ನೇತಾಜಿಗೆ ಸಂಘಪರಿವಾರ ಎಸಗಿದ ಮಹಾ ಮೋಸ

Update: 2016-02-05 18:53 GMT

ನಿನ್ನೆಯ ಸಂಚಿಕೆಯಿಂದ..

 ಒಂದು ಕಡೆಯಲ್ಲಿ ಬೋಸರು ಜಪಾನಿಯರಿಗೆ ಮತ್ತು ಜರ್ಮನ್ನರಿಗೆ ಸಹಾಯ ಮಾಡುತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಲು ಪ್ರಯತ್ನಿಸುತ್ತಿದ್ದರೆ, ಸಾವರ್ಕರರು ತಮ್ಮ ವಸಾಹತು ದೊರೆಗಳೊಂದಿಗೇ ನೇರವಾಗಿ ಕೈಜೋಡಿಸಿ ಕುಳಿತಿದ್ದರು. ಇದು ನೇತಾಜಿಯವರಿಗೆ ಮಾಡಿದ ನೇರವಾದ ಮೋಸವಾಗಿತ್ತು. ಸಾವರ್ಕರರು ಹೆಗಲಿಗೆ ಹೆಗಲು ಕೊಟ್ಟು ನಿಂತ ಬ್ರಿಟಿಷರ ಸೈನ್ಯವೇ ಮುಂದೆ ಐ.ಎನ್.ಎ ಯ ಅನೇಕ ಧೈರ್ಯಶಾಲಿ-ವಿರ ಸೈನಿಕರನ್ನು ತರಿದು ಹಾಕಲು ಕಾರಣವಾಯಿತು ಎಂಬುದನ್ನು ನಾವು ಗಮನಿಸಬೇಕು. ತನ್ನ ಹಿಂದೂ ಮಹಾಸಭಾದ ಬೆಂಬಲಿಗರನ್ನು ಹುರಿದುಂಬಿಸುತ್ತ ಸಾವರ್ಕರರು ತಮ್ಮ ಮಧುರಾದ ಭಾಷಣದಲ್ಲಿ ಜಪಾನಿನ ಸೈನ್ಯವು ಕ್ಷಣಕ್ಷಣಕ್ಕೂ ಮುನ್ನುಗ್ಗುತ್ತ ಬರುತ್ತಿದ್ದು, ಅದು ಏಶಿಯಾವನ್ನು ಯೂರೋಪಿನ ಕೈಗಳಿಂದ ಮುಕ್ತಮಾಡಲು ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ಬ್ರಿಟಿಷ್ ಸರಕಾರಕ್ಕೆ ನಾವು ಸಹಾಯ ಮಾಡಲು ಬಹಳ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಬೇಕು. ಹಾಗೆಯೇ ಬ್ರಿಟಿಷರ ಯುದ್ಧತಂತ್ರವನ್ನು ಹೊಗಳುತ್ತ ಸಾವರ್ಕರರು ಬ್ರಿಟಿಷರು ಎಂದಿನಂತೆಯೇ ಅತೀ ಬುದ್ಧಿವಂತರು. ಅವರು ಬಹಳ ಹಿಂದೆಯೆ ಈ ಕುರಿತು ಆಲೋಚಿಸಿ, ಒಂದೊಮ್ಮೆ ಜಪಾನ್ ನೊಡನೆ ಯುದ್ಧ ಆರಂಭವಾದರೆ, ಭಾರತವೇ ಈ ಯುದ್ಧತಯಾರಿಯ ಕೇಂದ್ರವಾಗಿರಬೇಕೆಂದು ಆಲೋಚಿಸಿದ್ದರು... ಒಂದಿಪ್ಪತ್ತು ಲಕ್ಷ ಜನ ಸೈನಿಕರ ತುಕಡಿಯೊಂದು ಈ ಯುದ್ಧಕ್ಕಾಗಿ ತಯಾರಾಗಬೇಕಾಗುತ್ತದೆ. ಭಾರತೀಯರ ನೇತೃತ್ವದಲ್ಲಿಯೇ ಇರುವ ಈ ಭಾರತೀಯ ಸೈನಿಕರ ತಂಡವು ಜಪಾನ್ ಯುದ್ಧದಲ್ಲಿ ಮುನ್ನುಗ್ಗುತ್ತ ನಮ್ಮ ಗಡಿಗಳನ್ನು ತಲುಪುವ ವೇಳೆಗೆ ತಯಾರಾಗಿರಬೇಕಾಗುತ್ತದೆ.


