ಧ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಗೆ ಮಾಜಿ ನ್ಯಾಯಾಧೀಶರು,ನ್ಯಾಯವಾದಿಗಳಿಂದ ಮನವಿ
ಮಾಜಿ ನ್ಯಾಯಮೂರ್ತಿಗಳು, ಐಪಿಎಸ್ ಅಧಿಕಾರಿಗಳು ಮತ್ತು ನ್ಯಾಯವಾದಿಗಳು ಶುಕ್ರವಾರ ಭಾರತದ ಮುಖ್ಯನ್ಯಾಯಮೂರ್ತಿಗೆ ಮತ್ತು ಭಾರತೀಯ ಸುಪ್ರೀಂಕೋರ್ಟಿನ ಇತರ ನ್ಯಾಯಾಧೀಶರಿಗೆ ಕೇಂದ್ರ ಸರಕಾರದ ಉನ್ನತ ಮತ್ತು ಅಧಿಕಾರಯುತ ಹುದ್ದೆಯಲ್ಲಿರುವ ವ್ಯಕ್ತಿಗಳು ಎಚ್ಚರಿಕೆ ಮತ್ತು ಬೆದರಿಕೆಯ ಹೇಳಿಕೆಗಳನ್ನು ಕೊಡುತ್ತಿರುವ ವಿರುದ್ಧ ಸ್ವಯಂಪ್ರೇರಿತರಾಗಿ ಸಾಂವಿಧಾನಿಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರದಲ್ಲಿ ಸಹಿ ಹಾಕಿದವರು ಹತಾಶೆಯ ಮತ್ತು ಧ್ವೇಷ ಸ್ಫುರಿಸುವ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಪ್ರವೃತ್ತಿ ಆರಂಭವಾಗಿದೆ ಎಂದು ವಿವರಿಸಿದ್ದಾರೆ. ಪ್ರಕರಣಗಳ ಸಂಖ್ಯೆಯನ್ನು ಪಟ್ಟಿ ಮಾಡಿರುವ ಪತ್ರದಲ್ಲಿ ಕೇಂದ್ರದ ಆಡಳಿತ ಪಕ್ಷ ಮತ್ತು ಅದರ ಪ್ರತಿನಿಧಿಗಳು ಈ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುವುದನ್ನು ಹೇಳಿ ಸುಪ್ರೀಂಕೋರ್ಟ್ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅದರ ಪೂರ್ಣ ವಿವರ ಮತ್ತು ಸಹಿಗಳು ಈ ಕೆಳಗಿನಂತಿವೆ.
ರಿಗೆ,
ಸುಪ್ರೀಂಕೋರ್ಟ್‌ನ ಗೌರವಾನ್ವಿತ ಭಾರತೀಯ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ಎಲ್ಲಾ ಗೌರವಾನ್ವಿತ ನ್ಯಾಯಾಧೀಶರಿಗೆ,
ಭಾರತೀಯ ಸುಪ್ರೀಂಕೋರ್ಟ್
ನವದೆಹಲಿ
ಗೌರವಾನ್ವಿತ ಭಾರತೀಯ ಮುಖ್ಯ ನ್ಯಾಯಮೂರ್ತಿ
ಮತ್ತು ಟಿಎಸ್ ಠಾಕೂರ್ ಮತ್ತು ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು
ಮತ್ತು ಎಲ್ಲಾ ಇತರ ಗೌರವಾನ್ವಿತ ಭಾರತೀಯ ಸುಪ್ರೀಂಕೋರ್ಟ್ ನ್ಯಾಯಾಧೀಶರು
ನಾವು ಗೌರವಾನ್ವಿತ ಸುಪ್ರೀಂಕೋರ್ಟಿನ ಮತ್ತು ಅದರ ಮೂಲಕ ರಾಷ್ಟ್ರದ ಗಮನಕ್ಕೆ ತರಲು ಬಯಸುವುದೇನೆಂದರೆ, ನಿರ್ದಿಷ್ಟವಾಗಿ ಎಚ್ಚರಿಕೆಯ ಮತ್ತು ಬೆದರಿಕೆಯ ಹೇಳಿಕೆಗಳನ್ನು ಕೊಡುತ್ತಿರುವ ಕೇಂದ್ರ ಸರಕಾರದಲ್ಲಿ ಈಗ ಸಾಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಗಳ ವಿರುದ್ಧ ಸ್ವಯಂಪ್ರೇರಿತ ಸಾಂವಿಧಾನಿಕ ಕ್ರಮವನ್ನು ತೆಗೆದುಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದೇವೆ. ಈ ಹೇಳಿಕೆಗಳು ಒಂದು ಪ್ರವೃತ್ತಿಯ ಭಾಗವಾಗಿರುವಂತೆ ಕಾಣಿಸುತ್ತದೆ.
