ಪರ್ಯಾಯ ನಾಯಕ ರಾಹುಲ್ ಗಾಂಧಿ ಯನ್ನುರೂಪಿಸುವರೇ ಪ್ರಶಾಂತ್ ಕಿಶೋರ್?
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅತೀ ದೊಡ್ಡ ವೈಕಲ್ಯವಾಗಿದ್ದು ರಾಹುಲ್ ಗಾಂಧಿ ವರ್ಚಸ್ಸು. ಮುಖ್ಯವಾಗಿ ಬಿಜೆಪಿಯ ನರೇಂದ್ರ ಮೋದಿಗೆ ಹೋಲಿಸಿದಾಗ ತದ್ವಿರುದ್ಧ ವ್ಯಕ್ತಿತ್ವ ಮುಂದೆ ಬಂದಿತ್ತು. ಮೋದಿ ಆತ್ಮವಿಶ್ವಾಸ ಹೊಂದಿದ ನಾಯಕ, ಅಭಿವೃದ್ಧಿಯ ಹರಿಕಾರ, ವಾಗ್ಮಿ ಮತ್ತು ಪ್ರಭಾವೀ ಮಾತುಗಾರನಾಗಿ ಮುಂದೆ ಬಂದಿದ್ದರು. ರಾಷ್ಟ್ರಕ್ಕಾಗಿ ಯೋಜನೆ ಹೊಂದಿರುವ ವ್ಯಕ್ತಿ ಮತ್ತು ಉದ್ಯಮದ ಪ್ರೋತ್ಸಾಹಕರಾಗಿ ಕಂಡು ಬಂದಿದ್ದರು. ಗಾಂಧಿ ಅನನುಭವಿ ಮತ್ತು ಅನಾಸಕ್ತಿಯ ವ್ಯಕ್ತಿಯಾಗಿದ್ದರು. ಅವರ ಟೈಮ್ಸ್ ನೌ ಸಂದರ್ಶನ ವರ್ಚಸ್ಸನ್ನು ಇನ್ನಷ್ಟು ಕಳೆಗುಂದಿಸಿತ್ತು. ತನ್ನ ಹುಟ್ಟಿನ ಕಾರಣದಿಂದಾಗಿ ಮಾತ್ರ ಆ ವ್ಯಕ್ತಿ ಆ ಸ್ಥಾನದಲ್ಲಿದ್ದಾರೆ ಎಂದು ಅನಿಸಿತ್ತು. ಕಂತೆ ಪುರಾಣಗಳನ್ನು ಹೊರತುಪಡಿಸಿ ಪ್ರಜೆಗಳಿಗೆ ಹೇಳಲು ಅವರ ಬಳಿ ಇನ್ನೇನೂ ಇರಲಿಲ್ಲ. ಸ್ಪರ್ಧೆ ಅಧ್ಯಕ್ಷೀಯ ರೀತಿಯಲ್ಲಿದ್ದರೆ, ಗಾಂಧಿ ಕಾಂಗ್ರೆಸ್ಸಿನ ಒತ್ತಡಪೂರ್ವಕ ಸಿಕ್ಕ ಅಭ್ಯರ್ಥಿಯಾಗಿ ಹೋಲಿಕೆಯಲ್ಲಿ ನೀರಸವಾಗಿದ್ದರು. ಪಪ್ಪು ಎನ್ನುವ ವರ್ಚಸ್ಸು ನಿಂತುಬಿಟ್ಟಿತ್ತು.
