ನಿಮಗೆ ಗೊತ್ತೇ ? ಇಂದಿಗೆ 50 ವರ್ಷ ಮೊದಲು ಇಂದಿರಾಗಾಂಧಿ ಸೇನೆಯಿಂದ ತನ್ನದೇ ನಾಗರೀಕರ ಮೇಲೆ ಬಾಂಬ್ ದಾಳಿ ಮಾಡಿಸಿದ್ದರು

Update: 2016-03-05 06:32 GMT


ಇಂದು ಮಾರ್ಚ್ 5, ಪ್ರಸಕ್ತ ಮಿಜೋರಂನ ರಾಜಧಾನಿಯಾಗಿರುವ ಐಜವಾಲ್ ಪಟ್ಟಣದ ಮೇಲೆ ಭಾರತೀಯ ವಾಯಪಡೆ ಬಾಂಬ್ ದಾಳಿ ಆರಂಭಿಸಿದ ದಿನದ 50ನೇ ವರ್ಧಂತಿ. ಇದು ದೇಶದ ಇತಿಹಾಸದಲ್ಲಿಯೇ ಅದರ ವಾಯುಸೇನೆ ದೇಶದ ನಾಗರಿಕ ಪ್ರದೇಶವೊಂದರ ಮೇಲೆ ಬಾಂಬ್ ದಾಳಿ ನಡೆಸಿದ ಪ್ರಥಮ ದೃಷ್ಟಾಂತ. ಈ ಘಟನೆ ನಡೆದು 50 ವರ್ಷಗಳಾಗಿರುವ ಇಂದಿನ ದಿನ ಈ ಬಾಂಬ್ ದಾಳಿ ನಡೆಸಬೇಕಿತ್ತೇ ಅಥವಾ ಅದನ್ನು ನಡೆಸಬೇಕಾಗಿ ಬಂದ ಸಂದರ್ಭಗಳಿತ್ತೇ ಎಂಬುದನ್ನು ಚರ್ಚಿಸಲು ಸಕಾಲ.
ಇದೆಲ್ಲಾ ಆರಂಭವಾಗಿದ್ದು 1961ರಲ್ಲಿ. ಆಗ ಮಿಜೋ ಪರ್ವತ ಪ್ರದೇಶಗಳು ಅಸ್ಸಾಂ ರಾಜ್ಯದ ಭಾಗವಾಗಿದ್ದವು. ಅದೇ ವರ್ಷದ ಅಕ್ಟೋಬರ್ 28ರಂದು ಸ್ಥಾಪನೆಯಾದ ಮಿಜೋ ನ್ಯಾಷನಲ್ ಫ್ರಂಟ್ ಸ್ವಯಂ ನಿರ್ಣಯತೆಗೆದುಕೊಳ್ಳುವ ತನ್ನ ಹಕ್ಕನ್ನು ಪ್ರತಿಪಾದಿಸಲಾರಂಭಿಸಿತ್ತು. ಆರಂಭದಲ್ಲಿ ಅಹಿಂಸಾ ವಿಧಾನದಿಂದ ಹೋರಾಟ ನಡೆಸಿದಈ ಫ್ರಂಟ್ ಮುಂದೆ ಸುರಕ್ಷಾ ಪಡೆಗಳಿಂದ ನಡೆದ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಂದ ಬೇಸತ್ತು ಶಸ್ತ್ರಾಸ್ತ್ರ ಕೈಗೆತ್ತಿಕೊಂಢಿತ್ತು.

