ಕೋಮುದಳ್ಳುರಿ ತಾಣದಲ್ಲಿಸಾಮರಸ್ಯದ ಓಯಸಿಸ್

Update: 2016-02-16 18:08 GMT

ಶಬೀನಾ ಪರ್ವೀನ್ ತಮ್ಮ ಪತಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರ ಜೊತೆ ಪಾಲ್ದಾ ಎಂಬ ಹಿಂದೂ ಬಹುಸಂಖ್ಯಾತ ಗ್ರಾಮದ ಸಂತ್ರಸ್ತರ ಶಿಬಿರದಲ್ಲಿ ಎರಡು ವರ್ಷ ಕಳೆದಿದ್ದಾರೆ.

ಪಶ್ಚಿಮ ಉತ್ತರಪ್ರದೇಶದ ಮುಝಪ್ಫರ್‌ನಗರ ಜಲ್ಲೆಯಲ್ಲಿ 2013ರ ಸೆಪ್ಟೆಂಬರ್‌ನಲ್ಲಿ ನಡೆದ ಕೋಮುದಳ್ಳುರಿಯ ಕೇಂದ್ರಸ್ಥಾನವಾದ ಖ್ವತ್ಬಾ ಗ್ರಾಮದಿಂದ ಬಂದ ಈ ಕುಟುಂಬ, ನೆರೆಯ ಹಿಂದೂಕುಟುಂಬಗಳ ಉದಾರ ನೆರವಿನೊಂದಿಗೆ ಸ್ವಂತ ಮನೆ ಹೊಂದಿ ಬದುಕು ಕಟ್ಟಿಕೊಳ್ಳುತ್ತಿದೆ.ಂದು ಗಲಭೆಕೋರರಿಂದ ನಮ್ಮನ್ನು ರಕ್ಷಿಸಿದ್ದ ಹಿಂದೂ ಸಹೋದರರ ನೆರವು ಹಾಗೂ ಪ್ರೀತಿಯಿಂದ ಈಗ ನಾವು ಸ್ವಂತ ಸೂರು ಹೊಂದಲು ಸಾಧ್ಯವಾಗಿದೆ. ಇದರಿಂದಾಗಿ ಎರಡು ವರ್ಷಗಳ ಸಂತ್ರಸ್ತರ ಶಿಬಿರದಲ್ಲಿನ ವಾಸ ಕೊನೆಗೊಂಡಿದೆ ಎಂದು ಪಾಲ್ದಾದಲ್ಲಿನ ಸುಸಜ್ಜಿತ ಮನೆಯ ಹಜಾರದಲ್ಲಿ ಕುಳಿತುಕೊಂಡು ಶಬೀನಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.ಾಟ್ ಸಮುದಾಯದ ಪ್ರಾಬಲ್ಯವಿರುವ ಪಾಲ್ದಾ ಗ್ರಾಮದ ನಾಗರಿಕರು ಮೂರು ಕಿಲೋಮೀಟರ್ ದೂರದ ಖ್ವತ್ಬಾ ಗ್ರಾಮದ 100ಕ್ಕೂ ಹೆಚ್ಚು ಮುಸ್ಲಿಮ್ ಕುಟುಂಬಗಳಿಗೆ ಹಲವು ತಿಂಗಳ ಕಾಲ ಆಹಾರ, ಬಟ್ಟೆ ಹಾಗೂ ಸೂರು ನೀಡಿ ರಕ್ಷಿಸಿದ ಬಗ್ಗೆ 2014ರ ಫೆಬ್ರವರಿಯಲ್ಲಿ ವರದಿ ಮಾಡಲಾಗಿತ್ತು.
