ನೈತಿಕ ಶೂನ್ಯ ಕಾಂಗ್ರೆಸ್ ಪಕ್ಷವನ್ನು ನಂಬುವುದು ಹೇಗೆ?

Update: 2016-02-29 08:42 GMT

ಅಫ್ಜಲ್ ಗುರು ಮೇಲಿನ ಸ್ಮತಿ ಇರಾನಿ ಭಾಷಣದಿಂದ ಪಿ ಚಿದಂಬರಂ ಹೇಳಿಕೆಗಳವರೆಗೆ ಕಾಂಗ್ರೆಸ್ ನಿಲುವನ್ನು ನೋಡಿದರೆ ಕಳೆದ ಕೆಲವು ದಿನಗಳಿಂದ ಪಕ್ಷದ ನೈತಿಕ ಶೂನ್ಯತೆ ಪೂರ್ಣವಾಗಿ ಪ್ರದರ್ಶನವಾಗಿದೆ. ರಾಜ್ಯಸಭೆಯಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷವು ದುರ್ಗಾ ಮಾತೆಯ ವಿರುದ್ಧ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಿರುವ ವಿರುದ್ಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರ ಕ್ಷಮಾಪಣೆಯ ಬೇಡಿಕೆ ಇಟ್ಟಿದೆ. ರಾಜ್ಯಸಭೆಯ ಉಪಸಭಾಪತಿ ಧರ್ಮವಿರೋಧಿ ಏನಾದರೂ ಇದ್ದರೆ ಅದನ್ನು ದಾಖಲೆಗಳಿಂದ ತೆಗೆಯುವುದಾಗಿ ಭರವಸೆ ನೀಡಿದರು. ಹಾಗೆ ಸಚಿವರ ಮಾತುಗಳನ್ನು ತೆಗೆದು ಹಾಕಲಾಗಿದೆ.
ಜವಹರಲಾಲ್ ನೆಹರು ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುವ ಮನಸ್ಸುಗಳ ಭ್ರಷ್ಟತೆ ಬಗ್ಗೆ ವಿವರಿಸಲು ಸಚಿವೆ ಮಹಿಷಾಸುರ ಹುತಾತ್ಮ ದಿನದ ಕರಪತ್ರದಿಂದ ವಿವರವನ್ನು ಓದುತ್ತಿದ್ದರು. ಸರ್ಕಾರವು ತನ್ನ ಸಂಕುಚಿತ ರಾಷ್ಟ್ರೀಯತಾವಾದದ ಆದರ್ಶಗಳನ್ನು ಹೇರಿ ರೋಹಿತ್ ವೆಮುಲಾ ಮರಣದಲ್ಲಿ ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದೇಶದ್ರೋಹ ಆರೋಪಗಳಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ವಾದಿಸಬೇಕಾಗಿದ್ದ ಚರ್ಚೆಯಲ್ಲಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಮುಖ್ಯ ವಿಷಯವನ್ನೇ ಗೌಣ ಮಾಡಿದೆ. ದಾಳಿ ಮಾಡುವ ಸಚಿವರಂತೆ ಕಾಂಗ್ರೆಸ್ ಪಕ್ಷವೂ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಬಗ್ಗೆ ಅನಕ್ಷರಸ್ಥರೆ? ಬಾಗಶಃ ಅಲ್ಲ. ಆದರೆ ಹಿಂದೂ ವಿರೋಧಿ ಎಂದು ಕರೆಸಿಕೊಳ್ಳುವ ಭಯ ಅವರನ್ನು ಕಾಡಿದೆ.
 