ಆರಂಭವಾದ ಯುದ್ಧ : ಮಿಜೋರಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಸುರಕ್ಷಾ ಪಡೆಗಳನ್ನು ಹೊರಗಟ್ಟುವ ಉದ್ದೇಶದಿಂದ ಫೆ. 28,1966ರಂದು ಮಿಜೋನ್ಯಾಷನಲ್ ಫ್ರಂಟ್ ಆಪರೇಷನ್ ಜೆರಿಚೋ ಪ್ರಾರಂಭಿಸಿ ಐಜವಾಲ್ ಹಾಗೂ ಲುಂಗ್ಲೀದಲ್ಲಿದ್ದ ಅಸ್ಸಾಂ ರೈಫಲ್ಸ್ ಪಡೆಗಳನ್ನು ಗುರಿಯಾಗಿಸಿತ್ತು. ಮರುದಿನವೇ ಫ್ರಂಟ್‌ಭಾರತದಿಂದ ಸ್ವಾತಂತ್ರ್ಯ ದೊರೆಯಿತೆಂದು ಘೋಷಿಸಿಕೊಂಡಿತು.
ಭಾರತೀಯ ಸುರಕ್ಷಾ ಪಡೆಗಳು ಇದರಿಂದ ಸ್ಥಂಭೀಭೂತರಾಗುತ್ತಿದ್ದಂತೆಯೇದಾಳಿಕೋರರು ಸರಕಾರಿ ಖಜಾನೆ ಹಾಗೂ ಅಸ್ಸಾಂರೈಫಲ್ಸ್ ಮುಖ್ಯ ಕಾರ್ಯಾಲಯ ಹಾಗೂ ಛಂಫಾಯ್ ಹಾಗೂ ಲುಂಗ್ಲೀ ಜಿಲ್ಲೆಗಳಲ್ಲಿದ್ದ ಸೇನಾ ಅನುಸ್ಥಾಪನೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು.
ಈ ಬೆಳವಣಿಗೆ ಅಂದಿನ ಇಂದಿರಾ ಗಾಂಧಿ ಸರಕಾಕ್ಕೆ ಆಘಾತ ತಂದಿದ್ದರೂ ಕ್ಷಿಪ್ರ ನಿರ್ಧಾರವೊಂದರಲ್ಲಿ ಮಾರ್ಚ್ 5ರಂದು ಭಾರತೀಯ ವಾಯಪಡೆಯ ನಾಲ್ಕು ಯುದ್ಧ ವಿಮಾನಗಳು-ಫ್ರಾನ್ಸ್ ನಿರ್ಮಿತ ಡಸ್ಸಾಲ್ಟ್ ಓರಾಗನ್ (ತೂಫಾನೀಸ್) ಹಾಗೂ ಬ್ರಿಟಿಷ್ ಹಂಟರ್ ವಿಮಾನಗಳು ಅಸ್ಸಾಂನತೇಜ್‌ಪುರ್, ಕುಂಭಿಗ್ರಾಮ್ ಹಾಗೂ ಜೊರ್ಹಟ್‌ನಿಂದ ಹೊರಟು ಐಜವಾಲ್ ಮೇಲೆ ಬಾಂಬ್ ದಾಳಿ ನಡೆಸಿದವು. ಮೊದಲು ಮಶೀನ್ ಗನ್ನುಗಳನ್ನು ಉಪಯೋಗಿಸಿದ ಈ ಯುದ್ಧ ವಿಮಾನಗಳುನಂತರಮರುದಿನ ಬಾಂಬ್ ದಾಳಿಗೆ ಶುರುವಿಟ್ಟುಕೊಂಡವು. ಈ ದಾಳಿಗಳು ಮಾರ್ಚ್ 13ರ ತನಕ ಮುಂದುವರಿದು ನಾಗರಿಕರನ್ನು ದಿಕ್ಕಾಪಾಲಾಗಿ ಗುಡ್ಡಗಳತ್ತ ಓಡುವಂತೆ ಮಾಡಿದವು. ಆಗ ಪೂರ್ವ ಪಾಕಿಸ್ತಾನವಾಗಿದ್ದ ಮಿಂನ್ಮಾರ್ ಹಾಗೂ ಬಾಂಗ್ಲಾದೇಶದ ಕಾಡುಗಳಲ್ಲಿಬಂಡುಕೋರರು ತಪ್ಪಿಸಿಕೊಂಡು ಹೋದರೆನ್ನಲಾಗಿದೆ.
‘‘ನಾವ್ಯಾರೂ ಆಗ ಕೇಂದ್ರ ಸರಕಾರ ತನ್ನದೇ ನಾಡಿನ ಮೇಲೆ ದಾಳಿ ನಡೆಸಬಹುದೆಂದು ಎಣಿಸಿರಲಿಲ್ಲ,’’ಎಂದು ಮಿಜೋ ನ್ಯಾಷನಲ್ ಫ್ರಂಟಿನ ಹಿರಿಯ ಸದಸ್ಯರಾದ ಥ ಂಗ್ಸಂಗ ಹೇಳುತ್ತಾರೆ. ಬಾಂಬ್ ದಾಳಿಯಿಂದುಂಟಾದ ವಿನಾಶವನ್ನೂ ಅವರು ವಿವರಿಸುತ್ತಾರೆ. ಈ ದಾಳಿಯಿಂದ ಐಜವಾಲ್ ನಗರ ಹೊತ್ತಿ ಉರಿದಿತ್ತೆಂದು ಕೆಲವು ವರದಿಗಳು ತಿಳಿಸಿದ್ದವು. ಒಟ್ಟು 13 ನಾಗರಿಕರು ಈ ದಾಳಿಗಳಲ್ಲಿ ಮೃತಪಟ್ಟಿದ್ದರು.