ಪಾಲ್ದಾ ಗ್ರಾಮದ ಜನರ ಉದಾರತೆ ಬಗೆಗೆ ಕೇಳಿ ತಿಳಿದಿದ್ದ 400ಕ್ಕೂ ಹೆಚ್ಚು ಗಲಭೆ ಸಂತ್ರಸ್ತ ಮುಸ್ಲಿಮ್ ಕುಟುಂಬಗಳು ಗ್ರಾಮದಲ್ಲಿ ತೆರೆದ ಸಂತ್ರಸ್ತರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದವು. ಬಳಿಕ ಅಖಿಲೇಶ್ ಯಾದವ್ ಸರಕಾರ ನೀಡಿದ ಪರಿಹಾರ ಮೊತ್ತದಿಂದ ಪುಟ್ಟ ನಿವೇಶನಗಳನ್ನು ಪಾಲ್ದಾದಲ್ಲಿ ಖರೀದಿಸಿದರು.ರ್ಪಲ್ ಹೊದಿಕೆಯ ಡೇರೆಗಳು ಖಾಯಂ ಮನೆಗಳಾಗಿ ಪರಿವರ್ತನೆಗೊಂಡವು. 2013ರ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿ, 60 ಸಾವಿರಕ್ಕೂ ಅಧಿಕ ಮಂದಿ ಮನೆಮಠಗಳನ್ನು ಕಳೆದುಕೊಂಡ ಪ್ರದೇಶ ಪರಸ್ಪರ ಅಪನಂಬಿಕೆ, ದ್ವೇಷದ ತಾಣವಾಗಿ ಮಾರ್ಪಟ್ಟರೆ, ಅದೇ ಪ್ರದೇಶದ ಈ ಪುಟ್ಟ ಗ್ರಾಮ, ಸಾಮರಸ್ಯದ ಓಯಸಿಸ್ ಎನಿಸಿಕೊಂಡಿತು.
ಹಲವು ವರ್ಷಗಳಿಂದ ನಾವು ಇಲ್ಲಿ ನೆಲೆಸಿದಂತೆ ಅನಿಸುತ್ತಿದೆ. ನಮ್ಮ ಹುಟ್ಟೂರು ಬಿಟ್ಟು ಹೊಸ ಜಾಗಕ್ಕೆ ಬಂದು ನೆಲೆಸಿದ್ದೇವೆ ಎಂಬ ಭಾವನೆಯೂ ಬಾರದಂತೆ ಇಲ್ಲಿನ ಜನ ನಮ್ಮನ್ನು ನೋಡಿಕೊಂಡಿದ್ದಾರೆ ಎಂದು ಶಬೀನಾ ಹೇಳುತ್ತಾರೆ.
ಮೊನ್ನೆ ನಡೆದ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಮತ್ತೆ ಕೋಮುಸೂಕ್ಷ್ಮತೆ ತಲೆ ಎತ್ತುವ ಸೂಚನೆ ಕಂಡುಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಮಮಂದಿರ, ಲವ್ ಜಿಹಾದ್ ಹಾಗೂ ಕೋಮುಲಗಭೆಯಂಥ ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿರುವುದರಿಂದ ಕೋಮುಭಾವನೆ ಕೆರಳುವ ಭೀತಿ ಎದುರಾಗಿದೆ. ಆದರೆ 2013ಕ್ಕಿಂತ ಮುನ್ನ 700 ಕುಟುಂಬಗಳನ್ನು ಹೊಂದಿದ್ದ ಪಾಲ್ದಾ ಗ್ರಾಮದಲ್ಲಿ ಮಾತ್ರ ಆ ಪರಿಸ್ಥಿತಿ ಇಲ್ಲ. ಈ ತಿಂಗಳು ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ಮಾಲಿಕ್, ಮುಝಪ್ಫರ್‌ನಗರ ಗಲಭೆ ನರೇಂದ್ರ ಮೋದಿಯವರನ್ನು ಈ ದೇಶದ ಪ್ರಧಾನಿಯಾಗಿಸಿತು. ಮುಝಪ್ಫರ್‌ನಗರದಲ್ಲಿ ಹುಟ್ಟಿಕೊಂಡ ಸಣ್ಣ ಕಿಡಿ, ದೇಶಾದ್ಯಂತ ಹರಡಿತು. ಮೋದಿ ಪ್ರಧಾನಿಯಾದದ್ದು ಈ ಕಿಡಿಯಿಂದಾಗಿ ಎಂದು ಬಣ್ಣಿಸಿದರು. ಇದೀಗ ನಿಮ್ಮ ಗುರುತು ಹಾಗೂ ಗೌರವದ ಪ್ರಶ್ನೆ ಎಂದು ಫೆಬ್ರವರಿ 4ರಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಹಳೆಯದನ್ನು ಕೆದಕಿದ್ದಾಗಿ ವರದಿಯಾಗಿದೆ.
ಸಮುದಾಯದ ಧ್ರುವೀಕರಣ ಹಾಗೂ ಮಾಗಿದ ಗಾಯವನ್ನು ಮತ್ತೆ ಕೆದಕುವ ಪ್ರಯತ್ನ, ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರತಂತ್ರವಾಗಿ ರೂಪುಗೊಳ್ಳಲಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಈ ದ್ವೇಷಪೂರಿತ ಅಪಪ್ರಚಾರದ ಹೊರತಾಗಿಯೂ ಪಾಲ್ದಾ ಮತ್ತೆ ಶಾಂತಿಯ ನೆಲೆಯಾಗಿಯೇ ಉಳಿದುಕೊಂಡಿದೆ. ಳೆದ ವರ್ಷದವರೆಗೂ ಸಂತ್ರಸ್ತರ ಶಿಬಿರವಿದ್ದ ಜಾಗದಲ್ಲಿ ಇದೀಗ ಹೊಸ ಜನವಸತಿ ಕಾಲನಿ ನಿರ್ಮಾಣವಾಗಿರುವುದು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಪತ್ರಿಕಾ ತಂಡಕ್ಕೆ ಕಂಡುಬಂತು. ಎರಡು ವರ್ಷಗಳಿಂದ ಶಾಲೆ- ಕಾಲೇಜುಗಳಿಂದ ದೂರ ಉಳಿದಿದ್ದ ಮುಸ್ಲಿಮ್ ಬಾಲಕ- ಬಾಲಕಿಯರು ಮತ್ತೆ ಶಿಕ್ಷಣ ಮುಂದುವರಿಸಿದ್ದಾರೆ.ರಡು ವರ್ಷದ ಬಳಿಕ ಕಾಲೇಜು ಸೇರಲು ನಮಗೆ ಸಂತಸ ಎನಿಸುತ್ತಿದೆ. ಹಿಂದಿನ ಭಯಾನಕ ಘಟನೆಗಳನ್ನು ಮರೆತು ನಾವು ಮುಂದಕ್ಕೆ ಸಾಗುತ್ತಿದ್ದೇವೆ ಎಂದು ಒಂದು ಕಿಲೋಮೀಟರ್ ದೂರದ ಶಹಾಪುರ ಹೆಣ್ಣುಮಕ್ಕಳ ಇಂಟರ್ ಕಾಲೇಜಿನಲ್ಲಿ 12ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೀನಾ ಹೇಳಿದರು. ಗಲಭೆಯಿಂದ ಸಂತ್ರಸ್ತರಾದ ಕುಟುಂಬಗಳ ಇತರ 10 ಮಂದಿ ಸಹಪಾಠಿಗಳ ಜೊತೆ ಹೀನಾ ಇ-ರಿಕ್ಷಾದಲ್ಲಿ ಕಾಲೇಜಿಗೆ ಹೋಗುತ್ತಾರೆ.
ನಾವೆಲ್ಲರೂ ಶಿಕ್ಷಕಿಯರಾಗ ಬಯಸಿದ್ದೇವೆ. ಕೇವಲ ಶಿಕ್ಷಣವಷ್ಟೇ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಬಲ್ಲದು ಎಂದು ಆಕೆಯ ಸಹಪಾಠಿ ನಾಝಿಯಾ ದೃಢವಾಗಿ ನಂಬಿದ್ದಾರೆ.್ಕಪಕ್ಕದ ಗ್ರಾಮಗಳಲ್ಲಿ ಇನ್ನೂ ಉದ್ವಿಗ್ನ ವಾತಾವರಣ ಉಳಿದು ಕೊಂಡಿದೆ. ಎರಡು ಸಮುದಾಯದ ನಡುವೆ ಯಾವ ಸಮಸ್ಯೆಯೂ ಇಲ್ಲ. ಆದರೆ ಕೋಮುಗಲಭೆಗಳು ರಾಜಕೀಯ ಪ್ರಾಯೋಜಿತ ಹಾಗೂ ದುರುದ್ದೇಶಪೂರಿತ. ಇಂಥ ಗಲಭೆಗಳಿಂದ ತಮಗೆ ಲಾಭವಾಗುತ್ತವೆ ಎಂದು ಕೆಲ ಪಕ್ಷಗಳು ನಂಬಿವೆ ಎಂದು ಗ್ರಾಮದ ಸಂಗ್ರಾಮ್ ಸಿಂಗ್ ಸೂಚ್ಯವಾಗಿ ಪರಿಸ್ಥಿತಿಯ ಚಿತ್ರಣ ನೀಡಿದರು.
