ಗೋಧ್ರಾ ರೈಲು ದುರಂತದಲ್ಲಿ ಬದುಕುಳಿದ ಹರಿಪ್ರಸಾದ್ ಜೋಶಿ ಸೀಟ್ ನಂ.72ರಿಂದ ಸೀಟು ನಂ 1 ಕ್ಕೆ ಬಂದಿದ್ದು ಹೇಗೆ ?

Update: 2016-02-28 05:26 GMT

ಗುಜರಾತ್ ನ ಗೋಧ್ರಾದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ  2002 ಫೆಬ್ರವರಿ 27 ರಂದು ನಡೆದ ಬೆಂಕಿ ದುರಂತಕ್ಕೆ ಶನಿವಾರ 14 ವರ್ಷ ಪೂರ್ಣವಾಯಿತು. ಈ ಘಟನೆಯ ಬಳಿಕ ನಡೆದ ಹತ್ಯಾಕಾಂಡ ಗುಜರಾತ್ ನ ರಾಜಕೀಯ ಚಿತ್ರಣವನ್ನೇ ಬದಲಿಸಿಬಿಟ್ಟಿತು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಧಾನಿ. ಈ ಸಂದರ್ಭದಲ್ಲಿ ಸಾಬರಮತಿ ರೈಲಿನೊಳಗಿದ್ದು ಬದುಕಿ ಬಂದ ಹರಿಪ್ರಸಾದ್ ಜೋಷಿ ಅವರು ಗುಜರಾತ್ ಸರಕಾರ ನೇಮಿಸಿದ್ದ ನಾನಾವತಿ ಆಯೋಗಕ್ಕೆ ಸಲ್ಲಿಸಿದ ಹೇಳಿಕೆ ಇಲ್ಲಿದೆ. ಗೋಧ್ರಾ ದುರಂತದ ಬಗ್ಗೆ ಹಬ್ಬಿಸಲಾಗಿರುವ ವಿಷಯಗಳಿಗೂ ಆ ದುರಂತವನ್ನು ಕಣ್ಣಾರೆ ಕಂಡು, ಅನುಭವಿಸಿ ಬದುಕಿ ಬಂದ ಜೋಷಿ ಅವರ ಹೇಳಿಕೆಗೂ ಅಜಗಜಾಂತರವಿದೆ. ನೀವೇ ಓದಿ ನೋಡಿ . 
 

 2002 ಫೆಬ್ರವರಿ 27ರಂದು ಗೋಧ್ರಾ ಸಾಕ್ಷ್ಯಗಳ ಸರಣಿಯಲ್ಲಿ ಭಾಗವಾಗಿರುವ ಅಗ್ನಿಗಾಹುತಿಯಾದ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್6 ಬೋಗಿಯಿಂದ ಹೊರಗೆ ಹಾರಿದ 6 ಕರಸೇವಕರ ಸಾಕ್ಷ್ಯವನ್ನು ನಾವು ಮುಂದಿಟ್ಟಿದ್ದೇವೆ. ಅವರ ಅನುಭವಗಳ ಪ್ರಕಾರ:

1. ಯಾವುದೇ ವ್ಯಕ್ತಿಯು ಬೋಗಿಯ ಒಳಗೆ ಬರುವುದು ಮತ್ತು ಫ್ಲೂಯಿಡನ್ನು ಸುರಿಯುವುದನ್ನು ಅವರು ಕಂಡಿಲ್ಲ.

2. ಬೋಗಿಯ ನೆಲದಲ್ಲಿ ಅವರು ಫ್ಲೂಯಿಡ್ ನೋಡಲಿಲ್ಲ.

3. ವಾಸನೆಯು ಸುಟ್ಟ ರಬ್ಬರಿನಂತೆ ಇತ್ತು.

