ಕೊರೆಗಾಂವ್: ಮರೆಯಲಾಗದ ನೆನಪು

Update: 2016-01-10 18:11 GMT

ಪ್ರತೀ ಹೊಸ ವರ್ಷದಂದು ಮರಾಠ ಪೇಶ್ವೆಗಳ ಮೇಲಿನ ಬ್ರಿಟಿಷರ ದಿಗ್ವಿಜಯವನ್ನು ಲಕ್ಷಾಂತರ ಭಾರತೀಯರು ಏಕೆ ಸಂಭ್ರಮಾಚರಿಸುತ್ತಾರೆ?. 1818ರಲ್ಲಿ ಪುಣೆಯ ಸಮೀಪದ ಕರೆಗಾಂವ್‌ನಲ್ಲಿ 500 ಮಹರ್‌ಸೈನಿಕರು ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪೆನಿಗಾಗಿ 25,000ರಷ್ಟಿದ್ದ ಬಲಿಷ್ಠ ಪೇಶ್ವೆಗಳ ಸೇನೆಯನ್ನು ಸೋಲಿಸಿದರು.

ಶುಕ್ರವಾರದಂದು ಹೊಸವರ್ಷದ ದಿನ ಆರಂಭವಾದ ಒಂದು ಗಂಟೆಯ ಬಳಿಕ, ಇಬ್ಬರು ನಿವೃತ್ತ ಸೈನಿಕರಾದ ಪಿ.ಎಸ್.ದೋಬಲೆ ಮತ್ತು ದಾದಾಸಾಹೆಬ್ ಭೋಸ್ಲೆಯವರು ಮುಂಬೈ ದಾದ್ರಾ ಸಮೀಪವಿರುವ ಸ್ವಾತಂತ್ರ ನಾಯಕ ಬಾಬಾಸಾಹೇಬ ಅಂಬೇಡ್ಕರರ ಸಮಾಯ ಸ್ಥಳದಿಂದ ಬಸ್ಸಿನಲ್ಲಿ ಹೊರಟರು. ಅವರ ಜೊತೆಗೆ ಸಮವಸದಲ್ಲಿದ್ದ ಸುಮಾರು 300 ಜನ ಮಹಿಳೆಯರು ಮತ್ತು ಪುರುಷರು ಸಹ ಇದ್ದರು. ಐದು ತಾಸಿನ ಬಳಿಕ ಅವರೆಲ್ಲ ಸ್ಥಳವೊಂದಕ್ಕೆ ತಲುಪಿದರು. ಪುಣೆಯ ಸಮೀಪವಿರುವ ಆ ದೊಡ್ಡ ಊರಿನ ಹೆಸರು ಭೀಮಾ ಕೊರೆಗಾಂವ್. ಈ ಊರಿನಲ್ಲಿಯೇ, ಇದೇ ಭೀಮಾ ನದಿಯ ತೀರದಲ್ಲಿಯೇ ಮಹರ್ ಸೈನಿಕರ ತುಂಡು ಗುಂಪೊಂದು ಬ್ರಿಟಿಷ್‌ಸೈನಿಕರ ದ್ವಜದಡಿಯಲ್ಲಿ ಹೋರಾಡುತ್ತ ತಮಗಿಂತ ಬಹಳ ಬಲಶಾಲಿಯಾಗಿದ್ದ ಪೇಶ್ವೆಗಳ ಸೈನಿಕರನ್ನು 1818ರಲ್ಲಿ ಸೊಲಿಸಿದ್ದು.150 ವರ್ಷಗಳ ಬಳಿಕ ಸಹ ಈ ಯುದ್ಧದ ಸಾಕ್ಷಿಗಳು ಹಾಗೆಯೇ ಉಳಿದಂತೆ ತೋರುತ್ತದೆ.ಈ ನದಿಪಾತ್ರದಲ್ಲಿ ಈಗಲು ಆ ಯುದ್ಧದಲ್ಲಿ ಬಳಸಿದ ಖಡ್ಗಗಳು ದೊರಕುತ್ತವೆಂದು ಈ ಊರಿನ ಜನ ಹೇಳುವುದುಂಟು.
 

 
 
