ಕಾಲೇಜ್ ಆವರಣದಲ್ಲಿ ಜಾತಿ

Update: 2016-02-08 18:19 GMT

 ನಮ್ಮ ಕಾಲೇಜ್ ಮತ್ತು ವಿಶ್ವವಿದ್ಯಾನಿಲಯಗಳು ಮುಂದಕ್ಕೆ ಸಾಗಬೇಕೆಂದು ಬಯಸುವ ಬಹಳಷ್ಟು ದಲಿತ ವಿದ್ಯಾರ್ಥಿಗಳನ್ನು ಹಿಂದಕ್ಕೆ ಒತ್ತಿ ಬಿಡುತ್ತವೆ. ದಲಿತ ಮತ್ತು ಆದಿವಾಸಿ ಸಮುದಾಯದ ವಿದ್ಯಾರ್ಥಿಗಳು ದೇಶದ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಅನುಭವಿಸಿರುವ ತಿರಸ್ಕಾರದ ಬಗ್ಗೆ ಬಹಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬರಲು ವೈಯಕ್ತಿಕವಾಗಿ ಮತ್ತು ಕುಟುಂಬದವರು ಬಹಳಷ್ಟು ಬೆಲೆಯನ್ನು ತೆತ್ತಿದ್ದಾರೆ, ಅದು ಕೇವಲ ಆರ್ಥಿಕ ವಿಷಯದಲ್ಲಿ ಮಾತ್ರವಲ್ಲ, ಸಾಮಾಜಿಕ ಸ್ಥಾನಮಾನಗಳಲ್ಲಿ ಕೂಡಾ. ಅವರ ಹೋರಾಟವನ್ನು ಗುರುತಿಸುವುದು ಮತ್ತು ಅವರ ಅಭಿವೃದ್ಧಿಯನ್ನು ಅಭಿನಂದಿಸುವ ಬದಲಾಗಿ ಶಿಕ್ಷಣ ವ್ಯವಸ್ಥೆ ಅದನ್ನು ದಮನಿಸುವ ಮೂಲಕ, ಆಘಾತ ನೀಡುವ ಮತ್ತು ನಿಯಂತ್ರಿಸುವ ಕೆಲಸ ಮಾಡುತ್ತಿವೆ. ತರಗತಿಯಲ್ಲಿ ಪರಿಚಯಿಸುವಲ್ಲಿ ಜೆಇಇ ರ್ಯಾಂಕ್ (ರ್ಯಾಂಕ್‌ಗಳು ವಿದ್ಯಾರ್ಥಿಗಳ ‘ಸಾಮಾನ್ಯ’ ಮತ್ತು ‘ಮೀಸಲಾತಿ’ ಸ್ಥಾನಮಾನವನ್ನು ಬಹಿರಂಗಪಡಿಸುತ್ತದೆ), ಮೀಸಲಾತಿ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಜರಿ ಕರೆ, ‘ಯೋಗ್ಯತೆಯ’ ಮುಖವಾಡವಾಗಿರುವ ಜಾತಿ ಸವಲತ್ತುಗಳು, ಮೀಸಲಾತಿ ಚರ್ಚೆಗಳು ಎಂದು ಕರೆಯಲ್ಪಡುವ ಸಭೆೆಗಳಲ್ಲಿ ಪುರುಚ್ಚರಿಸಲ್ಪಡುವ ಸೌಕರ್ಯಗಳು, ಮೀಸಲಾತಿ ವರ್ಗದ ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕರ, ಬೋಧನೇತರ ಸಿಬ್ಬಂದಿಯ ಮತ್ತು ಮೇಲ್ಜಾತಿ ವಿದ್ಯಾರ್ಥಿಗಳ ಮನೋಭಾವ, ಪದವಿ ಮತ್ತು ಸ್ಕಾಲರ್ ಶಿಪ್ ಗಳನ್ನು ನೀಡುವಲ್ಲಿ ವಿಳಂಬ ಅಥವಾ ತಡೆ ಮತ್ತು ವಾಸ್ತವದಲ್ಲಿ ಕೇವಲ ಇಂಗ್ಲಿಷ್ ಮಾತನಾಡುವ, ಕಂಪ್ಯೂಟರ್ ಜ್ಞಾನವುಳ್ಳ ನಗರದ ವಿದ್ಯಾರ್ಥಿಗಳಿಗೆ ತಲುಪುವಂತೆ ಸೂಚನೆಗಳನ್ನು ರಚಿಸಿರುವ ಮತ್ತು ಜ್ಞಾನವನ್ನೇ ನಿರ್ಮಿಸಲ್ಪಟ್ಟ ರೀತಿ-ಇವುಗಳು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಈ ಸ್ಥಾನಗಳಿಗೆ ಸೇರಿದವರಲ್ಲ ಎಂಬುದನ್ನು ಹೇಳಲು ಶಿಕ್ಷಣ ಸಂಸ್ಥೆಗಳು ಉಪಯೋಗಿಸುವ ಕೆಲವೊಂದು ಹಾದಿಗಳು. ಈ ಸಮಸ್ಯೆಗಳು ಜಾತಿ ತಾರತಮ್ಯದ ಸಚಿತ್ರ ಸಾಕ್ಷಿಗಳಾಗುವುದಿಲ್ಲ. ಆದರೆ ಬೃಹತ್ ಸಂಖ್ಯೆಯಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಅವರ ಕ್ಯಾಂಪಸ್ ಅನುಭವದ ರೀತಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಎಂಬುದು ಹೇಗೆ ಮುಖವಾಡದ ಮೂಲಕ, ಅಸ್ತಿತ್ವದಲ್ಲಿದೆ ಎಂಬುದರ ಅರಿವು ಮೂಡಿಸುತ್ತದೆ. ಇನ್ಸೈಟ್ ಪ್ರತಿಷ್ಠಾನ ನಿರ್ಮಿಸಿದ ಸಾಕ್ಷ್ಯಚಿತ್ರ ‘ಡೆತ್ ಆಫ್ ಮೆರಿಟ್’ ಪ್ರಕಾರ 2007ರಿಂದ 2011ರ ನಾಲ್ಕು ವರ್ಷಗಳಲ್ಲಿ 18 ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವುಗಳನ್ನು ನಾವು ಹೇಗೆ ದೂರಮಾಡಬಹುದಾಗಿತ್ತು? ಆದರೂ ಕಾಲೇಜ್ ಆವರಣದಲ್ಲಿ ಜಾತಿ ಪಕ್ಷಪಾತ ನಡೆಯುತ್ತಿಲ್ಲ ಎಂಬುದರ ಸಾಮೂಹಿಕ ನಿರಾಕರಣೆ ಮುಂದುವರಿದಿದೆ. ಇದು ಶಿಕ್ಷಣ ಸಂಸ್ಥೆಗಳಿಂದ ಮತ್ತು ಮುಖ್ಯವಾಗಿ ಸಮಾಜದಿಂದ ಜವಾಬ್ದಾರಿಯನ್ನೇ ತೆಗೆದುಹಾಕುತ್ತದೆ. ಮತ್ತು ಆತ್ಮಹತ್ಯೆ ಮುಂದುವರಿಯುತ್ತದೆ. ಕ್ಯಾಂಪಸ್ ಜೀವನದಲ್ಲಿ ತಮ್ಮ ಅನುಭವದ ಬಗ್ಗೆ ಐದು ದಲಿತ ವಿದ್ಯಾರ್ಥಿಗಳು ಸಂಡೇ ಮ್ಯಾಗಜೀನ್ ಜೊತೆ ಮಾತನಾಡಿದ್ದಾರೆ.