ಆಗಿನ ಗೋಧ್ರಾದ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ರಾಜು ಭಾರ್ಗವ ನೀಡಿದ ಸಾಕ್ಷ್ಯವನ್ನು ಮುಂದಿಟ್ಟಿದ್ದೇವೆ. ಅವರ ಪ್ರಕಾರ ಎಸ್6 ಬೋಗಿಯ ನೆಲದ ಮೇಲೆ ಅವರು ಜ್ವಾಲೆಗಳನ್ನು ಕಾಣಲಿಲ್ಲ ಮತ್ತು ಪೆಟ್ರೋಲಿನ ವಾಸನೆಯೂ ಇರಲಿಲ್ಲ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 2002 ಫೆಬ್ರವರಿ 27ರಂದು ಘೋಷಿಸಿರುವ ಪ್ರಕಾರ, ಗೋಧ್ರಾ ಪ್ರಕರಣವು ಯಾವುದೇ ಕೋಮುಘರ್ಷಣೆಯ ಪರಿಣಾಮವಲ್ಲ, ಬದಲಾಗಿ ಪೂರ್ವ ಯೋಜಿತ ಭಯೋತ್ಪಾದಕ ಪಿತೂರಿ.

ತದನಂತರ ಮೋದಿ ಸರ್ಕಾರದ ಪೊಲೀಸರು ಸಬರಮತಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಬಿದ್ದಿರುವುದು ಪೂರ್ವ ಯೋಜಿತ ಪಿತೂರಿ ಮತ್ತು ಎಸ್6 ಬೋಗಿಯನ್ನು ಒಂದು ಬದಿಯಿಂದ 60 ಲೀಟರುಗಳಷ್ಟು ಪೆಟ್ರೋಲ್ ಸುರಿದು ಸುಡಲಾಗಿದೆ ಎಂದು ಆರೋಪಿಸಿದರು. ಅಂದು ಸಬರಮತಿ ಎಕ್ಸ್‌ಪ್ರೆಸ್‌ನ ಎಸ್6 ಬೋಗಿಯಲ್ಲಿ ಬರ್ತ್ ನಂ 43ರಲ್ಲಿ ತಮ್ಮ ಪತ್ನಿಯ ಜೊತೆಗೆ ಪ್ರಯಾಣಿಸುತ್ತಿದ್ದ ಶ್ರೀ ಹರಿಪ್ರಸಾದ್ ಜೋಶಿ ಅವರ ಸಾಕ್ಷ್ಯವನ್ನು ಒಮ್ಮೆ ನೋಡೋಣ. ಈ ವಿವರವನ್ನು ಅವರು ಗುಜರಾತ್ ಸರ್ಕಾರ ನೇಮಿಸಿದ ನಾನಾವತಿ ಆಯೋಗದ ಮುಂದೆ ನೀಡಿದ್ದರು.

ಬೋಗಿಯ ನಂ 72 ಬರ್ತ್ ಬಳಿ ಅತಿಯಾದ ಜನಸಂದಣಿ ಇತ್ತು. ನನ್ನ ಜೀವವನ್ನು ಉಳಿಸಿಕೊಳ್ಳಲು ನಾನು ವಿರುದ್ಧ ದಿಕ್ಕಿಗೆ ಸೀಟು ಸಂಖ್ಯೆ 1ರ ಕಡೆಗೆ ನೆಲದ ಮೇಲೆ ತೆವಳುತ್ತಾ ನಡೆದೆ ಮತ್ತು ಕೊನೆಗೆ ಬಲಬದಿಯ ಬಾಗಿಲ ಬಳಿ ತಲುಪಿದೆ. ನನ್ನ ಜಾಕೆಟಿನ ಹಿಂಬದಿ ಭುಜಗಳ ಬಳಿ ಮತ್ತು ಜಾಕೆಟ್ ಕ್ಯಾಪ್ ಬೆಂಕಿಗೆ ಸುಟ್ಟು ಹೋಗಿತ್ತು. ನನ್ನ ಎರಡೂ ಕಿವಿಗಳ ಬಳಿ ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿದ್ದವು. ನಾನು ಸೀಟು ಸಂಖ್ಯೆ 1ರ ಬಳಿ ಇದ್ದ ಬಾಗಿಲಿನಿಂದ ಬೋಗಿಯಿಂದ ಕೆಳಗೆ ಜಿಗಿದೆ.