2. ಈ ಹೇಳಿಕೆಗಳು ಭಾರತೀಯ ಪ್ರಜೆಗಳಲ್ಲಿ, ಶೋಷಿತ ವರ್ಗಗಳು, ಮುಖ್ಯವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳಲ್ಲಿ ಭಯ ಮತ್ತು ಅದ್ರತಾಭಾವವನ್ನು ಹುಟ್ಟುಹಾಕಿದೆ.
3. ಮುಸ್ಲಿಮರಿಗೆ ಅಂತಿಮ ಹೋರಾಟದ ಎಚ್ಚರಿಕೆ ಕೊಡಲಾಗಿದೆ ಎನ್ನುವ ಸುದ್ದಿ ವರದಿಯೊಂದನ್ನು ಇಲ್ಲಿ ನಾವು ಲಗತ್ತಿಸಿದ್ದೇವೆ. ಅದರಲ್ಲಿ ಕೇಂದ್ರ ಸರಕಾರದ ರಾಜ್ಯ ಸಚಿವರೊಬ್ಬರ ಮತ್ತು ಆಡಳಿತ ಪಕ್ಷದ ಸಂಸದರೊಬ್ಬರ ಸಮ್ಮುಖದಲ್ಲಿ ಮುಸ್ಲಿಮರನ್ನು ರಾಕ್ಷಸರಿಗೆ ಸಮಾನರು ಮತ್ತು ರಾವಣನ ವಂಶಸ್ಥರು ಎಂದು ಹೇಳಲಾಗಿದೆ. ಮತ್ತು ಅವರಿಗೆ ಅಂತಿಮ ಹೋರಾಟದ ಎಚ್ಚರಿಕೆ ಕೊಡಲಾಗಿದೆ (ಅನುಬಂಧ 1).
4. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ 2016 ಫೆಬ್ರವರಿ 29ರಂದು ಮುಖ್ಯ ವರದಿಯಾಗಿ ಪ್ರಕಟವಾದ ಪ್ರಮುಖ ಸುದ್ದಿ ವರದಿಯೊಂದರ ಪ್ರಕಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದವರು ಹಿಂದೂಗಳು ಮುಸ್ಲಿಮರನ್ನು ಮೂಲೆಗುಂಪು ಮಾಡಬೇಕು ಮತ್ತು ರಾಕ್ಷಸರನ್ನು ನಾಶಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಮಹೌರ್‌ನ 13ನೇ ದಿನದ ಅಂತ್ಯಕ್ರಿಯೆಗಳು ಮುಗಿಯುವ ಮೊದಲು ಸೇಡು ತೀರಿಸಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಘೋಷಿಸಲಾಗಿದೆ. ಮಾನವ ಅಸ್ಥಿಪಂಜರಗಳನ್ನು ಆತನ ಹುತಾತ್ಮ ದೇಹಕ್ಕೆ ಕೊಡುಗೆಯಾಗಿ ನೀಡಲಾಗುವುದು ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅಶೋಕ್ ಲಾವನಿಯ ಹೇಳಿದ್ದಾರೆ. ಅಶೋಕ್ ಈ ಮೊದಲು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದವರು.
5. ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡುತ್ತಾ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗಾರ್ಗ್ ಜನಸಮೂಹವನ್ನುದ್ದೇಶಿಸಿ, ನೀವು ಬುಲೆಟ್‌ಗಳನ್ನು ಹಾರಿಸಬೇಕು, ನೀವು ರೈಫಲ್‌ಗಳನ್ನು ಎತ್ತಿಕೊಳ್ಳಬೇಕು, ನೀವು ಚೂರಿಗಳನ್ನು ಚೂಪಾಗಿಸಬೇಕು. 2017ರಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಈಗಲೇ ನಿಮ್ಮ ಸಾಮರ್ಥ್ಯವನ್ನು ತೋರಿಸಿ ಎಂದು ಹೇಳಿರುವುದು ವರದಿಯಾಗಿದೆ. 5000ಕ್ಕೂ ಅಧಿಕ ಇದ್ದ ಜನಸಮೂಹ ಜಿಸ್ ಹಿಂದೂಕಾ ಖೂನ್ ನಾ ಖುಲೆ, ಖೂನ್ ನಹೀ ವೋ ಪಾನೀ ಹೆ (ಯಾವ ಹಿಂದೂನ ರಕ್ತ ಕುದಿಯುವುದಿಲ್ಲವೋ, ಆತ ಹಿಂದೂವಲ್ಲ) ಎಂದು ಘೋಷಣೆಗಳನ್ನು ಕೂಗಿದ್ದಾರೆ.
6. ಬಿಜೆಪಿಯ ಸಂಸದ ಬಾಬುಲಾಲ್ ಮುಸ್ಲಿಮರ ಜೊತೆಗೆ ಬಹಿರಂಗ ಹೋರಾಟಕ್ಕೆ ಒತ್ತಡ ಹೇರಿದ್ದಾರೆ: ನಮ್ಮನ್ನು ಪರೀಕ್ಷಿಸಲು ಪ್ರಯತ್ನಿಸಬೇಡಿ... ನಾವು ಸಮುದಾಯಕ್ಕೆ ಆಗುವ ಅವಹೇಳನವನ್ನು ಸಹಿಸುವುದಿಲ್ಲ. ಯಾವುದೇ ಕಾರಣಕ್ಕೂ ಅಶಾಂತಿ ಬಯಸುವುದಿಲ್ಲ. ಆದರೆ ನೀವು ಹಿಂದೂಗಳನ್ನು ಪರೀಕ್ಷಿಸಿದರೆ, ಆಗ ನಾವು ಅದಕ್ಕೆ ಪ್ರತೀಕಾರ ನೀಡಿ ಮುಸ್ಲಿಮರ ಮೇಲೆ ಸವಾರಿ ಮಾಡುತ್ತೇವೆ ಎಂು ಹೇಳಿರುವುದು ವರದಿಯಾಗಿದೆ.
7. ನಾವು ಈ ದ್ರೋಹಿಗಳ ತಲೆಗಳನ್ನು ಬಯಸುತ್ತೇವೆ, ಅರುಣ್ ಮಹೌರ್‌ನ ಕೊಲೆಗಾರರು., ಇದು ಸುಮ್ಮನೆ ಕುಳಿತುಕೊಳ್ಳುವ ಸಮಯವಲ್ಲ. ದಾಳಿ ಮಾಡಿ, ಬುರ್ಖಾ ಹಾಕಿ, ಆದರೆ ಇವರನ್ನು ಸುತ್ತುವರಿದು ಬಿಡಿ. ಒಂದು ತಲೆಯ ಬದಲಿಗೆ ಮತ್ತೊಂದು ತಲೆಯನ್ನು ಕತ್ತರಿಸಿ. ಎಂದು ಮತ್ತೊಬ್ಬ ಅದೇ ಪಕ್ಷದ ನಾಯಕ ಬಿಜೆಪಿಯ ಆಗ್ರಾದ ಕುಂದನಿಕಾ ಶರ್ಮಾ ಹೇಳಿದ್ದಾರೆ.