ನೀನು ಉಪದ್ರವಿಯಂತೆ ಕಂಡುಬರುತ್ತಿ...
ಲೆನಿನ್, ಎಂಎಸ್ಸಿ ವಿದ್ಯಾರ್ಥಿ

ಅವರಿಗೆ 19ನೆ ಶತಮಾನದ ಜರ್ಮನಿಯ ತತ್ತ್ವಶಾಸ್ತ್ರಜ್ಞನ ಹೆಸರನ್ನು ನೀಡಲಾಗಿತ್ತು, ಆದರೆ ಅವರು ಆ ಹೆಸರಿಂದ ನನ್ನನ್ನು ಕರೆಯಬೇಡಿ ಎಂದು ಹೇಳುತ್ತಾರೆ. ನನ್ನನ್ನು ಬೇರೆ ಹೆಸರಿಂದ ಕರೆಯಿರಿ, ಎಂದವರು ಹೇಳುತ್ತಾರೆ. ನಾವು ಕೂಡಾ ‘ಲೆನಿನ್’ರನ್ನು ಒಪ್ಪುತ್ತೇವೆ. ಹೆಸರುಗಳು ಮತ್ತು ಪ್ರದೇಶಗಳು ಜಾತಿ ಗುರುತನ್ನು ಬಿಚ್ಚಿಡುವ ಪ್ರಮುಖ ಅಂಶಗಳು. ಲೆನಿನ್ ಈ ಸಂಗತಿಯನ್ನು 5 ವರ್ಷಗಳ ಹಿಂದೆ ಕಾಲೇಜಿನ ಮೊದಲ ದಿನವೇ ಅರಿತರು. ನಾನು ಮತ್ತು ನನ್ನ ಗೆಳೆಯ ಕೊನೆಯ ಬೆಂಚಲ್ಲಿ ಕುಳಿತಿದ್ದೆವು. ಅಧ್ಯಾಪಕರು ಒಳಪ್ರವೇಶಿಸಿ ತರಗತಿಯನ್ನೊಮ್ಮೆ ಕೂಲಂಕಷವಾಗಿ ಗಮನಿಸಿದರು ಮತ್ತು ಎರಡು ಹುಡುಗರಲ್ಲಿ ಅವರು ಎಲ್ಲಿಯವರು ಎಂದು ಕೇಳಿದರು. ಎರಡನೆಯವನಾದ ನಾನು ನನ್ನ ಹಳ್ಳಿಯ ಹೆಸರನ್ನು ಹೇಳಿದೆ. ಅವರು ನನ್ನ ಅಂಗಿಯ ಕೈಗಳು ಯಾಕೆ ಮೇಲಕ್ಕೆ ಮಡಚಲಾಗಿದೆ ಮತ್ತು ನನ್ನ ಕಾಲರ್ ಪಟ್ಟಿಗೆ ಯಾಕೆ ಬಟನ್ ಹಾಕಿಲ್ಲ ಎಂದು ಕೇಳಿದರು.

ತರಗತಿಯ ಎಲ್ಲಾ ಹುಡುಗರ ಅಂಗಿಯ ಕೈಗಳು ಮೇಲಕ್ಕೆ ಮಡಚಿರುವುದನ್ನು ಮತ್ತು ಕಾಲರ್ ಪಟ್ಟಿ ತೆರೆದಿರುವುದನ್ನು ಲೆನಿನ್ ಗಮನಿಸಿದ್ದರು. ಲೆನಿನ್ ಮತ್ತು ಅವರ ಗೆಳೆಯನನ್ನು ಮೊದಲ ಬೆಂಚ್ ಗೆ ಕರೆಯಲಾಯಿತು. ನೀನು ಉಪದ್ರವಿಯಂತೆ ಕಾಣುತ್ತಿ; ನಿನ್ನ ಮೇಲೆ ನಿಗಾಯಿಡಬೇಕಾಗುತ್ತದೆ, ಅಧ್ಯಾಪಕರು ಹೇಳಿದರು. ಎಲ್ಲರಿಗೂ ಗೊತ್ತು, ನಾನಿರುವ ನೋಚಿಪಟ್ಟಿ ಹಳ್ಳಿ ಮತ್ತು ಅದರ ಸುತ್ತಮುತ್ತಲ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಾಗಿದೆ.

