ಪದ್ಮ ಪ್ರಶಸ್ತಿಯಲ್ಲಿ ರಕ್ತದ ವಾಸನೆ
ಜನವರಿ 25ರ ರಾತ್ರಿ 10:30ರ ಸಮಯ, ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ನಿವಾಸಿ ಮತ್ತು ಸಮುದಾಯ ಕೆಲಸಗಾರ ನಸೀರ್ ಪತಿಗರು ತಮ್ಮ ಫೇಸ್ಬುಕ್‌ನ ಸ್ಟೇಟಸ್ ಅನ್ನು ಅಪ್ ಡೇಟ್ ಮಾಡುತ್ತಾರೆ. ದುರಹಂಕಾರ ವಿನಾಶಕ್ಕೆ ಹೇತುವಾಗುತ್ತದೆ. ನಮ್ಮನ್ನು ಹತ್ಯೆ ಮಾಡಿದವರಿಗೆ ಉಡುಗೊರೆ ನೀಡುವ ಮೂಲಕ ನೀವು ಜೋರಾಗಿ ನಕ್ಕಿರಬಹುದು, ಆದರೆ ಇದು ಕೊನೆಯ ನಗುವಾಗಿರುವುದಿಲ್ಲ. ದಬ್ಬಾಳಿಕೆ ನಡೆಸುವವರು ನಾಶವಾಗಲೇಬೇಕು ಎಂದವರು ಬರೆಯುತ್ತಾ, ‘‘ಜಗ್ಮೋಹನ್ ದ ಮರ್ಡರರ್’’ ಎಂಬ ಹ್ಯಾಶ್ ಟ್ಯಾಗ್ ಜೊತೆ ಕೊನೆಗೊಳಿಸುತ್ತಾರೆ. ಇಂಥದ್ದೇ ಆಕ್ರೋಶಭರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲಾರಂಭಿಸುತ್ತದೆ. ಎಲ್ಲವೂ ಜಗ್ಮೋಹನ್‌ಗೆ ಭಾರತದ ಅತಿದೊಡ್ಡ ನಾಗರಿಕ ಸನ್ಮಾನ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸುವಂಥವುಗಳೇ. ನಂತರ ಪತಿಗರು ತಮ್ಮ ಸಹಪಾಠಿಗಳು ಹೇಗೆ ಜಗ್ಮೋಹನ್ ರನ್ನು ಕಾಶ್ಮೀರಿ ಭಾಷೆಯಲ್ಲಿ ಜಗ್ಮೋಹನ್ ವಾತುಲ್ ಅಥವಾ ಲಾಶ್ ವಾತುಲ್ ಅಂದರೆ ಮೃತದೇಹಗಳ ರಾಶಿಯನ್ನೇ ಹಾಕುವಂಥವ ಎಂದು ವರ್ಣಿಸುತ್ತಿದ್ದರು ಎಂಬುದನ್ನು ನೆನಪಿಸುತ್ತಾರೆ. ಮಾಜಿ ನಾಗರಿಕ ಸೇವಕರಾಗಿದ್ದ ಜಗ್ಮೋಹನ್, ದಿಲ್ಲಿ ಮತ್ತು ಗೋವಾದ ಲೆಫ್ಟಿನೆಂಟ್ ಗವರ್ನರ್ ಸ್ಥಾನವೂ ಸೇರಿದಂತೆ ತಮ್ಮ ವೃತ್ತಿ ಜೀವನದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದವರು. ಆದರೆ ಅವರ ಅತ್ಯಂತ ವಿವಾದಾಸ್ಪದ ಅವಧಿಯು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಮಯದ್ದಾಗಿತ್ತು. ಜಗ್ಮೋಹನ್ ಕಾಶ್ಮೀರದಲ್ಲಿ ಎರಡು ಅವಧಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು- 1984ರಿಂದ 89 ಮತ್ತು 1990 ಜನವರಿಯಿಂದ ಮೇವರೆಗೆ. ಅವರ ಮೊದಲ ಅವಧಿಯು ಬಹುತೇಕ ಶಾಂತಿಯುತವಾಗಿತ್ತು, ಹಲವು ವಿಷಯಗಳಲ್ಲಿ ಅವರು ಜನಪ್ರಿಯರೂ ಆಗಿದ್ದರು. ಹೆಸರು ಹೇಳಲು ಬಯಸದ ಕಣಿವೆಯ ಪ್ರಮುಖ ಪತ್ರಿಕೆಯೊಂದರ ಹಿರಿಯ ಸಂಪಾದಕರು ಹೇಳುವಂತೆ, ಓರ್ವ ಸಮರ್ಥ ಆಡಳಿತಗಾರನಾಗಿ ಜಗ್ಮೋಹನ್ ಅವರನ್ನು ಕಣಿವೆಯ ಜನರು ಉತ್ತಮವಾಗಿ ಸ್ವೀಕರಿಸಿದ್ದರು.
