ಆದಾಯ ತೆರಿಗೆ: ಈ ಬಾರಿಯಾದರೂ ನಿರೀಕ್ಷೆಈಡೇರಬಹುದೇ?

Update: 2016-02-24 18:36 GMT

ಬಜೆಟ್ ದಿನ ಸಮೀಪಿಸುತ್ತಿದೆ. ಆದಾಯ ತೆರಿಗೆದಾರರು ಪ್ರತೀ ವರ್ಷದಂತೆ ಈ ಬಾರಿಯೂ ನಿರೀಕ್ಷೆಯ ಬಟ್ಟಲನ್ನು ಹಿಡಿದು ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಎರಡು ವರ್ಷ ಬೆಟ್ಟದಷ್ಟು ನಿರೀಕ್ಷೆಯಲ್ಲಿದ್ದ ಆದಾಯ ತೆರಿಗೆದಾರರಿಗೆ, ಇದ್ದ ತೆರಿಗೆ ವಿನಾಯಿತಿಯಲ್ಲಿ ಸ್ವಲ್ಪಮಾರ್ಪಾಡು ಬಿಟ್ಟರೆ ಹೊಸತಾಗಿ ಏನೂ ಸಿಗಲಿಲ್ಲ. ಚುನಾವಣೆಯ ಸಮಯದಲ್ಲಿ ಐದು ಲಕ್ಷದ ವರೆಗೆ ಆದಾಯಕರ ವಿನಾಯಿತಿ ಬಗೆಗೆ ಆಸೆ ಮತ್ತು ಭರವಸೆ ಹುಟ್ಟಿಸಿದವರು ನಂತರ ಉಲ್ಟಾ ಹೊಡೆದರು. ಹಣಕಾಸು ಮಂತ್ರಿ ಳು ತಮ್ಮ ಇತ್ತೀಚೆಗಿನ ಕೆಲವು ಹೇಳಿಕೆಗಳಲ್ಲಿ ಇನ್ನೂ 2 ವರ್ಷ ಯಾವುದೇ ತೆರಿಗೆ ವಿನಾಯಿತಿ ಅಸಾಧ್ಯ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಆದರೂ ಮುಂದಿನ ಕೆಲವು ತಿಂಗಳು ಗಳಲ್ಲಿ ಒಂದೆರಡು ಪ್ರಮುಖ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆಗಳು ಇರುವುದರಿಂದ, ಆ ಚುನಾವಣೆಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದು, ನಂತರ ತನ್ಮೂಲಕ ರಾಜ್ಯಸಭೆಯಲ್ಲಿನ ತನ್ನ ಬಲವನ್ನು ಹೆಚ್ಚು ಮಾಡಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಸರಕಾರವು ಆದಾಯ ತೆರಿಗೆದಾರರಿಗೆ ಕೆಲವು ತೆರಿಗೆ ವಿನಾಯಿತಿಗಳನ್ನು ಕೊಡಬಹುದು ಎನ್ನುವ ಆಸೆಚಿಗುರಿದೆ.
ಇವರ ನಿರೀಕ್ಷೆಗಳೇನು?

ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ವಿನಾಯಿತಿ ಮಿತಿ ಉದ್ಯೋಗಿಗಳಿಗೆ 2.50 ಲಕ್ಷ ರೂ. ಮತ್ತು ಹಿರಿಯ ನಾಗರಿಕರಿಗೆ 3.00 ಲಕ್ಷ ರೂ. ಇದ್ದು, ಇದನ್ನು ಐದು ಮತ್ತು ಆರು ಲಕ್ಷಕ್ಕೆ ಏರಿಸುವಂತೆ ಉದ್ಯೊಗಿಗಳು, ಉದ್ಯೋಗದಾತರು, ಕಾರ್ಮಿಕ ಸಂಘಗಳು ಮತ್ತು ವಾಣಿಜ್ಯೋದ್ಯಮ ಸಂಘಗಳು ಹಣಕಾಸು ಮಂತ್ರಿಗಳ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಒತ್ತಾಯಿಸಿದ್ದಾರೆ. ಈ ವಿನಾಯಿತಿ ಪ್ರಮಾಣ ಕನಿಷ್ಟ ರೂ. 50,000ದಷ್ಟಾದರೂ ಏರಬಹುದು ಎನ್ನುವ ಆಶಾಭಾವನೆಯನ್ನು ಅವರು ಹೊಂದಿದ್ದಾರೆ. ಅದೇ ರೀತಿ ಹಿರಿಯ ನಾಗರಿಕರೂ ಅದೇ ಪ್ರಮಾಣದಲ್ಲಿ ತಮಗೂ ತೆರಿಗೆ ವಿನಾಯಿತಿ ಹೆಚ್ಚಬಹುದೆಂದು ನಿರೀಕ್ಷೆಯಲ್ಲಿದ್ದಾರೆ.. ಕಳೆದ ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಏನೂ ಕೊಡದಿರುವುದರಿಂದ ಸರಕಾರ ಉದ್ಯೋಗಿಗಳ ಪರ ಲ್ಲವೆನ್ನುವ ಲೇಬಲ್ ಪಡೆಯದಿರಲು, ಕೊಂಚ ವಿನಾಯಿತಿ ೊಡಬಹುದು ಎನ್ನುವ ವಿಶ್ವಾಸದಲ್ಲಿದ್ದಾರೆ. ಹಾಗೆಯೇ ಈಗಿ ರುವ ತೆರಿಗೆ ವಿನಾಯಿತಿ ಪಡೆಯಲಿರುವ ಉಳಿತಾಯದ ಪ್ರಮಾಣವನ್ನು ರೂ.1.50 ಲಕ್ಷರಿಂದ 2.50 ಲಕ್ಷಕ್ಕೆ ಏರಿಸುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಇಂತಹ ತೆರಿಗೆ ವಿನಾ ಯಿತಿ ಉದ್ಯೋಗಿಗಳಲ್ಲಿ ಉಳಿತಾಯದ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಅಹವಾಲು ಮಾಡಿದ್ದಾರೆ. ಈಗ ಗೃಹಸಾಲ ಬಡ್ಡಿಯಲ್ಲಿ ರೂ.2 ಲಕ್ಷದ ವರೆಗೆ ವಿನಾಯಿತಿ ಇದ್ದು, ಸಾಲ ಮರುಪಾವತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಪ್ರಮಾಣವನ್ನು 3ಲಕ್ಷಕ್ಕೆ ಹೆಚ್ಚಿಸಬೇಕೆಂದೂ ಕೇಳಿದ್ದಾರೆ.
 

 ಕಳೆದ ಕೆಲವು ವರ್ಷಗಳಿಂದ ಆದಾಯಕರಠ್ಝಚಿ2.50 ಲಕ್ಷ ದಿಂದ 5.00 ಲಕ್ಷಕ್ಕೆ ಶೇ.10, 5 ಲಕ್ಷದಿಂದ 10ಲಕ್ಷಕ್ಕೆ ಶೇ.20 ಮತ್ತು ಲಕ್ಷ ಮೇಲಿನ ಆದಾಯಕ್ಕೆ ಶೇ.30 ನಡೆಯುತ್ತಿದ್ದು, ಇದನ್ನು 2.50ಲಕ್ಷದಿಂದ 10 ಲಕ್ಷದವರೆಗೆ ಶೇ.10, 10ರಿಂದ20 ಲಕ್ಷದ ವರೆಗೆ ಶೇ.20 ಮತ್ತು 20 ಲಕ್ಷದ ಮೇಲೆ ಶೇ.30 ಇರಲಿ ಎನ್ನುವ ಒತ್ತಾಯವೂ ಇದೆ.