ಬಲಶಾಲಿಗಳಾಗಿದ್ದ, ಬಂದುಕುಗಳನ್ನು ಹೊಂದಿದ್ದ 25,000 ಪೇಶ್ವೆಗಳ ಸೈನಿಕರನ್ನು ಹೇಗೆ ಕೇವಲ 500 ಮಹರ್ ಸೈನಿಕರು ವೀರಾವೇಶದಲ್ಲಿ ಸೊಲಿಸಿದರೆಂಬುದನ್ನು ಭೋಸ್ಲೆ ಪುಳಕಿತರಾಗಿ ವರ್ಣಿಸುತ್ತಾರೆ. ‘‘ನಾವು ಪೇಶ್ವೆಗಳನ್ನು ಸೊಲಿಸಿದೆವು’’ ಎನ್ನುತ್ತ ಅವರು, ಪೇಶ್ವೆಗಳನ್ನು ಸೋಲಿಸಿ ಭಾರತವನ್ನು ಬ್ರಿಟೀಷರಿಗೆ ಕೊಟ್ಟಿದ್ದು ಮಹರ್ ಸೈನಿಕರೇ ಎಂದು ಹೇಳುತ್ತಾರೆ ಅವರು. ರಾಷ್ಟ್ರಕ್ಕಾಗಿ ಹೋರಾಡಿ, ಅದಕ್ಕಾಗಿ ಅನೇಕ ಪದಕಗಳನ್ನು ಎದೆಯ ಮೇಲೆ ಹೆಮ್ಮೆಯಿಂದ ಧರಿಸಿರುವ ಮಾಜಿ ಸೈನಿಕನೊಬ್ಬನ ಈ ಮಾತು ವಿಚಿತ್ರವಾಗಿ ತೋರಬಹುದು. ಬೋಸ್ಲೆ 1965ರ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದರು. ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ, ಶ್ರೀಲಂಕಾದಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿಯೂ ಸಹ ದುಡಿದಿದ್ದಾರೆ. ಇಷ್ಟಾದರೂ ಸಹ ಕೊರೆಗಾಂವ್‌ನ ಯುದ್ಧ ಮಹರ್‌ಗಳು ಮತ್ತು ಭಾರತದ ದಲಿತರ ಪಾಲಿಗೆ ಒಂದು ಮುಖ್ಯ ಸ್ಮತಿಪೂರ್ವಕ ಘಟನೆಯಾಗಿದೆ. ಜಾತಿ ಆಧಾರಿತ ವ್ಯವಸ್ಥೆಯ ವಿರುದ್ಧ ಈಗಲೂ ನಡೆಯುತ್ತಿರುವ ಹೋರಾಟದಂತೆಯೇ, ಪ್ರತೀ ಜನವರಿ ಒಂದರಂದು ಪೇಶ್ವೆಗಳ ದಮನಕಾರಿ ಆಡಳಿತವನ್ನು ಹುಟ್ಟಡಗಿಸುವಂತೆ ಹೋರಾಡಿದ ಮಹರ್‌ಸೈನಿಕರ ವೀರತ್ವ ಈ ಜನರಿಗೆ ನಿಜಕ್ಕೂ ಒಂದು ಮುಖ್ಯ ಅಂಶವಾಗಿದೆ. ಒಂದು ವೀರತನದ ಹೋರಾಟ 1818ರ ಹೊಸವರ್ಷದ ದಿನದಂದು ಸುಮಾರು 500 ಜನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಸೇರಿದ ಬಾಂಬೆ ನೇಟಿವ್ ಇನ್ಪ್ಯಾಂಟ್ರಿಯ ಸೈನಿಕರು ಕರ್ನಲ್ ಎ್.ಎ್.ಸ್ಟೌಂಟನ್‌ರ ನೇತೃತ್ವದಲ್ಲಿ ಭೀಮಾ ನದಿಯನ್ನು ದಾಟಿ, ಈ ಭೀಮಾ ಕೊರೆಗಾಂವ್ ಎಂಬ ಊರಿನಲ್ಲಿ 25,000 ಪೇಶ್ವೆ ಸೈನಿಕರನ್ನು-ಅವರ ಯುದ್ಧೋಪಕರಣಗಳನ್ನೂ ಲೆಕ್ಕಿಸದೆ ಸೊಲಿಸಿದ್ದನ್ನು ಈ ಕತೆ ಹೇಳುತ್ತದೆ.

