ಇಟಲಿಯ ಪಟ್ಟಣದಲ್ಲಿ 28 ವರ್ಷಗಳ ಬಳಿಕ ಮೊದಲ ಮಗು ಜನನ!

Update: 2016-02-02 04:13 GMT

ರೋಮ್, ಫೆ. 1: 1980ರ ದಶಕದ ಬಳಿಕ ಇಟಲಿಯ ಒಸ್ಟಾನ ಎಂಬ ಪಟ್ಟಣದಲ್ಲಿ ಒಂದೇ ಒಂದು ಮಗು ಹುಟ್ಟಿಲ್ಲ. ಆದರೆ, ಕಳೆದ ವಾರ ಕನಸೊಂದು ನನಸಾಗಿದೆ ಎಂದು ಈ ಸಣ್ಣ ಪಟ್ಟಣದ ಮೇಯರ್ ಗಿಯಕೋಮೊ ಲೊಂಬಾರ್ಡೊ ಹೇಳಿದರು. 28 ವರ್ಷಗಳ ಬಳಿಕ ಮೊದಲ ಬಾರಿಗೆ ಮಗುವೊಂದು ಹುಟ್ಟಿದೆ.
ನವಜಾತ ಶಿಶು ಪಾಬ್ಲೊ ಸೇರಿದಂತೆ ಈ ಸಣ್ಣ ಪಟ್ಟಣದ ಜನಸಂಖ್ಯೆ ಕೇವಲ 85. ಅದರ ಜನಸಂಖ್ಯೆ ನಿರಂತರವಾಗಿ ಕುಸಿಯುತ್ತಾ ಬಂದಿದೆ. ಇಟಲಿಯ ಹೆಚ್ಚಿನ ಪಟ್ಟಣಗಳು ಮತ್ತು ಗ್ರಾಮಗಳ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ.
ಯುವಕರು ಉತ್ತಮ ಭವಿಷ್ಯವನ್ನರಸುತ್ತಾ ನಗರಗಳಿಗೆ ವಲಸೆ ಹೋಗುತ್ತಿರುವುದೇ ಈ ಪ್ರವೃತ್ತಿಗೆ ಕಾರಣವಾಗಿದೆ. ಹಾಗಾಗಿ, ಹಳ್ಳಿಗಳಲ್ಲಿ ಹಿರಿಯರು ಮಾತ್ರ ವಾಸಿಸುತ್ತಿದ್ದಾರೆ.
ಉತ್ತರ ಇಟಲಿಯಲ್ಲಿರುವ ಒಸ್ಟಾನದಲ್ಲಿ ಕೇವಲ ಒಂದು ಅಂಗಡಿ, ಒಂದು ಬಾರ್ ಮತ್ತು ಎರಡು ರೆಸ್ಟೋರೆಂಟ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News