ಬ್ಯಾಂಕ್ ಠೇವಣಿಯ ಮೇಲಿನ ಟಿಡಿಎಸ್ ಕಡಿತದ ಮಿತಿ ಲಾಗಾಯ್ತಿನಿಂದ 10,000 ರೂಪಾಯಿ ಇದ್ದು, ಇದನ್ನು ಕನಿಷ್ಠ ರೂ.50,000ಕ್ಕೆ ಏರಿಸಬೇಕು ಎನ್ನುವ ಬೇಡಿಕೆ ಈ ಬಾರಿ ಜೋರಾಗಿ ಕೇಳುತ್ತಿದೆ. ಬ್ಯಾಂಕಿನಲ್ಲಿ ಮುದ್ದತಿ (್ಛಜ್ಡಿಛಿ) ಠೇವಣಿ ುವವರು ಹೆಚ್ಚಾಗಿ ನಿವೃತ್ತರು. ಅವರು ತಮ್ಮ ಜೀವನದ ಉಳಿದ ದೂರವನ್ನು ಈ ಠೇವಣಿಯ ಮೇಲಿನ ಬಡ್ಡಿಯಲ್ಲಿಯೇ ಕ್ರಮಿಸಬೇಕು. ಅಂತೆಯೇ ನಿವೃತ್ತರ ಠೇವಣಿಯ ಮೇಲಿನ ಬಡ್ಡಿಗೆ ಸ್ ಕಡಿತ ಮಾಡಬಾರದು ಎಂದು ಬೇಡಿಕೆ ಮಂಡಿಸ ಲಾಗಿದೆ. ಹಾಗೆಯೇ ಉಳಿತಾಯ ಖಾತೆ ಮತ್ತು ರೆಕರಿಂಗ್ ಡಿಪಾಸಿಟ್ ಮೇಲಿನ ಟಿಡಿಎಸ್ ಕಡಿತವನ್ನು ರದ್ದುಮಾಡಬೇಕು ಎನ್ನುವ ಬೇಡಿಕೆಯೂ ಇದೆ. ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ದರ ಸದಾ ಇಳಿಯುತ್ತಿದ್ದು ಮತ್ತು ಅದರ ಮೇಲೆ ಟಿಡಿಎಸ್ ಕಡಿತ ವನ್ನೂ ಮಾಡಿದರೆ, ಜನತೆ ಹೆಚ್ಚಿನ ಬಡ್ಡಿಗಾಗಿ ಬ್ಯಾಂಕೇತರ ಅವಕಾಶದಲ್ಲಿ ಹೂಡಿಕೆಮಾಡಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಟಿಡಿಎಸ್‌ನ್ನು ಪುನರ್‌ಪರಿಶೀಲನೆ ಮಾಡಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಈ ಬೇಡಿಕೆಯ ನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಬ್ಯಾಂಕರು ಗಳು ಪ್ರತಿಪಾ ದಿಸಿರುವುದಾಗಿ ವರದಿಯಾಗಿದೆ. ಕನಿಷ್ಠ ಟಿಡಿಎಸ್ ದರವನ್ನಾ ದರೂ 10ರಿಂದ ಶೇ.5ಕ್ಕೆ ಇಳಿಸಬೇಕು ಎನ್ನುವ ಬೇಡಿಕೆ ಕೇಳಿ ಬರು ತ್ತಿದೆ. ಹಾಗೆಯೇ ಉದ್ಯೋಗ ಪ್ರತಿಯೊಬ್ಬರ ಹಕ್ಕು ಮತ್ತು ಪ್ರತಿ ಯೊಬ್ಬರೂ ಉದ್ಯೋಗ ಮಾಡಲೇಬೇಕು. ಈ ಉದ್ಯೋಗಕ್ಕೂ ತೆರಿಗೆ ಸಮಂಜಸವೇ ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.