ಆಶ್ಚರ್ಯಕರವೆಂದರೆಸರಕಾರವಾಗಲೀ, ಸೇನಾ ಪಡೆಗಳಾಗಲೀ ಈ ಬಾಂಬ್ ದಾಳಿಯ ಬಗ್ಗೆ ಬಾಯ್ಬಿಟ್ಟಿರಲಿಲ್ಲ.ಹಲವಾರು ದಶಕಗಳ ನಂತರ ಹಲವಾರು ಬಂಡುಕೋರರು ಈ ವಿಚಾರವನ್ನು ಬಹಿರಂಗಪಡಿಸಿದ ನಂತರವಷ್ಟೇ ಹೊರಜಗತ್ತಿಗೆ ಇದರ ಮಾಹಿತಿ ಸಿಕ್ಕಿತ್ತು.
ಆಗ ಕೊಲ್ಕತ್ತಾದಿಂದ ಪ್ರಕಟವಾಗುತ್ತಿದ್ದ ಹಿಂದುಸ್ಥಾನ್ ಸ್ಟಾಂಡರ್ಡ್ ಮಾ. 9, 1066ರ ತನ್ನ ವರದಿಯೊಂದರಲ್ಲಿಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಯುದ್ಧ ವಿಮಾನಗಳು ವಾಯುಪಡೆಯ ಜವಾನರನ್ನು ಕೆಳಗಿಳಿಸಲು ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲು ಹೊರಟಿದ್ದವು ಎಂದು ಹೇಳಿದ್ದನ್ನು ಪ್ರಕಟಿಸಿತ್ತು.
ಈ ಬಾಂಬ್ ದಾಳಿಯ ನಂತರ ಸರಕಾರವುಅಲ್ಲಿನ ಹಳ್ಳಿಗಳನ್ನು ಪುನರ್ ಸಂಘಟಿಸಿತ್ತು ಹಾಗೂ ಜನರನ್ನು ಸೇನಾ ಪಡೆಗಳಿರುವ ಹತ್ತಿರದ ಸ್ಥಳಗಳಿಗೆ ಸ್ಥಳಾಂತರಿಸಿತ್ತು.
ಮುಂದೆ 1987ರಲ್ಲಿ ಮಿಜೋರಂ ರಾಜ್ಯದ ಉದಯವಾಯಿತು ಹಾಗೂ ಕೇಂದ್ರ ಸರಕಾರ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಿದವು.
2008ರಿಂದ ಮಿಜೋರಂ ಮಾರ್ಚ್ 5ನ್ನುಝೋರಂ ನಿ ಅಥವಾ ಝೋ ರಂ ದಿನವೆಂದು ಆಚರಿಸುತ್ತಿದೆ. ‘‘ನಮ್ಮ ನೆಲ ಹಾಗೂ ಜನರನ್ನು ಭಾರತದಲ್ಲಿ ವಿಭಜಿಸಲು ನಾವು ಬಿಡಲು ಸಾಧ್ಯವಿಲ್ಲ.’’ಎಂದು ಝೋ ರೀಯುನಿಫಿಕೇಶನ್ ಆರ್ಗನೈಝೇಶನ್ ಅಥವಾ ಝೋರೋದ ಸದಸ್ಯರೊಬ್ಬರು ಹೇಳುತ್ತಾರೆ.
ಇಂದಿಗೂ ಮಿಜೋರಂನ ಜನರಿಗೆ ಐಜವಾಲ್ ತಮ್ಮ ಅಸ್ತಿತ್ವದ ಸಂಕೇತವಾಗಿದೆ. ಆ ಬಾಂಬ್ ದಾಳಿತಾವು ಇತರರು ಎಂಬ ಭಾವನೆಯನ್ನು ಮಿಜೋರಂ ಜನರ ಮನಸ್ಸಿನಲ್ಲಿ ಮತ್ತಷ್ಟು ಆಳವಾಗಿ ಬೇರೂರಿಸಿತೆಂದೇ ಹೇಳಬಹುದು.

Writer - * ಡೇವಿಡ್ ಬಹ್ರಿಲ್

contributor

Editor - * ಡೇವಿಡ್ ಬಹ್ರಿಲ್

contributor

Similar News