ಸುಳ್ಳು ಜಾಹೀರಾತು: ಸೌಂದರ್ಯವರ್ಧಕ ಕಂಪೆನಿ ಸುಸ್ತು

Update: 2016-01-15 18:35 GMT

 ಮೂರು ವಾರಗಳಲ್ಲಿ ಗೌರವವರ್ಣ. ನಿಖಿಲ್ ಜೈನ್ ಮೂರು ವರ್ಷ ಹಿಂದೆ ಟೆಲಿವಿಷನ್‌ನಲ್ಲಿ ಪುರಷರ ಫೇರ್‌ನೆಸ್ ಕ್ರೀಮ್‌ನ ಈ ಆಕರ್ಷಕ ಜಾಹೀರಾತಿಗೆ ಮಾರುಹೋಗಿ ಬಳಕೆಗೆ ಮುಂದಾದರು. ಜಾಹೀರಾತಿನಲ್ಲಿ ಹೇಳಿದಂತೆ ಮೂರು ವಾರ ಕ್ರೀಮ್ ಬಳಸಿದರೂ ಯಾವ ಬದಲಾವಣೆಯೂ ಆಗಲಿಲ್ಲ.

ಅಣ್ಣನ ನಿರಾಸೆ ಹಾಗೂ ಕಹಿ ಅನುಭವ ಕಂಡು 21 ವರ್ಷದ ತಮ್ಮ ಪಾರಸ್ ಜೈನ್, ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ 10 ಶತಕೋಟಿ ಮೌಲ್ಯದ ಇಮಾಮಿ ಉದ್ಯಮ ಸಮೂಹದ ವಿರುದ್ಧ, ತಪ್ಪು ದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ದಾವೆ ಹೂಡಿದರು. ಈ ಉತ್ಪನ್ನ ಕೇವಲ ಚರ್ಮದ ಆರೋಗ್ಯವನ್ನು ವರ್ಧಿಸುವುದಕ್ಕಾಗಿ ಎಂದು ಸಮರ್ಥಿಸಿಕೊಂಡಿತು. ಆದರೆ ನ್ಯಾಯಾಲಯಕ್ಕೆ ಇದು ಕಂಪೆನಿಯ ಬೂಟಾಟಿಕೆ ಎನ್ನುವುದು ಮನವರಿಕೆಯಾಯಿತು.
ಮೊದಲ ಜಾಹೀರಾತಿನಲ್ಲಿ ಅದು ಗೌರವವರ್ಣ ಎನ್ನುವ ಪದ ಬಳಸಿತ್ತು. ಎರಡನೆ ಜಾಹೀರಾತಿನಲ್ಲಿ ಈ ಉತ್ಪನ್ನವನ್ನು ನಾಲ್ಕು ವಾರ ಕಾಲ ಬಳಸಿದರೆ ಚರ್ಮ ಆಕರ್ಷಕವಾಗುತ್ತದೆ ಎಂದು ತಿಳಿಸಲಾಗಿತ್ತು. ಇದು ಕಂಪೆನಿಯ ಸಮರ್ಥನೆಗೆ ತದ್ವಿರುದ್ಧವಾದದ್ದು. ಕಂಪೆನಿ ತನ್ನ ಸಮರ್ಥನೆಯಲ್ಲಿ, ಈ ಉತ್ಪನ್ನವನ್ನು ಬಳಸುವುದರಿಂದ ಚರ್ಮದ ಆರೋಗ್ಯ ಹಾಗೂ ಗುಣಮಟ್ಟ ಹೆಚ್ಚುತ್ತದೆ. ಇದು ಮುಖ ಹಾಗೂ ಕೊರಳಿನ ಭಾಗದ ಚರ್ಮಕ್ಕೆ ಬಿಸಿಲು, ದೂಳು, ಗಾಳಿಯಿಂದ ಸುರಕ್ಷೆ ಮತ್ತು ಪೋಷಣೆ ನೀಡುತ್ತದೆ ಎಂದು ಪ್ರತಿಪಾದಿಸಿತ್ತು.