ದಿಲ್ಲಿಯಲ್ಲಿ ಅವರು ಲೆಫ್ಟಿನೆಂಟ್ ಗವರ್ನರ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ ಹಾಗಾಗಿ ಅವರು ನಾಗರಿಕ ಮಟ್ಟದಲ್ಲಿ ಉತ್ತಮವಾಗಿದ್ದಾರೆ ಎಂದು ನಂಬಿದ್ದರು ಎಂದು ಹಿರಿಯ ಸಂಪಾದಕರು ತಿಳಿಸಿದ್ದರು. ಅವರು ರಸ್ತೆಗಳ ನವೀಕರಣಕ್ಕೆ ಕಾಶ್ಮೀರದಲ್ಲಿ ಮೊದಲ ಬಾರಿಗೆ ಯಂತ್ರಗಳ ಉಪಯೋಗವನ್ನು ಪರಿಚಯಿಸಿದರು. ಹಾಗಾಗಿ, ಈ ಎಲ್ಲಾ ವಿಷಯಗಳಿಂದ ಜನರು ಖುಷಿಯಾಗಿದ್ದರು.
ಗ್ರೇಟರ್ ಕಾಶ್ಮೀರ್ ನ ಮಾಜಿ ಸಂಪಾದಕ ದಿವಂಗತ ರಶೀದ್ ಶಹೀದ್ ಒಂದೊಮ್ಮೆ ಈ ವರದಿಗಾರನಿಗೆ ತಿಳಿಸಿದ್ದರು, ಜಗ್ಮೋಹನ್ ಅವರ ಮೊದಲ ಅವಧಿಯಲ್ಲಿ ಅವರು ಬಹಿರಂಗ ದರ್ಬಾರ್ ನಡೆಸುತ್ತಿದ್ದರು, ಇದರಲ್ಲಿ ಕಾಶ್ಮೀರದ ಅತ್ಯಂತ ಬಡಜನರು ಕೂಡಾ ತಮ್ಮ ಸಮಸ್ಯೆಗಳನ್ನು ಹೇಳಬಹುದಿತ್ತು.
ಆದರೆ ಎರಡನೆ ಅವಧಿಯು ಕಾಶ್ಮೀರದ ಜನತೆಯಲ್ಲಿ ಎಂದೂ ವಾಸಿಯಾಗದ ಗಾಯವನ್ನು ಮಾಡಿತು.