ಸೆಮಿಸ್ಟರ್ ಶುಲ್ಕ ಎಂದು ರೂ. 8,000 ಪಾವತಿಸಿದ್ದ ಕಾರಣ ಅವರ ಆಕ್ರೋಶ ಬಹುಕಾಲ ಬಾಳಲಿಲ್ಲ. ನಾಲ್ಕು ಮಕ್ಕಳು ಮತ್ತು ಸರಿಯಾದ ಸ್ಥಿರ ಆದಾಯವಿಲ್ಲ ಕುಟುಂಬಕ್ಕೆ ಪ್ರತಿಷ್ಠೆಯೇ ಸಂಪತ್ತು. ಆಗ ಅವರಿಗೆ 18 ವರ್ಷ, ಅಂದಿನವರೆಗೆ ಅವರು ಜಾತಿಚಿತ್ರಣವನ್ನು ಎದುರಿಸಿರಲಿಲ್ಲ. 65 ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ ಕೇವಲ ಮೂವರು ಮಾತ್ರ ದಲಿತರು ಮತ್ತು ಅವರು ಯಾವಾಗಲೂ ಜೊತೆಯಾಗಿರುತ್ತಿದ್ದರು. ಎರಡು ಅಥವಾ ಮೂರು ಸಿಬ್ಬಂದಿ ಇತರ ವಿದ್ಯಾರ್ಥಿಗಳಲ್ಲಿ ನಮ್ಮಿಂದ ದೂರವಿರುವಂತೆ ಇಲ್ಲವಾದಲ್ಲಿ ನಾವು ಅವರನ್ನು ತೊಂದರೆಗೆ ಸಿಲುಕಿಸುವುದಾಗಿ ಹೇಳಿದ್ದರು.
  ಇದು ಮೂರು ಸುದೀರ್ಘ ವರ್ಷಗಳ ಪರಕೀಯತೆಯ ಭಾವನೆಯನ್ನು ನೀಡಿತ್ತು. ಯಾವುದೇ ಸಮಸ್ಯೆ ಎಲ್ಲಿಯಾದರೂ, ಕಾಲೇಜ್ ನ ಹೊರಗೆ ಕೂಡಾ ನಡೆದರೆ ಮೊದಲು ನನ್ನನ್ನು ಪ್ರಾಧ್ಯಾಪಕರ ಕೋಣೆಗೆ ಕರೆಯಲಾಗುತ್ತಿತ್ತು, ಎಂದು ಲೆನಿನ್ ಹೇಳುತ್ತಾರೆ. ವಸ್ತುತಃ ಅವರ ಭವಿಷ್ಯದ ದೃಷ್ಟಿಕೋನದ ಮೇಲೆ ಅತಿಯಾಗಿ ಪ್ರಭಾವ ಬೀರಿದ ಅಂಶ ಆಂತರಿಕ ಪರೀಕ್ಷೆ. ಆಂತರಿಕ ಪರೀಕ್ಷೆಗಳಲ್ಲಿ ಇತರರಿಗೆ 20 ಅಂಕ ನೀಡುತ್ತಿದ್ದರೆ ನಮಗೆ 25ರಲ್ಲಿ ಯಾವಾಗಲೂ 10ರಿಂದ 12 ಅಂಕಗಳನ್ನಷ್ಟೇ ನೀಡಲಾಗುತ್ತಿತ್ತು. ಅವರು ಶೇಕಡಾ 70 ಅಂಕಗಳೊಂದಿಗೆ ಪದವಿ ಮುಗಿಸಿದರು. ಲೆನಿನ್ ಸದ್ಯ ಧರ್ಮಪುರಿ ಕಾಲೇಜಿ ನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಆದರೆ ಅವರ ಪದವಿಯ ಅಂಕಗಳು ವ್ಯವಸ್ಥೆಯ ಪೂರ್ವಾಗ್ರಹದ ಕರುಳು ಹಿಂಡುವ ಜ್ಞಾಪನೆ. ಅವರ ಕಾಲೇಜನ್ನು ಪ್ರಬಲ ಮಧ್ಯಮ ಜಾತಿಯೊಂದು ನಡೆಸುತ್ತಿತ್ತು. ಯಾರಾದರೂ ದಲಿತ ಗುರುತನ್ನು ನಿರ್ಮಿಸಲು ಹೊರಟವರೆಂದು ತಿಳಿದರೆ ಅಂಥವರನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗುತ್ತಿತ್ತು. ವಿದ್ಯಾರ್ಥಿಗಳು ಕಪ್ಪು ಅಂಗಿ ಅಥವಾ ಅಂಬೇಡ್ಕರ್ ಅವರ ಪೆಂಡೆಂಟ್ ಧರಿಸುವಂತಿರಲಿಲ್ಲ.
 ವಿಪರ್ಯಾಸವೆಂದರೆ ಲೆನಿನ್ ಕಲಿತ ಕಾಲೇಜ್ ಪೆರಿಯಾರ್ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ್ದಾಗಿತ್ತು ಆದರೂ ಪೆರಿಯಾರ್ ಧರಿಸುತ್ತಿದ್ದ ಕಪ್ಪು ಅಂಗಿ ಇಲ್ಲಿ ನಿಷಿದ್ಧವಾಗಿತ್ತು. ಇದು ನನ್ನನ್ನು ಆಕ್ರೋಶಕ್ಕೀಡುಮಾಡುತ್ತಿತ್ತು, ನನ್ನ ಬಳಿ ಕಪ್ಪು ಅಂಗಿ ಇಲ್ಲದಿದ್ದರೂ. ಎನ್ನುತ್ತಾ ಲೆನಿನ್ ನಗುತ್ತಾರೆ. 
-ಪಿ.ವಿ ಶ್ರೀವಿದ್ಯಾ

ದಲಿತನಾಗಿರುವುದು ನನ್ನನ್ನು ವಿವಾದಕ್ಕೀಡು ಮಾಡಿದೆ
-ಸಂತೋಷ್ ಕುಮಾರ್ ಸೆಲ್ವರಾಜನ್, ಪಿಎಚ್ ಡಿ ವಿದ್ಯಾರ್ಥಿ
ಅವರಿಗೆ ನನ್ನ ಹೆಸರು ಗೊತ್ತಿಲ್ಲ. ನಾನು ಏನು ಕಲಿಯುತ್ತಿ ದ್ದೇನೆ ಎಂಬುದು ಅವರಿಗೆ ತಿಳಿದಿಲ್ಲ. ಆದರೆ ಕ್ಯಾಂಪಸ್ ನಲ್ಲಿರುವ ಎಲ್ಲರಿಗೂ ನನ್ನ ಜಾತಿಯ ಬಗ್ಗೆ ಗೊತ್ತು. ಚಹಾ ಮಾರುವವನಿಗೂ ಕೂಡಾ. ನಾನು ಓರ್ವ ದಲಿತ ಕ್ರೈಸ್ತ ಎಂಬುದು, ಎಂದು ಚೆನ್ನೈಯ ಲೊಯೊಲಾ ಕಾಲೇಜ್ ನಲ್ಲಿ ಗಣಿತದಲ್ಲಿ ಪಿಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿ ಸಂತೋಷ್ ಕುಮಾರ್ ಸೆಲ್ವರಾಜನ್ ಹೇಳುತ್ತಾರೆ. ಸಂತೋಷ್, ಕ್ಯಾಂಪಸ್‌ನಲ್ಲಿ ಜಾತಿವಾದದ ಜೊತೆ ತನ್ನ ಮುಖಾಮುಖಿಗಳನ್ನು ಸಣ್ಣ ತಾರತಮ್ಯ ಎಂದು ಬಣ್ಣಿಸುತ್ತಾರೆ- ಇಲ್ಲಿ ಪರೋಕ್ಷ ಮೂದಲಿಕೆ, ಅಲ್ಲಿ ನಿಗೂಢ ಬಹಿಷ್ಕಾರದ ಮಧ್ಯೆಯಿರುವ ಗುರುತು ಮತ್ತು ಆತ್ಮಗೌರವವನ್ನು ಕ್ಷೀಣಗೊಳಿಸುವ ಛಾಯಾಗೆರೆ.