ಸಾಮಾಜಿಕ ರಂಗಕ್ಕೆ ಮತ್ತು ಮೂಲಭೂತ ಸೌಕರ್ಯವನ್ನು ಹೆಚ್ಚಿಸಲು ಹೆಚ್ಚಿನ ಅನುದಾನ ಕೊಡಬೇಕಾಗಿರುವ ಅನಿವಾರ್ಯ ತೆಯಲ್ಲಿ ಸರಕಾರ ಇರುವುದರಿಂದ ಆದಾಯಕರ ತೆರಿಗೆದಾರರ ನಿರೀಕ್ಷೆ ಅರಣ್ಯರೋದನವಾಗಬಹುದು ಎನ್ನುವ ಭಯವೂ ಅವರನ್ನು ಕಾಡುತ್ತಿದೆ. ಅದಕ್ಕೂ ಮಿಗಿಲಾಗಿ 7ನೆ ವೇತನ ಆಯೋಗ ಕೇಂದ್ರ ಸರಕಾರಿ ನೌಕರರ ಸಂಬಳ ಹೆಚ್ಚಿಸಲು ಶಿಫಾ ರಸು ಮಾಡಿದ್ದು, ಇದಕ್ಕೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮತ್ತು ತಾತ್ವಿಕ ಒಪ್ಪಿಗೆ ನೀಡಿದ್ದು, ಅದನ್ನು ಜಾರಿಗೊಳಿಸಲು ಸರಕಾರ ತೆರಿಗೆದಾರರು ಕೋರಿದಂತೆ ವಿನಾಯಿತಿ ನೀಡಿದರೆ ತೆರಿಗೆ ಆದಾಯದಲ್ಲಿ ಗಮನಾರ್ಹ ಖೋತಾ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ, ಇದು ಸಾಧ್ಯವೇ ಎನ್ನುವ ಪ್ರಶ್ನೆಯೂ ಇದೆ. ಹಾಗೆಯೇ ಇದೇ ಅನುಪಾತದಲ್ಲಿ ಹೊಸ ತೆರಿಗೆದಾರರ ಸೇರ್ಪಡೆಯಾಗುವುದಿಲ್ಲ.
 ಖ್ಯಾತ ತೆರಿಗೆ, ಆರ್ಥಿಕ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಕಿವಾಲಾರು ತಮ್ಮ ಜೀವಿತ ಅವಧಿಯಲ್ಲಿ ಪ್ರತಿ ಬಜೆಟ್ ಸಮಯದಲ್ಲಿ, ಆದಾಯ ತೆರಿಗೆ ಮಿತಿ ಮತ್ತು ತೆರಿಗೆ ದರವನ್ನು ನಿಷ್ಕರ್ಷಿಸುವಾಗ ಏರುತ್ತಿರುವ ಹಣದುಬ್ಬರ ಪ್ರಮಾಣವನ್ನು ಪರಿಗಣಿಸಬೇಕು ಎಂದು ಮುಂದುವರಿದ ಕೆಲವು ರಾಷ್ಟ್ರಗಳ ಉದಾಹರಣೆ ಸಹಿತ ವಿವರಿಸುತ್ತಿದ್ದರು. ಆದರೆ, ಜ್ಟಟಡಿಜ್ಞಿಜ ್ಛಜಿಠ್ಚಚ್ಝ ಛ್ಛಿಜ್ಚಿಜಿಠಿ ಹೆಸರಿನಲ್ಲಿ ಖಜಾನೆ ತುಂಬಿದಷ್ಟು ತುಂಬಲಿ ಎಂದು ಇಂತಹ ಅರ್ಥಪೂರ್ಣ ತಾರ್ಕಿಕ ಮತ್ತು ಠಿಜಿಞಛಿ ಠಿಛಿಠಿಛಿ ್ಛಟ್ಟಞ್ಠ್ಝವನ್ನು ಕಡೆಗಣಿಸಲಾಗುತ್ತಿದೆ. ಎಷ್ಟೇ ಅರ್ಥಪೂರ್ಣವಾಗಿರಲಿ, ತಾರ್ಕಿಕವಾಗಿರಲಿ, ಈ ಬೇಡಿಕೆಗಳನ್ನು ಎಷ್ಟರಮಟ್ಟಿಗೆ ಕಡೆಗಣಿಸಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News