ಪ್ರತಿ ಐವರಲ್ಲಿ ನಾಲ್ವರ ಸಾವಿಗೆ ಕಾರಣವೇ ಇಲ್ಲ!

Update: 2016-02-12 18:15 GMT

ನೂತನ ಜನಗಣತಿಯ ವರದಿಯ ಪ್ರಕಾರ ಭಾರತದಲ್ಲಿ ಸಂಭವಿಸುವ ಪ್ರತಿ ಐದರಲ್ಲಿ ನಾಲ್ಕು ಮರಣಗಳು ವೈದ್ಯಕೀಯವಾಗಿ ಪ್ರಮಾಣೀಕರಿಸಲ್ಪಡದ ಕಾರಣ ಬಹುಶಃ ಅಗತ್ಯಕ್ಕಿಂತ ಹೆಚ್ಚು ಭಾರತೀಯರು ಸಾವನ್ನಪ್ಪುತ್ತಿದ್ದಾರೆ. ಯಾಕೆಂದರೆ ಜನರು ಯಾಕೆ ಸಾಯುತ್ತಿದ್ದಾರೆ ಎಂಬುದನ್ನು ತಿಳಿಯದೆ ಅದನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದು ಕಷ್ಟ. ಸಾವಿಗೆ ಕಾರಣಗಳ ಅಂಕಿಅಂಶಗಳು ಯೋಜಕರಿಗೆ, ಆಡಳಿತವರ್ಗಕ್ಕೆ ಮತ್ತು ವೈದ್ಯಕೀಯ ವೃತ್ತಿನಿರತರಿಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ವಾಸಿ ಮಾಡುವ ಮತ್ತು ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ಸಾವಿನ ಕಾರಣಗಳ ವೈದ್ಯಕೀಯ ಪ್ರಮಾಣೀಕರಣದ 2013ರ ವರದಿ ತಿಳಿಸುತ್ತದೆ. ಇದು ವೈದ್ಯಕೀಯ ಸಂಶೋಧನೆಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ರೋಗಗಳನ್ನು ಪತ್ತೆಹಚ್ಚುವ ಮತ್ತು ವಿಶ್ಲೇಷಿಸುವ ನಿಯಮಗಳನ್ನು ಉತ್ತಮಗೊಳಿಸಲು ಮತ್ತು ನಿಗಾಯಿಡಲು ಅತ್ಯಂತ ಮುಖ್ಯವಾಗಿದೆ.

 ಎಂಸಿಸಿಡಿಯು ಒಂದು ಮಿಲಿಯನ್‌ಗಿಂತಲೂ ಕಡಿಮೆ - 9.29 ಲಕ್ಷ ದಾಖಲಾದ ಸಾವುಗಳನ್ನು ವಿಶ್ಲೇಷಿಸಿದೆ, ಇವುಗಳಲ್ಲಿ ಶೇ.38 ಮಹಿಳೆಯರು. ವರದಿಯ ಪ್ರಕಾರ ಒಟ್ಟಾರೆ ಈ ಸಾವುಗಳಲ್ಲಿ ಕೇವಲ ಶೇ.20 ವೈದ್ಯಕೀಯವಾಗಿ ಪ್ರಮಾಣೀಕರಿಸಲ್ಪಟ್ಟಿದೆ, ಅದರಲ್ಲೂ ಬಹುತೇಕ ದಾಖಲಾದ ಸಾವುಗಳು ನಗರ ಪ್ರದೇಶಗಳಲ್ಲಿ ಸಂಭವಿಸಿವೆ. 2013ರಲ್ಲಿ ಸಂಭವಿಸಿದ ಸಾವುಗಳಲ್ಲಿ ಅತೀಹೆಚ್ಚು ಹೃದ್ರೋಗ, ಶ್ವಾಸಕೋಶದ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡ (ಇವುಗಳನ್ನು ಹೃದಯ ಸಂಬಂಧಿ ಕಾಯಿಲೆಗಳೆಂದು ವಿಭಾಗಿಸಲಾಗಿದೆ) ಮುಂತಾದ ಪರಿಚಲನಾ ವ್ಯವಸ್ಥೆಯ ವೈಫಲ್ಯದಿಂದ ಉಂಟಾಗಿವೆ.