 ಇಲ್ಲಿ ಸ್ವಲ್ಪಉತ್ಪ್ರೇಕ್ಷೆ ಇರುವುದು ಹೌದು. ಈಚೆಗಿನ ಬ್ರಿಟಿಷ್ ದಾಖಲೆಗಳು 500ರ ಬದಲು 900 ಸೈನಿಕರಿದ್ದರೆಂದು ಹೇಳುತ್ತವೆ.ಮತ್ತು 25 ಸಾವಿರವಲ್ಲ, 20 ಸಾವಿರ ಪೇಶ್ವೆ ಸೈನಿಕರಿದ್ದರೆಂದು ತಿಳಿಸುತ್ತವೆ. ಮತ್ತು ಈ ಸಂಗ್ರಾಮದ ವೇಳೆಗಾಗಲೇ ಪೇಶ್ವೆಗಳು ಸ್ವಲ್ಪ ಸೋಲಿನತ್ತ ವಾಲಿದ್ದರೆಂಬುದನ್ನೂ ಈ ದಾಖಲೆಗಳು ಶೃತಪಡಿಸುತ್ತವೆ.ಏಕೆಂದರೆ ಆ ಸಮಯಕ್ಕಾಗಲೇ ಈಸ್ಟ್ ಇಂಡಿಯಾ ಕಂಪೆನಿಯು ಪೇಶ್ವೆಗಳ ರಾಜಧಾನಿಯಾದ ಪುಣೆಯನ್ನು ಗೆದ್ದಾಗಿತ್ತು. ಹಾಗೂ ಕೆಲವು ತಿಂಗಳ ಮುಂಚೆಯೇ ಅದು ತನ್ನ ಧ್ವಜವನ್ನು ಶನಿವಾರವಾಡೆಯಲ್ಲಿ ನೆಟ್ಟಾಗಿತ್ತು. ಅಂಕಿಸಂಖ್ಯೆಗಳು ಏನೇ ಇರಲಿ. ಆದರೆ ಈ ಸಂಗ್ರಾಮವಂತೂ ಮುಖ್ಯವಾದುದಾಗಿತ್ತು. ಬ್ರಿಟಿಷರು ಈ ಕದನವನ್ನು ಮೂರನೆ ಆಂಗ್ಲ-ಮರಾಠ ಯುದ್ಧದ ಅತಿಮುಖ್ಯ ಘಟ್ಟವೆಂದು ಭಾವಿಸುತ್ತವೆ. ಈ ಯುದ್ಧವೇ ಪೇಶ್ವೆಗಳು ಮರಾಠೀ ಸಾಮ್ರಾಜ್ಯವನ್ನು ಬ್ರಿಟಿಷರಿಗೆ ಹಸ್ತಾಂತರವಾಗುವಂತೆ ಮಾಡಿದ್ದು. ಮತ್ತು ಈ ಯುದ್ಧವೇ ಪಶ್ಚಿಮ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾಗಲು ಕಾರಣವಾಗಿದ್ದು. ಮೊದಲ ಮರಾಠದ ದೊರೆ ಶಿವಾಜಿಯು ತನ್ನ ಸೈನ್ಯದಲ್ಲಿ ಮಹರ್ ಸೈನಿಕರನ್ನು ಸೇರಿಸಿಕೊಳ್ಳುತ್ತಿದ್ದನಾದರು, ಪೇಶ್ವೆಗಳ ಕಾಲಕ್ಕೆ ಈ ಮಹರ್‌ಜನರ ಸ್ಥಿತಿಯು ಹಿಂದೆಂದಿಗಿಂತಲೂ ಶೋಚನೀಯವಾಗಿ ಹೋಗಿತ್ತು. ಈ ಪೇಶ್ವೆಗಳು ಅತ್ಯಂತ ಸಂಪ್ರದಾಯಶೀಲರಾಗಿದ್ದ ಬ್ರಾಹ್ಮಣರಾಗಿದ್ದರು.ಮಹರ್‌ಗಳು ಪಟ್ಟಣಕ್ಕೆ ತಲುಪುತ್ತಿದ್ದಂತೆಯೇ-ಅವರು ತಾವು ನಡೆದ ಸ್ಥಳವನ್ನು ಪೊರಕೆಯಿಂದ ಸ್ವಚ್ಛಗೊಳಿಸಬೇಕಿತ್ತು ಹಾಗೂ ತಮ್ಮ ಎಂಜಲು ನೆಲಕ್ಕೆ ಬೀಳದಂತೆ ಉಗುಳಲು ಒಂದು ಮಡಿಕೆಯನ್ನು ಕುತ್ತಿಗೆಗೆ ಕಟ್ಟಿಕೊಳ್ಳಬೇಕಿತ್ತು ಎಂಬುದನ್ನು ಕತೆಗಳು ನಮಗೆ ತಿಳಿಸುತ್ತವೆ. ಒಬ್ಬನ ಜಾತಿಯನ್ನು ಮುಚ್ಚಿಡುವುದೂ ಕೂಡಾ ಒಂದು ಅಪರಾಧವಾಗಿತ್ತು. ಬ್ರಿಟೀಷರು ಯುದ್ಧಕ್ಕೆ ಆಗಮಿಸುತ್ತಿದ್ದಂತೆಯೇ ದಲಿತರಾಗಿದ್ದ ಮಹರ್‌ಜನರು ತಮ್ಮ ಸೇವೆಯನ್ನು ಪೇಶ್ವೆ ಬಾಜೀರಾಯನಿಗೆ ಸಲ್ಲಿಸಲು ಮುಂದಾದರು.ಆತ ಅದನ್ನು ತಿರಸ್ಕರಿಸಿದ ಬಳಿಕವಷ್ಟೇ ಅವರು ತಮ್ಮ ನಿಷ್ಠೆ ಬದಲಿಸಿ ಬ್ರಿಟಿಷರ ಪಾಳೆಯಕ್ಕೆ ನೆಗೆದರು. 