ಜೆಎನ್‌ಯು ವಿದ್ಯಾರ್ಥಿ ಪ್ರತಿಹೋರಾಟಕ್ಕೆ ಶೆಹ್ಲಾ ರಶೀದ್ ಸಾರಥ್ಯ

Update: 2016-02-22 09:39 GMT

ಎಡಪಂಥೀಯ ಚಿಂತನಾ ಸಭೆಗಳಲ್ಲಿ ಇವರ ನಿರರ್ಗಳ ಮಾತುಗಾರಿಕೆಗೆ ದೊಡ್ಡ ಸಮೂಹ ಆಕರ್ಷಿಸುವ ಶಕ್ತಿ ಇದೆ. ಅವರ ರಾಜಕೀಯ ಲೇಪಿತ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಮಂದಿ ಶೇರ್ ಮಾಡುತ್ತಾರೆ.

ಈ ಆಕರ್ಷಕ ವ್ಯಕ್ತಿತ್ವದ ಪ್ರಭಾವಿ ಕಾಮ್ರೇಡ್ ಶೆಹ್ಲಾ ರಶೀದ್ ಶೋರಾ. ಶ್ರೀನಗರದ ಈ ಯುವತಿ ಇದೀಗ ದೇಶದ್ರೋಹದ ಆರೋಪದ ಮೇಲೆ ಬಂತರಾಗಿರುವ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಅವರ ಬಿಡುಗಡೆಗೆ ಅಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ಪ್ರಬಲ ಧ್ವನಿಯಾಗಿ ಹೊರಹೊಮ್ಮಿದ್ದಾರೆ.ವರ್ಷದ ಶೆಹ್ಲಾ ೆಬ್ರವರಿ 14ರಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಭಾಷಣದ ವೀಡಿಯೊ ವಿದ್ಯಾರ್ಥಿ ಸಮುದಾಯದಲ್ಲಿ ಸಂಚಲನ ಮೂಡಿಸಿದೆ. ಈ ಅದ್ಭುತ ಭಾಷಣದ ಬಳಿಕ ಮೂರು ಸಾವಿರ ವಿದ್ಯಾರ್ಥಿಗಳು ಜೆಎನ್‌ಯು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ಶೆಹ್ಲಾ ರಶೀದ್ ಭಾಷಣ ಹೀಗಿದೆ ನೋಡಿ: ‘ಯಾವುದರಿಂದ ನಿಮಗೆ ಸ್ವಾತಂತ್ರ್ಯ ಬೇಕು ಎಂದು ಅವರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ಯಾವ ಬಗೆಯ ಸ್ವಾತಂತ್ರ್ಯ ನಿಮಗೆ ಬೇಕು ಎಂದು ಕೇಳುತ್ತಿದ್ದಾರೆ. ಇಂದು ಈ ಸ್ವಾತಂತ್ರ್ಯವನ್ನು ನಾವು ವ್ಯಾಖ್ಯಾನಿಸುತ್ತೇವೆ. ಇಡೀ ದೇಶಕ್ಕೆ ವಿಶ್ವ ವ್ಯಾಪಾರ ಸಂಸ್ಥೆಯ ಕರಾಳಹಸ್ತದಿಂದ ಸ್ವಾತಂತ್ರ್ಯ ಬೇಕು, ಜಾತೀಯತೆ ಹಾಗೂ ತಾರತಮ್ಯದ ಕಾನೂನುಗಳಿಂದ ಸ್ವಾತಂತ್ರ್ಯ ಬೇಕು’’ ಎಂದು ೆಬ್ರವರಿ 14ರ ಭಾಷಣದಲ್ಲಿ ಅವರು ಹೇಳಿದರು.ಳೆದ ಎರಡು ದಶಕಗಳಿಂದ ಕಾಶ್ಮೀರ ರಾಜಕೀಯ ಕುದಿಬಿಂದುವಾ ಗಿರುವ ಶ್ರೀನಗರದ ಹಬ್ಬಾ ಕಾದಲ್ ಪ್ರದೇಶದ ಶೆಹ್ಲಾ ಅವರ ತಾಯಿ ಶ್ರೀನಗರದ ಎಸ್.ಕೆ.ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್‌ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಾರೆ. ಅಕ್ಕ ಮನೆಯಲ್ಲೇ ಇದ್ದಾರೆ.
