ದಿಲ್ಲಿ ಪೊಲೀಸರು ಮತ್ತು ಶ್ರೀಶ್ರೀ ರವಿಶಂಕರ್ ಗುಂಪು ರೈತರ ಮೇಲೆ ಪ್ರಾಬಲ್ಯ ಮೆರೆದಿದೆ
ದೇವಮಾನವ ಶೀಶ್ರೀ ರವಿಶಂಕರ್ ಅವರ ಆರ್ಟ್ ಆ್ ಲಿವಿಂಗ್ ಯಮುನಾ ನದಿ ತೀರದಲ್ಲಿ ಮಾರ್ಚ್ 11ರಿಂದ ಆಯೋಜಿಸುತ್ತಿರುವ ಮೂರು ದಿನಗಳ, ವಿವಾದಾತ್ಮಕ ‘ವಿಶ್ವ ಸಂಸ್ಕೃತಿ ಉತ್ಸವ’ ಜೀವನವನ್ನು ಒಂದು ಆಚರಣೆಯನ್ನಾಗಿ ಮಾಡುವ ಉದ್ದೇಶ ಹೊಂದಿದೆ, ಆದರೆ ಈ ಜಾಗದಲ್ಲಿ ಜಮೀನನ್ನು ಹೊಂದಿರುವ ಮತ್ತು ಉಳುಮೆ ಮಾಡುವವರ ಜೀವನವನ್ನು ಈ ಹಬ್ಬ ಶೋಚನೀಯಗೊಳಿಸಿದೆ. ಈ ಪೈಕಿ ಬಹಳಷ್ಟು ಮಂದಿಯನ್ನು ಅವರ ಜಮೀನಿನಿಂದ ಪ್ರತ್ಯೇಕಗೊಳಿಸಲಾಗಿದೆ. ಬೆಳೆದು ನಿಂತ ಬೆಳೆಗಳ ಮೇಲೆ ಬುಲ್ಡೋಜರ್ ಹರಿಸಿ ನಾಶಮಾಡಲಾಗಿದೆ ಮತ್ತು ಸುಳ್ಳು ಆರೋಪದ ಮೇಲೆ ಮೂವರನ್ನು ಜೈಲಿಗಟ್ಟಲಾಗಿದೆ. ರೈತರ ಪ್ರಕಾರ ಅವರು ತಮ್ಮ ಜಮೀನಿನಿಂದ ಈ ಒತ್ತಾಯದ ತೆರವನ್ನು ಪ್ರತಿಭಟಿಸಿದ್ದೇ ಬಂಧನಕ್ಕೆ ಕಾರಣವಂತೆ.ಷ್ಟೆಲ್ಲವೂ ನಡೆದಿದ್ದು ಕಳೆದ ವಾರ ಪೂರ್ವ ದಿಲ್ಲಿಯ ನೋಯ್ಡೆ ರಸ್ತೆಗೆ ಹೊಂದಿಕೊಂಡಿರುವ ಜಮೀನು ಮತ್ತು ಮೆಟ್ರೊ ನಿಲ್ದಾಣದ ಮಯೂರ್ ವಿಹಾರ್ 1ನೆ ಹಂತದ ವಿಸ್ತರಣೆಯಿಂದ ಮಯೂರ್ ವಿಹಾರ್ ಮೆಟ್ರೊ ನಿಲ್ದಾಣದವರೆಗೆ ಇರುವ, ಈ ಕಾರ್ಯಕ್ರಮಕ್ಕೆ ವಾಹನ ನಿಲುಗಡೆಗೆ ನಿಗದಿಯಾಗಿರುವ ಜಮೀನಿನಲ್ಲಿ. ದರಿಂದ ಸಂಕಷ್ಟಕ್ಕೊಳಗಾದವರಲ್ಲಿ ಒಬ್ಬರಾದ ಮುಹಮ್ಮದ್ ಇಬ್ರಾಹೀಂ ಈ ಕಾರ್ಯಕ್ರಮದಿಂದ ತನ್ನ ಕುಟುಂಬಕ್ಕೆ ಒದಗಿರುವ ಶೋಚನೀಯ ಸ್ಥಿತಿಯ ಬಗ್ಗೆ ವಿವರಿಸುತ್ತಾರೆ. ನೊಯ್ಡಾದಿಂದ ಇಳಿಮುಖವಾಗಿ ಮಯೂರ್ ವಿಹಾರ್ ಹಂತ 1ನೆ ವಿಸ್ತರಣೆಯಲ್ಲಿರುವ ಸ್ಟಾರ್ ಸಿಟಿ ಮಾಲ್‌ನ ಎದುರುಗಡೆಯಿರುವ ಚಿಲ್ಲಾ ಖಾದರ್ ಬಂಗ್ ನತ್ತ ಸಾಗುವ ಕಚ್ಚಾರಸ್ತೆಯ ಪಕ್ಕದಲ್ಲಿ ವಾಸಿಸುವ ಇಬ್ರಾಹೀಂ, ೆಬ್ರವರಿ 23ರಂದು ಕಾರ್ಯಕ್ರಮ ಆಯೋಜಕರ ಜೊತೆ ಪೊಲೀಸರ ತಂಡ ಮನೆ ಬಾಗಿಲಿಗೆ ಬಂದು ಜಾಗವನ್ನು ಖಾಲಿ ಮಾಡುವಂತೆ ಸೂಚಿಸಿದಂದಿನಿಂದ ಕುಟುಂಬದ ಜೀವನವೇ ಬುಡಮೇಲಾಗಿದೆ ಎಂದು ಹೇಳುತ್ತಾರೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ನನ್ನ ಸಹೋದರ ಸಲ್ಮಾನ್ ಆತನ ಗೆಳೆಯ, ಟೋಲ್ ಪ್ಲಾಝಾದ ಸಮೀಪ ವಾಸಿಸುವ ಯಾಮೀನ್ ಮತ್ತು ಚಿಲ್ಲಾ ಖಾದರ್‌ನಲ್ಲೇ ಇರುವ ಹನುಮಾನ್ ಮಂದಿರದ ಪಕ್ಕದ ನಿವಾಸಿ ಶಿವಕುಮಾರ್ ಜೊತೆಯಾಗಿ ಇದನ್ನು ವಿರೋಸಿದರು. ಇದು ಮಯೂರ್ ವಿಹಾರ್‌ನ ಪೊಲೀಸ್ ಅಕಾರಿಗೆ ಇಷ್ಟವಾಗಲಿಲ್ಲ, ಹಾಗಾಗಿ ಈ ಮೂವರ ವಿರುದ್ಧ ಜಾಮೀನು ರಹಿತ ದೂರನ್ನು ದಾಖಲಿಸಿ ಅವರನ್ನು ಬಂಸಿದರು. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು ಅವರೀಗ ತಿಹಾರ್ ಜೈಲಿನಲ್ಲಿದ್ದಾರೆ ಎನ್ನುತ್ತಾರೆ ಇಬ್ರಾಹೀಂ. ವರ ಬಂಧನದ ನಂತರ ವಕೀಲರ ಫೀಸು ಮತ್ತು ನ್ಯಾಯಾಲಯದ ಶುಲ್ಕ ಎಂದು ಇಬ್ರಾಹೀಂ ಇಲ್ಲಿಯವರೆಗೆ ರೂ. 10,000 ಖರ್ಚು ಮಾಡಿದ್ದಾರೆ. ನಾನು ಮೂರನೆ ತರಗತಿಗಿಂತ ಹೆಚ್ಚು ಕಲಿಯಲಿಲ್ಲ, ಯಾಕೆಂದರೆ ಐದು ಮಕ್ಕಳ ಪೈಕಿ ನಾನೇ ಹಿರಿಯವನಾಗಿದ್ದೆ ಮತ್ತು ಕುಟುಂಬವನ್ನು ಆಧರಿಸುವ ಜವಾಬ್ದಾರಿ ನನ್ನ ಮೇಲಿತ್ತು. ನನ್ನ ಸಹೋದರರು ಚೆನ್ನಾಗಿ ಕಲಿಯುವಂತೆ ನಾನು ನೋಡಿಕೊಂಡೆ. ಆದರೆ ಈಗ ಸಲ್ಮಾನ್‌ಗೆ ಏನು ಮಾಡಿದರು ಎಂಬುದನ್ನು ನೋಡಿ, ಆತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಕೂಡಾ ಪಡೆಯುತ್ತಿದ್ದಾನೆ. ಅವರು ಆತನ ಭವಿಷ್ಯವನ್ನೇ ಹಾಳುಮಾಡುತ್ತಿದ್ದಾರೆ, ಈ ತಿಂಗಳ ಕೊನೆಯಲ್ಲಿ ಆತನ ಪರೀಕ್ಷೆ ನಡೆಯಲಿದೆ ಎನ್ನುತ್ತಾರೆ ಇಬ್ರಾಹೀಂ. ಮೂವರ ಮೇಲೆ ಐಪಿಸಿಯ ನಾಲ್ಕು ಸೆಕ್ಷನ್‌ಗಳನ್ನು ಹಾಕಲಾಗಿದೆ: 341 (ತಪ್ಪಾಗಿ ತಡೆಯೊಡ್ಡುವುದು), 392(ಕಳ್ಳತನ), 411(ಕದ್ದ ಸಂಪತ್ತನ್ನು ಅಪ್ರಾಮಾಣಿಕವಾಗಿ ಪಡೆದುಕೊಳ್ಳುವುದು) ಮತ್ತು 506(ಹತ್ಯೆ ಅಥವಾ ಗಂಭೀರ ಗಾಯಗೊಳಿಸುವ ಬೆದರಿಕೆ).