‘ಕೆಟ್ಟ, ಅತಿಕೆಟ್ಟ ಸುದ್ದಿ’
ಆ ಸಮಯದಲ್ಲಿ ವಿಪಿ ಸಿಂಗ್ ಪ್ರಧಾನಿಯಾಗಿದ್ದರು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವು ನಿಧಾನವಾಗಿ ಭುಗಿಲೇಳುತ್ತಿತ್ತು. 1989ರ ಡಿಸೆಂಬರ್ ನಲ್ಲಿ ಗೃಹ ಸಚಿವ ಮುಫ್ತಿ ಮುಹಮ್ಮದ್ ಸಯೀದ್ ಅವರ ಮಗಳನ್ನು ಅಪಹರಿಸಲಾಯಿತು ಮತ್ತು ಕಣಿವೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಕೇಂದ್ರ ನಿರ್ಧರಿಸಿತು. ರಾಜ್ಯ ಸರಕಾರದ ವಿರೋಧದ ಮಧ್ಯೆಯೂ ಜಗ್ಮೋಹನ್ ಅವರನ್ನು ದಿಲ್ಲಿಯ ಸರಕಾರ ರಾಜ್ಯಪಾಲರನ್ನಾಗಿ ನೇಮಿಸಿತು ಮತ್ತು ಪ್ರತಿಭಟನೆ ರೂಪದಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ರಾಜ್ಯ ಸರಕಾರ ರಾಜೀನಾಮೆ ನೀಡಿತು. ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. 1990ರ ಜನವರಿ 19ರ ರಾತ್ರಿ-ಜಗ್ಮೋಹನ್ ಅವರನ್ನು ರಾಜ್ಯಪಾಲರಾಗಿ ನೇಮಿಸಿದ ದಿನ-ಕಾಶ್ಮೀರಿ ಪಂಡಿತರು ಬೃಹತ್ ಸಂಖ್ಯೆಯಲ್ಲಿ ಕಣಿವೆಯನ್ನು ಬಿಟ್ಟು ಜಮ್ಮು ಮತ್ತು ಭಾರತದ ಇತರ ಪ್ರದೇಶಗಳಿಗೆ ತೆರಳಿದರು. ಒಳಗಿನವರು ಈ ವಲಸೆಯನ್ನು ಜಗ್ಮೋಹನ್ ಸುಲಭಗೊಳಿಸಿದ್ದರು ಎಂದು ನಂಬಿದ್ದರು ಎಂದು 80ರ ಹರೆಯದ ರಾಜಕೀಯ ವಿವರಣೆಗಾರ ಮುಹಮ್ಮದ್ ಯೂಸುಪ್ ತ್ಯಾಂಗ್ ಹೇಳುತ್ತಾರೆ. ಜನವರಿ 19ರ ರಾತ್ರಿ ಭದ್ರತಾ ಸಿಬ್ಬಂದಿ ಶ್ರೀನಗರದಲ್ಲಿ ಶಸ್ತ್ರಾಸ್ತ್ರ ಮತ್ತು ಉಗ್ರರ ಹುಡುಕಾಟದಲ್ಲಿ ಮನೆ-ಮನೆ ಶೋಧಕಾರ್ಯಾಚರಣೆಯನ್ನು ನಡೆಸಿದರು. ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಯಿತು. ಮರುದಿನ ಪ್ರತಿಭಟನಾಕಾರರು ಶ್ರೀನಗರದ ಗಾಂವ್ಕಡಾಲ್ ಸೇತುವೆಯಲ್ಲಿ ಸೇರಿದಾಗ, ಅರೆಸೇನಾಪಡೆಯು ಅವರ ಮೇಲೆ ಗುಂಡಿನ ದಾಳಿ ನಡೆಸಿತು. ಗಾಂವ್ಕಡಾಲ್ ಹತ್ಯಾಕಾಂಡ ಎಂದು ಕರೆಯಲ್ಪಡುವ ಈ ಘಟನೆಯಲ್ಲಿ ಕನಿಷ್ಠ 50 ಮಂದಿ ಪ್ರಾಣ ಕಳೆದುಕೊಂಡರು.
ರಾಜ್ಯಪಾಲರು ಕಾಶ್ಮೀರದ ವಿಷಯದಲ್ಲಿ ಭಾರತಕ್ಕೆ ಘಾಸಿ ಮಾಡಿದರು ಎಂದು ತ್ಯಾಂಗ್ ಹೇಳುತ್ತಾರೆ. ಜಗ್ಮೋಹನ್‌ಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ನಿರ್ಧಾರವು ಅವರ ಪಾಲಿಗೆ ಸ್ಪಷ್ಟವಾಗಿ ಕೆಟ್ಟ...ಅತೀಕೆಟ್ಟ ಸುದ್ದಿ. ಅದು ಕಾಶ್ಮೀರಿಗಳಲ್ಲಿ ಹರಡಿರುವ ಅಸಮಾಧಾನದ ಪ್ರತಿಧ್ವನಿಯಾಗಿತ್ತು. ಅಂಕಣಕಾರ ಜಾವಿದ್ ಇಕ್ಬಾಲ್ ಅವರ ಪ್ರಕಾರ, 1984 ಮತ್ತು 1990ರಲ್ಲಿ ಜಗ್ಮೋಹನ್ ಅವರನ್ನು ರಾಜ್ಯಪಾಲರಾಗಿ ನೇಮಿಸುವ ಹಿಂದೆ ಜನಮತದಿಂದ ಆಯ್ಕೆಯಾದ ಸರಕಾರವನ್ನು ಬದಲಾಯಿಸುವ ಉದ್ದೇಶವಿತ್ತು. ಈ ನಡೆಯಿಂದ ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕಲಾಯಿತು ಎಂದವರು ಹೇಳುತ್ತಾರೆ. ಇದನ್ನು ಹೊಸದಿಲ್ಲಿಯ ಆಟ ಎಂದು ನೋಡಲಾಗಿತ್ತು ಮತ್ತು ಜಗ್ಮೋಹನ್ ಎಂದಿಗೂ ಮುಖ್ಯವಾಗಿ 1990ರಲ್ಲಿ ದಿಲ್ಲಿಯ ಸ್ಪಿನ್ ವೈದ್ಯರಾಗಿದ್ದರು.
