ಚಾಂಪಿಯನ್ ಸಾಧಕಿಗೆ ಸ್ಫೂರ್ತಿಯಾದ ಪಿತೃಸಮಾನ ವಾತ್ಸಲ್ಯ

Update: 2016-02-14 03:47 GMT

ತಂದೆ ಕ್ಯಾನ್ಸರ್‌ನಿಂದ ಮೃತಪಟ್ಟಾಗ ಕಿವುಡು ಮತ್ತು ಮೂಕಿಯಾಗಿದ್ದ ಶಹನಾಝ್ ಆರು ತಿಂಗಳ ಬಾಲಕಿ. ತಾಯಿ ಮರುವಿವಾಹವಾದಾಗ ಮಾವ ಮನ್ಸೂರ್ ಅಲಿ ಮಂದ್ರಾನಿ ಆಕೆಯನ್ನು ದತ್ತು ಪಡೆದರು. ಬಾಲ್ಯದಿಂದಲೇ ಶಹನಾಝ್‌ಗೆ ಬಂದೂಕಿನ ಮೇಲೆ ಅತೀವ ಪ್ರೀತಿ. ಪುಟ್ಟ ಬಾಲಕಿಯಾಗಿದ್ದಾಗಲೇ ಸಂಜ್ಞೆೆಭಾಷೆ ಮೂಲಕ ಬಂದೂಕು ಖರೀದಿಸಿಕೊಡುವಂತೆ ಕೋರಿದ್ದಳು. ಸಾಕುಮಗಳಿನ ಮೇಲಿನ ಪ್ರೀತಿಯಿಂದ ಮೆಂದ್ರಾನಿ ಕ್ರೀಡಾ ರೈಫಲ್ ಖರೀದಿಸಿಕೊಟ್ಟರು.
ಹದಿಮೂರನೆ ವಯಸ್ಸಿನಲ್ಲಿ ಶಹನಾಝ್ ಅಂತರ ಶಾಲಾ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಳು. 17ನೆ ವರ್ಷದಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು.
ಸೂರತ್‌ನ ಕಿಕಾಬಾಯಿ ಪ್ರೇಮ್‌ಚಂದ್ ಕಿವುಡ ಮತ್ತು ಮೂಗ ಮಕ್ಕಳ ವಿದ್ಯಾರ್ಥಿಯಾದ ಶಹನಾಝ್ ಆರು ಬೆಳ್ಳಿ ಹಾಗೂ ಏಳು ಚಿನ್ನದ ಪದಕಗಳನ್ನು ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಗೆದ್ದಿದ್ದಾರೆ. ಮಲತಂದೆ ಆಕೆಯ ಬಗ್ಗೆ ಕಾಳಜಿ ವಹಿಸುತ್ತಾರೋ ಇಲ್ಲವೋ ಎಂಬ ಶಂಕೆಯಿಂದ ನಾನು ಆಕೆಯನ್ನು ದತ್ತು ಪಡೆದೆ. ಆಕೆ ವಿಶೇಷ ಬಾಲಕಿಯಾಗಿದ್ದು, ಅಲ್ಲಾಹ್ ಆಕೆಯ ಬಗ್ಗೆ ದೊಡ್ಡ ಯೋಜನೆ ಹೊಂದಿದ್ದಾನೆ ಎಂದು ಪುಟ್ಟ ಕಿರಾಣಿ ಅಂಗಡಿಯ ಮಾಲೀಕ ಮೆಂದ್ರಾನಿ ಹೇಳುತ್ತಾರೆ. 22 ವರ್ಷದ ಮಂದ್ರಾನಿ ಪುತ್ರ ಈಕೆಯನ್ನು ಚಾಂಪಿಯನ್‌ಶಿಪ್‌ಗಳಿಗೆ ಕರೆದೊಯ್ಯುತ್ತಾರೆ.
ಒಲಿಂಪಿಕ್ಸ್‌ನಲ್ಲಿ ಆಕೆಯನ್ನು ಮತ್ತೊಬ್ಬ ಲಜ್ಜಾ ಗೋಸ್ವಾಮಿಯಾಗಿ ನೋಡುವುದು ನನ್ನ ಕನಸು ಎಂದು ಮೆಂದ್ರಾನಿ ಹೇಳುತ್ತಾರೆ. ತಿರುವನಂತಪುರದಲ್ಲಿ ಈ ತಿಂಗಳ 21ರಂದು ನಡೆಯುವ 16ನೇ ಕುಮಾರ್ ಸುರೇಂದ್ರಸಿಂಗ್ ಸ್ಮಾರಕ ಶೂಟಿಂಗ್ ಚಾಂಪಿಯನ್‌ಶಿಪ್ ಗೆಲ್ಲುವುದಾಗಿ ಭರವಸೆ ವ್ಯಕ್ತಪಡಿಸಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News