ರಾಷ್ಟ್ರದ್ರೋಹ: ನ್ಯಾಯಮೂರ್ತಿಗಳಿಗೊಂದು ಬಹಿರಂಗ ಪತ್ರ

Update: 2016-03-06 18:24 GMT

ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್‌ಗೆ ಜಾಮೀನು ಮಂಜೂರು ಮಾಡುವಾಗ ಕೋರ್ಟ್ ನಿರ್ಬಂಧಗಳನ್ನು ವಿಸಿರುವ ಹಿನ್ನೆಲೆಯಲ್ಲಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ವಿಸಲಾಗದು ಎಂದು ನ್ಯಾಯಾೀಶರನ್ನು ಕುರಿತು ಬರೆದ ಬಹಿರಂಗ ಪತ್ರದಲ್ಲಿ ಇಂದಿರಾ ಜೈಸಿಂಗ್ ಪ್ರತಿಪಾದಿಸಿದ್ದಾರೆ.ಮಾನ್ಯ ನ್ಯಾಯಮೂರ್ತಿಗಳೇ, ರಾಷ್ಟ್ರೀಯವಾದ ಎಂದರೇನು ಹಾಗೂ ರಾಷ್ಟ್ರವಿರೋ ಚಟುವಟಿಕೆ ಯಾವ ಅಂಶಗಳನ್ನು ಒಳಗೊಳ್ಳುತ್ತದೆ ಎಂದು ನಮಗೆ ನಾವೇ ನೆನಪಿಸಿಕೊಳ್ಳುವ ಕಾಲ ಬಂದಿದೆ; ಭಾರತದ ಶಾಸನ ಕೃತಿಗಳಲ್ಲಿ ರಾಷ್ಟ್ರವಿರೋ ಚಟುವಟಿಕೆ ಎಂಬ ಕೃತ್ಯದ ಉಲ್ಲೇಖ ಇಲ್ಲ ಎನ್ನುವುದು ನ್ಯಾಯಮೂರ್ತಿಗಳಾದ ನಿಮಗೆ ನಿಸ್ಸಂದೇಹವಾಗಿ ತಿಳಿದಿದೆ.