ತಮ್ಮ ಬಗ್ಗೆ ಹೆಚ್ಚಿಗೆ ಹೇಳಿಕೊಳ್ಳುವುದಕ್ಕಿಂತ ದೇಶದಲ್ಲಿ ಮಾಧ್ಯಮ ಶೀರ್ಷಿಕೆಗಳನ್ನು ಸೆಳೆದ ವಿಷಯದ ಬಗ್ಗೆ ಮಾತನಾಡಲು ಇಷ್ಟಪ ಡುತ್ತಾರೆ. ನನ್ನ ಬಗ್ಗೆ ಏನೂ ಹೇಳಿಕೊಳ್ಳಲು ನಾನು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.ಂದು ೆೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ತಮ್ಮ ಕಾರ್ಯಸೂಚಿಯನ್ನು ಹೀಗೆ ವಿವರಿಸಿದ್ದಾರೆ. ‘‘ಜೆಎನ್‌ಯುನಲ್ಲಿ ಎರಡು ವರ್ಷಗಳ ಕ್ರಿಯಾಶೀಲತೆಯಿಂದ ಹಾಗೂ ನನ್ನ ರಾಜಕೀಯ ತರಬೇತಿ ನನಗೆ ಬೋಸಿದಂತೆ ಅತ್ಯಂತ ದುರ್ಬಲರಿಗಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗಾಗಿ ಎದ್ದುನಿಲ್ಲುವುದು ನನ್ನ ಉದ್ದೇಶ. ತೀರಾ ತೊಂದರೆಯ ಹಾಗೂ ವಿವಾದಾತ್ಮಕ ವಿಷಯಗಳಿಗೆ ಪರಿಹಾರ ಒದಗಿಸುವುದು ನನ್ನ ಗುರಿ.’’
ಶೆಹ್ಲಾ ಅವರ ಎಡಪಂಥೀಯ ಚಿಂತನೆಗಳು ತೀರಾ ಹಳೆಯದೇನಲ್ಲ. ಅವರ ಬ್ಲಾಗ್‌ನಲ್ಲಿ 2013ರ ಒಂದು ಪೋಸ್ಟಿಂಗ್‌ನಲ್ಲಿ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚರಣೆಯಂದು ಪ್ರವಾದಿಯ ಮಹಿಳಾ ಪರ ಆಯಾಯವನ್ನು ವಿವರಿಸಿದ್ದಾರೆ.
ಶ್ರೀನಗರದ ಎನ್‌ಐಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಶೆಹ್ಲಾ, ಬೆಂಗಳೂರು ಐಐಎಂನಲ್ಲಿ ರಾಜಕೀಯ ನಾಯಕತ್ವ ಬಗ್ಗೆ ಅಧ್ಯಯನ ಮುಂದುವರಿಸಿದರು. ಇದೀಗ ಕಾನೂನು ಮತ್ತು ಆಡಳಿತ ಕ್ಷೇತ್ರದಲ್ಲಿ ಎಂಫಿಲ್ ಅಧ್ಯಯನ ಕೈಗೊಂಡಿದ್ದಾರೆ. ಆಕೆಯ ಸ್ನೇಹಿತೆಯರು ಹೇಳುವಂತೆ, ಅವರಿಗೆ ತೀರಾ ಅಗತ್ಯವಿದ್ದ ವೇದಿಕೆಯನ್ನು ಇದೀಗ ಜೆಎನ್‌ಯು ಕಲ್ಪಿಸಿಕೊಟ್ಟಿದೆ. ಇದು ಅವರನ್ನು ಹೋರಾಟಗಾರರಾಗಿ ರೂಪಿಸಿದೆ ಎಂದು ಹೇಳುತ್ತಾರೆ.ವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ 2015ರಲ್ಲಿ ಲೈಂಗಿಕ ಕಿರುಕುಳ ವಿರುದ್ಧದ ಲಿಂಗಸೂಕ್ಷ್ಮತೆ ಸಮಿತಿಯ ಚುನಾವಣೆಯಲ್ಲಿ ಸ್ಪರ್ಸಿ ಸೋಲು ಕಂಡಿದ್ದರು. ಅದೇ ವರ್ಷದ ಸೆಪ್ಟಂಬರ್‌ನಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಎಡಪಕ್ಷ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಅಭ್ಯರ್ಥಿಯಾಗಿ ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವೆಲೆಂಟಿನಾ ಬ್ರಹ್ಮ ಅವರನ್ನು ಸೋಲಿಸಿದ್ದರು.ತರ ಕಾಶ್ಮೀರಿ ವಿದ್ಯಾರ್ಥಿಗಳಿಗಿಂತ ಅವರು ಕ್ಯಾಂಪಸ್‌ನಲ್ಲಿ ಭಿನ್ನವಾಗಿ ಕಾಣುತ್ತಾರೆ. ಏಕೆಂದರೆ ಅವರು ಕ್ಯಾಂಪಸ್‌ನಲ್ಲಿ ರಾಷ್ಟ್ರೀಯವಾದಿಯಾಗಿ ಕಂಡುಬರುತ್ತಾರೆಯೇ ವಿನಃ ಪ್ರತ್ಯೇಕತಾವಾದಿಯಾಗಿ ಅಲ್ಲ ಎಂದು ಅವರ ಆಪ್ತ ಸ್ನೇಹಿತೆ ಹೇಳಿದರು. ಕನ್ಹಯ್ಯಾ ಕುಮಾರ್ ಅವರನ್ನು ದಿಲ್ಲಿ ಪೊಲೀಸರು ಬಂಸಿದ ಬಳಿಕ, ಉಪಾಧ್ಯಕ್ಷೆ ಶೆಹ್ಲಾ ಹೋರಾಟದ ನೇತೃತ್ವ ವಹಿಸಿಕೊಂಡರು.