ಅಂತಿಮವಾಗಿ ಇದು ಸಮಾಜದ ಕೃತ್ಯವಾಗಿಬಿಡುತ್ತದೆ. ಒಮ್ಮೆ ಜನರನ್ನು ಸೇರಿಕೊಂಡ ಮೇಲೆ ಯಾವುದೇ ಪ್ರಶ್ನೆ ಏಳುವುದಿಲ್ಲ. ರಾಮ ಜನ್ಮಭೂಮಿ, ಮುಜಫರನಗರದ ಪ್ರಕರಣಗಳಂತೆ, ಪಕ್ಷವು ಸರ್ವನಾಶವಾಗಿದೆ. ಆದರೆ 13ನೇ ದಿನ ಕಳೆಯುವ ಮೊದಲೇ ಸೇಡನ್ನು ತೀರಿಸಿಕೊಳ್ಳುವುದು ಖಚಿತ. ರಕ್ತದ ಬದಲಿಗೆ ರಕ್ತ. ಕೃತ್ಯವನ್ನು ಮಂಟೋಲ ಪ್ರಾಂತದಲ್ಲಿಯೇ (ಮಹೌರ್ ಕೊಲೆ ನಡೆದ) ನಡೆಸಲಾಗುವುದು. ಹಾಗೆಯೇ ಆಗ್ರಾ ಸುತ್ತಲೂ ನಡೆಸಲಾಗುವುದು. ಹಿಂದೂಗಳು ಎಲ್ಲಿ ಬಹುಮತದಲ್ಲಿದ್ದಾರೆಯೋ ಅಲ್ಲಿ ನಡೆಯುತ್ತದೆ. ನಾವು ಪೂರ್ಣವಾಗಿ ಸಿದ್ಧವಾಗಿದ್ದೇವೆ. ಅವರು ತಿರುಗೇಟು ನೀಡಿದಲ್ಲಿ ಆಗ ಅದು ಮಹಾಸಂಗ್ರಾಮ, ಮಹಾಭಾರತ. ಅಂತಿಮ ಹೋರಾಟ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅಶೋಕ್ ಲಾವನಿಯ ಹೇಳಿರುವುದಾಗಿ ವರದಿಯಾಗಿದೆ.
9. ಕಾಳಿ ಪೂಜೆಯ ಸಮಯದಲ್ಲಿ ಮಾನವ ತಲೆಬುರುಡೆಗಳನ್ನು ರಾಕ್ಷಸನನ್ನು ಕೊಲ್ಲುವ ಮೊದಲು ಬಲಿ ಕೊಡಲಾಗುತ್ತದೆ. ಆತನ 13ನೇ ದಿನಕ್ಕೆ ಮೊದಲು ಹಿಂದೂ ಸಮುದಾಯ ಅಂತಹುದೇ ಕೃತ್ಯ ಮಾಡಲಿದೆ ಮತ್ತು ಈ ಬಲಿಗಳನ್ನು ಕೊಡಲಾಗುವುದು. ನನಗೆ ಆತ್ಮವಿಶ್ವಾಸವಿದೆ ಎಂದು ಲಾವನಿಯಾ ಹೇಳಿದ್ದಾರೆ.
10. ವಿಶ್ವಹಿಂದೂ ಪರಿಷತ್ ನಾಯಕ ಸುರೇಂದ್ರ ಜೈನ್ ತಾವೇ ನ್ಯಾಯ ಕೊಡುವುದಾಗಿ ಹೇಳಿದ್ದಾರೆ ಮತ್ತು ಅವರ ಸದಸ್ಯರನ್ನು ಪ್ರತೀ ಗ್ರಾಮಗಳಲ್ಲಿ ಗೋ ರಕ್ಷಾ ಸಮಿತಿಗಳನ್ನು ರಚಿಸಲು ಹೇಳಿದ್ದಾರೆ ಮತ್ತು ಆಡಳಿತಕ್ಕೆ ತಾವು ಅವರ ಕೆಲಸ ಮಾಡುತ್ತಿರುವ ಕಾರಣ ಮಧ್ಯಪ್ರವೇಶಿಸಬಾರದು ಎಂದಿದ್ದಾರೆ. ಯಾರೇ ಆಗಲಿ, ಐಜಿ ಕೂಡ ಇಲ್ಲಿಗೆ ಬಂದರೆ, ಅವರಿಗೆ ಕಾನೂನಿನ ಬಗ್ಗೆ ಸಂಶಯವಿದ್ದರೆ ನನ್ನನ್ನು ಕಾಣಬಹುದು. ನಾನು ಅವರಿಗೆ ಐಪಿಸಿಯ ನಿಯಮಗಳನ್ನು ತೋರಿಸುತ್ತೇನೆ. ನೀವು ನಿಮ್ಮ ಕರ್ತವ್ಯ ನಿರ್ವಹಿಸದೆ ಇದ್ದಾಗ ಸಾಮಾನ್ಯ ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಹುದು ಎಂದಿದ್ದಾರೆ.
11. ಭಜರಂಗ ದಳ ಜಿಲ್ಲಾ ಸಂಯೋಜಕ ಮುಸ್ಲಿಮರಿಗೆ ಬಹಿರಂಗವಾಗಿ ತಿರುಗುವಂತೆ ಸವಾಲೊಡ್ಡಿದ್ದಾರೆ.
12. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಇರುವ ವರದಿಯ ವಾಸ್ತವಾಂಶ ಹೇಳಿರುವ ಪ್ರಕಾರ 2017ರಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯುವುದು ಮತ್ತು ಈ ವರ್ಷ ಹಲವು ರಾಜ್ಯಗಳಲ್ಲಿ ಚುನಾವಣೆ ಇರುವ ಕಾರಣ ಸಾಮಾಜಿಕ ಸೌಹಾರ್ದ ಮತ್ತು ಶಾಂತಿಗೆ ಭಂಗವಾಗಲಿದೆ.
13. ಕೇಂದ್ರದಲ್ಲಿರುವ ಆಡಳಿತ ಪಕ್ಷ ಮತ್ತು ಅದರ ಪ್ರತಿನಿಧಿಗಳು ಕೇಂದ್ರ ಮತ್ತು ಸ್ಥಳೀಯ ಮಟ್ಟದಲ್ಲಿ ತಮ್ಮ ಅಪಾಯಕಾರಿ ಸಂವೇದನೆಗಳನ್ನು ಮುಂದಿಡುತ್ತಾ ಹಿಂಸೆಗೆ ಪ್ರಚೋದಿಸುತ್ತಿರುವುದು ವಾಸ್ತವ. ಹೀಗಾಗಿ ನಾವು ಪ್ರಜೆಗಳಾಗಿ ದೇಶದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ. ಗೌರವಾನ್ವಿತ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದೇವೆ.
13. ಭಾರತೀಯ ಸಂವಿಧಾನದ ವಿಧಿ 14, 19, 21 ಮತ್ತು 25 ಅಡಿಯಲ್ಲಿ ಜನರ ಮೂಲಭೂತ ಹಕ್ಕುಗಳಿಗೆ ರಕ್ಷಣೆ ಕೊಡಬೇಕು.
14. ಹೀಗಾಗಿ ಈ ವಿಚಾರವಾಗಿ ಗೌರವಾನ್ವಿತ ಸುಪ್ರೀಂ ಸ್ವಯಂಪ್ರೇರಿತವಾಗಿ ಗಮನಿಸಬೇಕು ಮತ್ತು ಎಲ್ಲಾ ಭಾರತೀಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ದೃಢವಾದ ನಿರ್ದೇಶನಗಳನ್ನು ಕೊಡಬೇಕು.
15. ಸಚಿವರು, ಸಂಸದ, ಶಾಸಕ ಮತ್ತು ಎಲ್ಲಾ ಇತರ ಆರೋಪಿಗಳಿಗೆ ವಿಧಿ 51ಎ (ಇ) ಅಡಿಯಲ್ಲಿ ಸೌಹಾರ್ದವನ್ನು ಪ್ರಾಯೋಜಿಸದೆ ಇರುವುದು ಮತ್ತು ವೈವಿಧ್ಯಮಯ ಧಾರ್ಮಿಕ ಆಚರಣೆಗಳಿರುವ ಭಾರತದಲ್ಲಿ ಸಹೋದರ ಭಾಳ್ವೆಯನ್ನು ಜನರ ನಡುವೆ ಬಿತ್ತದೆ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನೆರವೇರಿಸದೆ ಇುವುದಕ್ಕೆ ಶಿಕ್ಷೆಯಾಗಬೇಕು.
124A, 153A, 153B, 292, 293, 295A, 505
16. ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ ಸೆಕ್ಷನುಗಳ ಅಡಿಯಲ್ಲಿ ವಿಚಾರಣೆ ನಡೆಸಬೇಕು.
17. ಅಲ್ಲದೆ ಅಂತಹ ಸಭೆಗಳು ನಡೆದಲ್ಲಿ ಗಮನಹರಿಸಲು ಶಾಶ್ವತ ಮತ್ತು ಹಾಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಗೌರವಾನ್ವಿತ ಸುಪ್ರೀಂಕೋರ್ಟ್‌ನ್ನು ಒತ್ತಾಯಿಸುತ್ತಿದ್ದೇವೆ. ಆ ಮೂಲಕ ಧ್ವೇಷಪೂರಿತ ಪ್ರಚೋದನೆ ಮತ್ತು ಶೋಷಿತ ವರ್ಗದ ಮೇಲೆ ದಾಳಿಗಳನ್ನು ತಡೆಯಬೇಕು. ನಮ್ಮ ದೇಶವು ಇಂತಹ ಹೇಳಿಕೆಗಳಲ್ಲಿ ಅಂಚಿಗೆ ಸರಿದಿದೆ.