ಮೋದಿ ಮತ್ತು ಗಾಂಧಿ ನಡುವಿನ ಸ್ಪರ್ಧೆಯನ್ನು ಯುಗಳ ಎಂದು ಪ್ರಚಾರಪಡಿಸಿದವರಲ್ಲಿ ಮತ್ತು ಗಾಂಧಿಯನ್ನು ದುರ್ಬಲ ಎಂದು ತೋರಿಸಿದವರಲ್ಲಿ, ಆಗಿನ ಬಿಜೆಪಿ ಕಾರ್ಯತಂತ್ರ ಯೋಜಕ ಪ್ರಶಾಂತ್ ಕಿಶೋರ್ ಪ್ರಮುಖರು. ಆದರೆ ದೊಡ್ಡ ವಿಡಂಬನೆಯೆಂದರೆ ಕಿಶೋರ್ ಈಗ ವಿರುದ್ಧ ಹೊಣೆಯನ್ನು ಹೊತ್ತಿದ್ದಾರೆ. ಅವರ ಮುಂದೆ ರಾಹುಲ್ ಗಾಂಧಿಯನ್ನು ಈಗ ಕಾಂಗ್ರೆಸ್‌ನ್ನು ಪುನಶ್ಚೇತನ ಮಾಡಬಲ್ಲ ನಾಯಕನಾಗಿ ಮುಂದಿಡುವ ಜವಾಬ್ದಾರಿಯಿದೆ. ಕಳೆದ ವರ್ಷ ತಮ್ಮ ರಹಸ್ಯಮಯ ಅಧ್ಯಯನ ಪ್ರವಾಸದ ಬಳಿಕ ರಾಹುಲ್ ಗಾಂಧಿ ಅವರಲ್ಲಿ ಬಹಳಷ್ಟು ಬದಲಾವಣೆಯನ್ನು ಭಾರತ ಕಂಡಿದೆ. ಮೋದಿ ಸರಕಾರದ ಮೇಲೆ ಅವರ ಸೂಟ್ ಬೂಟ್ ಕಿ ಸರ್ಕಾರ್ ಎನ್ನುವ ಟೀಕೆ ಎಲ್ಲಿ ತಗಲಬೇಕೋ ಅಲ್ಲಿಗೇ ತಲುಪಿದೆ ಮತ್ತು ಶ್ರೀಮಂತರ ಪರ ಎನ್ನುವ ವರ್ಚಸ್ಸಿನ ಬಗ್ಗೆ ಸರಕಾರ ಚಿಂತಾಕ್ರಾಂತವಾಗಿದೆ. ಇದು ಯಾವ ಮಟ್ಟಿಗೆ ಆಳವಾದ ಪರಿಣಾಮ ಬೀರಿದೆ ಎಂದರೆ ಇತ್ತೀಚೆಗಿನ ಬಜೆಟಲ್ಲಿ ಸರಕಾರವು ಬಡವರ ಪರವಾಗಿ ಒತ್ತು ನೀಡಲು ಆ ಟೀಕೆಯೂ ಕಾರಣ. ಸರಕಾರವು ವರ್ಚಸ್ಸನ್ನು ಬದಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಭೂ ಸ್ವಾದೀನ ಕಾಯ್ದೆಗೆ ತಿದ್ದುಪಡಿ ತಂದರೆ ತಮ್ಮ ಪಕ್ಷ ಪ್ರಬಲ ವಿರೋಧ ವ್ಯಕ್ತಪಡಿಸಲಿದೆ ಎಂದು ರಾಹುಲ್ ಸ್ಪಷ್ಟ ರಾಜಕೀಯ ಸೂಚನೆ ನೀಡಿದ್ದರು. ಅವರ ತಾಯಿ ಸೋನಿಯಾ ಗಾಂಧಿ ಕೇಂದ್ರ ದಿಲ್ಲಿಯಲ್ಲಿ ಮೆರವಣಿಗೆಯ ನೇತೃತ್ವ ವಹಿಸಿದರು. ಅವರ ಪಕ್ಷದ ಸಹೋದ್ಯೋಗಿಗಳು ಬದಲಾವಣೆಯ ವಿರುದ್ಧ ಬೌದ್ಧಿಕ ಚರ್ಚೆಯನ್ನು ನಿರ್ಮಿಸಿದರು ಮತ್ತು ರಾಜಕೀಯ ಮೈತ್ರಿಯನ್ನು ವಿಸ್ತರಿಸಿದರು. ಸರಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ನಿತಿಶ್ ಕುಮಾರ್ ನೇತೃತ್ವದ ಸರಕಾರದ ಪರವಾಗಿ ರಾಹುಲ್ ಬಲವಾದ ನಿಲುವು ತಳೆದರು. ಬಿಹಾರ ಚುನಾವಣೆಯಲ್ಲಿ ಮೈತ್ರಿಗಾಗಿ ಪ್ರಯತ್ನಿಸುತ್ತಿದ್ದ ಲಾಲು ಪ್ರಸಾದ್‌ರಿಗೆ ಇದು ಸೂಚನೆಯನ್ನು ಕೊಟ್ಟಿದೆ. ಕಳೆದ ಕೆಲವು ತಿಂಗಳಲ್ಲಿ ರಾಹುಲ್ ವಿಶ್ವವಿದ್ಯಾನಿಲಯಗಳಲ್ಲಿ ಯುವ ಜನರ ಜೊತೆಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆಯಾದಾಗ ಅವರು ತಕ್ಷಣ ಭೇಟಿ ನೀಡಿದರು. ಕನ್ಹಯ್ಯೆ ಕುಮಾರ್ ಬಂಧನವಾದಾಗ ದೇಶದ್ರೋಹದ ಆರೋಪ ಮತ್ತು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲವನ್ನು ಸೂಚಿಸಲು ಕೆಲ ದಿನಗಳ ನಂತರ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು. ಪಕ್ಷದಲ್ಲಿಯೇ ಬಹಳ ಮಂದಿಗೆ ಇದು ಸಮಾಧಾನ ತಂದಿಲ್ಲ. ಕನ್ಹಯ್ಯೆ ಎಡಪಂಥೀಯ ವಿದ್ಯಾರ್ಥಿ ನಾಯಕರಾಗಿರುವ ಕಾರಣ ಅವರ ಪರವಾಗಿ ನಿಂತು ಅವರನ್ನು ಹೀರೋ ಆಗಿ ಬಿಂಬಿಸುವುದರಿಂದ ಪಕ್ಷಕ್ಕೇನೂ ಲಾಭವಿಲ್ಲ ಎಂದು ಪಕ್ಷದ ವಿದ್ಯಾರ್ಥಿ ಸಂಘ ಎನ್‌ಎಸ್‌ಯುಐ ಅಭಿಪ್ರಾಯಪಟ್ಟಿದೆ. ಇತರರ ಪ್ರಕಾರ, ರಾಹುಲ್ ಗಾಂಧಿಯನ್ನು ರಾಷ್ಟ್ರವಿರೋಧಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ಪ್ರಚಾರ ಮಾಡುತ್ತಿರುವ ಬಿಜೆಪಿಯ ಪ್ರಯತ್ನ ಹಿಂದಿ ಹೃದಯ ಭಾಗದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಹೀಗಾಗಿ ರಾಹುಲ್ ಗಾಂಧಿ ಇಡುವ ಹೆಜ್ಜೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ದರೆ ರಾಹುಲ್ ಜೆಎನ್‌ಯು ವಿದ್ಯಾರ್ಥಿಗಳಿಗೆ ನೀಡಿದ ಬೆಂಬಲ ದೃಢವಾಗಿತ್ತು. ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜದ ಬಗ್ಗೆ ಮಾತನಾಡಿ, ಅದು ಒಂದು ಬಟ್ಟೆಯ ತುಂಡಲ್ಲ, ಬದಲಾಗಿ ಸಂಬಂಧಗಳು ಮತ್ತು ಸಂಭಾಷಣೆಗಳು ಎಂದಿದ್ದಾರೆ. ಈಗಿನ ರಾಷ್ಟ್ರೀಯತಾವಾದದ ಚರ್ಚೆಗೆ ಅವರು ಹೊಸ ಕಲ್ಪನೆಯನ್ನು ಮುಂದಿಟ್ಟಿದ್ದಾರೆ.ಲ್ಲಿ ಎರಡು ವಿಷಯಗಳನ್ನು ಗಮನಿಸಬೇಕು.