 
ಭಾರತೀಯ ಜನತಾ ಪಕ್ಷ ಏಕೀಕೃತ ಹಿಂದೂ ನಂಬಿಕೆಯ ರಕ್ಷಕನೆಂದು ಹೇಳುತ್ತಾ ಬಂದಿದೆ ಮತ್ತು ಕಾಂಗ್ರೆಸ್ ಹೋರಾಟವೇ ಇಲ್ಲದೆ ಆ ಸ್ಥಾನವನ್ನು ಅದಕ್ಕೆ ಕೊಟ್ಟುಬಿಟ್ಟಿದೆ. ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿ ಹೇಳುತ್ತಿದೆ. ಆದರೆ ಅದನ್ನು ತೋರಿಸುವ ಘಟ್ಟ ಬಂದಾಗ, ಬಿಜೆಪಿಯಿಂದ ಕೆಲವು ಮತದಾರರನ್ನು ತಮ್ಮ ಕಡೆಗೆ ಸೆಳೆಯುವ ಸಾಧ್ಯತೆ ಅಥವಾ ಅವರಿಗೆ ಹೆಚ್ಚು ಮತದಾರರನ್ನು ಕೊಡದೆ ಇರುವುದೇ ಮುಖ್ಯವಾಗಿ, ಯಾವ ಕಡೆಗೆ ಹಾರಬೇಕು ಎನ್ನುವುದು ನಿರ್ಧಾರವಾಗುತ್ತದೆ. ದೇವತೆಯ ಬಗ್ಗೆ ಅವಹೇಳನಕಾರಿಯಾಗಿರುವುದನ್ನು ಓದಿದ ವಿವರಗಳನ್ನು ಸಂಸತ್ತಿನ ದಾಖಲೆಗಳಿಂದ ತೆಗೆದು ಹಾಕಲು ಕಾಂಗ್ರೆಸ್ ಹೋರಾಡುತ್ತದೆಯೇ ವಿನಾ, ತಾನು ಶಪಥ ಮಾಡಿರುವ ಸಂವಿಧಾನವು ಎಲ್ಲಾ ರೀತಿಯ ಕಲ್ಪನೆಗಳು ಮತ್ತು ಅಭಿಪ್ರಾಯಗಳನ್ನು ಗೌರವಿಸುವ ಮತ್ತು ರಕ್ಷಿಸುವುದಕ್ಕೆ ಬದ್ಧವಾಗಿದೆ ಮತ್ತು ಯಾವುದೇ ಒಂದು ಉಲ್ಲೇಖದ ವ್ಯಾಖ್ಯಾನ ಅಥವಾ ಅಪರಾಧವನ್ನು ಜನರನ್ನು ರಾಷ್ಟ್ರವಿರೋಧಿ ಎಂದು ಹಣೆಪಟ್ಟಿಕಟ್ಟಲು ಬಳಸುವಂತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವಂತೆ ಸಚಿವೆಗೆ ಸವಾಲು ಹಾಕಲು ಮುಂದಾಗುವುದಿಲ್ಲ. ಬುಧವಾರ ಚರ್ಚೆಯ ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಜ್ಯೋತಿರಾಧಿತ್ಯ ಸಿಂಧಿಯಾ ಮುಖ್ಯ ವಿಷಯಗಳನ್ನು ಗುರುತಿಸುವ ಕೆಲಸಕ್ಕೆ ಮುನ್ನುಡಿ ಬರೆದಿದ್ದರು. ಬಿಜೆಪಿ ಸರ್ಕಾರದ ಸಂಕುಚಿತ ರಾಷ್ಟ್ರೀಯತಾವಾದದ ವ್ಯಾಖ್ಯಾನವನ್ನು ಹೇರುವ ಪ್ರಯತ್ನವು ಹೇಗೆ ರೋಹಿತ್ ವೆಮುಲಾನ ಮರಣಕ್ಕೆ ಕಾರಣವಾಗಿದೆ ಮತ್ತು ದೇಶದ್ರೋಹದ ಕಾನೂನುಗಳು ಹೇಗೆ ಜೆಎನ್‌ಯು ವಿದ್ಯಾರ್ಥಿಗಳನ್ನು ಅಪರಾಧಿಗಳೆಂದು ಘೋಷಿಸಲು ಬಳಸಲಾಗುತ್ತದೆ ಎನ್ನುವುದನ್ನು ಹೇಳಿದ್ದರು. ಇರಾನಿಯ ಧಾರವಾಹಿ ಶೈಲಿಯ ಪ್ರದರ್ಶನವು ಚರ್ಚೆಯ ವಿಷಯದ ದಾರಿ ತಪ್ಪಿಸಿದಾಗ, ಸಂಸತ್ತಿನಲ್ಲಿ ಆಕೆ ಹೇಳಿದ ಸುಳ್ಳುಗಳನ್ನು ಪ್ರಶ್ನಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಅದರ ಬದಲಾಗಿ, ಇರಾನಿ ತಮ್ಮ ವಾದಕ್ಕೆ ಬಳಸಿದ ಪಠ್ಯ ವಿಷಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಒತ್ತಡ ಹೇರಲಾರಂಭಿಸಿದರು. ಈ ಯುದ್ಧದಲ್ಲಿ ಬಿಜೆಪಿ ಸ್ವಾತಂತ್ರ್ಯ ಮತ್ತು ರಾಷ್ಟ್ರವೆನ್ನುವ ಕಲ್ಪನೆಯ ಮೇಲೆ ದಾಳಿ ಮಾಡುತ್ತಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ ಮತ್ತೊಂದು ಹೋರಾಟವನ್ನು ಸೋತಿದೆ. ದಶಕಗಳಿಂದ ಕಾಂಗ್ರೆಸ್ ರಾಷ್ಟ್ರೀಯ ಉದ್ದೇಶಗಳಿಲ್ಲದ ಪಕ್ಷವಾಗಿ ಸಾಬೀತಾಗಿದೆ. ವಿಭಜಕ ಹಿಂದುತ್ವ ಆದರ್ಶಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹೊರಬಂದ ಭಾರತ ಎನ್ನುವ ಕಲ್ಪನೆಯನ್ನು ರಕ್ಷಿಸಿಕೊಳ್ಳುವಲ್ಲಿ ಅದರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ. ಬಿಜೆಪಿ ಒಂದು ರಾಜಕೀಯ ಪಡೆಯಾಗಿ ಬೆಳೆಯುತ್ತ ಬಂದಾಗ ಅದರ ಆದರ್ಶ ಮತ್ತು ಗುರಿ ಸ್ಪಷ್ಟವಾಗಿತ್ತು. ಅದರ ಬಹುಸಂಖ್ಯಾತ ಕಲ್ಪನೆಯ ಮೇಲೆ ವ್ಯವಸ್ಥಿತವಾಗಿ ಸವಾಲೊಡ್ಡುವ ಸಾಮರ್ಥ್ಯವನ್ನು ಕಾಂಗ್ರೆಸ್ ಹೊಂದಿಲ್ಲ ಎಂದು ತೋರಿಸಿಕೊಟ್ಟಿತು. ಅದು ಹಾಗೆ ಮಾಡಲು ಸಾಧ್ಯವಾಗಿಲ್ಲ ಏಕೆಂದರೆ, ಅದು ಇಂತಹ ರಾಜಕೀಯಕ್ಕಾಗಿಯೇ ಜಾಗವನ್ನು ಸೃಷ್ಟಿಸಿಕೊಂಡಿದೆ. ತನ್ನ ಸಂಕುಚಿತ ಗುರುತನ್ನು ವೋಟ್ ಬ್ಯಾಂಕುಗಳು ಮತ್ತು ಕಲ್ಯಾಣ ಯೋಜನೆಗಳಿಗೆ ಸೀಮಿತವಾಗಿಸಿಕೊಂಡಿದೆಯೇ ವಿನಾ ಜಾತಿಗಳು ಮತ್ತು ವರ್ಗಗಳ ನಡುವಿನ ಅಧಿಕಾರದ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಚ್ಚೇನೂ ಮಾಡಿಲ್ಲ.
ಎರಡು ಪ್ರಕ್ಷುಬ್ದ ದಶಕಗಳು
ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ಸಿನ ಪೂರ್ವಜರು ಹೋರಾಡಿ ಪಡೆದ ಭಾರತ ಎನ್ನುವ ಕಲ್ಪನೆಯನ್ನು ಮತ್ತು ಅವುಗಳು ಹೊಂದಿರುವ ಸಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ನಾಯಕತ್ವ ತೋರಿಸುವ ಅಗತ್ಯ ಬಂದಾಗಲೆಲ್ಲ ಕಾಂಗ್ರೆಸ್ ವಿಫಲವಾಗಿದೆ. ಕಳೆದ ಎರಡು ದಶಕಗಳಲ್ಲಿ ಎರಡು ಉದಾಹರಣೆಗಳನ್ನು ಕಾಣಬಹುದು. ಮೊದಲನೆಯದು 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಕಾಂಗ್ರೆಸ್ ನಡವಳಿಕೆ ಮತ್ತು ಆ ವರ್ಷದ ಅಂತ್ಯದಲ್ಲಿ ಅದು ತನ್ನ ವಿಧಾನಸಭಾ ಚುನಾವಣೆಯ ಅಭಿಯಾನವನ್ನು ಹೇಗೆ ಮುಂದಿಟ್ಟಿತು ಎನ್ನುವುದು. ಮುಸ್ಲಿಮರನ್ನು ಹತ್ಯೆ ಮಾಡಿದ ಸಮಯದಲ್ಲಿ ಗುಜರಾತಿನಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತು. ಗುಜರಾತ್ ಸರ್ಕಾರದ ಹಿಂಸಾತ್ಮಕ ಅಭಿಯಾನಕ್ಕೆ ಅವರು ಸವಾಲೊಡ್ಡಲೇ ಇಲ್ಲ. ದಾಳಿಗೊಳಗಾದ ಕ್ಷೇತ್ರಗಳಿಗೆ ಬೆಂಬಲ ನೀಡಿದರೂ ಅದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲಿಲ್ಲ. ಚುನಾವಣೆಗೆ ಕಾಂಗ್ರೆಸ್ ಎರಡು ಪ್ರಣಾಳಿಕೆ ಸಿದ್ಧಪಡಿಸಿತ್ತು. ಒಂದು ಇಂಗ್ಲಿಷಿನಲ್ಲಿತ್ತು ಮತ್ತು ರಾಜ್ಯದ ಹೊರಗಿನವರೇ ಅದನ್ನು ಓದಿದ್ದರು ಅಥವಾ ಗುಜರಾತಿಯೇತರು ಓದಿದರು. ಮತ್ತೊಂದು ಗುಜರಾತಿ ಭಾಷೆಯಲ್ಲಿತ್ತು. ಇಂಗ್ಲಿಷ್ ಪ್ರಣಾಳಿಕೆಯಲ್ಲಿ ವಿಧಾನಸಭಾ ಚುನಾವಣೆಯು ಸಂಕುಚಿತ ಮನಸ್ಥಿತಿಯ ಕೋಮುವಾದಿ ಪಡೆಗಳ ವಿರುದ್ಧ ಹೋರಾಟ ಮತ್ತು ಇನ್ನೊಂದೆಡೆ ಜಾತ್ಯತೀತ ಪಡೆಗಳಿದೆ ಎಂದು ಹೇಳಿದೆ. ಜಾತ್ಯತೀತವಾದವು ನಮ್ಮ ರಾಷ್ಟ್ರದ ಮೂಲಾಧಾರ. ವಿಧಾನಸಭಾ ಚುನಾವಣೆಯು ಭಾರತ ರಾಷ್ಟ್ರ ಮತ್ತು ಭಾರತದ ಎಲ್ಲಾ ಸಮುದಾಯಗಳೂ ಕಾಣಿಕೆ ನೀಡಿರುವ ಪರಂಪರೆಯ ರಕ್ಷಣೆಗಾಗಿ ಹೋರಾಟ ಎಂದು ಹೇಳಿದೆ. ಆದರೆ ಗುಜರಾತಿ ಪ್ರಣಾಳಿಕೆಯಲ್ಲಿ ಜಾತ್ಯತೀತವಾದ, ರಾಷ್ಟ್ರ ಅಥವಾ ಭಾರತವನ್ನು ರೂಪಿಸುವ ಜನರ ಬಹುತ್ವದ ಬಗ್ಗೆ ಏನೂ ಇರಲಿಲ್ಲ. ಗುಜರಾತಿನಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಬಿಜೆಪಿಯ ಅಭಿಪ್ರಾಯವನ್ನು ನಿರಾಕರಿಸಿರಲಿಲ್ಲ. ನಿರಾಕರಿಸಿದ್ದಲ್ಲಿ, ಅದರ ಬಳಿ ಬಿಜೆಪಿಯ ಕಾರ್ಯಕ್ರಮವು ಮುಂದೊಡಿದ್ದ ತೀವ್ರತಮ ಕೋಮುವಾದದ ಸವಾಲೊಡ್ಡುವ ಒಂದು ಕಲ್ಪನೆ ಅಥವಾ ಕಾರ್ಯಕ್ರಮವು ತನ್ನಲಿದೆ ಎಂದು ಅದು ನಂಬಿರಲಿಲ್ಲ. ಮೌನವಾಗಿ ನಿಲ್ಲುವ ಮೂಲಕ ಈಗಾಗಲೇ ತನ್ನ ಬಳಿ ಇದೆ ಎಂದು ಪಕ್ಷ ಯೋಚಿಸಿದ್ದನ್ನು ಕಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಅದು ನಂಬಿತ್ತು. ಆದರೆ ಈ ಪ್ರಯತ್ನದಲ್ಲಿ ಅದು ಇನ್ನಷ್ಟು ಕಳೆದುಕೊಂಡಿದೆ.
 