ಕಳೆದ ಎರಡು ವರ್ಷಗಳಲ್ಲಿ ರಕ್ತಪರಿಚಲನಾ ವ್ಯವಸ್ಥೆ, ಶ್ವಾಸಕೋಶ ವ್ಯವಸ್ಥೆ, ಜೀರ್ಣ ವ್ಯವಸ್ಥೆ ಮತ್ತು ಕ್ಯಾನ್ಸರ್ ನಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗಿದೆ ಮತ್ತು ಸೋಂಕಿನಿಂದ, ವಿಷಸೇವನೆಯಿಂದ ಮತ್ತು ಪರಾವಲಂಬಿ ಜೀವಿಗಳಿಂದ ಸಂಭವಿಸುವ ಸಾವುಗಳು ಕಡಿಮೆಯಾಗಿವೆ. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕ್ಷಿಪ್ರ ಬೆಳವಣಿಗೆ ಮತ್ತು ಕೃಷಿ ಪದ್ಧತಿಯಿಂದ ನಗರದತ್ತ ಅದರಲ್ಲೂ ಜಡ ಜೀವನಶೈಲಿ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಸಾಯುವ ಜನರ ಆಯಸ್ಸನ್ನು ಕಡಿಮೆಗೊಳಿಸಿದೆ.
ದಶಕದ ಹಿಂದೆ ಭಾರತೀಯರು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ ಮುಂತಾದ ರೋಗಗಳಿಂದ ಹೆಚ್ಚು ಸಾವನ್ನಪ್ಪುತ್ತಿದ್ದರೆ ಇಂದು ಹೃದಯ ವೈಫಲ್ಯ ಅಥವಾ ಕ್ಯಾನ್ಸರ್‌ನಂಥ ಸಾಂಕ್ರಾಮಿಕವಲ್ಲದ ರೋಗಗಳಿಂದಾಗಿ ಸಾಯುವ ಸಾಧ್ಯತೆಗಳು ಇಮ್ಮಡಿಯಾಗಿವೆ. ಇದನ್ನು ಸೋಂಕುಶಾಸ್ತ್ರದ ಪರಿವರ್ತನೆ ಎಂದು ಕರೆಯಲಾಗುತ್ತದೆ.
ಗಾಯ, ವಿಷಸೇವನೆ ಮತ್ತು ಇತರ ಹೊರಗಿನ ಕಾರಣಗಳಿಂದಾಗಿ ಸಂಭವಿಸುವ ಬಹುತೇಕ ಮರಣಗಳಲ್ಲಿ 25-34 ವಯಸ್ಸಿಗೆ ಸೇರಿದವರಾಗಿರುತ್ತಾರೆ. ದುಡಿಯುವ ವರ್ಗ ಮುಖ್ಯವಾಗಿ ಕಾರ್ಮಿಕರು ಹೀಗೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚು ಎಂಬುದನ್ನು ಇದು ತೋರಿಸುತ್ತದೆ.
ದಶಕದಲ್ಲಿ ಹವ್ಯಾಸಗಳು ಬದಲಾಗುತ್ತವೆ

2004-2006ರ ಅವಧಿಯಲ್ಲಿ ಸಾವನ್ನಪ್ಪಿದ ಶೇ.60 ಪುರುಷರು ಮತ್ತು ಶೇ.18.5 ಮಹಿಳೆಯರು ಧೂಮಪಾನ ಮಾಡುತ್ತಿದ್ದರು ಅಥವಾ ತಂಬಾಕು ಸೇವಿಸುತ್ತಿದ್ದರು. ಈ ಅನುಪಾತ 2010-13ರ ಹೊತ್ತಿಗೆ ಸಾಕಷ್ಟು ಕಡಿಮೆಯಾಗಿ ಶೇ.50 ಮತ್ತು ಶೇ.10.6 ಬಂತು. ಇದು ತಂಬಾಕು ಸೇವನೆಯಿಂದ ಉಂಟಾಗುವ ಮರಣಗಳು ಕಡಿಮೆಯಾಗಿವೆ ಎಂಬುದನ್ನು ಸೂಚಿಸುತ್ತದೆ. ಕಳೆದೊಂದು ದಶಕದಲ್ಲಿ ತಂಬಾಕು ಸೇವನೆ, ಮದ್ಯಪಾನ ಮತ್ತು ಮಾಂಸಾಹಾರ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ ಶೇಕಡಾವಾರು ಕಡಿಮೆಯಾಗಿದೆ.