1851ರಲ್ಲಿ ಬ್ರಿಟಿಷರು ಈ ಭೀಮಾ ಕೊರೆಗಾಂವ್ ಉರಿನಲ್ಲಿ ಒಂದು ಸ್ಮಾರಕ ಶಿಲೆ ನಿಲ್ಲಿಸಿ,ಆ ಯುದ್ಧದಲ್ಲಿ ಮಡಿದ ಜನರ ಹೆಸರುಗಳನ್ನು ಅದರಲ್ಲಿ ಕೆತ್ತಿಸಿದರು. ಅದರಲ್ಲಿನ ಬಹುಪಾಲು ಹೆಸರುಗಳು ಮಹರ್‌ಸೈನಿಕರದ್ದಾಗಿವೆ. ತುಳಿತದಿಂದ ತಪ್ಪಿಸಿಕೊಳ್ಳುವಿಕೆ. ಮಹರ್‌ಸೈನಿಕರಿಗೆ ಇದ್ದ ಸೈನಿಕ ಅನುಭವ-ಇತಿಹಾಸವನ್ನು ಕಡೆಗಣಿಸಿದಂತೆ ಬ್ರಿಟೀಷ್ ಸರಕಾರ ಅವರನ್ನು 1893ರಿಂದ ಸೈನ್ಯಕ್ಕೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿತು. ಇದಕ್ಕೆ ಕಾರಣವಾಗಿದ್ದು 1857ರ ಸಿಪಾಯಿ ದಂಗೆ. ಇದರ ನಂತರ ಬ್ರಿಟಿಷರು ತಮ್ಮ ಸೈನಿಕರ ಆಯ್ಕೆಯ ಪದ್ಧತಿಯನ್ನು ಬದಲಿಸಿ ಕೇವಲ ಸೈನಿಕ ಜಾತಿಗಳಿಗೆ ಸೇರಿದ್ದ ಜನಾಂಗಗಳಿಂದ ಮಾತ್ರವೇ ಸಿಪಾಯಿಗಳನ್ನು ನೇಮಿಸಿಕೊಳ್ಳತೊಡಗಿದರು. ಹಾಗೂ ಅದೇ ಸಮಯದಲ್ಲಿಯೇ ಕಡೆಗಣಿಸಲ್ಪಟ್ಟ ಇನ್ನೆರಡು ವರ್ಗಗಳೆಂದರೆ ಸೀತ್ವ ಹೆಚ್ಚಿರುವ ದಕ್ಷಿಣದ ಜನರುಮತ್ತು ಬಾಂಬೆಯ ಮರಾಠರು ಸೈನ್ಯಕ್ಕೆ ಸೇರಿಸಿಕೊಳ್ಳುವುದರಿಂದ ಹೊರಗಿಡಲ್ಪಟ್ಟ ಇತರ ಗುಂಪುಗಳು ಅಸಮಾಧಾನವನ್ನು ವ್ಯಕ್ತಪಡಿಸಿದವಾದರೂ,ಇದರ ಪರಿಣಾಮ ನಿಜಕ್ಕೂ ತಾಗಿದ್ದು ಮಹರ್‌ಗಳೆಂಬ ಹಿಂದೂ ಧರ್ಮದ ಅಸ್ಪೃಶ್ಯ ಜನರಿಗೆ. ಸೈನ್ಯದಲ್ಲಿನ ಸ್ಥಾನಮಾನ ಕಳೆದು ಕೊಂಡ ಪರಿಣಾಮವಾಗಿ ಮಹರ್‌ಗಳು ತಮ್ಮ ಶಿಕ್ಷಣ ಮತ್ತು ಕೆಲಸದ ಸಾಧ್ಯತೆಗಳನ್ನು ಕಳೆದುಕೊಂಡರು. ಕನಿಷ್ಠ ಕಾಗದ ಮೇಲಾದರೂ ಈ ಸ್ಥಾನಗಳಿದ್ದಿದ್ದರೆ ಅವರ ಸಾಮಾಜಿಕತೆಯು ಸಮಾನವಾದದ್ದಾಗಿರುತ್ತಿತ್ತು. ಭೀಮರಾವ್ ಅಂಬೇಡ್ಕರರೇ ಸ್ವತಃ ತಮ್ಮ ಮೊದಲ ವರ್ಷಗಳನ್ನು, ಅಸ್ಪಶ್ಯತೆಯ ಹಿಂಸೆಯಿಂದ ತಪ್ಪಿಸಿಕೊಳ್ಳಲು ಮಹವ್‌ನಲ್ಲಿನ ಮಿಲಿಟರಿ ಕೋಣೆಗಳಲ್ಲಿ ಕಳೆದಿದ್ದರು. ಅಲ್ಲಿ ಅವರ ತಂದೆ ಸುಬೇದಾರ್‌ರಾಮ್ಜಿ ಸಕ್ಪಾಲ್ ಅವರು ನಿಯೋಜಿಸಲ್ಪಟ್ಟಿದ್ದರು. ಅಲ್ಲಿ ಸಕ್ಪಾಲ್‌ರು ಮಿಲಿಟರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅಲ್ಲಿನ ಸೈನಿಕರ ಮಕ್ಕಳು ಮತ್ತು ಸಂಬಂಕರಿಗೆ ಅವರು ಪಾಠಮಾ ಡುತ್ತಿದ್ದರು. 1984ರಲ್ಲಿ, ಅಂದರೆ ಬ್ರಿಟಿಷರು ಮಹರ್‌ಜನರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿದ ಒಂದು ವರ್ಷದ ಬಳಿಕ ಅವರು ನಿವೃತ್ತರಾಗಿದ್ದರು. ಆ ಬಳಿಕ ಸಕ್ಪಾಲ್‌ರು ಮಹರ್ ಇನಾಓಂ್ಯಿಂಟ್ರಿ ಬೆಟಾಲಿಯನ್ ಅನ್ನು ಪುನರ್‌ನೇಮಕಮಾಡಿಕೊಳ್ಳಲು ಒತ್ತಾಯಿ ಸುತ್ತಿದ್ದ ಅನೇಕ ಹೋರಾಟಗಳಿಗೆ ತಮ್ಮ ಬೆಂಬಲವನ್ನು ಕೊಡುತ್ತಲೇ ಬಂದರು. ಜನ್ವರಿ 1,1927 ರಂದು ಅಂಬೇಡ್ಕರರು ಈ ಹಳ್ಳಿಯ ಸ್ವಲ್ಪ ಹೊರಗಿರುವ ಕಂಬದ ಬಳಿ ಒಂದು ಸಭೆಯನ್ನು ಏರ್ಪಡಿಸಿದರು.ಇವತ್ತಿಗೂ ಈ ಕಾರ್ಯಕ್ರಮ ಮುಂದುವರಿಯುತ್ತ ಬಂದಿದೆ. ಅಲ್ಲಿ ಹೂವುಗಳನ್ನು ಸಲ್ಲಿಸಿದ ನಂತರ ಜನರು ಅಲ್ಲಿಯೇ ಇರುವ 11 ಎಕರೆ ಪ್ರದೇಶದ ಮಿಲಿಟರಿ ಮೈದಾನದಲ್ಲಿ ನಡೆಯುವ ಇತರೇ ಕಾರ್ಯಕ್ರಮಗಳ ಮನರಂಜನೆಯತ್ತ ಸಾಗುತ್ತಾರೆ. ಮೈದಾನದಲ್ಲಿ