ಎರಡೂವರೆ ವರ್ಷಗಳ ವಿಚಾರಣೆ ನಡೆದ ಬಳಿಕ, ಕಂಪೆನಿ ದಂಡಶುಲ್ಕವಾಗಿ 15 ಲಕ್ಷ ರೂಪಾಯಿ ಸಲ್ಲಿಸುವಂತೆ ಆದೇಶ ನೀಡಿತು ಹಾಗೂ ತಪ್ಪುದಾರಿಗೆ ಎಳೆಯುವ ಎಲ್ಲ ಜಾಹೀರಾತುಗಳನ್ನು ಹಿಂಪಡೆಯುವಂತೆ ಆದೇಶಿಸಿತು. ಜೊತೆಗೆ ಜೈನ್ ಸಹೋದರರಿಗೆ 10 ಸಾವಿರ ರೂಪಾಯಿ ದಾವೆ ವೆಚ್ಚ ಭರಿಸುವಂತೆ ಸೂಚಿಸಿತು. ಅವರು ಯಾವುದೇ ಪರಿಹಾರ ಕೇಳಿರಲಿಲ್ಲ.
ಪ್ರಕರಣ ಇಷ್ಟಕ್ಕೆ ಮುಗಿಯಲಿಲ್ಲ. ಕಂಪೆನಿ ತಪ್ಪುದಾರಿಗೆಳೆಯುವ ಈ ಜಾಹೀರಾತನ್ನು ಇನ್ನೂ ವಾಪಸು ಪಡೆದಿಲ್ಲ ಎಂದು ಈಗ ಕಾನೂನು ವಿದ್ಯಾರ್ಥಿಯಾಗಿರುವ ಪಾರಸ್ ಜೈನ್ ಪ್ರತಿಪಾದಿಸಿದ್ದಾರೆ. ಕಂಪೆನಿ ಇದೀಗ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಪ್ರಕರಣ ಮುಂದುವರಿಸಲು ದೇಶದ ದೊಡ್ಡ ಕಾನೂನು ಕಂಪೆನಿಯನ್ನು ನಿಯೋಜಿಸಿಕೊಂಡಿದ್ದು, ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರಲು ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳುತ್ತಾರೆ. ಆದರೆ ಅರ್ಜಿದಾರರ ಕಡೆಯಿಂದ ಅಟಾರ್ನಿ ನೆರವು ಪಡೆಯದೇ ಸಹೋದರ ನೇರವಾಗಿ ವಾದ ಮಂಡಿಸುತ್ತಿದ್ದಾರೆ. ಅವರು ಮಾಡುತ್ತಿರುವುದು ಹೀನ ಕಾರ್ಯ ಹಾಗೂ ಒಂದು ಬಗೆಯಲ್ಲಿ ಅಪರಾಧ ಎಂದು ಪ್ರಸಾದನ ಕಂಪನಿಗಳ ಉತ್ಪನ್ನಗಳ ಬಗ್ಗೆ ಕಿಡಿ ಕಾರುತ್ತಾರೆ. ಲಕ್ಷಾಂತರ ಮಂದಿಯನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಅವರಿಗಾಗಿ ಟಿವಿ, ಮುದ್ರಣ ಮಾಧ್ಯಮ, ವೆಬ್ ಮೂಲಕ ಸುಳ್ಳುಹೇಳಲು ಬಾಲಿವುಡ್ ತಾರೆಯರು ಕೂಡಾ ಸಾಲುಗಟ್ಟಿ ಬರುತ್ತಾರೆ