ನಾವು ಕನ್ಹಯ್ಯ, ರಾಮ, ಅಶುತೋಶ್, ಅನಂತ್, ಉಮರ್ ಹಾಗೂ ಅನಿರ್ಬನ್ ಪರವಾಗಿದ್ದೇವೆ. ನಾವು ಕನ್ಹಯ್ಯ ಬಿಡುಗಡೆಗೆ ಒತ್ತಡ ತರುತ್ತಿದ್ದೇವೆ. ಬಳಿಕ ನಾವು ಒಟ್ಟಾಗಿ ಇತರ ಐದು ಮಂದಿಯ ಮೇಲೆ ಹೂಡಿರುವ ದೇಶದ್ರೋಹದ ಆರೋಪ ವಿರುದ್ಧ ನಾವು ಹೋರಾಡಬಹುದು. ಎಂಟು ಮಂದಿಯನ್ನು ಶೈಕ್ಷಣಿಕವಾಗಿ ಅಮಾನತು ಮಾಡಿರುವ ವಿಶ್ವವಿದ್ಯಾನಿಲಯ ಕ್ರಮದ ವಿರುದ್ಧವೂ ಸಂಘಟಿತ ಹೋರಾಟ ನಡೆಸಬಹುದು. ಅಂತಿಮವಾಗಿ ಈ ಚಳವಳಿ ಮುನ್ನಡೆಸಬಹುದು ಎಂದು ಅವರ ಪೋಸ್ಟ್‌ನಲ್ಲಿ ಹೇಳಲಾಗಿದೆ.ುರುವಾರ ಶೆಹ್ಲಾ ಅವರ ಜೆಎನ್‌ಯು ಬದ್ಧತಾ ರ್ಯಾಲಿಗೆ ಅಭೂತಪೂರ್ವ ಬೆಂಬಲ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಅವರ ಪೇಸ್‌ಬುಕ್ ವಾಲ್ ತುಂಬೆಲ್ಲ ಅವರ ಜಾಥಾಗೆ ಬೆಂಬಲ ವ್ಯಕ್ತಪಡಿಸುವ ಬರಹಗಳೇ ತುಂಬಿವೆ. ಇದು ಕೇವಲ ಕನ್ಹಯ್ಯಾ ಕುಮಾರ್ ಅವರ ಬಂಧನದ ಹಿನ್ನೆಲೆಯಲ್ಲಷ್ಟೇ ಅಲ್ಲ; ಇದು ವಿದ್ಯಾರ್ಥಿಗಳ ಬಗ್ಗೆ ಸರಕಾರದ ಧೋರಣೆಯ ಬಗ್ಗೆ.ೆಎನ್‌ಯು ಪರವಾಗಿ ಇಂದು 15 ಸಾವಿರ ಮಂದಿ ದಿಲ್ಲಿಯಲ್ಲಿ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಂಡರು. ಅವರೆಲ್ಲರನ್ನೂ ಬಂಸಿ; ಅವರೆಲ್ಲರೂ ದೇಶದ್ರೋಹಿಗಳು. ಮಾಧ್ಯಮ ಇದನ್ನು ವರದಿ ಮಾಡುವುದಿಲ್ಲ ಎಂದು ಶೆಹ್ಲಾ ಹೇಳಿದರು. ಪೊಲೀಸರ ಪ್ರಕಾರ, ಐದು ಸಾವಿರ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ೆಎನ್‌ಯು ವಿವಾದಕ್ಕೆ ಮುನ್ನ ಶೆಹ್ಲಾ ಲಿಂಗ ಸಮಾನತೆ, ಮಾನವಹಕ್ಕು, ಬಾಲಾಪರಾ ನ್ಯಾಯ ಹಾಗೂ ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ಕಳೆದ ನವೆಂಬರ್‌ನಲ್ಲಿ ಯುಜಿಸಿ ವಿರುದ್ಧ ನಡೆದ ‘ಯುಜಿಸಿಯನ್ನು ಆಕ್ರಮಿಸಿ’ ಚಳವಳಿಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಮುಖಂಡರಲ್ಲಿ ಇವರೂ ಒಬ್ಬರು. ಉಮರ್ ಖಲೀದ್ ವಿರುದ್ಧದ ನಿಷ್ಕರುಣೆಯ ಮಾಧ್ಯಮ ವಿಚಾರಣೆಯನ್ನು ನಾನು ಖಂಡಿಸುತ್ತೇನೆ. ಜತೆಗೆ ಪ್ರತಿ ವಿದ್ಯಾರ್ಥಿ ಕೂಡಾ ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ಅಮಾಯಕ ಎನ್ನುವುದನ್ನು ನಾನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

Writer - ಗುಲಾಂ ಜೀಲಾನಿ

contributor

Editor - ಗುಲಾಂ ಜೀಲಾನಿ

contributor

Similar News