ಬ್ರಿಟಿಷರು ಮೊದಲ ಮಹಾಯುದ್ಧದ ಸಮಯಕ್ಕೆ ಮತ್ತೆ ಮಹರ್‌ಗಳನ್ನು ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳಲು ಆರಂಭಿಸಿದರು. ಮತ್ತು ಯುದ್ಧ ಮುಗಿದ ಬಳಿಕ ಆ ರೆಜಿಮೆಂಟ್ ಅನ್ನು ತೆಗೆದುಹಾಕಿದರು.ಕಡೆಗೆ 1945ರಲ್ಲಿ ಮಹರ್‌ರೆಜಿಮೆಂಟ್ ಅನ್ನು ಪೂರ್ಣವಾಗಿ ಪುನರ್ ಸ್ಥಾಪಿಸಲಾಯಿತು. ಬೋಬ್ಲೆ ಮತ್ತು ಬೋಸ್ಲೆ ಇಬ್ಬರೂ ಈ ರೆಜಿಮೆಂಟ್‌ಗೆ ಸೇರಿದವರು. ಅದು ಈಗ ಮಧ್ಯಪ್ರದೇಶದ ಸಾಗರದಲ್ಲಿದೆ, ಮಹವ್‌ದಲ್ಲಿ ಇಲ್ಲ. ಪ್ರತೀ ವರ್ಷ ಈ ರೆಜಿಮೆಂಟಿನ ಹಾಲಿ ಮತ್ತು ಮಾಜಿ ಸದಸ್ಯರು ಈ ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ಗೌರವಾರ್ಪಣೆ ಮಾಡುತ್ತಾರೆ.  1990ರ ಮೊದಲಿನಲ್ಲಿ ನಿವೃತ್ತರಾದ ಬಳಿಕ ಈ ಇಬ್ಬರೂ ಸಮತಾ ಸೈನಿಕ ದಳದ ಸೈನಿಕರಿಗೆ ತರಬೇತಿಯನ್ನು ಕೊಡಲು ತೊಡಗಿದರು. ಈ ಅರೆಸೇನಾ ಪಡೆಯು ಭಾರತದ ಬುದ್ಧಿಸ್ಟ್ ಸಮಾಜದ ಕೆಳಗೆ ಕೆಲಸ ಮಾಡುತ್ತದೆ. ಇದನ್ನು ಅಂಬೇಡ್ಕರರು 1926ರಲ್ಲಿ, ಆಗ ಹೆಚ್ಚುತ್ತ ನಡೆದಿದ್ದ ಆರೆಸ್ಸೆಸ್‌ನ ಮಿಲಿಟರಿ ವ್ಯಕ್ತಿತ್ವಕ್ಕೆ ಸಂವಾದಿಯಾಗಿ ಆರಂಭಿಸಿದ್ದರು. ಈ ಸ್ಮಾರಕದ ಸುತ್ತ ಅನೇಕ ನೆನಪುಗಳಿವೆ ಎನ್ನುವ ಶ್ರದ್ಧಾ ಕುಂಬೋಜ್ಕರ್‌ಎಂಬ ಪುಣೆ ವಿಶ್ವವಿದ್ಯಾಲಯದ ಇತಿಹಾಸಕಾರ, ಕೊರೆಗಾಂವ್‌ನ ಯುದ್ಧ ಸದ್ಯದ ಇತಿಹಾಸದಲ್ಲಿ ಮರೆಯಾಗಿ ಹೋಗಿದೆ. ಆ ಬಳಿಕ ಅಲ್ಲಿಗೆ ಅಂಬೇಡ್ಕರರು 1927 ರಲ್ಲಿ ಭೇಟಿ ಕೊಟ್ಟದ್ದು ಮರವಾಗಿದೆ. ಈ ಭೇಟಿ ಈ ಸ್ಥಳಕ್ಕೆ ಒಂದು ಯಾತ್ರಾಸ್ಥಳದ ವ್ಯಕ್ತಿತ್ವವನ್ನು ಕೊಟ್ಟಿತು.ಅವರ ಮರಣದ ಬಳಿಕ ಈ ಸ್ಥಳವನ್ನು ಮುಖ್ಯವಾಹಿನಿಯ ಹಿಂದೂ ಸಂಸ್ಕೃತಿಗೆ ಪ್ರತಿಸ್ಪಂದಿಯಾಗಿ ಬೆಳೆಸುವ ಉದ್ದೇಶದಿಂದ ಮುಂದುವರಿಸಲಾಯಿತು.
  
