ಷಕರು ನಿರಾಳವಾಗಿ ಕಾರ್ಯ ನಿರ್ವಹಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. ಎಲ್ಲೂ ಒಂದೇ ಒಂದು ಕೆಟ್ಟ ಹೆಸರು ಬರದಂತೆ ದಕ್ಷ ಆಡಳಿತ ನೀಡಿ, ಕ್ಲೀನ್ ಹ್ಯಾಂಡ್ ಮಿನಿಸ್ಟರ್ ಎನಿಸಿಕೊಂಡರು. ಸಾರ್ವಜನಿಕ ಬದುಕಿನಲ್ಲಿ ರಾಜಕಾರಣಿಗಳು ಹೇಗಿರಬೇಕೆಂಬುದಕ್ಕೆ ಮಾದರಿಯಾದರು.ಂತಹ ಗಾಂಧಿವಾದಿ ಗೋವಿಂದೇಗೌಡರು 1999ರಲ್ಲಿ, ಅಧಿಕಾರದಲ್ಲಿದ್ದಾಗಲೇ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಆಡಿದ ಮಾತಿನಂತೆ ನಡೆದುಕೊಂಡರು. ಸದಾ ಕಾಲ ನಾಡು ಸ್ಮರಿಸಿಕೊಳ್ಳುವಂತಹ ವ್ಯಕ್ತಿಯಾದರು. 

ಗೋವಿಂದೇಗೌಡರ ಬಗ್ಗೆತೇಜಸ್ವಿ

ನಾನು ಕಂಡಂತೆ ಗೋವಿಂದೇಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ ಶಕ್ತಿಮೀರಿ ದುಡಿದ ಮೂರು ನಾಲ್ಕು ಮಂತ್ರಿಗಳಲ್ಲಿ ಗೋವಿಂದೇಗೌಡರು ಪ್ರಮುಖರೆಂದು ಹೇಳಬಹುದು. ಇಂಥವರು ರಾಜಕೀಯಕ್ಕೆ ವಿದಾಯ ಹೇಳಲು ತೀರ್ಮಾನಿಸಿದಾಗ ನನಗೆ ವಿಷಾದವಾಯಿತು. ಆದರೆ ಅದಕ್ಕಿಂತ ಹೆಚ್ಚು ವಿಷಾದವಾಗಿದ್ದು ಇಂಥವರು ನಿರ್ಗಮಿಸಿದಾಗ ರಾಜಕಾರಣಿಗಳು ಜನರೂ ಇದನ್ನು ಬಹುದಿನಗಳಿಂದ ನಿರೀಕ್ಷಿಸಿದ್ದವರಂತೆ ಪ್ರತಿಕ್ರಿಯೆ ತೋರಿಸಿದ್ದಕ್ಕಾಗಿ.’’
                     -ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News