ಪ್ರಶ್ನಾರ್ಹ ಪಾತ್ರ
ಇಕ್ಬಾಲ್ ಅವರ ಸಂಸ್ಥೆ, ಕಾಶ್ಮೀರ್ ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್, ಅವರ ಪ್ರಕಾರ ಕಾಶ್ಮೀರಿ ಪಂಡಿತರು ರೂಪಿಸಲ್ಪಟ್ಟ ತೆರವು ಕಾರ್ಯಾಚರಣೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಲೇ ಇದೆ. ಕಾಶ್ಮೀರಿ ಇತಿಹಾಸದ ಈ ಸೂಕ್ಷ್ಮ ಹಂತದಲ್ಲಿರುವ ಮಂಕನ್ನು ಒಂದೇ ಹಂತದಲ್ಲಿ ಹೋಗಲಾಡಿಸುವ ಅಗತ್ಯವಿದೆ ಎಂದವರು ಹೇಳುತ್ತಾರೆ. ಪ್ರಶಸ್ತಿ ನೀಡಿದ ಹೊರತಾಗಿಯೂ ಜಗ್ಮೋಹನ್ ಅವರ ಜಮ್ಮು ಮತ್ತು ಕಾಶ್ಮೀರದಲ್ಲಿನ ಪಾತ್ರ ಮಾತ್ರ ಪ್ರಶ್ನಾರ್ಹವಾಗಿಯೇ ಮುಂದುವರಿಯುತ್ತದೆ. ಜಮ್ಮು ಮತ್ತು ಕಾಶ್ಮೀರ ನಾಗರಿಕ ಸಮಾಜ ಕೇಂದ್ರ ಇತ್ತೀಚೆಗೆ ನೀಡಿದ ಹೇಳಿಕೆಯೊಂದರಲ್ಲಿ ಜಗ್ಮೋಹನ್ ಕಣಿವೆಯಲ್ಲಿ ಹತ್ಯಾಕಾಂಡ, ಚಿತ್ರಹಿಂಸೆ, ಕರ್ಫ್ಯೂ ಮತ್ತು ಶಿಸ್ತುಕ್ರಮದ ಕಾರ್ಯಾಚರಣೆಗಳಿಂದ ನೆನಪಿಸಲ್ಪಡುವರು ಎಂದು ಹೇಳಿತ್ತು. ಅವರ ಅಧಿಕಾರದ ಎರಡನೆ ದಿನ ದೂರದರ್ಶನದಲ್ಲಿ ನೀಡಿದ ಹೇಳಿಕೆಯಲ್ಲಿ, ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯು ಸಮಸ್ಯೆಯ ವಿರುದ್ಧ ಹಿಂಸಾತ್ಮಕ ಪ್ರತಿಕಾರ ನೀಡಲಾಗುವುದು ಎಂದು ಬೆದರಿಕೆ ಹಾಕಿದ್ದರು. ಗಾಂವ್ಕಡಲ್ ನ ಹೊರತಾಗಿ, ಜಗ್ಮೋಹನ್ ಅವರ ಎರಡನೆ ಹಂತದ ಐದು ತಿಂಗಳ ಅವಧಿಯು ಹಂಡ್ವಾರ, ಝಕುರಾ, ಬೈಪಾಸ್, ಹವಾಲಾ ಮತ್ತು ಮಶಾಲಿ ಮೊಹಲ್ಲಾಗಳಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗಳನ್ನು ಕಂಡಿತು. ಬಿಕೆ ನೆಹರೂ ರವರ ಆತ್ಮಕಥನ ನೈಸ್ ಗಯ್ಸೆ ಫಿನಿಶ್ ಸೆಕೆಂಡ್ ನಲ್ಲಿ ಉಲ್ಲೇಖಿಸಿರುವಂತೆ, ಜಗ್ಮೋಹನ್ ಗಿಂತ ಹಿಂದಿನ ರಾಜ್ಯಪಾಲ ಬಿಕೆ ನೆಹರೂ ಮತ್ತು ಪಾರೂಕ್ ಅಬ್ದುಲ್ಲಾ ಸರಕಾರವನ್ನು ಬೀಳಿಸಲು ನಿರಾಕರಿಸಿದ್ದ ಕಾರಣ ಜಗ್ಮೋಹನ್ ಅವರನ್ನು ಆ ಸ್ಥಾನಕ್ಕೆ ತರಲಾಯಿತು ಎಂದು ಪ್ರಖ್ಯಾತ ಪತ್ರಕರ್ತ ನಾಸಿರ್ ಗನೈ ಹೇಳುತ್ತಾರೆ.
