ಕನ್ಹಯ್ಯಾ quotes

Update: 2016-03-04 05:47 GMT

"ಭಾರತದಿಂದ ಸ್ವಾತಂತ್ರ್ಯಕ್ಕಾಗಿ ಎಂದೂ ಆಗ್ರಹಿಸಿರಲಿಲ್ಲ; ಆಂತರಿಕ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ"

"ಮೋದೀಜಿ ಕೇವಲ ಮನ್ ಕಿ ಬಾತ್ ಹೇಳುತ್ತಾರೆ. ಅದನ್ನು ಆಲಿಸುವುದಿಲ್ಲ"

"ದೇಶವನ್ನು ಕೊಳ್ಳೆ ಹೊಡೆಯುವವರಿಂದ ನಮಗೆ ಸ್ವಾತಂತ್ರ್ಯ ಬೇಕಾಗಿದೆ"

"ನಾನು ಹಳ್ಳಿಗಾಡಿನಿಂದ ಬಂದವನು. ಅಲ್ಲಿ ಮ್ಯಾಜಿಕ್ ಪ್ರದರ್ಶನ ಇರುತ್ತದೆ. ಜನ ಮ್ಯಾಜಿಕ್ ಪ್ರದರ್ಶಿಸಿ, ಎಲ್ಲ ಬಯಕೆಗಳನ್ನೂ ಈಡೇರಿಸುವ ಉಂಗುರ ಮಾರುತ್ತಾರೆ...ನಮ್ಮ ದೇಶದಲ್ಲೂ ಅಂಥ ಕೆಲ ವ್ಯಕ್ತಿಗಳಿದ್ದಾರೆ. ಅವರು ಕಪ್ಪುಹಣ ಬರುತ್ತದೆ ಎನ್ನುತ್ತಾರೆ. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್"

ಭಾರತೀಯರು ಬೇಗನೆ ಎಲ್ಲವನ್ನೂ ಮರೆಯುತ್ತಾರೆ. ಆದರೆ ಈ ಬಾರಿ ಈ ದೊಡ್ಡ ತಮಾಷೆಯನ್ನು, ವಂಚನೆಯನ್ನು ಮರೆಯಲಾಗದು

ಮೋದಿ ಜತೆಗೆ ಎಷ್ಟೇ ಭಿನ್ನಾಭಿಪ್ರಾಯವಿದ್ದರೂ, ಅವರ ಟ್ವೀಟ್, "ಸತ್ಯಮೇವ ಜಯತೇ" ಎನ್ನುವುದನ್ನು ಒಪ್ಪುತ್ತೇನೆ"

"ಈ ಪ್ರಕರಣದ ಹಿನ್ನೆಲೆಯಯಲ್ಲಿ ಯಾರ ಬಗ್ಗೆಯೂ ಕೆಟ್ಟ ಅಭಿಪ್ರಾಯಗಳು ನನಗಿಲ್ಲ. ಎಬಿವಿಪಿ ಬಗ್ಗೆ ದ್ವೇಷಸಾಧನೆ ಮಾಡುವುದೂ ಇಲ್ಲ. ಏಕೆಂದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮ್ಮ ವಿರೋಧ ಪಕ್ಷ ಎಂಬ ರೀತಿಯಲ್ಲಿ ಅವರನ್ನು ಪರಿಗಣಿಸುತ್ತೇವೆ"

"ಜೆಎನ್‌ಯು ಪ್ರವೇಶ ಪಡೆಯುವುದು ಸುಲಭವಲ್ಲ; ಅಂತೆಯೇ ಜೆಎನ್‌ಯು ಧ್ವನಿಯನ್ನು ಅಡಗಿಸುವುದೂ ಸುಲಭವಲ್ಲ"

"ಮೋದಿಯವರು ಮಾತನಾಡುವಾಗ ಹಿಟ್ಲರ್ ಅವರನ್ನೂ ಉಲ್ಲೇಖಿಸಬೇಕು ಎಂದು ನಾನು ಬಯಸುತ್ತೇನೆ. ತಮ್ಮ ಗುರು ಗೋಲ್ವಾಳ್ಕರ್ ಅವರ ಬಗ್ಗೆ ಉಲ್ಲೇಖಿಸುವಂತೆ, ಗೋಲ್ವಾಳ್ಕರ್ ಭೇಟಿ ಮಾಡಿದ್ದ ಮುಸಲೋನಿ ಬಗ್ಗೆಯೂ ಉಲ್ಲೇಖಿಸಬೇಕು. "

"ನೀವು ಸರ್ಕಾರದ ವಿರುದ್ಧ ಮಾತನಾಡಿದರೆ, ಅವರ ಸೈಬರ್ ಘಟಕ ತಿರುಚಿದ ವಿಡಿಯೊ ಮೂಲಕ ನಿಮ್ಮ ವಿರುದ್ಧ ಆರೋಪ ಮಾಡುತ್ತದೆ ಹಾಗೂ ನಿಮ್ಮ ಹಾಸ್ಟೆಲ್‌ನಲ್ಲಿರುವ ಕಾಂಡೋಂಗಳನ್ನು ಲೆಕ್ಕಹಾಕುತ್ತದೆ"

"ಗಡಿಯಲ್ಲಿ ದೇಶಕ್ಕಾಗಿ ಮಡಿಯುವ ಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ. ಆದರೆ ಬಡತನದ ಬೇಗೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕಥೆ ಏನು? ಅಂಥ ಹಲವು ಮಂದಿ ಯೋಧರ ತಂದೆಯಂದಿರು ಕೃಷಿಕರು. ನನ್ನ ತಂದೆ ಕೃಷಿಕ; ನನ್ನ ಸಹೋದರ ಸೈನಿಕ"

ಅವರಲ್ಲಿ ( ಪೋಲಿಸರಲ್ಲಿ)  ಬಹುತೇಕ ಮಂದಿ ಬಡಕುಟುಂಬಗಳಿಂದ ಬಂದವರು. ದೇಶದಲ್ಲಿ ಭ್ರಷ್ಟಾಚಾರ ಹಾಗೂ ಜಾತಿಪದ್ಧತಿಯಿಂದ ಮುಕ್ತಿಗಾಗಿ ಹೋರಾಟ ನಡೆಸುವುದನ್ನು ಅವರೂ ಅನುಮೋದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News