ಕಲ್ಲಿಕೋಟೆ : ಅಂತಾರಾಷ್ಟ್ರೀಯ ಮೀಲಾದ್ ಸಮ್ಮೇಳನ

Update: 2016-01-11 04:53 GMT

ಕಲ್ಲಿಕೋಟೆ : ಕರುಣೆ ಹಾಗೂ ಪ್ರೀತಿ ಪವಿತ್ರ ಇಸ್ಲಾಂ ಧರ್ಮದ ಸಂದೇಶ ಎಂದು ವಿಶ್ವಕ್ಕೆ ಕಲಿಸಿದ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆಯಂಗವಾಗಿ ಅಂತಾರಾಷ್ಟ್ರೀಯ ಮೀಲಾದ್ ಸಮ್ಮೇಳನ ಕೋಝಿಕ್ಕೋಡ್ ಕಡಲ ಕಿನಾರೆಯಲ್ಲಿ ಅದ್ದೂರಿಯಾಗಿ ನಡೆಯಿತು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸಾವಿರಾರು ಮಂದಿ ಸಮ್ಮೇಳನದಲ್ಲಿ ಪಾಳ್ಗೊಂಡರು. ವಿವಿಧ ಭಾಷೆಗಳಲ್ಲಿ ಪ್ರವಾದಿ ಕೀರ್ತನೆಗಳು ಮೌಲೀದ್ , ಪ್ರಾರ್ಥನೆಗಳೊಂದಿಗೆ ಅರಬೀ ಸಮುದ್ರದ ದಡದಲ್ಲಿ ವಿಶ್ವಾಸಿಗಳು ಪ್ರೀತಿಯ ಹೊಸ ಕಾವ್ಯಕ್ಕೆ ನಾಂದಿ ಹಾಕಿದರು. 

ಸಯ್ಯಿದ್ ಯೂಸುಫುಲ್ ಜೀಲಾನಿ ವೈಲತ್ತೂರು ದ್ವಜಾರೋಹಣ ಮಾಡುವ ಮೂಲಕ ಅಂತಾರಾಷ್ಟ್ರೀಯ ಮೀಲಾದ್ ಸಮ್ಮೇಳನಕ್ಕೆ ಚಾಲನೆ ನೀಡಿದರು.

ತ್ವಾಬಾ ಫೌಂಡೇಶನ್ ಸ್ಥಾಪಕ ಹಬೀಬ್ ಅಲೀ ಜಿಫ್ರೀ(ಯಮನ್) ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿದ್ದರು.

ಎ.ಪಿ ಸಮಸ್ತ ಅಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಅಖಿಲ ಭಾರತ ಸುನ್ನೀ ಜಂಈಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪ್ಮರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಮದ್ಹ್ ರಸೂಲ್ ಪ್ರಭಾಷಣ ಮಾಡಿದರು.

ವಿವಿಧ ರಾಷ್ರಗಳಲ್ಲಿ ನಡೆದ ಮೀಲಾದ ಆಚರಣೆಯ ಸಮಾರೋಪವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮ್ಮೇಳನದಲ್ಲಿ ಅಹ್ಮದ್ ಸಹ್‍ದ್ ಅಲ್ ಅಸ್ಹರಿ (ಇಂಗ್ಲಂಡ್) , ಔನ್ ಮುಈನ್ ಅಲ್ ಖದೂಮಿ(ಜೋರ್ದಾನ್) , ರಾಶಿದ್ ಉಸ್ಮಾನ್ ಅಲ್ ಸಕರಾನ್(ಸೌದಿ ಅರೇಬಿಯ್ಯಾ) , ಶೈಖ್ ಅಹ್ಮದ್ ಇಬ್ರಾಹಿಂ(ಸೋಮಾಲಿಯಾ) , ಜಮಾಲ್ ಕಲೂತಿ(ಅಮ್ಮಾನ್) , ಅಹ್ಮದ್ ಮುಹಮ್ಮದ್ ಹಸನ್ (ಯಮನ್) , ಖ್ವಾಜಾ ಶೌಖಾ(ತುರ್ಕಿ) , ಅತಿಥಿಗಳಾಗಿ ಭಾಗವಹಿಸಿದರು. ಮರ್ಕಝ್ ಅಧ್ಯಕ್ಷ ಸಯ್ಯಿದ್ ಅಲೀ ಬಾಫಕೀ ಪ್ರಾರ್ಥನೆಗೆ ನೇತೃತ್ವ ನೀಡಿದರು. ಚಿತ್ತಾರಿ ಕೆ.ಪಿ ಹಂಸ ಮುಸ್ಲಿಯಾರ್ , ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್ , ಸಿ.ಮುಹಮ್ಮದ್ ಫೈಝಿ , ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ , ಎನ್.ವಿ ಅಬುýರಝಾಕ್ ಸಖಾಫಿ ಮೊದಲಾದವರು ಭಾಷಣಗೈದರು.

ಸಮ್ಮೇಳದನ ಭಾಗವಾಗಿ ಕಾಲಿಕ್ಕಟ್ ಟವರ್ ಕನ್ವೆನ್ಶನ್ ಸಭಾಗಂಣದಲ್ಲಿ ವಿದ್ವಾಂಸರ ಸಮ್ಮೇಳನ ಹಾಗೂ ಸಂವಾದ ನಡೆಯಿತು.

Writer - ಆರಿಫ್ ಮಚ್ಚಂಪಾಡಿ

contributor

Editor - ಆರಿಫ್ ಮಚ್ಚಂಪಾಡಿ

contributor

Similar News