ನಮ್ಮ ಯೋಧರು ನಮ್ಮ ಗಡಿ ಕಾಯುತ್ತಾರೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ; ಆದರೆ ನಮ್ಮ ಗಡಿಯಲ್ಲಿ ಮೊದಲು ಏಕೆ ವಿದೇಶಿ ದಾಳಿ ನಡೆಯುತ್ತದೆ ಎನ್ನುವುದನ್ನು ಒಮ್ಮೆ ಯೋಚಿಸಿ. 1947ರವರೆಗೂ ದೇಶದ ಭಾಗವಾಗಿಯೇ ಇದ್ದ, ಇದೀಗ ನಮ್ಮ ನೆರೆಯ ರಾಷ್ಟ್ರವಾಗಿ ಮಾರ್ಪಟ್ಟ ದೇಶದ ಜತೆ ಸ್ವಾತಂತ್ರ್ಯ ಬಂದು 68 ವರ್ಷ ಕಳೆದರೂ ನಾವು ಏಕೆ ಸೌಹಾರ್ದಯುತ ಸಂಬಂಧ ಸಾಸಲು ಸಾಧ್ಯವಾಗಿಲ್ಲ? ನಾನೂ ಸೇರಿದಂತೆ ನಮ್ಮ ಸುತ್ತಲೂ ಇರುವ ಒಂದು ಪೀಳಿಗೆ ಇನ್ನೂ ಗಡಿಯ ಇನ್ನೊಂದು ಭಾಗದಲ್ಲಿ ಇದ್ದೇವೆ. ನಮ್ಮೆಲ್ಲರ ಇಚ್ಛೆ ಶಾಂತಿ ಮಾತ್ರ. ನಮಗೆ ಶಾಂತಿಯನ್ನು ಖಾತ್ರಿ ಪಡಿಸಲು ನೀವೇನು ಮಾಡಿದ್ದೀರಿ?
ಸ್ವಾತಂತ್ರ್ಯದ ವ್ಯಾಖ್ಯೆ
ರಾಷ್ಟ್ರೀಯತೆಯ ಹೆಸರಿನಲ್ಲಿ ನಮ್ಮ ಸೈನಿಕರು ಶವಪೆಟ್ಟಿಗೆಗಳಲ್ಲಿ ತಾಯ್ನ್ನಿಡಿಗೆ ಮರಳುವುದು ನಮಗೆ ಬೇಕಿಲ್ಲ. ನಮಗೆ ಬೇಕಿರುವುದು ಶಾಂತಿ ಮತ್ತು ನಮ್ಮ ನೆರೆಯವರೂ ಸೇರಿದಂತೆ ಎಲ್ಲರಿಗೂ ನ್ಯಾಯ.ದ್ದರಿಂದ ತೀರಾ ಗಂಭೀರ, ದುರ್ಬರ ಹಾಗೂ ಸಂವಿಧಾನ ಬಾಹಿರವಾದ ಮುಚ್ಚಳಿಕೆಯನ್ನು ಕನ್ಹಯ್ಯಾ ಅವರಿಂದ ಆಗ್ರಹಪೂರ್ವಕವಾಗಿ ಪಡೆದುಕೊಂಡಿರುವುದು ನೋಡಿದರೆ, ಆ ಒಂದು ಭಾಷಣವನ್ನು ಕೇಳುವುದು ನಿಜಕ್ಕೂ ಸೂಕ್ತ. ದೇಶದಲ್ಲಿ ಇದುವರೆಗೂ ಎಲ್ಲವೂ ಚೆನ್ನಾಗಿಯೇ ಇದೆ ಹಾಗೂ ನಾವು ಇನ್ನೂ ಯುವಕರ ಕೈಯಲ್ಲೇ ಸುರಕ್ಷಿತವಾಗಿದ್ದೇವೆ ಎಂದು ಖಚಿತವಾಗುತ್ತದೆ. ಇಷ್ಟಾಗಿಯೂ ನಾವು ಯಶಸ್ವಿಯಾಗಿರುವುದು ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿ ವೇಳೆಗೆ ಸೃಷ್ಟಿಸಿದ, ಕಟ್ಟಿ ಬೆಳೆಸಿದ ಹಾಗೂ ರೂಪುಗೊಂಡ ಪರಂಪರೆಯನ್ನು ವರ್ಗಾಯಿಸುವಲ್ಲಿ. ನ್ಯಾಯಾಲಯಗಳಲ್ಲಿ ಅತ್ಯಂತ ಉತ್ಸಾಹದಿಂದ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
ನ್ಯಾಯಾಂಗದ ಹೊಣೆದರೆ ರಾಷ್ಟ್ರವಿರೋ ವಿಚಾರ ಬಂದಾಗ ಮತ್ತೆ ನಾವು ನಮ್ಮ ಸಂವಿಧಾನದತ್ತ ದೃಷ್ಟಿ ಹರಿಸಬೇಕಾಗುತ್ತದೆ.