   ಮುಂದೆ ಐ.ಎನ್.ಎ ಯ ಅನೇಕ ಜನ ಸೈನಿಕರನ್ನು ಕೊಲ್ಲಲಿರುವ ಒಂದು ಸೇನಾತುಕಡಿಗೆ ಜನರನ್ನು ನೇಮಿಸಿಕೊಳ್ಳುವ ಪ್ರಯತ್ನವನ್ನು ಸಾವರ್ಕರರು ಮುಂದಿನ ವರ್ಷಗಳಲ್ಲಿ ಮಾಡಿದರು. ಮಧುರಾದ ಹಿಂದೂಮಹಾಸಭಾದ ಸಮಾವೇಶವು ಒಂದು ನಿರ್ಧಾರವನ್ನು ಪ್ರಕಟಿಸುವುದರ ಮೂಲಕ ಅಂತ್ಯಗೊಂಡಿತು. ಆ ನಿರ್ಧಾರವೆಂದರೆ ಆದಷ್ಟೂ ಜನ ಹಿಂದೂಗಳನ್ನು ಸೈನ್ಯ, ನೌಕಾಪಡೆ ಮತ್ತು ವೈಮಾನಿಕದಳಗಳಿಗೆ ಸೇರ್ಪಡೆಯಾಗುವಂತೆ ನೋಡಿಕೊಳ್ಳುವುದು ಎಂದಾಗಿತ್ತು. ಅವರೇ ಹೇಳಿದ ಪ್ರಕಾರ ಕೇವಲ ಹಿಂದೂಮಹಾಸಭಾದ ಪ್ರಯತ್ನದಿಂದಾಗಿಯೇ ಸುಮಾರು 1 ಲಕ್ಷದಷ್ಟು ಹಿಂದೂಗಳು ಬ್ರಿಟಿಷ್ ಸೈನ್ಯಕ್ಕೆ ಕೇವಲ ಒಂದು ವರ್ಷದಲ್ಲಿಯೇ ಭರ್ತಿಯಾದರು. ವಿಚಿತ್ರವೆಂದರೆ, ಸಾವರ್ಕರರ ಈ ಎಲ್ಲ ರಾಷ್ಟ್ರವಿರೋಧಿ ಚಿಂತನೆಗಳ ಹೊರತಾಗಿಯೂ ಅವರನ್ನು ಅನೇಕರು ದೊಡ್ಡ ದೇಶಭಕ್ತನೆಂದು ಘೋಷಿಸುತ್ತ ಆರಾಧಿಸುತ್ತಿರುವುದು. ಸ್ವಾತಂತ್ರಪೂರ್ವದ ಹಿಂದೂ ಮಹಾಸಭಾದ ಪ್ರಕಟನೆೆಗಳನ್ನು ಓದುವುದರ ಮೂಲಕವೇ ಸಾವರ್ಕರರು ಮತ್ತು ಹಿಂದೂ ಮಹಾಸಭಾವು ಹೇಗೆ ಬ್ರಿಟಿಷರ ಸಹಾಯಕರಾಗಿ ಪರಿವರ್ತಿತರಾಗಿದ್ದರು ಎಂಬುದನ್ನು ಗುರುತಿಸಬಹುದು. 1941ರಲ್ಲಿ ಪ್ರಕಟವಾದ ಈ ಪುಸ್ತಕವೊಂದರ ಹೆಸರೇ ಬಹಳ ಉದ್ದವಿದೆ. ವಿನಾಯಕ ದಾಮೋದರ ಸಾವರ್ಕರರ ಪ್ರಪೊಗಾಂಡಾ: 1937 ಮತ್ತು 41 ರ ನಡುವೆ ಅಧ್ಯಕ್ಷ ಸಾವರ್ಕರರು ಮಾಡಿದ ಪ್ರಪೊಗಾಂಡಾ ಭಾಷಣಗಳ ಉಧೃತ ಭಾಗಗಳು ಎಂಬ ಈ ಪುಸ್ತಕವನ್ನು ಸಂಪಾದಿಸಿದವರು ಎ.ಎಸ್ ಭಿಡೆ. ಅವರು ಸಾವರ್ಕರರ ಆಪ್ತ ಹಿಂಬಾಲಕರಾಗಿದ್ದರು ಎಂಬುದನ್ನು ಅದರ ಮುನ್ನುಡಿಯೇ ಶೃತಪಡಿಸುತ್ತದೆ. ಆದರೆ, ಸಾವರ್ಕರರು ಗಣನೆಗೆ ತೆಗೆದುಕೊಳ್ಳದಿದ್ದ ಇನ್ನೊಂದು ವಿಷಯವೆಂದರೆ ಯಾವುದೇ ಸ್ವಾಭಿಮಾನಿ ಹಿಂದೂವಿಗೂ ತಮ್ಮನ್ನು ಹೊಸಕಿ ಆಳಿದ ವಸಾಹತು ದೊರೆಗಳ ಸೈನ್ಯಕ್ಕಾಗಿ ದುಡಿಯುವುದು ಒಂದು ಅವಮಾನಕರ ಸಂಗತಿಯಾಗಿತ್ತು ಎಂಬುದನ್ನು ಅರಿಯದೆ ಹೋದದ್ದು. ಭಿಡೆಯವರ ಪುಸ್ತಕವೇ ಈ ಸಂಗತಿಯನ್ನೂ ದಾಖಲಿಸುತ್ತದೆ: ಮಹಾಸಭಾ ಮತ್ತು ಮಹಾಯುದ್ಧ ಎಂಬ ಪ್ರಣಾಳಿಕಾ ರೂಪದ ಟಿಪ್ಪಣಿಯಲ್ಲಿಯೂ ಸಾವರ್ಕರರು ಇದನ್ನು ಬರೆದಿದ್ದರು.