‘‘ಭಾರತೀಯರ ಗೌರವವರ್ಣದ ತ್ವಚೆಯ ಬಗೆಗಿನ ವ್ಯಾಮೋಹ, ಇಂಥ ಪ್ರಸಾದನ ಉತ್ಪನ್ನಗಳ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಇದರಿಂದಾಗಿ ಈ ಕ್ಷೇತ್ರ ಇಂದು 3000 ಕೋಟಿ ರೂಪಾಯಿ ವಹಿವಾಟಿನ ಉದ್ಯಮವಾಗಿ ಬೆಳೆದಿದೆ. ನನ್ನ ಸಹೋದರ ಚರ್ಮದ ಬಣ್ಣದ ಬಗ್ಗೆ ಅತೀವ ಎಚ್ಚರಿಕೆ ವಹಿಸುತ್ತಾರೆ. ಮೇಲ್ನೋಟಕ್ಕೆ ಮರುಳು ಮಾಡುವ ಅವರ ಜಾಹೀರಾತಿನಿಂದ ಪ್ರೇರಿತರಾಗಿ ಖರೀದಿಸಿದರು. ದೇಶಾದ್ಯಂತ ಇಂಥ ಹಲವು ಮಂದಿ ಇಂಥ ಉತ್ಪನ್ನಗಳಿಗೆ ಹಾತೊರೆಯುತ್ತಾರೆ. ಸಮಾಜದ ಒತ್ತಡ ಕೂಡಾ ಇದಕ್ಕೆ ಕಾರಣ’’ ಎಂದು ಉತ್ಸಾಹಿ ವಕೀಲ ಅಭಿಪ್ರಾಯಪಡುತ್ತಾರೆ.
ಕೆಲ ವರ್ಷಗಳ ಹಿಂದೆ ಕೆಲ ಕಂಪೆನಿಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸ್ತ್ರೀಯರ ಗುಪ್ತಾಂಗವನ್ನು ಆಕರ್ಷಕವಾಗಿಸುವ ಉತ್ಪನ್ನವನ್ನೂ ಬಿಡುಗಡೆ ಮಾಡಿತು. ಅಂಥ ಒಂದು ಕ್ರೀಮ್‌ನ ಜಾಹೀರಾತು, ಮಹಿಳೆಯೊಬ್ಬಳು ತನ್ನ ಪುರುಷನನ್ನು ಒಲಿಸಿಕೊಳ್ಳಲು ಈ ಉತ್ಪನ್ನವನ್ನು ಬಳಸುತ್ತಾಳೆ ಎಂದು ಬಿಂಬಿಸಿತ್ತು. ಇದರ ಉತ್ಪಾದಕರು ಇದೇ ವೇಳೆ ಈ ಉತ್ಪನ್ನವನ್ನು ಮಹಿಳೆಯರ ಸಬಲೀಕರಣದ ಮರುವ್ಯಾಖ್ಯಾನ ಎಂದು ಘೋಷಿಸಿದರು.
ಇತ್ತೀಚಿನ ವರ್ಷಗಳಲ್ಲಿ ಹಲವಾರು ವರದಿಗಳು, ಇಂಥ ಚರ್ಮದ ಬಣ್ಣವನ್ನು ತಿಳಿಗೊಳಿಸುವ ಸಮರ್ಥನೆಯನ್ನು ಅಲ್ಲಗಳೆದಿವೆ. ವೈದ್ಯರ ಪ್ರಕಾರ, ತ್ವಚೆಯ ಬಣ್ಣಕ್ಕೆ ‘ಮೆಲೆನೊಸೈಟಿಸ್’ ಎಂಬ ಚರ್ಮಕೋಶದ ಕಾರ್ಯನಿರ್ವಹಣೆ ಕಾರಣ ಹಾಗೂ ಇದನ್ನು ಯಾವುದೇ ಕ್ರೀಮ್ ಕೂಡಾ ಬದಲಾಯಿಸಲಾರದು.