ಎರಡನೇ ಅವಕಾಶ ಇದ್ದದ್ದು ಸಾರ್ವತ್ರಿಕ ಚುನಾವಣೆ ಸಮೀಪದಲ್ಲಿದ್ದಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2013ರಲ್ಲಿ ಅಫ್ಜಲ್ ಗುರು ನೇಣಿಗೇರಿಸಿದಾಗ. ಸ್ಪಷ್ಟವಾಗಿ ಗುಜರಾತಿನ ಪ್ರಣಾಳಿಕೆಯ ಉತ್ಸಾಹದಲ್ಲಿಯೇ ಅಫ್ಜಲ್ ನೇಣಿನ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಬಿಜಪಿಯ ರಾಷ್ಟ್ರವಾದಿ ಎನ್ನುವ ಹೇಳಿಕೆಯನ್ನು ಸರಿಗಟ್ಟುವ ಪ್ರಯತ್ನ. ಕಾಂಗ್ರೆಸ್ ಭಯೋತ್ಪಾದನೆ ವಿಚಾರವಾಗಿ ಮೃದು ಧೋರಣೆ ತಾಳಿರುವ ಆರೋಪ ಅಥವಾ ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ರಾಷ್ಟ್ರದ ಕಡೆಗೆ ಬದ್ಧತೆಯಿಲ್ಲ ಎನ್ನುವ ಬಿಜೆಪಿಯ ಪ್ರಚಾರಾಭಿಯಾನಕ್ಕೆ ಅಫ್ಜಲ್ ಗುರು ಮುಖ್ಯ ಉದಾಹರಣೆಯಾಗಿದ್ದ. ಮತ್ತೊಮ್ಮೆ ಬಿಜೆಪಿಗೆ ಸವಾಲೊಡ್ಡುವ ಬದಲಾಗಿ ಕಾಂಗ್ರೆಸ್ ಬಾಲ ಮುದುರಿತು. ಅಫ್ಜಲ್ ನೇಣಿನಿಂದ ಕಾಂಗ್ರೆಸ್ಸಿಗೆ ಓಟುಗಳೂ ಬೀಳಲಿಲ್ಲ ಮತ್ತು ಬಿಜೆಪಿ ಪ್ರತೀ ಬಾರಿ ರಾಷ್ಟ್ರವಾದಿ ಮತ್ತು ರಾಷ್ಟ್ರವಿರೋಧಿ ಅಭಿಯಾನವನ್ನು ಮಾಡುವಾಗ ಅಫ್ಜಲ್ ಹೆಸರು ತೆಗೆಯುವುದನ್ನು ಬಿಡಲೇ ಇಲ್ಲ. ನೈತಿಕ ಶೂನ್ಯತೆ
 