ಆದರೆ ಇದು ನನ್ನನ್ನು ರಾಜಕೀಯಗೊಳಿಸಿದೆ ಎಂದು ದಲಿತ ವಿದ್ಯಾರ್ಥಿ ಸಂಘಟನೆಯ ಸಮಿತಿ ಸದಸ್ಯರಾಗಿರುವ ಸಂತೋಷ್ ಹೇಳುತ್ತಾರೆ. ಈ ಸಂಘಟನೆ ಸದ್ಯ ರೋಹಿತ್ ವೇಮುಲಾ ಸಾವಿನ ನಂತರ ರೂಪುಗೊಂಡಿರುವ ಜಾತಿ ನಿಗ್ರಹ ಜಂಟಿ ಕ್ರಿಯಾ ಸಮಿತಿ ಜೊತೆ ವಿಲೀನವಾಗಿದೆ. ನನ್ನ ಹಳ್ಳಿ (ವಿಲ್ಲುಪುರಂ ಜಿಲ್ಲೆಯಲ್ಲಿರುವ)ಯಲ್ಲಿ ಬೆಳೆಯುವುದು ಅಷ್ಟೊಂದು ಕೆಟ್ಟದ್ದಾಗಿರಲಿಲ್ಲ ಎಂದವರು ಹೇಳುತ್ತಾರೆ. ಅವರ ಹೆತ್ತವರು ಸತಿಯಕ್ಕಂಡನೂರು ಹಳ್ಳಿಯಲ್ಲಿ ದಿನಗೂಲಿ ಕಾರ್ಮಿಕರು. ನನ್ನ ತಂದೆ ಮೂರನೆ ತರಗತಿವರೆಗೆ ಓದಿದ್ದಾರೆ, ಆದರೆ ನನಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕನಸು ಕಂಡಿದ್ದರು. ಹೇಗೆ ತಾನು ಯಾವಾಗಲೂ ಶಾಲೆಯಲ್ಲಿ ಹಿಂದಿನ ಬೆಂಚಲ್ಲಿ ಕುಳಿತುಕೊಳ್ಳುತ್ತಿದ್ದೆ ಎಂಬುದನ್ನು ಸಂತೋಷ್ ನೆನಪಿಸಿಕೊಳ್ಳುತ್ತಾರೆ (ಬಹುಶಃ ನಾನು ನಾಚಿಕೆ ಸ್ವಭಾವದವನಾಗಿದ್ದೆ), ಆದರೆ ಅವರು ಮುಂದೆ ಗ್ರಾಮದ ಮೊಟ್ಟಮೊದಲ ಪದವೀಧರ ಮತ್ತು ಪಿಎಚ್ ಡಿ ವಿದ್ಯಾರ್ಥಿಯಾದರು. ಆದರೆ ಚೆನ್ನೈ ಸ್ವಲ್ಪ ವ್ಯತ್ಯಾಸವಾಗಿತ್ತು. 2013ರಲ್ಲಿ ಕಾಲೇಜ್ ನ ಸಿಬ್ಬಂದಿ ತರಗತಿಯಲ್ಲಿ ಜಾತಿ ಪ್ರಕಾರ ಕುಳಿತುಕೊಳ್ಳುವಂತೆ ಹೇಳಿದ್ದರು. ನಾವು ಉನ್ನತ ಆಡಳಿತವರ್ಗಕ್ಕೆ ಪತ್ರ ಬರೆದು ಇದರ ಮತ್ತು ಈ ಹಿಂದೆ ಉಪನ್ಯಾಸಕರು ಮಾಡಿದ್ದ ಇತರ ತಾರತಮ್ಯದಿಂದ ಕೂಡಿದ ಹೇಳಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೆವು. ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಲಿಲ್ಲ ಆದರೆ ಕ್ಷಮೆ ಕೋರಲಾಯಿತು. ನಾವು ಹೇಳಿದೆವು ನಮಗೆ ಕ್ಷಮಾಪಣೆ ಬೇಡ. ಕ್ಷಮೆ ನ್ಯಾಯವಾಗುವುದಿಲ್ಲ, ಎಂದು ಅವರು ಹೇಳುತ್ತಾರೆ. ಲೊಯೊಲಾ ಕಾಲ್ಜೇಜಿನ ಪ್ರಾಂಶುಪಾಲರಾದ ವಂ. ಡಾ. ಜಿ. ಜೋಸೆಫ್ ಆಂಟೊನಿ ಸಾಮಿ, ಜಾತಿಗೂ ಈ ಘಟನೆಗೂ ಸಂಬಂಧವಿದೆ ಎಂಬುದನ್ನು ನಿರಾಕರಿಸುತ್ತಾರೆ. ಅಂತಹ ಘಟನೆಗಳು ಲೊಯೊಲಾದಲ್ಲಿ ನಡೆಯುವುದಿಲ್ಲ. ಅವರ ಪ್ರಕಾರ, ವಿವಾದದ ಕೇಂದ್ರವಾಗಿರುವ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಶೈಕ್ಷಣಿಕ ವಿಶೇಷತೆಯ ಆಧಾರದಲ್ಲಿ ಪ್ರತ್ಯೇಕ ಗುಂಪುಗಳಾಗಲು ಸೂಚಿಸಿದ್ದರು. ಅದು ಲೆಕ್ಕಕ್ಕೆ ಸಂಬಂಧಪಟ್ಟ ತರಗತಿಯಾಗಿತ್ತು ಹಾಗಾಗಿ ಉಪನ್ಯಾಸಕರು ಭೌತಶಾಸ್ತ್ರ, ಗಣಿತ ಮತ್ತು ಕಾಮರ್ಸ್ ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುಂಪುಗಳಾಗಿ ಕುಳಿತುಕೊಳ್ಳಲು ಹೇಳಿದ್ದರು ಎಂದು ಅವರು ಹೇಳುತ್ತಾರೆ. ನಿಮ್ಮಿಂದಾಗಿ ಮತ್ತು ದಲಿತರಿಗೆ ರಿಯಾಯಿತಿ ದೊರಕುವ ಕಾರಣ ಲೊಯೊಲಾದ ಶೈಕ್ಷಣಿಕ ಮಟ್ಟ ಕಡಿಮೆಯಾಗಿದೆ ಎಂದು ಸಹವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು ಎಂದು ಸಂತೋಷ್ ವಿವರಿಸುತ್ತಾರೆ. ದಲಿತರ ಶೈಕ್ಷಣಿಕ ದಾಖಲೆ ಕಳಪೆಯಾಗಿದೆ ಎಂದು ಹೇಳುವಂತೆ ಓರ್ವ ಉಪನ್ಯಾಸಕರು ಸಂತೋಷ್ ಗೆ ವೈಯಕ್ತಿಕವಾಗಿ ತಾಕೀತು ಮಾಡಿದ್ದರು-ಆದರೆ ವಾಸ್ತವದಲ್ಲಿ ತರಗತಿಯಲ್ಲಿ ಅಗ್ರಶ್ರೇಯಾಂಕದ ಮತ್ತು ಹೆಚ್ಚು ಶೇಕಡಾವಾರು ಉತ್ತೀರ್ಣ ಹೊಂದಿದವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದು ದಾಖಲೆಗಳು ತೋರಿಸುತ್ತಿದ್ದವು ಎಂದು ಸಂತೋಷ್ ಹೇಳುತ್ತಾರೆ. ಮತ್ತೆ ಪ್ರತೀ ಬಾರಿ ನಾನು ಕೇಳುವ ಆ ಶಬ್ದ, ಅದು ಕೇವಲ ಕಾಲೇಜ್ ಗಳಲ್ಲಿ ಮಾತ್ರವಲ್ಲ. ಆ ಶಬ್ದ ತಮಿಳು ಜಾತೀಯ ನಿಂದನೆ. ಅವರು ಹೇಳುತ್ತಾರೆ, ‘ನೀನು ಅವನಂತೆ ಮಾತನಾಡುತ್ತೀಯಾ’, ‘ನೀನು ಅವನಂತೆ ಬಟ್ಟೆ ಧರಿಸುತ್ತೀಯಾ’, ‘ನೀನು ಅವನಂತೆ ತಿನ್ನುತ್ತೀಯಾ’.
ಸಂತೋಷ್ ಪ್ರತಿಕ್ರಿಯೆ ಪ್ರತಿಬಾರಿಯೂ ಒಂದೇ ಇರುತ್ತಿತ್ತು;ನಾನು ಅವರಿಗೆ ಹೇಳುತ್ತೇನೆ, ನಿಮ್ಮಿಂದಾಗಿ ನಾನು ಈ ರೀತಿ ಬಟ್ಟೆ ಧರಿಸುತ್ತೇನೆ; ನನ್ನ ಬಳಿ ಭೂಮಿಯಿಲ್ಲ; ನನ್ನ ಬಳಿ ಹಣವಿಲ್ಲ; ನನ್ನ ಹೆತ್ತವರು ಮತ್ತು ನನ್ನ ಅಜ್ಜಂದಿರು ವಿದ್ಯಾವಂತರಲ್ಲ. ಎಲ್ಲವೂ ನಿಮ್ಮಿಂದಾಗಿ.
 ಆದರೆ ನಾನು ಎಲ್ಲಿಗೆ ಹೋದರೂ, ದಲಿತ ಸಮುದಾಯ ದವನು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಅವರ ಇಮೇಲ್ ಐಡಿ ‘ದಗ್ರೇಟ್ ದಲಿತ್’ ಎಂಬ ವಾಕ್ಯದೊಂದಿಗೆ ಆರಂಭವಾಗುತ್ತದೆ. ದಲಿತ ಎಂಬ ಶಬ್ದ ನನ್ನನ್ನು ಸುಶಿಕ್ಷಿತನನ್ನಾಗಿಸಿದೆ ಎನ್ನುತ್ತಾರೆ ಸಂತೋಷ್.
-ದಿವ್ಯಾ ಗಾಂಧಿ