ನ್ಯಾಯಾೀಶರು ಸಂವಿಧಾನದ ಮೇಲೆ ನಂಬಿಕೆ ಹಾಗೂ ನಿಷ್ಠೆಯನ್ನು ಇರಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಜತೆಗೆ ದೇಶದ ಸಾರ್ವಭೌಮತ್ವ ಹಾಗೂ ಸಮಗ್ರತೆಯನ್ನು ಕಾಪಾಡುವ ಪ್ರಮಾಣ ಮಾಡಿರುತ್ತಾರೆ. ಆದರೆ ಸಂವಿಧಾನದ 352ನೆ ವಿಯನ್ನು ಗಮನಿಸಿ. ತುರ್ತು ಪರಿಸ್ಥಿತಿ ಘೋಷಣೆಯ ಅಕಾರ, ಇದು ದೇಶದ ಸಮಗ್ರತೆಗೆ ಯಾವುದು ಅಪಾಯ ತರುತ್ತದೆ ಎಂಬ ಸುಳಿವನ್ನು ನಿಮಗೆ ನೀಡುತ್ತದೆ. ಬಾಹ್ಯ ದಾಳಿ ಅಥವಾ ಅದಕ್ಕೆ ಪರಿಹಾರ ಆಡಳಿತ ಯಂತ್ರಕ್ಕೆ ಬಿಟ್ಟ ವಿಚಾರವೇ ವಿನಃ ನ್ಯಾಯಾಂಗಕ್ಕಲ್ಲ.
ಶಸಾಸ ಸಂಘರ್ಷದಿಂದ ನಿಯಮಗಳು ಮುಳುಗದಂತೆ ನೋಡಿಕೊಳ್ಳುವುದು ನ್ಯಾಯಾಂಗದ ಕಾರ್ಯವಲ್ಲ; ಬದಲಾಗಿ, ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ಉಳಿಯುವಂತೆ ಮಾಡುವುದು. ಕಾರ್ಯಾಂಗ ತನ್ನ ಕೆಲಸ ಮಾಡಿದೆ. ಅಂತೆಯೇ ಜಾಮೀನು ಮಂಜೂರು ಮಾಡುವಲ್ಲಿ ನೀವು ನಿಮ್ಮ ಕೆಲಸ ಮಾಡಿ. ರಾಷ್ಟ್ರವಿರೋ ಚರ್ಚೆಯನ್ನು ಅಕಾರದಲ್ಲಿರುವ ಸರಕಾರಕ್ಕೇ ಬಿಟ್ಟುಬಿಡಿ; ಅದಕ್ಕೆ ಅಂಟಿಕೊಂಡಿರುವ ಪತ್ರಕರ್ತರಿಗೆ ಅದನ್ನು ಬಿಟ್ಟುಬಿಡಿ. ಸಂವಿಧಾನದ 352ನೇ ವಿ ಬಾಹ್ಯ ದಾಳಿಯನ್ನು ಉಲ್ಲೇಖಿಸಲು ಕಾರಣ ಇಲ್ಲದಿಲ್ಲ. ಆಂತರಿಕ ಸಾರ್ವಭೌಮತ್ವ ನಮಗೆ ಅಂದರೆ ಜನತೆಗೆ ಸೇರಿದ್ದು.ಂ ಜಬಲ್ಪುರ ಪ್ರಕರಣದಲ್ಲಿ 1976ರಲ್ಲಿ ಬಹುಮತದ ತೀರ್ಪು ಬರೆದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಇತಿಹಾಸ ಇನ್ನೂ ಕ್ಷಮಿಸಿಲ್ಲ. ಏಕೆಂದರೆ ಅದು ಜನರ ಸ್ವಾತಂತ್ರ್ಯವನ್ನು ದರೋಡೆ ಮಾಡಿತ್ತು. ಬಹುಮತ ಎನ್ನುವುದು ಭ್ರಮೆ ಎನ್ನುವುದನ್ನು ಮರೆಯಬಾರದು. ಅದು ಕೂಡಾ ನ್‌ಡಿಎ (ಆಗ ಜನತಾ ಪಾರ್ಟಿ ಎಂದು ಕರೆಯಲ್ಪಡುತ್ತಿತ್ತು) ಸರಕಾರ ಆ ತೀರ್ಪನ್ನು ರದ್ದು ಮಾಡಿ, ಸಂವಿಧಾನದ 21ನೇ ವಿಯನ್ನು ಯಾವುದೇ ಕಾರಣಕ್ಕೂ ಅಮಾನತು ಮಾಡಲಾಗದು ಎಂದು ಖಾತ್ರಿಪಡಿಸಿತು. ಜಾಮೀನು ಕೂಡಾ 21ನೆ ವಿಯ ಅಡಿಯಲ್ಲೇ ಬರುವಂಥದ್ದು. ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಿಗೆ ಹಾಗೂ ಬಾಲಿವುಡ್‌ನ ಒಂದು ಹಾಡು ನಮ್ಮ ರಾಷ್ಟ್ರಗೀತೆಯಾಗುವ ಮುನ್ನ, ದಿವಂಗತ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಅವರ ಭಿನ್ನಾಭಿಪ್ರಾಯದ ತೀರ್ಪನ್ನು ಒಂದು ಬಾರಿ ಓದಿ. ಬಳಿಕ ರಾಷ್ಟ್ರವಿರೋ ಎಂದರೇನು ಎನ್ನುವುದನ್ನು ನಿರ್ಧರಿಸಿ.ಲ್ಲರಿಗೂ ನೆನಪಿರುವಂತೆ, ತುರ್ತು ಪರಿಸ್ಥಿತಿ ಸಂದರ್ಭದಲಿ ಜೈಲಿನಲ್ಲಿದ್ದವರು ಇಂದು ದೇಶವನ್ನು ಆಳುತ್ತಿದ್ದಾರೆ. ಸಕ್ರಿಯವಾಗಿ ಅಥವಾ ನಿಷ್ಕ್ರಿಯವಾಗಿ ಅವರನ್ನು ಸ್ವಾತಂತ್ರ್ಯಕ್ಕೆ ಎದುರಾದ ಬರ್ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬದ್ಧವಾಗಿರುವಂತೆ ಕೇಳಿಲ್ಲ ಎಂದ ಮೇಲೆ, ಇಂದು ಕನ್ಹಯ್ಯೆರಿಂದ ಏಕೆ ಆಗ್ರಹಿಸಲಾಗುತ್ತಿದೆ? ಮುಕ್ತ ಅಭಿವ್ಯಕ್ತಿಗೆ ಬಹುಶಃ ನಿರೀಕ್ಷಣಾ ನಿರ್ಬಂಧ ಇರಲಾರದು.