ಸೀಟು ನಂ 43ರಲ್ಲಿ ಕುಳಿತಿದ್ದ ಹರಿಪ್ರಸಾದ್ ಜೋಶಿ ಉರಿಯುತ್ತಿರುವ ಬೋಗಿಯಿಂದ ತಪ್ಪಿಸಿಕೊಳ್ಳಲು ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ಬರ್ತ್ ನಂ 72 ಕಡೆಗೆ ಸಾಗಿದ್ದರು. ಬರ್ತ್ ನಂ 72ರ ಬಳಿ ಅತಿಯಾದ ಜನಸಂದಣಿ ಇದೆ ಎಂದು ತಿಳಿದಾಗ ಅವರು ತೆವಳುತ್ತಾ ಬರ್ತ್ ನಂ 72ರಿಂದ ನಂ 1ರ ಕಡೆಗೆ ಸಾಗಿದರು ಮತ್ತು ಬರ್ತ್ ನಂ 1ರ ಬಳಿ ಬಾಗಿಲಿನಿಂದ ಹೊರಗೆ ಹಾರಿದರು. ಎಸ್6 ಬೋಗಿಯನ್ನು 60 ಲೀಟರ್ ಪೆಟ್ರೋಲ್ ಬಳಸಿ ಬೆಂಕಿ ಹಾಕಿದ್ದರೆ ಆ ಬೋಗಿಯ ನೆಲದ ಮೇಲೆ ಬೆಂಕಿಯ ಜ್ವಾಲೆಗಳು ಇರಬೇಕಾಗಿತ್ತು. ಹಾಗಿದ್ದರೆ ಬೆಂಕಿಯಲ್ಲಿ ಉರಿಯುತ್ತಿದ್ದ ನೆಲದಲ್ಲೇ ತೆವಳುತ್ತಾ ಪೂರ್ಣ ಬೋಗಿಯನ್ನು ಕ್ರಮಿಸಿ ಹರಿಪ್ರಸಾದ್ ಜೋಶಿ ಇನ್ನೊಂದು ಬದಿಗೆ ಬಂದಿದ್ದಾದರೂ ಹೇಗೆ? ಹರಿಪ್ರಸಾದ್ ಜೋಶಿಗೆ ತೆವಳುವಾಗ ನೆಲದ ಜೊತೆಗೆ ನೇರವಾಗಿ ಸಂಪರ್ಕದಲ್ಲಿರುವ ಕೈಗಳಿಗೆ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳು ಏಕಾಗಿಲ್ಲ. ಆದರೆ ಅವರ ಮುಖ ಮತ್ತು ಕಿವಿಗಳಿಗೆ ಮಾತ್ರ ಏಕೆ ಬೆಂಕಿ ತಗುಲಿವೆ?

ಸತ್ಯವೆಂದರೆ ಎಸ್6 ಬೋಗಿಯನ್ನು ಪೆಟ್ರೋಲ್ ಸುರಿದು ಬೆಂಕಿ ಇಡಲು ಸಾಧ್ಯವಿಲ್ಲ. ಸತ್ಯವೇನೆಂದರೆ ಹಲವು ಸಾಕ್ಷ್ಯಗಳು ನೆಲದ ಮೇಲೆ ಬೆಂಕಿಯ ಜ್ವಾಲೆಗಳು ಇರಲಿಲ್ಲ ಎಂದೇ ಹೇಳಿದ್ದಾರೆ. ಸತ್ಯವೇನೆಂದರೆ ಅನೇಕ ಸಾಕ್ಷ್ಯಗಳು ಪೆಟ್ರೋಲ್ ವಾಸನೆಯೇ ಇರಲಿಲ್ಲ ಎಂದು ಹೇಳಿದ್ದಾರೆ. ಗೋಧ್ರಾ ರೈಲು ಬೆಂಕಿ ಅನಾಹುತ ಪ್ರಕರಣ ಪೂರ್ವ ಯೋಜಿತ ಪಿತೂರಿ ಆಗಿರಲೇ ಇಲ್ಲ ಎನ್ನುವುದು ಕಟುಸತ್ಯ.

courtesy : http://www.truthofgujarat.com/

Writer - ಪ್ರತೀಕ್ ಸಿನ್ಹಾ

contributor

Editor - ಪ್ರತೀಕ್ ಸಿನ್ಹಾ

contributor

Similar News