2014ರಲ್ಲಿ ದಿಲ್ಲಿಯ ವಿಜ್ಞಾನ ಹಾಗೂ ಪರಿಸರ ಕೇಂದ್ರ ನಡೆಸಿದ ತಪಾಸಣೆಯಲ್ಲಿ, ಇಂಥ ಸೌಂದರ್ಯ ವರ್ಧಕಗಳಲ್ಲಿ ವಿಷಕಾರಿಯಾದ ಪಾದರಸ ಅಂಶಗಳು ಶೇಕಡ 44ರಷ್ಟು ಪ್ರಮಾಣದಲ್ಲಿವೆ ಎಂದು ಹೇಳಿತು. ಈ ವರದಿಯ ಪ್ರಕಾರ, ಜೈವಿಕವಲ್ಲದ ಪಾದರಸದಿಂದ ಕಿಡ್ನಿ ತೊಂದರೆ ಹಾಗೂ ಚರ್ಮರೋಗವೂ ಕಾಣಿಸಿಕೊಳ್ಳಬಹುದು. ಹಾಗೂ ಇದು ಚರ್ಮದ ಬಣ್ಣವನ್ನು ವಿರೂಪ ಗೊಳಿಸುವ ಸಾಧ್ಯತೆಯೂ ಇದೆ.
ಪಾರಸ್ ಜೈನ್ ಹೇಳುವಂತೆ ನಾನು ಕಂಡುಕೊಂಡಂತೆ ವಿಶ್ವದ ಹಲವಾರು ಮಂದಿ ಇಂಥ ಉತ್ಪನ್ನಗಳನ್ನು ಬಳಸಿ, ಅಡ್ಡಪರಿಣಾಮಗಳನ್ನು ಎದುರಿಸಿ ದ್ದಾರೆ. ಆದರೆ ಅವರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಇಲ್ಲ. ಆದ್ದರಿಂದ ಯಾವ ಪ್ರಯೋಜನವೂ ಇಲ್ಲ; ಆದರೆ ನ್ಯಾಯಾಂಗ ದಲ್ಲಿ ವ್ಯಾಜ್ಯ ಇತ್ಯರ್ಥ ವಾಗಲು ಸಮಯ ತೆಗೆದುಕೊಳ್ಳುತ್ತದೆ
‘‘ಮೂರು ವರ್ಷಗಳಿಂದ ನನ್ನ ಪ್ರಕರಣ ನಡೆಯುತ್ತಿದ್ದು, ಈಗಷ್ಟೇ ರಾಜ್ಯ ವ್ಯಾಜ್ಯ ಪರಿಹಾರ ವೇದಿಕೆ ತಲುಪಿದೆ. ಆದರೆ ಇದು ಎಷ್ಟು ಸಮಯ ತೆಗೆದುಕೊಳ್ಳಬಹುದು ಎನ್ನುವುದು ಗೊತ್ತಿಲ್ಲ. ಆದರೆ ನಾನು ಹೋರಾಟ ಮುಂದುವರಿಸುತ್ತೇನೆ. ಸಾಮಾನ್ಯವಾಗಿ ಕಂಪೆನಿಗಳು ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಕ್ಕೆ ಮುಂದಾಗುತ್ತವೆ. ಏಕೆಂದರೆ ಪತ್ರಿಕೆಗಳಲ್ಲಿ ಕಂಪೆನಿಯ ಘನತೆಗೆ ಚ್ಯುತಿ ತರುವ ರೀತಿಯ ಪ್ರಕರಣಗಳು ಬರುತ್ತವೆ ಎಂಬ ಕಾರಣಕ್ಕೆ. ಆದರೆ ಬಹುಸಂಖ್ಯೆಯ ಮಂದಿಗೆ ಗ್ರಾಹಕ ನ್ಯಾಯಾಲಯಗಳ ಅಸ್ತಿತ್ವದ ಬಗ್ಗೆ ಹಾಗೂ ಇಲ್ಲಿ ಪ್ರಕರಣ ದಾಖಲಿಸುವುದು ಎಷ್ಟು ಅಗ್ಗ ಎಂಬ ಬಗ್ಗೆ ತಿಳುವಳಿಕೆ ಇಲ್ಲದೇ ಮೋಸ ಹೋಗುತ್ತಲೇ ಇರುತ್ತಾರೆ.’’