ಭಾರತವನ್ನು ಯಾವುದೇ ಸೈನ್ಯದ ದಾಳಿಯಿಂದ ರಕ್ಷಿಸಿಕೊಳ್ಳುವ ಹೊಣೆಯು ಒಟ್ಟಿಗೇ ನಮ್ಮದೂ ಹಾಗೂ ಬ್ರಿಟಿಷರದ್ದೂ ಆಗಿದೆ. ಆದರೆ ದುರದೃಷ್ಟವಶಾತ್ ಈ ಕೆಲಸವನ್ನು ಸಧ್ಯದ ಪರಿಸ್ಥಿತಿಯಲ್ಲಿ ನಾವೊಬ್ಬರೇ ಯಾರ ಸಹಾಯವೂ ಇಲ್ಲದೇ ಮಾಡುವುದು ಅಸಾಧ್ಯವಾಗಿದೆ. ಹಾಗಾಗಿ, ಈ ಸಮಯದಲ್ಲಿ ಭಾರತ ಮತ್ತು ಬ್ರಿಟಿಷರ ನಡುವೆ ಒಂದು ಹೃದಯಪೂರ್ವಕ ಒಪ್ಪಂದ ಸಾಧ್ಯಮಾಡಿಕೊಳ್ಳುವುದು ಅಗತ್ಯವೂ ಸಾಂದರ್ಭಿಕವೂ ಆಗಿದೆ.
 