ಹಿಂದೂಗಳು ಮತ್ತು ಮುಸ್ಲಿಮರು ಸದಾ ಜೊತೆಯಾಗಿಯೇ ಬದುಕಿದವರು. ಆದರೆ 2013ರ ಘಟನೆ ಹೊಸ ಪ್ರವೃತ್ತಿ ಹುಟು ್ಟ ಹಾಕಿತು. ಹಿಂದೂಗ್ರಾಮ, ಮುಸ್ಲಿಮ್ ಗ್ರಾಮಗಳನ್ನು ಹುಟ್ಟುಹಾಕಿದೆ ಎಂದು ಅದೇ ಗ್ರಾಮದ ರಾಮ್ ಸಿಂಗ್ ಹೇಳುತ್ತಾರೆ.ದು ನಮ್ಮ ಸಂಸ್ಕೃತಿಗೆ ತೀರಾ ಭಿನ್ನವಾದದ್ದು. ಆದರೆ ಗಲಭೆ ಸಾಮಾಜಿಕ ಬಂಧವನ್ನು ಬದಲಿಸಿದೆ. ಸಮಗ್ರ ನೆರೆಹೊರೆ ಬಾಂಧವ್ಯ ಎರಡೂ ಸಮುದಾಯಗಳಿಗೂ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಾರೆ.್ವತ್ಬಾ ಗಲಭೆ ವೇಳೆ ಹಿಂದೂ ಸಮುದಾಯದ ಮಂದಿ, ಆ ಗ್ರಾಮದ ಮುಸ್ಲಿಮರನ್ನು ರಕ್ಷಿಸಲು ಹೇಗೆ ಗಲಭೆಕೋರರ ಜೊತೆ ಹೋರಾಡಿದ್ದರು ಎನ್ನುವುದನ್ನು ಸಂಗ್ರಾಮ್ ನೆನಪಿಸಿಕೊಳ್ಳುತ್ತಾರೆ. ಗಲಭೆಯ ಆರೋಪಿಗಳಲ್ಲೊಬ್ಬರಾದ ಹಾಗೂ ಎರಡು ವಾರ ಜೈಲುವಾಸ ಅನುಭವಿಸಿದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಸಂಜೀವ್ ಕುಮಾರ್ ಬಲ್ಯನ್ ಅವರ ಹುಟ್ಟೂರಾದ ಖ್ವತ್ಬಾದಿಂದ ಮುಸ್ಲಿಮರನ್ನು ಪಾಲ್ದಾಗೆ ಕರೆತರಲು ಎಷ್ಟು ಕಷ್ಟವಾಯಿತು ಎನ್ನುವುದನ್ನು ವಿವರಿಸುತ್ತಾರೆ.
ಬಹುತೇಕ ನಿರಾಶ್ರಿತರು ದಿನಗೂಲಿಗಳಾಗಿದ್ದು, ಎಲ್ಲರೂ ಹೊಸ ತಾಣದಲ್ಲಿ ಕೆಲಸ ಪಡೆದಿದ್ದು, ಉದ್ಯೋಗ ಅರಸಿ 15 ಕಿಲೋಮೀಟರ್ ದೂರದ ಮುಝಪ್ಫರ್‌ನಗರ ಪಟ್ಟಣಕ್ಕೆ ಹೋಗುವುದೂ ತಪ್ಪಿದೆ.