ಫಾರೂಕ್ ಅಬ್ದುಲ್ಲಾ ಅವರನ್ನು ಸಂಪರ್ಕಿಸಿದಾಗ, ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಯಾವ ಸಾಧನೆಗೆ ನೀಡಲಾಯಿತೋ ತಿಳಿಯದು. ಸಮಿತಿಯು ಜನರನ್ನು ಆರಿಸುತ್ತದೆ. ಜಗ್ಮೋಹನ್ ಅವರ ಅಧಿಕಾರದ ಬಗ್ಗೆ ಅವರು ಹೇಳುತ್ತಾರೆ,ಪಂಡಿತರ ವಲಸೆಯ ಕುರಿತು ಏನು? ಹಿಂಸಾಚಾರದ ಬಗ್ಗೆ ಏನು? ನನ್ನನ್ನು ವಜಾ ಮಾಡಿದವರು ಅವರು. ಮತ್ತು 1990ರಲ್ಲಿ ನನ್ನ ಎಲ್ಲಾ ಸಲಹೆಗಳಿಗೆ ವಿರುದ್ಧವಾಗಿ ಅವರನ್ನು ರಾಜ್ಯಪಾಲರನ್ನಾಗಿ ಮಾಡಲಾಯಿತು. ನಾನು ನೇರವಾಗಿ ಕೇಂದ್ರದ ವಿರುದ್ಧ ತಿರುಗಿಬಿದ್ದೆ. ಉಗ್ರರು ಮತ್ತು ಕೇಂದ್ರದ ನಡುವೆ ನೇರ ಜಗಳ ನಡೆಯುತ್ತಿದ್ದಾಗ ನಾವು ಇದರ ಮಧ್ಯದಲ್ಲಿದ್ದೆವು. ಮಿರ್ವೈಝ್ ವೌಲ್ವಿ ಮುಹಮ್ಮದ್ ಫಾರೂಕ್ ಅವರ ಹತ್ಯೆ ಮತ್ತು ಭದ್ರತಾ ಸಿಬ್ಬಂದಿಯಿಂದ ಅವರ ಶವಯಾತ್ರೆಯ ಸಮಯದಲ್ಲಿ ನಡೆದ 60ಕ್ಕೂ ಅಧಿಕ ಜನರನ್ನು ಬಲಿಪಡೆದುಕೊಂಡ ಗುಂಡಿನದಾಳಿಯ ನಂತರ 1990ರ ಮೇನಲ್ಲಿ ಜಗ್ಮೋಹನ್ ಅವರನ್ನು ಕೊನೆಗೂ ತೆಗೆದು ಹಾಕಲಾಯಿತು. ಉನ್ಕೆ ಮುರ್ದಾ ಜಿಸ್ಮ್ ಪರ್ ಭೀ ಗೋಲಿಯಾ ಚಲಾಯಿ ಗಯೀ (ಅವರ ಮೃತದೇಹಗಳ ಮೇಲೂ ಗುಂಡು ಹಾರಿಸಲಾಯಿತು) ಎಂದು ತ್ಯಾಂಗ್ ಹೇಳುತ್ತಾರೆ. ಅವರನ್ನು ಕೇವಲ ಐದು ತಿಂಗಳಲ್ಲಿ ವಾಪಸ್ ಕರೆಯಲಾಗಿತ್ತು ಯಾಕೆಂದರೆ ಅವರು ಎಲ್ಲವನ್ನೂ ಹಾಳುಗೆಡವಿದ್ದರು. ಆನಂತರ ಅವರೆಂದೂ ಕಾಶ್ಮೀರಕ್ಕೆ ಬರಲಿಲ್ಲ.