ಎರಡನೆ ಮಹಾಯುದ್ಧದ ಕಾಲದಲ್ಲಿ ಸುಭಾಶ್ಚಂದ್ರ ಬೋಸರು ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಸೋವಿಯತ್ ರಷ್ಯಾದಂತಹ ದೇಶಗಳಿಂದಲೂ ಸಹಾಯ ಪಡೆದು ಭಾರತವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಆದರೆ ಇಲ್ಲಿ ಸಾವರ್ಕರರು ಬ್ರಿಟಿಷರಿಗೆ ಅಂತಹ ಅಪಾಯಗಳಿಂದ ಸುರಕ್ಷಿತವಾಗಿರುವಂತೆ ಸಲಹೆಗಳನ್ನು ಕೊಡುತ್ತಿದ್ದರು. ನಾವು ಬ್ರಿಟಿಷರಿಗೆ ಈ ವಿಷಯದಲ್ಲಿ ಅವರು ಪೂರ್ಣ ಸಹಕಾರ, ಸಹಾಯಗಳನ್ನ್ನು ಕೊಡಲು ಮುಂದಾಗಿದ್ದನ್ನ್ನು ಕಾಣಬಹುದು. ಅವರ ಮುಖ್ಯ ಕಾಳಜಿ ಇದ್ದದ್ದು ಬ್ರಿಟಿಷರನ್ನು ಉಚ್ಚ್ಚಾಟಿಸುವುದರಲ್ಲಿ ಅಲ್ಲ; ಬದಲು ಮುಸ್ಲಿಮರನ್ನು ಓಡಿಸುವುದರಲ್ಲಿಯಾಗಿತ್ತು. ಅವರ ಈ ಮುಂದಿನ ಮಾತುಗಳಲ್ಲಿ ಸಾವರ್ಕರದು ಸತ್ಯಗಳನ್ನು ತಿರುಚಿ ಮುಸ್ಲಿಮ್ ವಿರೋಧಿ ಪರಿಭಾಷೆಯನ್ನು ರೂಪಿಸಿದ್ದನ್ನು ಕಾಣಬಹುದು: ಒಂದೊಮ್ಮೆ ರಷ್ಯಾವು ಇಂಗ್ಲೆಂಡ್‌ನ ವಿರುದ್ಧ ಯುದ್ಧಕ್ಕೆ ಮುಂದಾದರೆ ಅದು ಅಫ್ಘಾನಿಸ್ತಾನದ ಮೂಲಕ ಮುನ್ನುಗ್ಗುತ್ತದೆ.

ಅದು ಇನ್ನೂ ದೊಡ್ಡ ಅಪಾಯ. ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಮರು 1914ರ ಮಹಾಯುದ್ಧದ ಕಾಲದಲ್ಲಿ ಖಿಲಾಫತ್ ಚಳವಳಿಯ ಮೂಲಕ ನಮಗೆ ಕಲಿಸಿದ ಪಾಠವನ್ನು ನಾವು ಎಂದಿಗೂ ಮರೆಯಕೂಡದು. ಮುಂದೊಮ್ಮೆ ಭಾರತದ ಆಗ್ನೇಯ ದಿಕ್ಕಿನಿಂದ ಬರುವ ದಾಳಿಯು ಸಹಾ ಅದೇ ಬಗೆಯ ಅಪಾಯವನ್ನು ನಮಗೆ ಖಂಡಿತಾ ತಂದೊಡ್ಡುತ್ತದೆ. ಪಂಜಾಬ್, ಸಿಂಧ್ ಗಳಲ್ಲಿರುವ ಮುಸ್ಲಿಮ್ ಬುಡಕಟ್ಟು ಜನರು ಖಂಡಿತವಾಗಿ ಹಿಂದೂಗಳಿಗೆ ಮೋಸಗೈದು ಒಂದು ಅಖಂಡ ಮುಸ್ಲಿಮ್ ಸಾಮ್ರಾಜ್ಯದ ಕಲ್ಪನೆಯನ್ನು ಹೊತ್ತು ಮುಂಬರುತ್ತಾರೆ. ಹಾಗೆಯೇ ಅವರು ಬಲೂಚಿಸ್ತಾನದಿಂದ ಆರಂಭಗೊಂಡ, ದಿಲ್ಲಿ ಕಾಶ್ಮೀರದ ವರೆಗೆ ಹರಡಿದ ಒಂದು ಸ್ವತಂತ್ರ ಮುಸ್ಲಿಮ್ ರಾಷ್ಟ್ರವನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ. ಭಾರತದಲ್ಲಿ ಹರಡಿರುವ ಅನೇಕ ಜವಾಬ್ದಾರಿಯುತ ಮುಸ್ಲಿಮ್ ಸಂಘಟನೆಯಗಳು ತಮ್ಮ ಸಮಾವೇಶದಲ್ಲಿ ಪ್ರಕಟಿಸಿದ ನಿರ್ಧಾರಗಳಿಂದಲೇ ಇದು ನಮ್ಮ ಅರಿವಿಗೆ ಬರಬಲ್ಲದು. ಹಿಂದೂಗಳಿಗೆ ಒದಗಿ ಬರಬಹುದಾದ ಈ ಅಪಾಯವನ್ನು ಹಗುರವಾಗಿ ತೆಗೆದುಕೊಂಡು ಕಡೆಗಣಿಸುವುದು- ಈ ಮುಸ್ಲಿಮ್ ಸಂಘಟನೆಗಳಿಗೆ ಇರುವ ರಾಷ್ಟ್ರವಿರೋಧಿ ಭಾವನೆಗಳನ್ನು ಅರಿತುಕೊಂಡ ನಂತರವೂ ಸುಮ್ಮನಿರುವುದು- ಅಪಾಯಕಾರಿಯಾಗುತ್ತದೆ.