ಕಾಂಗ್ರೆಸ್ ಪಕ್ಷದ ನೈತಿಕ ಶೂನ್ಯತೆಯು ಜೆಎನ್‌ಯು ವಿದ್ಯಾರ್ಥಿಗಳ ದೇಶದ್ರೋಹ ಆರೋಪಗಳ ಸಂದರ್ಭದಲ್ಲಿ ಪಿ ಚಿದಂಬರಂ ಹೇಳಿರುವ ಮಾತುಗಳಲ್ಲಿ ತಿಳಿದುಕೊಳ್ಳಬಹುದು: ಆತ ಸೇರಿಕೊಂಡಿದ್ದ (ಸಂಸತ್ ದಾಳಿ ಪಿತೂರಿಯಲ್ಲಿ) ಎನ್ನುವುದರ ಮೇಲೆ ದೊಡ್ಡ ಸಂಶಯಗಳಿವೆ ಮತ್ತು ಆತ ಸೇರಿಕೊಂಡಿದ್ದರೂ, ಆತನ ಒಳಗೊಳ್ಳುವಿಕೆಯ ಪ್ರಮಾಣದ ಮೇಲೆ ಅತೀವ ಸಂಶಯಗಳಿವೆ. ಆತನ ಉಳಿದ ಸಹಜ ಜೀವಿತಾವಧಿಯಲ್ಲಿ ಪೆರೋಲ್ ನೀಡದೆಯೇ ಜೈಲಿನಲ್ಲಿ ಬಂಧಿಸಬಹುದಾಗಿತ್ತು. ಚಿದಂಬರಂ ಈ ಮಾತು ಹೇಳಿದ್ದಕ್ಕೆ ಪ್ರಶಂಸೆ ಪಡೆದಿರಬಹುದು, ಆದರೆ ಗೃಹಸಚಿವರು ರಾಷ್ಟ್ರಪತಿಗಳಿಗೆ ಅಫ್ಜಲ್ ಕ್ಷಮಾದಾನವನ್ನು ನಿರಾಕರಿಸುವಂತೆ ಸಲಹೆ ನೀಡಿದಾಗ, ಅವರ ಸರ್ಕಾರವು ಈ ಪ್ರಕರಣದಿಂದ ಏಳಬಹುದಾದ ರಾಜಕೀಯ ಟೀಕೆಗಳನ್ನು ಸಹಿಸಲು ಸಿದ್ಧವಿರಲಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈಗ ಅಧಿಕಾರದಿಂದ ದೂರವಾಗಿದ್ದುಕೊಂಡು, ಅಫ್ಜಲ್ ತಿಹಾರ್ ಜೈಲಿನಲ್ಲಿ ಆರು ಅಡಿ ಆಳದಲ್ಲಿ ಸಮಾಧಿಯಾಗಿರುವಾಗ ಚಿದಂಬರ್ ಸರ್ಕಾರವು ಆತನನ್ನು ನೇಣಿಗೇರಿಸಬಾರದಾಗಿತ್ತು ಎಂದು ಹೇಳಲು ಹಿಂಜರಿಯುವುದಿಲ್ಲ. ಆತನ ಸರ್ಕಾರವು ರಾಜಕೀಯ ವಿರೋಧವನ್ನು ಸಹಿಸುವ ಬದಲಾಗಿ ಒಬ್ಬ ವ್ಯಕ್ತಿಗೆ ನೇಣು ವಿಧಿಸುವುದೇ ಸೂಕ್ತ ಎಂದುಕೊಂಡಿದೆ ಎನ್ನುವ ಅರ್ಥ ಅವರ ಮಾತಿನಲ್ಲಿದೆ.
ಕಾಂಗ್ರೆಸ್ ಸ್ವತಃ ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತವಾದ ಮತ್ತು ನ್ಯಾಯಬದ್ಧ ವಿಚಾರಣೆಯ ಹಕ್ಕುಗಳ ಸಾಂವಿಧಾನಿಕ ಮೌಲ್ಯಗಳ ರಕ್ಷಕ ಎಂದು ಹೇಳಿಕೊಳ್ಳಲು ಬಯಸುತ್ತದೆ. ಆದರೆ ವಾಸ್ತವದಲ್ಲಿ ಅದನ್ನು ಸಾಬೀತುಪಡಿಸಬೇಕಾಗಿ ಬಂದಾಗ ಅದನ್ನು ತೋರಿಸುವುದಿಲ್ಲ. ಒಂದು ಪಕ್ಷವಾಗಿ ಯಾವುದೇ ನಿಲುವು ತೋರಿಸದೆ ಇರುವಾಗ ಸಂಸತ್ತಿನ ಒಬ್ಬ ಸದಸ್ಯ ಅಥವಾ ಪಕ್ಷದ ಕಾರ್ಯಕರ್ತ ಮಾತನಾಡುವುದರಲ್ಲಿ ಏನೂ ವ್ಯತ್ಯಾಸ ಕಾಣದು.
 
courtesy: Scroll.in

Writer - ಅಂಜಲಿ ಮೋದಿ

contributor

Editor - ಅಂಜಲಿ ಮೋದಿ

contributor

Similar News