 

 
 
 
 
 
 
 
ವೀರಾವೇಶದ ನೆನಪು ಭೀಮಾ ಕೋರೆಗಾಂವ್‌ನ ಕಾರ್ಯಕ್ರಮಗಳು ಇತರ ಅಂಬೇಡ್ಕರ್‌ಸಂಬಂತ ಕಾರ್ಯಕ್ರಮಗಳಂತೆಯೇ ಇವೆ. ಅಲ್ಲಿ ಮೂರು ದೊಡ್ಡ ಪೆಂಡಾಲುಗಳನ್ನು ಸ್ಥಾಪಿಸಲಾಗುತ್ತದೆ. ಒಂದರಲ್ಲಿ ಬೇರೆ ಬೇರೆ ಪಕ್ಷದ ರಾಜಕಾರಣಿಗಳು ಭಾಷಣಗಳನ್ನು ಕೊಡುತ್ತಿದ್ದರೆ, ಇನ್ನೊಂದರಲ್ಲಿ ಸಂಗೀತಗಾರರು ಕಛೇರಿಯನ್ನು ನೀಡುತ್ತಿರುತ್ತಾರೆ. ಮೂರನೆಯದರಲ್ಲಿ ಈ ವರ್ಷದ ಸುಡುವ ಬಿಸಿಲಿನಿಂದ ತಪ್ಪಿಸಿಕೊಂಡು ವಿಶ್ರಾಂತಿ ಪಡೆಯಲು ಜನರಿಗೆ ಸ್ಥಳಾವಕಾಶ ಕಲ್ಪಿಸಲಾಗಿರುತ್ತದೆ. ಈ ಟೆಂಟುಗಳ ಹೊರಗೆ ಜನರು ಸ್ಟಾಲುಗಳಲ್ಲಿ ಜಾತಿವ್ಯವಸ್ಥೆಯ ಕುರಿತ ಪುಸ್ತಕ, ಸಿಡಿಗಳನ್ನು ಮಾರಾಟ ಮಾಡುತ್ತ ಇರುತ್ತಾರೆ. (ವಾಟ್ಸಪ್ ಮತ್ತು ಯೂಟ್ಯೂಬ್‌ಗಳ ಕಾರಣದಿಂದ ಕಳೆದ ವರ್ಷಗಳಿಗಿಂತ ಈಚೆಗೆ ಸಂಗೀತದ ಮಾರುಕಟ್ಟೆ ಕುಸಿಯಲು ತೊಡಗಿದೆ. ಅಲ್ಲಿ ಬುದ್ಧ, ಅಂಬೇಡ್ಕರ ಪ್ರತಿಮೆಗಳು, ಕ್ಯಾಲೆಂಡರುಗಳು, ಭಿತ್ತಿಚಿತ್ರಗಳು ಸಹ ಮಾರಾಟವಾಗುತ್ತಿರುತ್ತವೆ. ಪಾನೀಯ, ಹಣ್ಣುಗಳನ್ನು ಮಾರುವ ವರ್ತಕರು ಸಹ ಅಲ್ಲಿ ಎಲ್ಲೆಡೆಯಂತೆಯೇ ನೆರೆದಿರುತ್ತಾರೆ. ಅವರಿಗೆ ತಮ್ಮ ಮಾರುಕಟ್ಟೆ ಗೊತ್ತು. ಅದರ ಪಕ್ಕದಲ್ಲಿಯೇ ಇರುವ ಇನ್ನೊಂದು ಮೈದಾನದಲ್ಲಿ ತಿರುಗುವ ಬೃಹತ್ ಚಕ್ರಗಳು, ಜಾರುಬಂಡೆಗಳು ಇತ್ಯಾದಿಗಳು ಆಟವಾಡಿಸುತ್ತಿರುತ್ತವೆ. ಆದರೆ ಈ ಜಾಗ ತನ್ನ ಪಕ್ಕದ ಮೈದಾನಕ್ಕೆ ಹೋಲಿಸಿದರೆ ಭಣಗುಡುತ್ತಿರುತ್ತದೆ. ಈ ಎರಡು ಸ್ಥಳಗಳ ಪಕ್ಕದಲ್ಲಿಯೆ, ಸುತ್ತಲೂ ಬೆಳೆದು ನಿಂತ-ಈ ವರ್ಷ ಇನ್ನೂ ಕಟಾವಾಗದ ಕಬ್ಬಿನ ಗದ್ದೆಗಳು ಮೈತುಂಬಿ ನೆರೆದಿರುತ್ತವೆ. ಮಧ್ಯಾಹ್ನವಾಗುವ ಮುಂಚೆ ಹೆಲಿಕಾಪ್ಟರಿನ ಚಕ್ರ ತಿರುಗುವ ಸದ್ದು ಕೇಳಿಬರುವಂತೆ ಜನರು ಕೆತ್ತೆತ್ತಿ ಅದರತ್ತ ನೋಡುತ್ತಾರೆ. ಅದರಿಂದ ಹೂವುಗಳ ವೃಷ್ಟಿಯು ಈ ಸಮ್ಮೇಳನದ ಮೇಲೆ ಸುರಿಯಲ್ಪಡುತ್ತದೆ.ಜನರೆಲ್ಲ ಕರತಾಡನ ಮಾಡುತ್ತ ಚೀತ್ಕರಿಸುತ್ತಾರೆ.ಮತ್ತೆ ಮತ್ತೆ ಹೆಲಿಕಾಪ್ಟರು ಸುತ್ತುಗಳನ್ನು ಹೊಡೆಯುತ್ತದೆ. ಪ್ರತೀಬಾರಿಯೂ ಜನರ ಗುಂಪುಗಳು ಕರತಾಡನ, ಚೀತ್ಕಾರವನ್ನು ಹೆಚ್ಚು ಮಾಡುತ್ತವೆ. ಹೆಚ್ಚಾಗುತ್ತ ನಡೆದ ಉತ್ಸವ ಈ ಉತ್ಸವದ ವ್ಯಾಪ್ತಿ ಹೆಚ್ಚಾಗುತ್ತಲೇ ನಡೆದಿದೆ. ಈ ಬಾರಿ ಒಂದು ಲಕ್ಷ ಜನ ಈ ಸಮ್ಮೇಳನಕ್ಕೆ ಬಂದಿದ್ದರೆಂದು ಅಂದಾಜಿಸಲಾಗಿದೆ.ಒಂದು ದಶಕದ ಹಿಂದಿನ ಈ ಕಾರ್ಯಕ್ರಮವನ್ನು ನೆನಪಿಸಿ ಕೊಳ್ಳುವ ಹಿರಿಯರು ಆಗ ಈ ಕಾರ್ಯಕ್ರಮ ಇಷ್ಟೆಲ್ಲ ತುಳುಕಾಡುತ್ತಿರಲಿಲ್ಲವೆಂದು ನೆನಪಿಸಿಕೊಳ್ಳುತ್ತಾರೆ. ಈ ಹೆಚ್ಚಳಕ್ಕೆ ಕಾರಣ ಭೀಮಾ ಕೆರೆಗಾಂವ್‌ನ ಭೀಮಾ ರಣಥಂಬ್ ಸಮಿತಿಯ ಪ್ರಯತ್ನ ಎಂದು ಈ ಊರಿನ ಸರಪಂಚಳ ಪತಿಯಾದ ಬಾಬೂಸಾಹೇಬ್ ಭಲೇರಾವ್ ಅಭಿಪ್ರಾಯಪಡುತ್ತಾರೆ. ಈ ಸಮಿತಿ ಯಲ್ಲಿ ಇದೇ ಊರಿನ 11 ಸಂಘಟಕರಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು 500 ರಷ್ಟು ಕಾರ್ಯಕರ್ತರು ಈ ಸಮಿತಿಯಲ್ಲಿದ್ದಾರೆ. ಈ ಕಾರ್ಯ ಕರ್ತರು ಈ ಸಮಿತಿಯಲ್ಲಿರುವ ಜನರ ಸಂಬಂಕರೇ ಆಗಿದ್ದಾರೆ. ಇವರೆಲ್ಲ ಒಟ್ಟಾಗಿ ಹೀಗೆ ಹರಿದು ಬರುವ ಜನರನ್ನು ನಿಯಂತ್ರಿಸುವುದು, ನಡೆಯಲು ರಸ್ತೆಗಳನ್ನು ನಿರ್ಮಿಸುವುದು, ದೂರದಿಂದ ಬಂದ ಜನರಿಗೆ ಊಟ, ಪಾನೀಯ, ಉಳಿಯಲು ಟೆಂಟುಗಳನ್ನು ನಿರ್ಮಿಸುವುದು ವ್ಯವಸ್ಥೆಗಳನ್ನು ಮಾಡುವುದು ಇತ್ಯಾದಿಗಳ ಜವಾಬ್ದಾರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹತ್ತು ವರ್ಷದ ಕೆಳಗೆ ಇಷ್ಟೆಲ್ಲ ಜನರು ಬರುತ್ತಿರಲಿಲ್ಲ ಎಂದು ಹೇಳುವ ಭಲೇರಾವ್ ಆಗ ಒಂದು ದಿನಕ್ಕೆ 50 ಸಾವಿರದಷ್ಟು ಜನರು ಬರುತ್ತಿದ್ದರು. ಈಗ ಅದು 4 ಲಕ್ಷಕ್ಕೇರಿದೆ ಎಂಬ ಅಂಕೆಗಳನ್ನು ಮುಂದಿಡುತ್ತಾರೆ. ಈತ್ತೀಚೆಗೆ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದ್ದರು ಸಹ ಈ ಸ್ತಂಭವು ಅನೇಕ ಮಂದಿಗೆ ಸೈನ್ಯಕ್ಕೆ ಸೇರಲು ಪ್ರೇರಣೆಯಾಗಿತ್ತು. ಭಲೇರಾವ್‌ರ ಮಗ ಪೊಲೀಸ್ ಇಲಾಖೆಗೆ ಸೇರಲು ಉದ್ಯುಕ್ತನಾಗಿದ್ದಾನೆ. 2005ರಲ್ಲಿ ಭಲೇರಾವ್‌ನ ಸೋದರನೊಬ್ಬ ಒಂದು ಸಮಿತಿ ರಚಿಸಿ ಪ್ರತೀವರ್ಷ ಎಷ್ಟು ಜನ ಪ್ರಯಾಣಿಕರು ಇಲ್ಲಿಗೆ ಬರುವಾಗ ಸಮಸ್ಯೆಗಳನ್ನು ಅನುಭವಿಸಿದ್ದರು ಎಂಬುದನ್ನು ಲೆಕ್ಕಹಾಕುತ್ತಾರೆ. ಇಲ್ಲಿನ ಗ್ರಾಮ ಪಂಚಾಯತ್‌ಯೇ ಈ ವರ್ಷ ಸುಮಾರು 50 ಸಾವಿರ ರೂಪಾಯಿಗಳನ್ನು ಈ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ನೀಡಿದೆ.ಹಾಗೂ ಜನರೇ ತಮ್ಮ ವಯಕ್ತಿಕ ದೇಣಿಗೆಯಾಗಿ ಇದಕ್ಕಿಂತ ಹೆಚ್ಚಿನ ಹಣವನ್ನು ನೀಡಿದ್ದಾರೆ. ನಾವು ಆರಂಭಿಸಿದ್ದು 2005ರಲ್ಲಾದರೂ, ಅದು ನಮ್ಮ ಹಿಡಿತಕ್ಕೆ ಬಂದದ್ದು 2010 ವೇಳೆಗಷ್ಟೇ. ಮುಂದಿನ ವರ್ಷ ಇದನ್ನು ಇನ್ನೂ ಹೆಚ್ಚು ಸಮರ್ಥಗೊಳಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಭಲೇರಾವ್. ನೆನಪುಗಳನ್ನು ಸೃಷ್ಟಿಸುವುದು
  