ಅಭಿವೃದ್ಧಿ ಸಾಂಕ್ರಾಮಿಕವಲ್ಲದ ರೋಗಗಳನ್ನು ಹೆಚ್ಚಿಸಿದೆ

ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಸಾವಿಗೆ ಪ್ರಮುಖ ಕಾರಣವಾದರೆ ಭಾರತದ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳು ತೀವ್ರವಾಗಿ ಹರಡುತ್ತಿವೆ. ಸಾವಿನ ಇತರ ಎಲ್ಲಾ ಕಾರಣಗಳಿಗಿಂತಲೂ ಸಾಂಕ್ರಾಮಿಕ ರೋಗಗಳ (ಸೋಂಕು ಮತ್ತು ಪರಾವಲಂಬಿ ಜೀವಿಗಳು) ಅನುಪಾತ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಭಾರತದ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಹೆಚ್ಚಾಗಿದೆ. ಮುಖ್ಯವಾಗಿ ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಖಂಡದಂಥ ರಾಜ್ಯಗಳಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಈ ಪ್ರಮಾಣ ಹೆಚ್ಚು.

ಭಾರತದಾದ್ಯಂತ ಜನನ ಪ್ರಮಾಣ ಕುಸಿಯುತ್ತಿದೆ


ಭಾರತದಲ್ಲಿ 2008ರಲ್ಲಿ 22.8 ಇದ್ದ ಜನನ ಪ್ರಮಾಣವು (ಪ್ರತೀ ಸಾವಿರ ಜನಸಂಖ್ಯೆಗೆ) 2013ರಲ್ಲಿ 21.4ಕ್ಕೆ ಕುಸಿದಿದೆ. ಮಧ್ಯಪ್ರದೇಶದಲ್ಲಿ ಅತ್ಯಂತ ಹೆಚ್ಚು 26.3 ಜನನ ಪ್ರಮಾಣವಿದ್ದರೆ ಕೇರಳದಲ್ಲಿ ಅತೀಕಡಿಮೆ 14.7 ಇದೆ. ಕೇವಲ ಗ್ರಾಮೀಣ ಕೇರಳದಲ್ಲಿ ಮಾತ್ರ 2008ರಲ್ಲಿ 14.6 ಇದ್ದ ಜನನ ಪ್ರಮಾಣ 2013ಕ್ಕೆ 15 ಆಗುವ ಮೂಲಕ ಏರಿಕೆಯನ್ನು ದಾಖಲಿಸಿದೆ. ಇತರ ಎಲ್ಲಾ ಪ್ರದೇಶಗಳು ಇಳಿಕೆಯನ್ನು ದಾಖಲಿಸಿವೆ.
ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಮರಣ ಪ್ರಮಾಣವೂ ಏರಿಕೆ ಕಂಡಿದೆ 
ಕೇರಳದಲ್ಲಿ ಅನಾರೋಗ್ಯಪೀಡಿತ ಪ್ರತೀ ನಾಲ್ಕು ವ್ಯಕ್ತಿಗಳಲ್ಲಿ ಮೂವರು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದು ದೇಶದಲ್ಲೇ ಅತೀಹೆಚ್ಚು. ದೇಶಾದ್ಯಂತದ ಈ ದರ ಪ್ರತೀ ಐವರಿಗೆ ಎರಡಾಗಿದ್ದರೆ ಬಿಹಾರ ಮತ್ತು ಜಾರ್ಖಂಡ್ ಗಳಲ್ಲಿ ಪ್ರತೀ ನಾಲ್ಕು ಮಂದಿಯಲ್ಲಿ ಒಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ಅಭಿಷೇಕ್ ವಾಗ್ಮರೆ

contributor

Editor - ಅಭಿಷೇಕ್ ವಾಗ್ಮರೆ

contributor

Similar News