ಭೂಮಾಲಕರಾಗಿರುವ ಜಾಟ್ ಸಮುದಾಯದವರ ಹೊಲಗಳಲ್ಲಿ ನಾವು ಕೆಲಸ ಮಾಡುವ ಮೂಲಕ ಜೀವನ ಕಂಡುಕೊಂಡಿದ್ದೇವೆ. ಆದರೆ ಕೇವಲ ಮುಸ್ಲಿಮರೇ ಇರುವ ಗ್ರಾಮಗಳಲ್ಲಿ ನಮ್ಮ ಸಂಬಂಧಿಕರ ಜೊತೆಗೆ ಈ ಗ್ರಾಮದ ಹಿಂದೂಬಾಂಧವರ ಉದಾರತೆ ಬಗ್ಗೆ ಹೇಳಿದರೆ ಅದನ್ನು ನಂಬುವ ಸ್ಥಿತಿಯಲ್ಲಿ ಅವರಿಲ್ಲ ಎಂದು ಮೇಸ್ತ್ರಿ ಖುರ್ಷಿದ್ ಅಲಿ ಹೇಳುತ್ತಾರೆ. 2013ರ ಗಲಭೆಯ ಪರಿಣಾಮವಾಗಿ, ಹಿಂದೂ ಪ್ರಾಬಲ್ಯದ ಗ್ರಾಮಗಳಿಂದ ಮುಸ್ಲಿಮರು ವಲಸೆ ಹೋಗಿದ್ದಾರೆ. ಗಲಭೆಗಳು ನಡೆಯದ ಗ್ರಾಮಗಳಿಂದ ಕೂಡಾ ಮುಸ್ಲಿಮರು ಸ್ಥಳಾಂತರಗೊಂಡಿದ್ದಾರೆ. ಆದರೆ ಪಾಲ್ದಾ ಮಾತ್ರ ಇದಕ್ಕೆ ಅಪವಾದ.್ವತ್ಬಾ ಗ್ರಾಮದ ಹಲವು ಮುಸ್ಲಿಮ್ ಕುಟುಂಬಗಳು ತಮ್ಮ ಮನೆಗಳನ್ನು ಮಾರಾಟ ಮಾಡಿದ್ದಾರೆ.
ಹಿಂದೂಗಳ ಬಗ್ಗೆ ನಮಗೆ ಖಂಡಿತಾ ನಂಬಿಕೆ ಇಲ್ಲ. ಆದ್ದರಿಂದ ನಮ್ಮ ಮನೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆವು. ಆ ವಿಶ್ವಾಸ ಹೊರಟುಹೋಗಿದೆ. ಆದ್ದರಿಂದ ಮತ್ತೆ ಅಲ್ಲಿಗೆ ತೆರಳಿ ಜೀವನ ನಡೆಸುವ ಯೋಚನೆಯೂ ನಮಗಿಲ್ಲ. ಮಾರಾಟ ಮಾಡುವುದೇ ಸೂಕ್ತ ಎಂದು ಸೈಕಲ್‌ನಲ್ಲಿ ಊರೂರು ಅಲೆದು ಮಕ್ಕಳ ಸಿದ್ಧ ಉಡುಪುಗಳನ್ನು ಮಾರಾಟ ಮಾಡುವ ಬಕರ್ ಅಲಿ ಹೇಳುತ್ತಾರೆ. ತಮ್ಮ ಮನೆಯನ್ನು ಎರಡು ಲಕ್ಷ ರೂ.ಗೆ ಮಾರಾಟ ಮಾಡಿ ಬಂದ ಹಣವನ್ನು ವ್ಯಾಪಾರದಲ್ಲಿ ಅವರು ತೊಡಗಿಸಿದ್ದಾರೆ.
ಬಹುತೇಕ ಮಂದಿ ಮುಸ್ಲಿಮ್ ಪ್ರಾಬಲ್ಯದ ಶಹಾಪುರ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಗಲಭೆಯಲ್ಲಿ ನಾವು ಪಾಠ ಕಲಿತ್ತಿದ್ದೇವೆ. ಒಟ್ಟಾಗಿ ಬಾಳುವುದು ವಿವೇಕಯುತ ನಿರ್ಧಾರ. ಆಗ ನಾವು ಕನಿಷ್ಠ ನಮ್ಮನ್ನು ರಕ್ಷಿಸಿಕೊಳ್ಳಬಹುದು ಎನ್ನುವುದು ಮುಝಪ್ಫರ್‌ನಗರ ಜಿಲ್ಲೆಯ ನೆರೆಯ ಶಾಮ್ಲಿ ಜಿಲ್ಲೆಯಿಂದ ಶಹಾಪುರಕ್ಕೆ ವಲಸೆ ಬಂದ ಮುಹಮ್ಮದ್ ಅಶ್ರಫ್ ಅವರ ಅಭಿಮತ. ಇದೀಗ ನಮ್ಮ ಸಮುದಾಯದವರೊಂದಿಗೆ ನಾವು ಜೀವನ ನಡೆಸುತ್ತಿರುವುದರಿಂದ ಸುರಕ್ಷಿತ ಎಂಬ ಭಾವನೆ ಬಂದಿದೆ.

Similar News