ರಾಹುಲ್ ಗಾಂಧಿ ಹಿಂದೆಯೂ ಹೀಗೆ ಮಧ್ಯಪ್ರವೇಶಿಸಿದ್ದಾರೆ. ದಲಿತ ಕಲ್ಯಾಣ ಮತ್ತು ಬುಡಕಟ್ಟು ಜನಾಂಗದ ಹಕ್ಕುಗಳ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವೆಲ್ಲವೂ ಗೌರವ ಅತಿಥಿ ಭಾಗವಹಿಸುವಂತಿರುತ್ತದೆ. ಅವರ ಆಸಕ್ತಿ ಕಾಣುವುದು ವಿರಳ. ಒಂದು ವಿಷಯದಲ್ಲಿ ಆಳವಾಗಿ ಮುಳುಗಲು ಮತ್ತು ಎಲ್ಲ್ಲ ಆಯಾಮಗಳಲ್ಲಿ ಅದನ್ನು ಅರ್ಥ ಮಾಡಿಕೊಂಡು ಅದರೊಳಗೆ ನಿಲ್ಲಲು ಬೇಕಾದ ರಾಜಕೀಯ ಸಾಮರ್ಥ್ಯ ಅವರಲ್ಲಿ ಇಲ್ಲ ಎಂದು ಅನಿಸುತ್ತದೆ. ಅವರ ವ್ಯಕ್ತಿತ್ವದ ಈ ಮೂಲ ವಿಷಯ ಬದಲಾಗಿದೆಯೇ ಇಲ್ಲವೋ ಎನ್ನುವುದನ್ನು ನೋಡಬೇಕಿದೆ.
ಮತ್ತೊಂದು ಸಮಸ್ಯೆ ಅವರ ಸಂವಹನ. ಸ್ಪಷ್ಟವಾದ ರಚನಾತ್ಮಕ ಸಂವಹನದ ಚಿಹ್ನೆ ಅವರ ರಚನಾತ್ಮಕ ಯೋಚನೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಭಾಷಣಗಳು ಬಹಳಷ್ಟು ಬಾರಿ ಗುರಿಯಿಲ್ಲದಂತೆ ಇರುತ್ತದೆ. ಅವರು ಸರಿಯಾದ ವಿಷಯವನ್ನೇ ಆರಿಸಿರಬಹುದು- ಬಡವರ ಕಲ್ಯಾಣ, ಕೋಮು ಸೌಹಾರ್ದ, ವಾಕ್ ಸ್ವಾತಂತ್ರ್ಯ, ಕೇಂದ್ರದಲ್ಲಿ ಮಾತುಕತೆಯ ಮೂಲಕ ನಿರ್ಧಾರ ಕೈಗೊಳ್ಳಬೇಕು- ಆದರೆ ಸಂದೇಶದ ಮೇಲೆ ಗಮನವಿಟ್ಟು ನಿಲ್ಲುವ ಸಾಮರ್ಥ್ಯ ಅವರಲ್ಲಿ ಇನ್ನೂ ಅನಿಶ್ಚಿತವಾಗಿದೆ. ಇದು ವಿಚಲಿತ ಮತ್ತು ಆಳವಿಲ್ಲದ ಯೋಚನೆಯ ಫಲ.