ಸತ್ಯವನ್ನು ವಿಕೃತಗೊಳಿಸಲಾಯಿತೇ?
ಲೇಖಕ ಸಿದ್ಧಾರ್ಥ ಗಿಗೂ, ಇವರ ‘ಎ ಲಾಂಗ್ ಡ್ರೀಮ್ ಆಪ್ ಹೋಮ್’ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಜಗ್ಮೋಹನ್, ಪಂಡಿತರ ಸಾಮೂಹಿಕ ವಲಸೆಯನ್ನು ರೂಪಿಸಿದ್ದರು ಎಂಬುದನ್ನು ತಳ್ಳಿಹಾಕುತ್ತಾರೆ. ಜಗ್ಮೋಹನ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದಾಗ ತನಗೆ 15 ವರ್ಷವಾಗಿದ್ದು ಶ್ರೀನಗರದಲ್ಲಿ ಕುಟುಂಬದ ಜೊತೆ ವಾಸವಾಗಿದ್ದೆ ಎಂದು ತಿಳಿಸುತ್ತಾರೆ. ನಾನು ಅಲ್ಲಿದ್ದೆ ಮತ್ತು ಎಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ- ಗಾಂವ್ಕಡಲ್, ವೌಲ್ವಿ ಫಾರೂಕ್ ಅವರ ಹತ್ಯೆ, ಅರ್ಶಪಕ್ ಮಜೀದ್ ವಾನಿ ಎಂದು ಗಿಗೂ ಹೇಳುತ್ತಾರೆ. ಜನವರಿ 19ರ ಆ ರಾತ್ರಿ ಕಣಿವೆಯ ಎಲ್ಲಾ ಮಸೀದಿಗಳ ಧ್ವನಿವರ್ಧಕಗಳಿಂದ ಘೋಷಣೆಗಳು ಮೊಳಗಲು ಆರಂಭಿಸಿದವು. ಪಂಡಿತರ ಹತ್ಯೆ ಮತ್ತು ಅಪಹರಣಗಳು ಆಗಾಗಲೇ 1989ರಲ್ಲೇ ಆರಂಭವಾಗಿತ್ತು. ಅಕ್ಟೋಬರ್-ನವಂಬರ್ ಸಮಯ ದಲ್ಲಿ ಹಿಟ್ ಲಿಸ್ಟ್ ಸಿದ್ಧಪಡಿಸಲಾಗಿತ್ತು ಮತ್ತು ವೈದ್ಯರಾಗಿದ್ದ ನನ್ನ ಅಂಕಲ್ ಒಬ್ಬರು ಅದರಲ್ಲಿದ್ದರು. ಜಗ್ಮೋಹನ್ ಅಲ್ಲಿ ಇಲ್ಲದೆ ಇರುವಾಗ ಇದೆಲ್ಲವನ್ನೂ ಅವರೇ ಮಾಡಲು ಹೇಗೆ ಸಾಧ್ಯ?
ಗಿಗೂ ಪ್ರಕಾರ, ಅವರು ಹಲವು ವರ್ಷಗಳಿಂದ ಜಗ್ಮೋಹನ್ ಅವರೊಂದಿಗೆ ನಡೆಸಿದ ಸಂಭಾಷಣೆಗಳ ಮೂಲಕ ಕಂಡುಕೊಂಡಿದ್ದೇನೆಂದರೆ ಅವರನ್ನು ಈ ಪಾತ್ರಕ್ಕೆ ತುರುಕಿಸಲಾಗಿತ್ತು. ನ್ಯಾಶನಲ್ ಕಾನ್ಫರೆನ್ಸ್ ಸರಕಾರವು ಅದಾಗಲೇ ಕೇಂದ್ರದಿಂದ ವಜಾಗೊಳಿಸಲ್ಪಟ್ಟಿತ್ತು. ಅದರ ಹಿಂದಿನ ವರ್ಷ ಸಾಕಷ್ಟು ಕಾಶ್ಮೀರಿಗಳು ಸಶಸ್ತ್ರ ತರಬೇತಿ ಪಡೆಯಲು ಗಡಿಯನ್ನು ದಾಟಿದ್ದರು. ಜಗ್ಮೋಹನ್ ಅವರನ್ನು ಹಿಂಸಾಚಾರವನ್ನು ಹತ್ತಿಕ್ಕಲು ಕಳುಹಿಸಲಾಯಿತು ಮತ್ತು ಕರ್ಫ್ಯೂ ಅದಕ್ಕೆ ಸೂಕ್ತ ಪ್ರತಿಕ್ರಿಯೆಯಾಗಿತ್ತು.