ಸತ್ಯ ಮತ್ತು ನ್ಯಾಯ
ಹೇಳಿ; ಗುರುವಾರ ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಾಷಣ ಮಾಡಿದಾಗ ಕನ್ಹಯ್ಯಾ, ರಾಷ್ಟ್ರೀಯವಾದಿಯಾಗಿದ್ದನೇ ಅಥವಾ ರಾಷ್ಟ್ರವಿರೋಯಾಗಿದ್ದನೇ? ಭಾರತೀಯರಾದ ನಮಗೆ ಬೇಕಿರುವುದು ಶಾಂತಿ ಹಾಗೂ ನ್ಯಾಯ. ನ್ಯಾಯ ಕೈಗೆಟಕುವುದೇ ಇಲ್ಲ ಎಂದಾದರೆ, ನ್ಯಾಯ ಸಿಗಲು ಸಾಧ್ಯವೇ ಇಲ್ಲ. ಮಾನವಹಕ್ಕುಗಳ ಸಂರಕ್ಷಕರ ಮೇಲೆ ವಿದೇಶಿ ನೆರವಿನ ಹೆಸರಿನಲ್ಲಾಗಲೀ ಅಥವಾ ರಾಷ್ಟ್ರೀಯತೆ ಹೆಸರಿನಲ್ಲಾಗಲೀ ಅಥವಾ ಇನ್ಯಾವುದೇ ಹೆಸರಿನಲ್ಲಿ ಮಾಡುವ ದಾಳಿಯಿಂದ ರಕ್ಷಿಸದಿದ್ದರೆ ನ್ಯಾಯ ಖಂಡಿತಾ ಇರಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದರ ಮೇಲೆ ವಾದ ಮಂಡಿಸುವ ವೇಳೆ, ನ್ಯಾಯಮೂರ್ತಿಗಳಿಗೆ ಹೀಗೆ ಹೇಳುವ ಪರಿಸ್ಥಿತಿ ಬಂದಿತ್ತು. ನಿಮ್ಮ ದುರಂತ ಎಂದರೆ, ನೀವು ನ್ಯಾಯಾಲಯವನ್ನು ಹಿಂಬಾಗಿಲಿನಿಂದ ಪ್ರವೇಶಿಸುತ್ತೀರಿ; ನಿಮ್ಮ ತಲೆಯ ಮೇಲೆ ಏನು ಬರೆದಿದೆ ಎನ್ನುವುದನ್ನು ನೀವು ನೋಡಲಾರಿರಿ. ನಾನು ಮುಂಬಾಗಿಲಿನಿಂದ ನ್ಯಾಯಾಲಯಕ್ಕೆ ಪ್ರವೇಶಿಸುತ್ತೇನೆ. ನಾನು ಬೆಳಗ್ಗೆ ಮೊದಲು ನೋಡುವುದೆಂದರೆ ಸತ್ಯಮೇವ ಜಯತೇ.ತನವಾಗಿ ಕಾಪಾಡಿಕೊಳ್ಳಲು ನಿಮ್ಮ ಸುಪರ್ದಿಗೆ ನೀಡಿದ ಕಾನೂನನ್ನು ನೀವು ವಿಶ್ಲೇಷಿಸಲು ಆ ಒಂದು ವಾಕ್ಯ ಸಾಕು. ಅದಕ್ಕಿಂತಲೂ ಹೆಚ್ಚೆಂದರೆ, ಸುಪ್ರೀಂಕೋರ್ಟ್ ಎನ್ನುವುದು ಮೇಲೆ ಬರೆದ ಸತ್ಯಕ್ಕಿಂತಲೂ ಹೆಚ್ಚು: ಯಥೋ ಧರ್ಮಸ್ ತಥೋ ಜಯಾ
ಭಾರತದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ನಿಮಗಾಗಿ ಇದನ್ನು ಕಂಡುಕೊಳ್ಳಿ.

(ಇಂದಿರಾ ಜೈಸಿಂಗ್ ಹಿರಿಯ ವಕೀಲರು, ಲಾಯರ್ಸ್‌ ಕಲೆಕ್ಟಿವ್ ಸಂಘಟನೆಯ ಸಹ ಸಂಸ್ಥಾಪಕ ಹಾಗೂ ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್)
 

Writer - ಕೃಪೆ: The wire

contributor

Editor - ಕೃಪೆ: The wire

contributor

Similar News