ಮಾನವರ ಉದ್ಯೋಗ ಕಸಿಯಲಿರುವ ರೋಬೊಟ್‌ಗಳು!

Update: 2016-02-14 18:29 GMT

ವಾಶಿಂಗ್ಟನ್, ಫೆ.14: ರೋಬೊಟ್‌ಗಳು ಭವಿಷ್ಯದಲ್ಲಿ ಮಾನವರ ಉದ್ಯೋಗಗಳನ್ನು ಕಸಿದುಕೊಳ್ಳಲಿವೆಯೇ?. ಹೌದೆನ್ನುತ್ತಾರೆ ಅಮೆರಿಕದ ತಜ್ಞರು. ಕೃತಕ ಬುದ್ಧಿಮತ್ತೆಯಲ್ಲಿ ಉಂಟಾಗಿರುವ ಭಾರೀ ಪ್ರಗತಿಯಿಂದಾಗಿ ಮುಂದಿನ 30 ವರ್ಷಗಳಲ್ಲಿ ರೋಬೊಟ್‌ಗಳು, ಮಾನವರು ಮಾಡುವ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆಯಲಿವೆ. ಇದರಿಂದಾಗಿ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಮಂದಿ ನಿರುದ್ಯೋಗಿಗಳಾಗುವ ಅಪಾಯವಿದೆಯೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮುಂದಿನ 30 ವರ್ಷಗಳಲ್ಲಿ ಯಂತ್ರಗಳು ಹಾಗೂ ಕಂಪ್ಯೂಟರ್‌ಗಳು, ಮಾನವರು ನಿರ್ವಹಿಸುವ ಬಹುತೇಕ ಎಲ್ಲಾ ಉದ್ಯೋಗ ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆಯಲಿವೆಯೆಂದು ಅಮೆರಿಕದ ರೈಸ್ ವಿವಿಯ ಕಂಪ್ಯೂಟರ್ ವಿಜ್ಞಾನಿ ಮೊಶೆ ವಾರ್ಡಿ ತಿಳಿಸಿದ್ದಾರೆ.

ರೋಬೊಟ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನಗಳು ಮಧ್ಯಮವರ್ಗದವರ ಹುದ್ದೆಗಳನ್ನು ಕಬಳಿಸುತ್ತಿದ್ದು, ಇದರಿಂದಾಗಿ ಆರ್ಥಿಕ ಅಸಮಾನತೆ ಉಲ್ಬಣಿಸಲಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ 30 ವರ್ಷಗಳಲ್ಲಿ ಯಂತ್ರಗಳು ಹಾಗೂ ಕಂಪ್ಯೂಟರ್‌ಗಳು ಮಾನವನು ನಿರ್ವಹಿಸುವ ಬಹುತೇಕ ಎಲ್ಲಾ ಉದ್ಯೋಗಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆಯಲಿವೆ.
-ಮೊಶೆ ವಾರ್ಡಿ , ಕಂಪ್ಯೂಟರ್ ವಿಜ್ಞಾನಿ, ರೈಸ್ ವಿವಿ, ಅಮೆರಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News