ಈ ಬಗೆಯ ತುರ್ತು ಸಂದರ್ಭದಲ್ಲಿ ಬ್ರಿಟಿಷರೊಂದಿಗೆ ಸೇರಿ ತಮ್ಮ ದೇಶದ ಹಿತಾಸಕ್ತಿಯನ್ನು ಗಮನಕ್ಕೆ ತೆಗೆದುಕೊಂಡು ಹೋರಾಡುವುದು ನಿಜಕ್ಕೂ ಮುಖ್ಯವಾಗಿದೆ. ಎ.ಎಸ್.ಭಿಡೆಯವರ ಪುಸ್ತಕದಲ್ಲಿ ಹಿಂದೂ ಮಹಾಸಭಾವು ಅನೇಕ ಸಂಗತಿಗಳ ಕುರಿತು ತೆಗೆದುಕೊಂಡಿದ್ದ ಅಧಿಕೃತ ನಿಲುವುಗಳನ್ನು ದಾಖಲಿಸುತ್ತದೆ. ಅದರಲ್ಲಿಯೇ ನಮಗೆ ತಿಳಿದು ಬರುವುದೆಂದರೆ, ಸಾವರ್ಕರ್ ಮತ್ತು ಹಿಂದೂ ಮಹಾಸಭಾವು ಬ್ರಿಟಿಷರ ಸೈನ ಸೇಮಕಾತಿ ಸಮಿತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದವು ಎಂಬುದು. ಸಾವರ್ಕರರು ತಮ್ಮದೇ ಪದಗಳಲ್ಲಿ ಈ ಒಳ್ಳೆಯ ಬೆಳವಣಿಗೆಯ ಕುರಿತು ಹಿಂದೂ ಮಹಾಸಭಾದ ಗುಂಪುಗಳಿಗೆ ತಿಳಿಸುತ್ತಾರೆ: ಬ್ರಿಟಿಷರ ಸೈನ್ಯ ನೇಮಕಾತಿ ಮಂಡಳಿ ಮತ್ತು ಅಧಿಕಾರಿಗಳೇ, ಉದಾಹಾರಣೆಗೆ ಬಾಂಬೆ ವಿಭಾಗದಲ್ಲಿ, ಹಿಂದೂ ಮಹಾಸಭಾದಿಂದ ಆರಂಭಿಸಲ್ಪಟ್ಟ ಹಿಂದೂ ಸೈನ್ಯಮಂಡಳಿಯ ಜೊತೆ ಸಂಪರ್ಕದಲ್ಲಿರುತ್ತ ಅನೇಕ ಹಿಂದೂಗಳನ್ನು ಸೈನ್ಯ, ನೌಕಾಪಡೆ ಮತ್ತು ವೈಮಾನಿಕ ತರಬೇತಿಗಳಿಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಬೆವಿನ್ ನ ಈ ಉಪಾಯ ಸಫಲವಾಗಿದ್ದು, ಅನೇಕ ಜನ ಹಿಂದೂ ಮೆಕಾನಿಕ್ ಗಳು ದೊಡ್ಡ ಸಂಖ್ಯೆಯಲ್ಲಿ ಈ ಕೆಲಸಗಳಿಗೆ ನೇಮಕ ಹೊಂದುತ್ತಿದ್ದಾರೆ. ಈಗ ಪಾಕಿಸ್ತಾನದಲ್ಲಿರುವ ಸಿಂದ್ ಪ್ರಾಂತದ ಹಿಂದೂಗಳಿಗೆ ಸಾವರ್ಕರರು ಸ್ಪಷ್ಟವಾಗಿಯೇ ಈ ಬ್ರಿಟಿಷ್ ಸೈನ್ಯಕ್ಕೆ ಸೇರಲು ಸಲಹೆ ನೀಡಿದ್ದರು. ಹಾಗೂ ತಾವು ವೈಸ್ ರಾಯ್‌ರೊಂದಿಗೆ ನೇರ ಸಂಪರ್ಕದಲ್ಲಿರುವ ಮಾಹಿತಿಯನ್ನೂ ಈ ಜನರೊಂದಿಗೆ ಸಾವರ್ಕರ್ ಹಂಚಿಕೊಂಡಿದ್ದರು. ಅದರ ಕುರಿತ ಸೂಕ್ಷ್ಮ ಮಾಹಿತಿಗಳನ್ನೂ ಕೊಡುತ್ತ ಸಾವರ್ಕರರು: ಸಿಂದ್ ಪ್ರಾಂತದ ಹಿಂದೂಗಳು ಎಷ್ಟು ಸಾಧ್ಯವೋ ಅಷ್ಟು ಸಂಖ್ಯೆಯಲ್ಲಿ ಸೈನ್ಯ, ನೌಕಾದಳ ಮತ್ತು ವೈಮಾನಿಕ ವಿಭಾಗಗಳಿಗೆ ಸೇರ್ಪಡೆ ಹೊಂದಲಿ.

