ಹಸುಗೂಸಿನ ಸೋಂಕಿಗೆ ಸಿಗುತ್ತದೆ ಎದೆಹಾಲಿನಲ್ಲೇ ಪರಿಹಾರ !

Update: 2016-02-29 08:35 GMT

 ಮಗು ಜನಿಸಿದ ಮೊದಲ ಗಂಟೆಯಿಂದಲೇ ಅಮ್ಮ ಹಸುಗೂಸಿಗೆ ಸ್ತನ್ಯಪಾನ ನೀಡುತ್ತಾಳೆ. ಆದರೆ ಮೊಲೆಯುಣಿಸುವುದು ಮುಂದುವರಿಸುತ್ತಿದ್ದಂತೇ ಮಗುವಿನ ಅಗತ್ಯಕ್ಕೆ ತಕ್ಕಂತೆ ಸ್ತನ್ಯಪಾನದ ಸಂಯೋಜನೆ ಬದಲಾಗುತ್ತದೆ ಎನ್ನುವುದು ಕೆಲವರಷ್ಟೇ ತಿಳಿದಿದ್ದಾರೆ. ಅರಕನ್ಸಸ್‌ನ ತಾಯಿ ಮಲೋರಿ ಸ್ಮೂತರ್ಸ್‌ ಇದನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಮಲೋರಿ ಮಗುವಿಗೆ ಶೀತವಾದಾಗ ಮತ್ತು ಅದಕ್ಕೆ ಮೊದಲು ಆಕೆ ತಮ್ಮ ಎದೆಹಾಲನ್ನು ಸಂಗ್ರಹಿಸಿಟ್ಟ ಫೋಟೋಗಳು ಅವರು ನೀಡಿದ ವಿವರಗಳ ಜೊತೆಗೆ ಈಗ ಅಂತರ್ಜಾಲದಲ್ಲಿ ಜನಪ್ರಿಯವಾಗಿದೆ. ಮಲೋರಿ ವೈದ್ಯಕೀಯ ಪತ್ರಿಕೆಯಲ್ಲಿ ಓದಿರುವಂತೆ ಮಗು ಹಾಲನ್ನು ಸೇವಿಸುತ್ತಿರುವಾಗ ಅದಕ್ಕೆ ಬೇಕಾದ ನಿರೋಧಕ ಶಕ್ತಿಯನ್ನೂ ಗ್ರಹಿಸಿ ತಾಯಿಯ ದೇಹದಿಂದ ಹಾಲಿನ ಮೂಲಕ ಪ್ರಸಾರವಾಗುತ್ತದೆ.

ಬ್ಯಾಕ್ಟೀರಿಯಗಳು ಮತ್ತು ವೈರಸ್‌ಗಳನ್ನು ಪತ್ತೆ ಹಚ್ಚುವ ತಾಯಿಯ ದೇಹ ಅದಕ್ಕೆ ತಕ್ಕಂತೆ ಸೋಂಕಿನ ವಿರುದ್ಧ ಹೋರಾಟಕ್ಕೆ ಹಾಲಿನ ಮೂಲಕ ನಿರೋಧಕ ಶಕ್ತಿಯ ಸಂಯೋಜನೆಯನ್ನು ಕೊಡುತ್ತದೆ. ವಿಜ್ಞಾನ ವಾಸ್ತವದಲ್ಲಿ ಇದನ್ನು ಕಂಡುಕೊಂಡು ನಿಜವೆಂದು ಈಗಾಗಲೇ ಹೇಳಿದೆ. ರಾತ್ರಿ ಮಲಗುವ ಮೊದಲು ಮಲೋರಿ ತನ್ನ ಮಗುವಿಗಾಗಿ ಎದೆಹಾಲನ್ನು ಪ್ಯಾಕೆಟ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದಳು. ಸಾಮಾನ್ಯವಾಗಿ ಪ್ರತೀ ರಾತ್ರಿ ಮಗುವಿಗೆ ಎರಡು ಗಂಟೆಗೊಮ್ಮೆ ಅವರು ಹಾಲುಣಿಸುತ್ತಾರೆ. ಆದರೆ ಬೆಳಿಗ್ಗೆ ಏಳುವವರೆಗೂ ಮತ್ತೆ ಎದೆಹಾಲು ಬಳಸುವುದಿಲ್ಲ. ಮರುದಿನ ಬೆಳಗಿನ ಜಾವ ಮಗುವಿಗೆ ಶೀತವಾಗಿರುವುದು ತಾಯಿಗೆ ಕಂಡು ಬಂದಿತ್ತು. ಅಂದು ಬೆಳಿಗ್ಗೆ ತಾಯಿ ಎದೆಹಾಲನ್ನು ತೆಗೆದಾಗ ಬಣ್ಣವೇ ಬದಲಾಗಿತ್ತು. ಆ ಹಾಲಿನಲ್ಲಿ ನಿರೋಧಕ ಶಕ್ತಿಗಳು ಮತ್ತು ಲ್ಯೂಕೋಸೈಟುಗಳು ಇದ್ದು, ಮಗುವಿನ ಶೀತಕ್ಕೆ ಔಷಧಿಯನ್ನು ಕೊಟ್ಟಿದೆ. ಹೀಗೆ ಮಲೋರಿ ಲಕೋಟೆಗಳಲ್ಲಿ ತುಂಬಿಟ್ಟ ಎರಡು ಭಿನ್ನ ಸ್ತನ್ಯಪಾನಗಳ ಈ ಫೋಟೋ ಈಗ ಜನಪ್ರಿಯವಾಗಿದೆ. ಮಾನವ ದೇಹ ನನಗೆ ಬಹಳ ಅಚ್ಚರಿಯನ್ನುಂಟು ಮಾಡುತ್ತದೆ ಎನ್ನುವುದು ವಾಸ್ತವವನ್ನು ಕಂಡ ಮೇಲೆ ಆಕೆಯ ಉದ್ಘಾರವಾಗಿದೆ. ಅಮ್ಮಂದಿರು ನಿಜವಾಗಿಯೂ ಪ್ರಬಲ ಶಕ್ತಿವಂತರು ಎನ್ನುವುದು ನಮಗೆಲ್ಲಾ ಗೊತ್ತಿದೆ. ಆದರೆ ಅವರ ಶಕ್ತಿಗಳನ್ನು ಕಾಣುತ್ತಾ ಹೋದಂತೆ ಗೌರವ ಹೆಚ್ಚುತ್ತಾ ಹೋಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News