ಘೋಷಣೆಗಳ ನಂತರ ಪಂಡಿತರು ಬೆಳಗ್ಗಿನ ಸಮಯ ವಲಸೆ ಹೋಗಲು ಆರಂಭಿಸಿದರು ಮತ್ತು ಮಾರ್ಚ್-ಎಪ್ರಿಲ್ 1990ರ ಹೊತ್ತಿಗೆ ನವಕಡಲ್ ಮತ್ತು ಸಪಕಡಲ್‌ನ ಸುತ್ತಮುತ್ತ ಅವರ ದ್ದೊಂದೇ ಪಂಡಿತರ ಮನೆಯಾಗಿತ್ತು ಎಂದು ಗಿಗೂ ಹೇಳುತ್ತಾರೆ. ಉರ್ದು ದೈನಿಕ ಆಫಾಬ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನೀಡಿದ ಹೇಳಿಕೆಯೊಂದರಲ್ಲಿ ಕಾಶ್ಮೀರಿ ಪಂಡಿತರು 36 ಗಂಟೆಗಳ ಒಳಗೆ ಕಣಿವೆ ಬಿಟ್ಟು ತೆರಳಿ ಅಥವಾ ಪರಿಣಾಮವನ್ನು ಎದುರಿಸಿ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಅಲ್ಲಿ ಭದ್ರತೆ ಎಂಬುದು ಶೂನ್ಯವಾಗಿತ್ತು ಮತ್ತು ಅದಕ್ಕಾಗಿ ಪಂಡಿತರು ಕಣಿವೆಯನ್ನು ತ್ಯಜಿಸಿದರು. ಆದರೂ ಬಹುತೇಕ ಕಾಶ್ಮೀರಿಗಳು ಜಗ್ಮೋಹನ್ ಅವರನ್ನು ಖಳನಾಯಕನ ದೃಷ್ಟಿಯಿಂದಲೇ ನೋಡುತ್ತಾರೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪಿಎಚ್ ಡಿ ವಿದ್ಯಾರ್ಥಿಯಾಗಿರುವ 27ರ ಹರೆಯದ ಉಮರ್ ಗುಲ್, ತಾನು ಬೆಳೆಯುತ್ತಿದ್ದಂತೆ ಜಗ್ಮೋಹನ್ ಅವರನ್ನು ಹೇಗೆ ಒಂದು ದೆವ್ವದಂತೆ ನೋಡಲಾಗುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಜಗ್ಮೋಹನ್ ಕೆಟ್ಟದನ್ನು, ಶಕ್ತಿಶಾಲಿಯನ್ನು ಪ್ರತಿನಿಧಿಸುತ್ತಿದ್ದರು, ಎಲ್ಲಾ ಹತ್ಯೆಗಳಿಗೆ ಕಾರಣಕರ್ತ ಮತ್ತು ಕಾಶ್ಮೀರದಲ್ಲಿ ನಡೆಯುವ ಎಲ್ಲಾ ಹಿಂಸಾಚಾರಗಳಿಗೆ ಅವರು ಪರ್ಯಾಯವಾಗಿದ್ದರು. ನಾವು ಮತಾಂಧತೆಗೆ ಮೂರ್ತ ರೂಪ ನೀಡಬೇಕೆಂದರೆ ನಮ್ಮ ತಲೆಗೆ ಮೊದಲು ಬರುವ ಚಿತ್ರಣ ಜಗ್ಮೋಹನ್ ಅವರದ್ದು.