ಈ ವಿಷಯದಲ್ಲಿ ಯಾರಿಗಾದರೂ ಸೂಕ್ತ ಸಲಹೆ, ಸಹಕಾರಗಳು ಬೇಕಿದ್ದಲ್ಲಿ ಅವರು ನೇರವಾಗಿ ಈ ಕೆಳಗಿನ ವಿಳಾಸಕ್ಕೆ ಪತ್ರ ಬರೆಯಲಿ: ಡಾ. ಎನ್.ಡಿ ಸಾವರ್ಕರ್. ಹಿಂದೂ ಸೈನಿಕ ಮಂಡಳಿ, ದಾದರ್ ಹಿಂದೂಸಭಾ ಕಚೇರಿ, ಲೇಡಿ ಜೆಮ್ಸೆಡ್ಜಿ ರಸ್ತೆ, ದಾದರ್, ಬಾಂಬೆ-14 ಅಥವಾ ಶಿವರಾಮ್ ಪೇಟ್ ದಾಮ್ಲೆ, ಕಾರ್ಯದರ್ಶಿ ಮಹಾರಾಷ್ಟ್ರ ಮಂಡಲ್ ಪೂನಾ-2. ಈ ಎರಡು ಕೇಂದ್ರಗಳು ಈಗಾಗಲೇ ಅನೇಕ ಉತ್ಸಾಹೀ ಹಿಂದೂಗಳನ್ನು ಬ್ರಿಟಿರ್ಷ್ ಸೈನ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿವೆ. ಹಾಗೆಯೇ ಈಗಾಗಲೇ ಅನೇಕ ವೀರ ಹಿಂದೂಗಳು ವೈಸ್ ರೀಗಲ್ ಗಳನ್ನೂ, ಕಿಂಗ್ಸ್ ಕಮಿಶನ್ ಅನ್ನೂ ಪಡೆದು ಸಮ್ಮಾನಿತರಾಗಿದ್ದಾರೆ.