ದೃಪದಾಬಾಯಿ ಗೋಗ್ರೆ ಎಂಬ 80 ವರ್ಷದ ಮಹಿಳೆ ರಾತ್ರಿ ಎಲ್ಲ ನಾಮ್ಡೆಡ್ ನಿಂದ ಪಯಣಿಸಿ ಈ ಕಾರ್ಯಕ್ರಮಕ್ಕೆ ಬಂದವರು. ಕಳೆದ ವರ್ಷಕ್ಕಿಂತ ಈ ಬಾರಿ ಎಲ್ಲವೂ ಹೆಚ್ಚು ಚೆನ್ನಾಗಿ ಮಾಡಲ್ಪಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಹತ್ತು ವರ್ಷದ ಹಿಂದೆ ಆಕೆ ಇಲ್ಲಿಗೆ ಬರುತ್ತಿದ್ದ ವೇಳೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರುತ್ತಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.  ಈ ಗೋಗ್ರೆಯವರ ಜೊತೆಗೆ ಇತರ 107 ಜನ ಮಹಿಳೆಯರನ್ನು ಈ ಸ್ಥಳಕ್ಕೆ ಕರೆದುಕೊಂಡು ಬಂದಿರುವ ಗಾಯತ್ರಿ ಕೋಕ್ರೆ ಎಂಬ 61 ವರ್ಷದ ಮಹಿಳೆ ದಲಿತ ಪಕ್ಷಗಳು ಇಲ್ಲಿ ಭಾಗವಹಿಸುವುದರ ಕುರಿತು ಅಸಮಾಧಾನದಿಂದ ಮಾತನಾಡುತ್ತಾರೆ.
 