ಸಲ್ಮಾನ್‌ನ ವಕೀಲರಾದ ಎಚ್. ರೆಹ್ಮಾನ್ ಹೇಳುವ ಹಾಗೆ, ಈ ಮೂವರನ್ನು ನ್ಯೂ ಅಶೋಕ್ ನಗರದ ನಿವಾಸಿ, ವ್ಯವಸ್ಥಾಪನಾ ಇಂಜಿನಿಯರ್ ಆಗಿರುವ ಆನಂದ್ ಕುಮಾರ್ ಯಾದವ್ ಎಂಬಾತನ ದೂರಿನ ಆಧಾರದಲ್ಲಿ ಬಂಸಲಾಗಿದೆ. ಈತ ತನ್ನ ರೂ. 300 ಮತ್ತು ಕಾಸಿಯೊ ವಾಚ್ ಕಳವಾಗಿದೆ ಎಂದು ದೂರು ನೀಡಿದ್ದ. ಬಗ್ಗೆ ಸಂಪರ್ಕಿಸಿದಾಗ ಯಾದವ್, ನಾನು ಅಂದು 7 ಗಂಟೆಯ ಹೊತ್ತಿಗೆ ಮನೆಗೆ ವಾಪಸಾಗುತ್ತಿದ್ದ ವೇಳೆ ಆರೋಪಿಗಳು ನನ್ನನ್ನು ಚರಂಡಿಗೆ ದೂಡಿ ಹಾಕಿ ನನ್ನ ಬಳಿಯಿರುವ ಹಣ ಮತ್ತು ಇತರ ವಸ್ತುಗಳನ್ನು ನೀಡುವಂತೆ ಇಲ್ಲದಿದ್ದರೆ ಚೂರಿಯಿಂದ ಇರಿಯುವುದಾಗಿ ಬೆದರಿಕೆ ಹಾಕಿದರು. ನಂತರ ಅವರು ನನ್ನ ಹಣ ಮತ್ತು ವಾಚನ್ನು ಕಸಿದುಕೊಂಡು ಡಿಎನ್ ಡಿ ್ಲೆಓವರ್ ನತ್ತ ಓಡಿಹೋದರು. ಆಮೇಲೆ ನಾನು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಹೇಳಿಕೊಂಡಿದ್ದಾನೆ. ಬಗ್ಗೆ ಮಾತನಾಡಿದ ತನಿಖಾ ತಂಡದ ಅಕಾರಿ ಆರ್.ಸಿಂಗ್, ದೂರು ದಾಖಲಿಸಿದ ಕೆಲವೇ ಕ್ಷಣಗಳ ಒಳಗಾಗಿ ನಮ್ಮ ತಂಡ ಆರೋಪಿಗಳ ನ್ನು ಘಟನೆ ನಡೆದ ಸ್ಥಳದ ಸಮೀಪ ಬಂಸಿತ್ತು ಎಂದು ತಿಳಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಜಮೀನು ನೀಡಲು ವಿರೋಸಿದ ಕಾರಣ ಅವರನ್ನು ಸುಳ್ಳು ಆರೋಪದಲ್ಲಿ ಬಂಸಲಾಗಿದೆ ಎಂಬ ಆರೋಪವನ್ನು ಅವರು ತಳ್ಳಿಹಾಕಿದರು. ಬೆಳೆಗಳನ್ನು ನಾಶಪಡಿಸಲಾಯಿತು