ಈ ತಿಂಗಳ ಕೊನೆಯಲ್ಲಿ ಇರುವ ಮುಂದಿನ ವಿಚಾರಣೆಗೆ ಪಾರಸ್ ಜೈನ್ ತಯಾರಾಗುತ್ತಿದ್ದು, ಇತರರೂ ಇಂಥ ಸೌಂದರ್ಯ ವರ್ಧಕಗಳ ವಿರುದ್ಧ ಸಮರ ಸಾರುತ್ತಿದ್ದಾರೆ. ಅಂಥವರಲ್ಲಿ ವಿಲ್ಬರ್ ಸರ್ಗುಣರಾಜ್ ಒಬ್ಬರು. ಭಾರತೀಯ ಹಾಸ್ಯನಟ ಇಂಥ ಸೌಂದರ್ಯ ವರ್ಧಕಗಳ ಪರವಾದ ಪಕ್ಷಪಾತದ ವಿರುದ್ಧ, ಡಾರ್ಕ್ ಈಸ್ ಬ್ಯೂಟಿಫುಲ್ ಎಂಬ ಒಂದು ವೀಡಿಯೊ ಸಿದ್ಧಪಡಿಸಿದ್ದಾರೆ.
‘‘ಎಲ್ಲಿಯವರೆಗೆ ತಂದೆ ತಾಯಿ ಗೌರವವರ್ಣದ ಮಗು ವಿಗೆ ಆಸೆಪಡುತ್ತಾರೋ, ಎಲ್ಲಿಯವರೆಗೆ ವರ್ಗೀಕೃತ ಜಾಹೀರಾತುಗಳು ಆಕರ್ಷಕ ಮದುವೆ ಪಾಲುದಾರ ರನ್ನು ಪ್ರವರ್ತಿಸುತ್ತಾರೋ, ಎಲ್ಲಿಯವರೆಗೆ ಮನೋರಂಜನಾ, ಮಾಧ್ಯಮ ಹಾಗೂ ಚಿತ್ರರಂಗ, ಆಕರ್ಷಕ ಬಣ್ಣಕ್ಕೆ ನಿಮ್ಮ ನೈಜ ಸೌಂದರ್ಯಕ್ಕಿಂತಲೂ ಹೆಚ್ಚು ಆದ್ಯತೆ ಇದೆ ಎಂಬ ಸುಳ್ಳನ್ನು ಮಾರಾಟ ಮಾಡುತ್ತವೆಯೋ ಅಲ್ಲಿಯವರೆಗೆ ಈ ವೀಡಿಯೊ ಪ್ರಸ್ತುತ’’ ಎಂದು ಸರ್ಗುಣರಾಜ್ ಹೇಳುತ್ತಾರೆ.
‘‘ಡಾರ್ಕ್ ಈಸ್ ಬ್ಯೂಟಿಫುಲ್ ಎಂಬ ಟ್ಯಾಗ್‌ಲೈನ್ ಹಾಕಲು ಕಾರಣವೇ, ನಮಗೆ ಇದುವರೆಗೂ ಕಪ್ಪುಎಂದರೆ ಕೀಳು, ಬಡತನ, ವಿದ್ಯಾಹೀನ ಹಾಗೂ ರೋಚಕವಲ್ಲದ ಕೆಲಸ ಕ್ಷೇತ್ರ ಎಂದೇ ನಮಗೆ ಇದುವರೆಗೂ ತಿಳಿಹೇಳಲಾಗುತ್ತಿದೆ. ನಮ್ಮದು ಆಧುನಿಕ ದೇಶ ಎಂದು ನಾವು ಅಂದುಕೊಂಡರೂ, ನಮ್ಮ ಮನೋಭಾವ ಹಾಗೂ ಮೌಲ್ಯದಲ್ಲಿ ನಾವು ಪ್ರಗತಿ ಸಾಧಿಸಿಲ್ಲ.’’

Writer - ಮಾಯಾಂಕ್ ಜೈನ್

contributor

Editor - ಮಾಯಾಂಕ್ ಜೈನ್

contributor

Similar News