 


 ನಾವು ಯಾವುದೇ ದುರಾಶೆಯ ಪಕ್ಷಗಳ ಜೊತೆಗೆ ಗುರುತಿಸಿಕೊಳ್ಳಲು ಬಯಸುವುದಿಲ್ಲ. ನಮಗೆ ದಲಿತರ ಬದುಕು ಅಭಿವೃದ್ಧಿಯಾಗುತ್ತಿರುವುದರ ಬಗ್ಗೆ ಖುಷಿಯಿದೆ. ಆದರೆ ಪಕ್ಷಗಳ ಬಗ್ಗೆ ಅಸಮಾಧಾನವಿದೆ. ಹಾಗಾಗಿ ಅವರನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಯುದ್ಧದಲ್ಲಿ ಮಡಿದ ಮಹರ್‌ಸೈನಿಕರ ಬಗ್ಗೆ ನಮಗೆ ಗೌರವವಿದೆ. ನಮ್ಮ ಬದುಕನ್ನು ನಾವು ಮಹಿಳೆಯರು ನಮ್ಮ ಹಿಡಿತಕ್ಕೆ ಪಡೆಯಲು ಇದು ನಮಗೆ ಸೂರ್ತಿಯನ್ನು ಕೊಡುತ್ತದೆ ಎನ್ನುತ್ತಾರೆ ಅವರು. ತಾವು ಇಡೀ ರಾತ್ರಿ ಪ್ರಯಾಣಿಸಿ ಬರುವಾಗ ಹೇಗೆ ಹಾಡಿಕೊಳ್ಳುತ್ತ ಬಂದೆವು ಎಂಬುದನ್ನು ಅವರು ವರ್ಣಿಸುತ್ತಾರೆ. ನಾವು ರೈಲಿನಲ್ಲಿ ಬಂದೆವು. ನಮ್ಮೆಲ್ಲರ ಬಳಿಯೂ ಟಿಕೆಟ್ ಇತ್ತು. ಎಂದು ಹೇಳುತ್ತ ಅವರು ತಮ್ಮ ಬ್ಲೌಸ್ ಒಳಗಿನಿಂದ ಟಿಕೆಟನ್ನು ತೆಗೆದು ಸಾಕ್ಷಿಯನ್ನು ತೋರಿಸಿದರು.ನಾವು ಸರಕಾರದ ಸೌಲಭ್ಯಗಳನ್ನು ಪುಕ್ಕಟೆ ತೆಗೆದುಕೊಳ್ಳಲು ಬಯಸುವುದಿಲ್ಲ. ಬಹುಶಃ ಕೋಕ್ರೆಗೆ ದಲಿತರು ಮುಂಬೈಯಲ್ಲಾಗಲಿ, ನಾಗಪುರ,ಮಹದ್ ಅಥವಾ ಭೀಮಾ ಕೊರೆಗಾಂವ್ ಎಲ್ಲಾದರೂ ಒಟ್ಟಾಗಿ ನೆರೆದಾಗ ಅವರ ಕುರಿತು ಆಡಿಕೊಳ್ಳಲಾಗುವ ವಿಷಯದ ಕುರಿತು ಅರಿವಿರಬೇಕು. ಇತಿಹಾಸಕಾರ್ತಿ ಶ್ರದ್ಧಾ ಕುಂಬೋಜ್ಕರ್‌ತಮ್ಮ ಬರಹವೊಂದರಲ್ಲಿ ಈ ಭೀಮಾ ಕೊರೆಗಾಂವ್ ಸ್ಥಳದ ಕುರಿತು ಭಿನ್ನ ಅಸ್ತಿತ್ವ-ಜಾತಿಯ ಜನರು ಹೇಗೆ ಅಭಿಪ್ರಾಯಪಡುತ್ತ್ತಾರೆಂದು ತಿಳಿಸುತ್ತಾರೆ. ಪುಣೆಯ ಮೇಲ್ವರ್ಗದ ಹಿಂದೂಗಳು-ಇವರು ಈ ಹಳ್ಳಿಯ ಕೇವಲ 50ಶೇ. ದಷ್ಟಿದ್ದಾರೆ-ತಾವು ರಸ್ತೆಯ ಮಾರ್ಗವಾಗಿ ಹೊಸವರ್ಷದ ದಿನ ಪ್ರಯಾಣಿಸಬಾರದೆಂದು ಈ ಸಮಾವೇಶದ ನೆಪದಲ್ಲಿ ತೀರ್ಮಾನಿಸುತ್ತಾರೆ. ಜಾತಿವ್ಯವಸ್ಥೆಯ ವಿರುದ್ಧ ಹೋರಾಟದಲ್ಲಿ ತೊಡಗಿರುವ ಜನರಿಗೆ ಈ ಬಗೆಯ ಮಾತುಗಳು ಯಾವ ನಿರುತ್ಸಾಹವನ್ನೂ ಉಂಟು ಮಾಡುವುದಿಲ್ಲ. ದಿಲ್ಲಿಯಿಂದ ಈ ಕಾರ್ಯಕ್ರಮಕ್ಕೆ ಬಂದ ಬೌದ್ಧ ಬಿಕ್ಕುಣಿಯಾದ ಸೈದ್ ಪೂರ್ಣಿಮಾ, ನಾನು ಶಾಂತಿಯಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಬೌದ್ಧ ಭಿಕ್ಕುಣಿ. ಆದರೆ ನಾನು ಇಲ್ಲಿಗೆ ಬಂದಿರುವುದು ಸಮಾಜ ಮತ್ತು ಸ್ವಗೌರವಕ್ಕಾಗಿ ಮಡಿದ ಅನೇಕ ಸೈನಿಕರಿಗೆ ಗೌರವ ತೋರಿಸುವುದಕ್ಕಾಗಿ ಎನ್ನುತ್ತಾರೆ.

Writer - ಮೃದುಲಾಚಾರಿ

contributor

Editor - ಮೃದುಲಾಚಾರಿ

contributor

Similar News