ನಾನು ನೀರು ಕೇಳಿದೆ, ಅವರು ನನ್ನ ಜಾತಿ ಕೇಳಿದರು
-ಪ್ರಸಾದ್ ರಾಂಪ್ರಸಾದ್, ಪಿಎಚ್ ಡಿ ವಿದ್ಯಾರ್ಥಿ

ಪ್ರಶಾಂತ್ ರಾಂಪ್ರಸಾದ್ ಇಂಗೋಲೆ,28, ಗಾಂಧಿನಗರದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯಲ್ಲಿ ಪಿಎಚ್‌ಡಿವಿದ್ಯಾರ್ಥಿಯಾಗಿದ್ದಾರೆ. ಇವರು ಹೆಚ್ಚಿನ ಸಮಯ ಓದುವುದರಲ್ಲಿ ಅದರಲ್ಲೂ ದಲಿತ ಸಾಹಿತ್ಯ ಮತ್ತು ಡಾ. ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಾರೆ. ಅವರು ಓದದೇ ಇರುವಾಗ ಎಲ್ಲೋ ಮೈಮರೆತವರಂತೆ ತಮ್ಮದೇ ಯೋಚನೆಯಲ್ಲಿ ಕಾಣೆಯಾಗಿ ರುತ್ತಾರೆ. ಅವರು ದಲಿತ ಸಾಹಿತ್ಯ ಮತ್ತು ದೃಶ್ಯ ಸಂಸ್ಕೃತಿ ಎಂಬ ವಿಷಯದ ಮೇಲೆ ಡಾಕ್ಟರೇಟ್ ಮಾಡುತ್ತಿದ್ದಾರೆ. ಇಂಗ್ಲಿಷ್ ನಲ್ಲಿ ಮಾತನಾಡಲು ಅವರು ಹಿಂಜರಿಯುತ್ತಾರೆ ಯಾಕೆಂದರೆ ಅದು ಅವರು ಶಾಲೆಯಲ್ಲಾಗಲಿ ಅಥವಾ ನಂತರವಾಗಲಿ ಕಲಿತ ಭಾಷೆಯಿಂದಲ್ಲ. ಪ್ರಶಾಂತ್ ತೆರೆದ ಮನಸ್ಸಿನಿಂದ ಸರಾಗವಾಗಿ ಮಾತನಾಡಲು ಕಡಿಮೆಯೆಂದರೂ 45 ನಿಮಿಷಗಳು ಬೇಕು. ಅವರು ಮಹಾರಾಷ್ಟ್ರದ ವಶೀವ್ ಜಿಲ್ಲೆಯಲ್ಲಿರುವ ಸಣ್ಣ ಹಳ್ಳಿ ಸಕರ್ದೊನಲ್ಲಿ ಬೆಳೆದರು. ಅವರ ತಂದೆ ಇನ್ನೊಂದು ಮಹಿಳೆಗಾಗಿ ತನ್ನ ಮಡದಿಯನ್ನು ಮತ್ತು ಮಕ್ಕಳನ್ನು ತ್ಯಜಿಸಿದ್ದರು. ಮನೆಯಲ್ಲಿ ಜಗಳಗಳು ನಡೆಯುತ್ತಿದ್ದ ಕಾರಣ ನಾನು ಬಹಳ ಕಷ್ಟದ ಬಾಲ್ಯದಿಂದ ಸಾಗಿದೆ. ನನ್ನ ತಂದೆ ಎಂದೂ ನಮ್ಮ ಬಗ್ಗೆ ಯೋಚಿಸಲಿಲ್ಲ. 2014ರಲ್ಲಿ ನನ್ನ ತಾಯಿ ಕ್ಯಾನ್ಸರ್ ನಿಂದ ಸತ್ತರು. ಈಗ ಕುಟುಂಬದಲ್ಲಿ ಕೇವಲ ನಾವಿಬ್ಬರೇ ಇದ್ದೇವೆ-ನಮ್ಮ ಕಿರಿಯ ಸಹೋದರ ಮತ್ತು ನಾನು, ಎಂದವರು ಹೇಳುತ್ತಾರೆ. ನನಗೆ ಭಾಷೆಯ ಸಮಸ್ಯೆಯಿದೆ ಎನ್ನತ್ತಾರೆ ಅವರು. ಬಹಳ ಸಂದರ್ಭಗಳಲ್ಲಿ ಇತರ ಆಂಗ್ಲ ಮಾಧ್ಯಮ ಹಿನ್ನೆಲೆಯಿಂದ ಬಂದವರಷ್ಟು ಪರಿಣಾಮಕಾರಿಯಾಗಿ ಸಂಭಾಷಿಸಲು ಅಥವಾ ವಿಸರಿಸಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಇಂಗ್ಲಿಷನ್ನು ಗೇಲಿ ಮಾಡುತ್ತಾ, ಕೇವಲ ಮೀಸಲಾತಿಯ ಕಾರಣದಿಂದ ನಾನು ಈ ಸಂಸ್ಥೆಯಲ್ಲಿದ್ದೇನೆ ಎಂದವರು ಪದೇಪದೇ ಹೇಳುತ್ತಾರೆ. ಐಐಟಿಯಲ್ಲಿ ಡಾಕ್ಟರೇಟ್ ಗೆ ನೋಂದಾಯಿಸುವ ಮುನ್ನ ಪ್ರಶಾಂತ್ ಗಾಂಧಿನಗರದ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಮಾಡಿದ್ದರು. ಅವರು ಹತ್ತನೆ ತರಗತಿ ಕಲಿಯುತ್ತಿರುವಾಗ ಗ್ರಾಮದಲ್ಲಿ ನಡೆದ ಮದುವೆಯೊಂದಕ್ಕೆ ತೆರಳಿದ್ದರು, ಅಲ್ಲಿ ನೀರು ನೀಡುವುದಕ್ಕೂ ಮುನ್ನ ಮಹಿಳೆಯೊಬ್ಬರು ಜಾತಿ ಕೇಳಿದ್ದರು ಎಂದು ಪ್ರಶಾಂತ್ ನೆನಪಿಸುತ್ತಾರೆ. ನಾನು ನೀರು ಕೇಳಿದೆ ಮತ್ತು ಆಕೆ ನನ್ನ ಜಾತಿ ಕೇಳಿದರು. ನನಗೆ ಆಘಾತವಾಗಿತ್ತು ಹಾಗಾಗಿ ನಾನು ಕೂಡಲೇ ಸಮಾರಂಭದಿಂದ ಹೊರನಡೆದೆ, ಎಂದು ತನ್ನ ಜೀವನದಲ್ಲಿ ಎದುರಿಸಿದ ಮೊದಲ ಜಾತಿ ತಾರತಮ್ಯದ ಘಟನೆಯನ್ನು ವಿವರಿಸುತ್ತಾ ಹೇಳುತ್ತಾರೆ. ನಂತರ ಅಡುಗೆಮನೆ ಉಪಕರಣವನ್ನು ಮಾರಾಟ ಮಾಡುವ ಕೆಲಸಕ್ಕೆ ಸೇರಿದ ಸಂದರ್ಭದಲ್ಲೂ ಇದೇ ರೀತಿಯ ಘಟನೆಯನ್ನು ಎದುರಿಸಿದರು. ಅದು ಮಧ್ಯಪ್ರದೇಶದ ಚಿಂಡ್ವಾರಾದಲ್ಲಿ ನಡೆದ ಘಟನೆ: ನಾನು ಅಡುಗೆ ಗ್ಯಾಸ್ ಪೈಪ್ ಮಾರಾಟ ಮಾಡುತ್ತಿದ್ದೆ. ಒಮ್ಮೆ ನಾನು ಮನೆಯೊಂದರ ಹಳೆಯ ಪೈಪನ್ನು ಬದಲಿಸಿ ಹೊಸ ಪೈಪ್ ಸಿಕ್ಕಿಸಲು ಅಡುಗೆಕೋಣೆಗೆ ಪ್ರವೇಶಿಸಿದಾಗ, ಆ ಮಹಿಳೆ ನನ್ನ ಜಾತಿ ಕೇಳಿದರು ಮತ್ತು ಆಕೆಯ ಅಡುಗೆಕೋಣೆಯನ್ನು ಪ್ರವೇಶಿಸಲು ನನಗೆಷ್ಟು ಧೈರ್ಯ ಎಂದು ಕೇಳಿದರು.
ಸ್ವಲ್ಪ ಹೊತ್ತಿನ ವಾಗ್ವಾದದ ನಂತರ ಪ್ರಶಾಂತ್ ಮನೆಯಿಂದ ಹೊರಬಂದರು. ನಾನು ಹೊರಬಂದೆ ಯಾಕೆಂದರೆ ನನಗೆ ಭಯವಾಗಿತ್ತು; ನಾನು ಆ ಹೊಸ ರಾಜ್ಯದ ಅಪರಿಚಿತ ಪ್ರದೇಶದಲ್ಲಿ ಒಬ್ಬನೇ ಇದ್ದೆ....