 ಸಾವರ್ಕರರು ತಮ್ಮ 59ನೆ ಜನ್ಮದಿನದ ಸಂದರ್ಭವನ್ನೂ ಹಿಂದೂಮಹಾಸಭಾದ ಮೂಲಕ ಅನೇಕ ಹಿಂದೂಗಳು ಸೈನ್ಯಕ್ಕೆ ಸೇರ್ಪಡೆಯಾಗುವಂತೆ ಕರೆಕೊಡಲು ಬಳಸಿಕೊಂಡರು. ಆಗ ಅವರು ಉತ್ಸಾಹಿ ಹಿಂದೂಗಳು ಸೈನ್ಯಕ್ಕೆ ಸೇರಿ ಅಲ್ಲಿ, ಭೂಸೇನೆ ಅಥವಾ ವಾಯುಸೇನೆಯಲ್ಲಿ ನೇಮಕ ಹೊಂದಲು ಪ್ರಯತ್ನಿಸಬೇಕು. ಒಂದೊಮ್ಮೆ ಅದಾಗದಿದ್ದರೂ ಕನಿಷ್ಠ ಯುದ್ಧೋಪಕರಣಗಳನ್ನು ತಯಾರಿಸುವ ಘಟಕಗಳಿಗೆ ಸೇರಲು ಪ್ರಯತ್ನಿಸಬೇಕು ಎಂದು ನುಡಿದಿದ್ದರು.
 1941ರಲ್ಲಿ ಸಾವರ್ಕರರ ಸೂಚನೆಯ ಮೇರೆಗೆ ಹಿಂದೂ ಮಹಾಸಭಾದ ಇನ್ನೊಬ್ಬ ಹಿರಿಯ ಸದಸ್ಯ ಸರ್ ಜ್ವಾಲಾ ಪ್ರಸಾದ್ ಶ್ರೀವಾಸ್ತವ್ ಅವರು ಬ್ರಿಟಿಷ್ ಸೈನ್ಯದ ಕಮಾಂಡರ್-ಇನ್-ಚೀಪ್ ಅವರನ್ನು ಭೇಟಿಯಾಗಿದ್ದರು. ಹಿಂದೂ ಮಹಾಸಭಾದ ದಾಖಲೆಗಳಲ್ಲಿ ದೊರೆಯುವ ಮಾಹಿತಿಯ ಪ್ರಕಾರ, ಈ ಭೇಟಿಯ ಬಳಿಕ ಈ ಸಂಘಟನೆಯೇ ಬಿಡುಗಡೆಗೊಳಿಸಿದ ಕಮಾಂಡರ್ ಇನ್ ಚೀಪ್ ಮತ್ತು ಸರ್ ಜ್ವಾ ಪ್ರಸಾದ್ ಎಂಬ ಶೀರ್ಷಿಕೆಯ ಪತ್ರಿಕಾ ಹೇಳಿಕೆಯಲ್ಲಿ: ಈ ಮುನ್ನವೇ ಪ್ರಕಟಿಸಿದಂತೆ ಸರ್ ಜ್ವಾಲಾ ಪ್ರಸಾದ್ ರ ಮತ್ತು ಗೌರವಾನ್ವೀತ ಕಮಾಂಡರ್ ಇನ್ ಚೀಪ್ ರ ಭೇಟಿಯು ದಿಲ್ಲಿಯಲ್ಲಿ ನಡೆದಿದೆ. ಸರ್ ಜ್ವಾಲಾ ಪ್ರಸಾದ್ ರು ಹಿಂದೂ ಮಹಾಸಭಾದ ಪರವಾಗಿ ತಮ್ಮ ಹೇಳಿಕೆಯನ್ನು ನೀಡಲು ಅಲ್ಲಿಗೆ ತೆರಳಿದ್ದರು. ಅವರು ಅಲ್ಲಿಗೆ ಹೋಗಿದ್ದು ವೀರ ಸಾವರ್ಕರರ ಆಣತಿಯ ಮೇರೆಗೆ. ಈ ಭೇಟಿಯಲ್ಲಿ ಚರ್ಚಿತವಾದ ವಿಷಯಗಳು ಈ ಸಂದರ್ಭದ ರಾಜಕೀಯ ಮತ್ತು ಸೇನಾಸಂಬಂಧಿ ವಿಚಾರಗಳಾಗಿದ್ದು, ಸೈನ್ಯದಲ್ಲಿ ಹಿಂದೂಗಳು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಹರಿಸಿಕೊಳ್ಳಲು ನಡೆದುದಾಗಿದೆ. ಈ ಸಮಯದಲ್ಲಿ ಕಮಾಂಡರ್ ಇನ್ ಚೀಫ್ ರವರು ಬಹಳ ಶಾಂತವಾಗಿ ನಮ್ಮ ಅನಿಸಿಕೆಯನ್ನು ಆಲಿಸಿ ತಮ್ಮ ಶಕ್ತಿ ಮೀರಿ ಸೈನ್ಯದಲ್ಲಿರುವ ಹಿಂದೂಗಳ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ. ಹಾಗೂ ಅವರು ವೈರಿಯನ್ನು ಹಿಮ್ಮೆಟ್ಟಿಸಲು ಬ್ರಿಟಿಷ್ ಸರಕಾರಕ್ಕೆ ಸಹಾಯ ಮಾಡುತ್ತಿರುವ ಬ್ಯಾರಿಸ್ಟರ್ ಸಾವರ್ಕರರ ಪ್ರಯತ್ನಕ್ಕೆ ಹೃದಯಪೂರ್ವಕ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

                                     ಮುಗಿಯಿತು.

Writer - ಶಂಸುಲ್ ಇಸ್ಲಾಮ್

contributor

Editor - ಶಂಸುಲ್ ಇಸ್ಲಾಮ್

contributor

Similar News