18. ಸಚಿವರು ಮತ್ತು ಆಯ್ದುಬಂದ ಪ್ರತಿನಿಧಿಗಳು ಮತ್ತು ಅಧಿಕಾರದಲ್ಲಿರುವ ಪಕ್ಷದ ಪದಾಧಿಕಾರಿಗಳು 2014 ಮೇ ನಂತರ ಮಾಡಿರುವ ಹತಾಶೆಯ ಮತ್ತು ಧ್ವೇಷಪೂರಿತ ಭಾವನೆಗಳನ್ನು ಮುಂದಿಟ್ಟು, ಈಗಿನ ವರದಿ ಕೇವಲ ಅಸಹಜವಲ್ಲ, ಬದಲಾಗಿ ಅಪಾಯಕಾರಿ ಮತ್ತು ಕ್ರೂರ ಪ್ರವೃತ್ತಿಯೊಂದರ ಭಾಗವಾಗಿದೆ ಎಂದು ಹೇಳುತ್ತಿದ್ದೇವೆ.
19. ಈ ಕೆಳಗೆ ಕೊಟ್ಟಿರುವ ಉಲ್ಲೇಖಗಳು ಸಂಕ್ಷಿಪ್ತವಾಗಿವೆ. ಪ್ರತೀ ಹೇಳಿಕೆ ನೀಡಿದಾತನಿಗೆ ಕನಿಷ್ಠ ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚು ಉಲ್ಲಂಘನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವುಗಳನ್ನು ನಾವು ಸೂಕ್ತ ವೇದಿಕೆಯ ಮುಂದಿಡಲು ಬಯಸುತ್ತೇವೆ.
ಸಹಿ ಹಾಕಿದವರ ಹೆಸರುಗಳು
ನ್ಯಾಯಮೂರ್ತಿ (ನಿವೃತ್ತ) ಪಿಬಿ ಸಾವಂತ್
ಜ್ಯೂಲಿಯೋ ರಿಬರೊ (ಮಾಜಿ ಐಪಿಎಸ್ ಅಧಿಕಾರಿ)
ನ್ಯಾಯಮೂರ್ತಿ (ನಿವೃತ್ತ) ರಾಜಿಂದರ್ ಸಾಚಾರ್
ನ್ಯಾಯಮೂರ್ತಿ (ನಿವೃತ್ತ) ಬಿಜಿ ಖೋಲ್ಸೆ ಪಾಟೀಲ್
ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್
ಇಕ್ಬಾಲ್ ಛಾಗ್ಲಾ (ಹಿರಿಯ ವಕೀಲ)
ಸೈರಸ್ ಗುಜ್ದರ್ (ಉದ್ಯಮಿ)
ಪಿ.ಎಂ.ಭಾರ್ಗವ (ವಿಜ್ಞಾನಿ)
ಡಾ|.ಸೈಯದ್ ಝಾಫರ್ ಮಹಮೂದ್ (ಅಧ್ಯಕ್ಷ, ಜಾಕತ್ ಫೌಂಡೇಶನ್ ಆಫ್ ಇಂಡಿಯಾ)
ರೆವರೆಂಡ್ ಫಾದರ್ ಡಾ|.ಪಾಕಿಯಮ್ ಟಿ.ಸಾಮ್ಯುಯೆಲ್
ನಂದನ್ ಮಾಲುಸ್ಟೆ
ಜನಕ್ ದ್ವಾರಕದಾಸ್ (ಹಿರಿಯ ವಕೀಲ)
ನವ್ರಾಜ್ ಎಚ್.ಸೀರ್ವೈ (ಹಿರಿಯ ವಕೀಲ)
ಅನಿಲ್ ಧಾರ್ಕರ್ (ಹಿರಿಯ ಪತ್ರಕರ್ತ)
ಐ.ಎಂ.ಖಾದ್ರಿ (ವಾಸ್ತುಶಿಲ್ಪಿ)
ಎಸ್.ಎಂ.ಮುಷ್ರಿಫ್ (ಮಾಜಿ ಐಜಿಪಿ)