ಅಂದಿನಿಂದ ಪ್ರಶಾಂತ್ ಅಷ್ಟೊಂದು ಬಹಿರಂಗವಾಗಿ ತಾರತಮ್ಯವನ್ನು ಅನುಭವಿಸಿಲ್ಲ ಆದರೆ ಕೇಂದ್ರ ವಿಶ್ವವಿ ದ್ಯಾನಿಲಯ ಅಥವಾ ಐಐಟಿಯಂತಹ ಶ್ರೇಷ್ಠ ಸಂಸ್ಥೆಗಳಲ್ಲೂ ಸೂಕ್ಷ್ಮವಾಗಿ ಪ್ರತೀ ಹಂತದಲ್ಲೂ ಅವರಿಗೆ ತಮ್ಮ ಜಾತಿ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ.

-ಮಹೇಶ್ ಲಂಗಾ

ಜಮೀನನ್ನು ಉಳುವವರು ಯಾರು?
-ಅಜಯ್ ರಾವತ್, ಪಿಎಚ್ ಡಿ ವಿದ್ಯಾರ್ಥಿ

ಉನ್ನಾವೊದ ತನ್ನ ಹಳ್ಳಿಯಲ್ಲಿ ಮೇಲ್ವರ್ಗದ ಮುಖೋಪಾಧ್ಯಾಯರೊಬ್ಬರು ಮಾಡಿದ್ದ ಜಾತೀಯ ನಿಂದನೆಗಳು ಈಗಲೂ ಪಿಎಚ್ ಡಿ ವಿದ್ಯಾರ್ಥಿಯಾಗಿರುವ ಅಜಯ್ ರಾವತ್ ಕಿವಿಗಳಲ್ಲಿ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿದೆ-‘ನೀವು ಶೂದ್ರರು, ನಿನ್ನ ತಂದೆಯಲ್ಲ ಅವರ ತಂದೆ ಮೇಲಿನಿಂದ ಇಳಿದು ಬಂದರೂ ನಿನ್ನಿಂದ ಕಲಿಯಲು ಸಾಧ್ಯವಿಲ್ಲ’. ಗ್ರಾಮೀಣ ಉತ್ತರ ಪ್ರದೇಶದಲ್ಲಿ ರಾವತ್ ನ ಮೊದಲ ಹೆಸರು ಕೂಡಾ ಸಮಸ್ಯೆಗೆ ಕಾರಣವಾಗಿತ್ತು. ಜಾತಿ ಗುರುತಿಸುವಿಕೆಯನ್ನು ಬಹುಬೇಗನೆ ನಕಲಿ ಮಾಡುತ್ತಿದ್ದ ಕಾರಣ ದಲಿತರಿಗೆ ನಾಮಕರಣ ಸಮಾರಂಭವನ್ನು ಆಚರಿಸಲು ಬಿಡಲಾಗುತ್ತಿರಲಿಲ್ಲ. ಅವರು ಮೇಲ್ಜಾತಿಯವರು ಸೂಚಿಸಿದ ಹೆಸರನ್ನು ಮಕ್ಕಳಿಗೆ ಇಡಬೇಕಿತ್ತು. ನಮಗೆ ಹೆಸರುಗಳನ್ನು ನಾವು ಹುಟ್ಟಿದ ದಿನ ಅಥವಾ ಬಣ್ಣವನ್ನು ಅನುಸರಿಸಿ ನೀಡಲಾಗುತ್ತಿತ್ತು, ಉದಾಹರಣೆಗೆ ಬುರೆ, ರಾಂಬರೋಸೆ, ಬುದ್ವರಿ. ನಮಗೆ ಸರಿಯಾದ ಹೆಸರಿನ ಹಿರಿಮೆಯನ್ನು ಪಡೆಯಲು ಬಿಡಲಾಗುತ್ತಿರಲಿಲ್ಲ, ಯಾಕೆಂದರೆ ನಮ್ಮ ಹೆಸರುಗಳು ನಾವು ದಲಿತರು ಎಂಬುದನ್ನು ಗುರುತಿಸುವ ಸಲುವಾಗಿ, ಎನ್ನುತ್ತಾರೆ ರಾವತ್. ಇವರ ‘ಸಾಮಾನ್ಯ’ ಹೆಸರು ಸಾಧ್ಯವಾದದ್ದು ಅಧ್ಯಾಪಕರೊಬ್ಬರ ಮಧ್ಯಸ್ಥಿಕೆಯಿಂದಾಗಿ. ರಾವತ್ ಓರ್ವ ಪಸಿ ಮತ್ತು ಲಖ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದಲಿತ ಗುರುತನ್ನು ಅಂಟಿಸುವುದು ಮಾತ್ರವಲ್ಲ, ಅವರ ಮಕ್ಕಳನ್ನು ಶಿಕ್ಷಣದಿಂದ ದೂರವುಳಿಯುವಂತೆ ವ್ಯವಸ್ಥಿತವಾಗಿ ಪ್ರೇರಣೆ ನೀಡಲಾಗುತ್ತದೆ. ಮೇಲ್ಜಾತಿಯ ವರ್ಗದವರ ಬಹುದೊಡ್ಡ ಭಯವೆಂದರೆ ದಲಿತರು ಕಲಿತರೆ ಅವರ ಜಮೀನಿನಲ್ಲಿ ದುಡಿಯಲು ಜನರಿರುವುದಿಲ್ಲ. ನಂತರ ದಲಿತರು ಉತ್ತಮ ವೇತನ ಮತ್ತು ಹಕ್ಕಿನ ಬೇಡಿಕೆಯಿಡುತ್ತಾರೆ. ನಮ್ಮನ್ನು ಮಧ್ಯದಲ್ಲೇ ಶಿಕ್ಷಣ ಬಿಡುವಂತೆ ಭಯೋತ್ಪಾದಿಸಲಾಗುತ್ತದೆ. ಎಂದು ಅಜಯ್ ಹೇಳುತ್ತಾರೆ. ಅಜಯ್ ಸಮಸ್ಯೆಗಳ ವಿರುದ್ಧ ಹೋರಾಡುವುದನ್ನು ಆಯ್ಕೆ ಮಾಡಿಕೊಂಡರು. ತರಗತಿಯಲ್ಲಿ ಅವರು ಅಧ್ಯಾಪಕರು ನೀರು ಕುಡಿಯಲು ಬಳಸುವ ಬಿಂದಿಗೆಯನ್ನು ಸ್ಪರ್ಶಿಸಿದಾಗ ಅದನ್ನು ಸಕಲ ವಿಧಿವಿಧಾನಗಳೊಂದಿಗೆ ಶುದ್ಧ ಮಾಡಲಾಯಿತು. ಮೇಲ್ಜಾತಿಯ ಹುಡುಗರು ನಿಕೃಷ್ಟ ಕೆಲಸಗಳನ್ನು ಮಾಡುವುದು ಅಸಾಧ್ಯವಾಗಿದ್ದ ಕಾರಣ ಇತರ ದಲಿತ ಹುಡುಗರಂತೆ ಅಜಯ್ ಕೂಡಾ ತರಗತಿಯ ನೆಲವನ್ನು ಸ್ವಚ್ಛಗೊಳಿಸಬೇಕಿತ್ತು. ಇಂತಹ ಸ್ವಾರಸ್ಯಕರ ಘಟನೆಗಳು ಹಲವಿವೆ, ಆದರೆ ರಕ್ಷಣಾತ್ಮಕ ಕಾನೂನು ಮತ್ತು ಉತ್ತಮ ಜಾಗೃತಿ ಜಾತಿ ಅನ್ಯಾಯದ ಎಲ್ಲೆಮೀರಿದ ಉದಾಹರಣೆಗಳನ್ನು ಕಡಿಮೆಗೊಳಿಸಿದ್ದರೆ, ಅವುಗಳು ಇನ್ನು ಕ�

Writer - ರಾಹಿ ಗಾಯ್ಕ ವಾಡ್

contributor

Editor - ರಾಹಿ ಗಾಯ್ಕ ವಾಡ್

contributor

Similar News