ಕರಾವಳಿಯ ಸಂಘಟಿತ ಬಹುಮತ ಬಲಪಂಥೀಯರ ವಿರುದ್ಧ....

Update: 2016-02-26 18:25 GMT

ಮಾನ್ಯರೆ,
ಕರಾವಳಿಯಲ್ಲಿ 62 ಜಿಪಂ ಸ್ಥಾನಗಳಲ್ಲಿ 41 ಬಿಜೆಪಿ ಮತ್ತು 21 ಕಾಂಗ್ರೆಸ್ ಪಕ್ಷಗಳಿಗೆ ಸಿಕ್ಕಿವೆ. ಈ ಅಂತಿಮ ಫಲಿತಾಂಶ ನೇರಾನೇರ ಬಿಜೆಪಿ ಪಾರಮ್ಯವನ್ನು ತೋರಿಸುತ್ತಿದೆಯಾದರೂ, 15 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಮತಗಳು ಒಡೆದುಹೋಗಿರುವುದೇ ಬಿಜೆಪಿಯ ಗೆಲುವಿಗೆ ಕಾರಣ ಎಂದು ಹೊರನೋಟಕ್ಕೇ ಕಾಣಿಸುತ್ತಿದೆ.
ಇದಕ್ಕೆ ಕ್ಲಾಸಿಕ್ ಉದಾಹರಣೆ ವಿಠಲ ಮಲೆಕುಡಿಯರು ಸ್ಪರ್ಧಿಸಿದ ಧರ್ಮಸ್ಥಳ ಕ್ಷೇತ್ರ. ಅಲ್ಲಿ ಬಿಜೆಪಿ ಗೆಲುವಿನ ಅಂತರ-1,828. ವಿಠಲ ಮಲೆಕುಡಿಯ, ನೋಟಾ ಸಹಿತ ಒಟ್ಟು ಒಡೆದು ಹೋದ ಮತಗಳು: 2,989. ಇಂತಹದೇ ಸ್ಥಿತಿ ಇರುವ ದ.ಕ.ದ ಇತರ ಕ್ಷೇತ್ರಗಳೆಂದರೆ: ಕಿನ್ನಿಗೋಳಿ, ಪುತ್ತಿಗೆ, ಶಿರ್ತಾಡಿ, ಕಟೀಲು, ಬಜಪೆ, ಎಡಪದವು, ಸೋಮೇಶ್ವರ, ಪುದು, ಲಾಯ್ಲ. ಉಡುಪಿಯಲ್ಲಿ ಕೂಡ ವಂಡ್ಸೆ, ತ್ರಾಸಿ, ಬ್ರಹ್ಮಾವರ, ಎಲ್ಲೂರು, ಪಡುಬಿದ್ರಿ ಕ್ಷೇತ್ರಗಳಲ್ಲಿ ಹೀಗಾಗಿದೆ. ಅಂದರೆ, ಕರಾವಳಿಯ ಒಟ್ಟು ಸುಮಾರು 36 ಕ್ಷೇತ್ರಗಳಲ್ಲಿ ಸಂಘಟಿತ ಬಹುಮತ ಬಲಪಂಥೀಯ ಸಂಘಟನೆಗಳ ವಿರುದ್ಧ ಇದೆ. ಇದು ಗಮನಿಸಬೇಕಾದ ಅಂಶ.
 

Writer - ರಾಜಾರಾಮ್ ತಲ್ಲೂರು

contributor

Editor - ರಾಜಾರಾಮ್ ತಲ್ಲೂರು

contributor

Similar News