ರಾಹುಲ್ ಗಾಂಧಿ ರಾಜಕೀಯದ ಮೇಲೆ ಪ್ರಶಾಂತ್ ಕಿಶೋರ್ ಪರಿಣಾಮವನ್ನು ನಿರ್ಧರಿಸಲು ಈಗ ಇನ್ನೂ ಸಮಯ ಬಂದಿಲ್ಲ. ಭವಿಷ್ಯದ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ನೆರವಾಗಲು ಮತ್ತು ಅದರ ನಾಯಕನಿಗೆ ಹೊಸ ವರ್ಚಸ್ಸು ಕೊಡಲು ಅವರು ಮುಂದೆ ಬಂದು ವಾರವಷ್ಟೇ ಆಗಿದೆ. ಮೂಲಗಳ ಪ್ರಕಾರ, ಅದೇನಿದ್ದರೂ, ಕೆಲವು ತಿಂಗಳುಗಳಿಂದ ಅವರು ರಾಹುಲ್ ಗಾಂಧಿ ಜೊತೆಗೆ ಅನಧಿಕೃತ ಮಾತುಕತೆಯನ್ನು ನಡೆಸುತ್ತಿದ್ದಾರೆ ಮತ್ತು ಮಾಹಿತಿಗಳನ್ನು ಆಗಾಗ್ಗೆ ಕೊಡುತ್ತಿದ್ದಾರೆ. ಶೋರ್ ಮಟ್ಟಿಗೆ ಮುಖ್ಯ ಸವಾಲೆಂದರೆ ರಾಹುಲ್ ಗಾಂಧಿ ಸರಿಯಾದ ರಾಜಕೀಯ ವಿಷಯಗಳನ್ನು ಆರಿಸುವುದು ಮತ್ತು ಅದರಲ್ಲಿ ಆಳವಾಗಿ ಮುಳುಗುವಂತೆ ಖಚಿತಪಡಿಸುವುದು. ಅಲ್ಲದೆ ಅವರು ಹೆಚ್ಚು ಸಹ್ಯವಾದ ಸಂವಹನ ಕಾರ್ಯತಂತ್ರವನ್ನು ಹೊಂದಿರಬೇಕು. ಆಗಾಗ್ಗೆ ಮರೆಯಾಗುವ ಪ್ರವೃತ್ತಿ ಮುಂದುವರಿಯಬಾರದು. ತ್ವರಿತ ಮಧ್ಯಪ್ರವೇಶ, ಅದನ್ನು ಪಾಲಿಸದೆ ಇರುವುದು, ನಿರಂತರ ರಾಜಕೀಯ ಚಟುವಟಿಕೆಗೆ ಬದಲಿಯಾಗಬಾರದು. ಮೂರ್ತತೆಗಳು ಮತ್ತು ವಿಷಯಾಂತರಗಳಿಂದ ತುಂಬಿರುವ ಭಾಷಣ ಅಸಹನೆ ಹೊಂದಿದ ಮತ್ತು ಜಾಗೃತಿ ಹೊಂದಿರುವ ಜನಸಾಮಾನ್ಯರನ್ನು ಹಿಡಿದಿಡಲಾರದು. ವ್ಯಕ್ತಿಯನ್ನು ಕೇವಲ ನಗೆಪಾಟೀಲಿಯನ್ನಾಗಿ ಅಷ್ಟೇ ಮಾಡುತ್ತದೆ. ಸಾರ್ವಜನಿಕ ಚರ್ಚೆಯಲ್ಲಿ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವಿಪರೀತ ಸ್ಪರ್ಧೆಯಲ್ಲಿ ತೊಡಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾವಣೆಗಳಾಗಿವೆ. ಆದರೆ ಅದು ಸಾಲದು. ರಾಹುಲ್ ಗಾಂಧಿ 2014ನ್ನು ಕ್ರಾಂತಿಕಾರಿಯಾಗಿ ತೊರೆದು ರಾಹುಲ್ ಗಾಂಧಿ 2019 ಆಗುತ್ತಾರೆಯೇ ಎನ್ನುವುದು ದೊಡ್ಡ ಪ್ರಶ್ನೆ. ಕಿಶೋರ್ ಮುಂದೆ ದೊಡ್ಡ ಜವಾಬ್ದಾರಿಯಿದೆ.