ಮಹಿಳಾ ದಿನಾಚರಣೆ ಹಬ್ಬವಲ್ಲ; ಸಮಗ್ರಬೆಳವಣಿಗೆಗೆ ದಾರಿದೀಪ

Update: 2016-03-07 18:22 GMT

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಆಚರಣೆಯ ಮುಖ್ಯ ಉದ್ದೇಶ. ಆ ದಿನ ಮಹಿಳೆಯರ ಸ್ಥಾನಮಾನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸುದೀರ್ಘ ಚರ್ಚಿಸಿ ಅವರ ಸಮಗ್ರ ಬೆಳವಣಿಗೆಗೆ ಬೇಕಾದ ಕ್ರಮ ಕೈಗೊಂಡು ಅದನ್ನು ವರ್ಷವಿಡಿ ಅನುಷ್ಠಾನಗೊಳಿಸುವ ಮೂಲಕ ಮಹಿಳೆಯರ ರಕ್ಷಣೆ, ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸುವುದಾಗಿದೆ.

ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದ ಆಚರಣೆಗೊಂಡ ದಿನವೂ ಅಲ್ಲ, 1914 ನ್ಯೂಯಾರ್ಕ್‌ನಲ್ಲಿ ಕ್ಲಾರಾ ಜೆಟ್‌ಶಿನ್ ಎಂಬ ಮಹಿಳಾ ಕಾರ್ಮಿಕಳು, ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಸಿದ ದಿನ. ಹುಟ್ಟಿನಿಂದ ಸಾಯುವವರೆಗೂ ದಿನನಿತ್ಯ ಒಂದಿಲ್ಲೊಂದು ಸಂಘರ್ಷದಲ್ಲಿ ಬಿದ್ದು ಸಾಸಲು ಪ್ರಯತ್ನ ಪಡುತ್ತಿರುವ, ಸಂಘರ್ಷದಿಂದ ಸಾಸಿದ ದಿನದ ಒಂದು ಸ್ಮರಣೆಯ ದಿನ ಮಾತ್ರ.

ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು ವಿಶ್ವ ಮಹಿಳಾ ದಿನ ಎಂದು ಘೋಷಿಸಿತು. ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಯ ಮಧ್ಯೆ ಜೀವಿಸುವ ಕಾಲವಿತ್ತು. ಮಾತ್ರವಲ್ಲ ಓಟು ಮಾಡುವ ಅಕಾರವಿರಲಿಲ್ಲ. ಯಾವುದೇ ರೀತಿಯ ಸ್ವಾತಂತ್ರ್ಯ, ಸ್ವ-ನಿರ್ಧಾರ, ಇಚ್ಛೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಆಕೆಯನ್ನು ಅಬಲೆಯಾಗಿ ಪರಿಗಣಿಸಿ, ಬಾಲ್ಯದಲ್ಲಿ ತಂದೆಯ ಬಂಧನದಲ್ಲಿಟ್ಟು, ಯೌವನದಲ್ಲಿ ಗಂಡನ ಬಂಧನ, ಮುಪ್ಪಿನಲ್ಲಿ ಮಗನ ಬಂಧನದಲ್ಲಿರಿಸಿ ಆಕೆಯ ಸಂಪೂರ್ಣ ಸ್ವಾತಂತ್ರ್ಯ ಕಸಿದುಕೊಂಡು, ಆಕೆಯ ಸ್ವಾಭಿಮಾನವನ್ನೇ ಕಸಿದುಕೊಳ್ಳುವ ಜನತೆ. ಮಹಿಳೆಗೆ ಎಲ್ಲಾ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕ, ಶೈಕ್ಷಣಿಕ ವಾಗಿ ತೀರ ಹಿಂದುಳಿದು ಇತರರನ್ನು ಹೊಂದಿಕೊಂಡು, ಸಮಾಜಕ್ಕಂಜಿ ಜೀವಿಸುವ ಪರಿಸ್ಥಿತಿ.ನೆ ಶತಮಾನದಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲಳು. ಚಾಕಚಕ್ಯತೆ, ಸಾಮರ್ಥ್ಯ, ಆಸಕ್ತಿ, ಧೈರ್ಯ, ಚುರುಕುತನ ಇವೆಲ್ಲವೂ ಮಹಿಳೆಯರಿಗೆ ರಕ್ತದಲ್ಲಿ ಕರಗತವಾಗಿದೆ. ಇದೀಗ ಅದಕ್ಕೆ ಸೂಕ್ತ ವೇದಿಕೆ ಸಿದ್ಧವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು, ಆರ್ಥಿಕ, ರಾಜಕೀಯ, ಆಡಳಿತ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆಯನ್ನೇ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಅನೇಕ. ಇವೆಲ್ಲವೂ ನಮ್ಮ ದೇಶದ ಅಭಿವೃದ್ಧಿಯ ಸಂಕೇತವನ್ನು ಎತ್ತಿ ತೋರಿಸುತ್ತದೆ ಎಂದರೆ ತಪ್ಪಾಗಲಾರದು.ದರೆ ದುರದೃಷ್ಟಕರ ಸಂಗತಿಯೆಂದರೆ ಪ್ರಸ್ತುತ ದಿನಗಳಲ್ಲಿ ಮಹಿಳೆ ಈ ಹಿಂದೆ ಅನುಭವಿಸುವ ಸಮಸ್ಯೆಗಳಿಗೂ ಮಿಕ್ಕಿ ವಿವಿಧ ಸಮಸ್ಯೆಗಳು ವಿವಿಧ ರೂಪಗಳನ್ನು ತಾಳಿ, ಆಕೆಯ ದೈಹಿಕ ಮತ್ತು ಸಾಮಾಜಿಕ ಶಕ್ತಿಯನ್ನು ಕುಂದಿಸುತ್ತಿದೆ. ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಕೊಲೆ, ದೌರ್ಜನ್ಯ, ವೇಶ್ಯಾವಾಟಿಕೆ, ವರದಕ್ಷಿಣೆ ಹಿಂಸೆ, ಮಹಿಳೆಯರ ಕಳ್ಳಸಾಗಣೆ ಮುಂತಾದ ಸಮಸ್ಯೆಗಳ ಕೋಪಕ್ಕೆ ಸಿಲುಕಿ ವಿಲವಿಲನೆ ಒದ್ದಾಡುತ್ತಿದ್ದಾಳೆ. ಹೀಗಿರುವಾಗ ಮಹಿಳಾ ದಿನಾಚರಣೆಗೆ ಅರ್ಥ ಎಲ್ಲಿ ಬಂದೀತು.... ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಆಚರಣೆ ಬರೀ ಕ್ಯಾಲೆಂಡರ್, ಸಭೆ ಸಮಾರಂಭಗಳಲ್ಲಿ ಒಂದು ದಿನದ ಆಚರಣೆ ಆಗದೆ ಪ್ರತಿಯೊಬ್ಬರ ಮನ ಮುಟ್ಟಬೇಕು, ಮಾತ್ರವಲ್ಲ ಆಚರಣೆಯ ಆಶಯ ಸದಾ ಜೀವಂತವಾಗಿರಬೇಕು. ಆಗ ಮಾತ್ರ ಆಚರಣೆ ಯ ಉದ್ದೇಶ ಲ ಪಡೆಯಲು ಸಾಧ್ಯ.
ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ವೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಬೇಕು. ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು.
ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಕಾರ್ಯಸೂಚಿಯ ಬಗ್ಗೆ ಚರ್ಚಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ವರದಾನವಾಗಬಹುದೆಂಬ ಮಹದಾಸೆ ನಮ್ಮೆಲ್ಲರಲ್ಲಿ ಹುಟ್ಟಬೇಕು. ಇದಕ್ಕೆ ನಾವೆಲ್ಲರೂ ಕೈಜೋಡಿಸೋಣ.

Writer - ದಿನೇಶ್ ಗೌಡ ಕಲ್ಕುರ್ಣಿ

contributor

Editor - ದಿನೇಶ್ ಗೌಡ ಕಲ್ಕುರ್ಣಿ

contributor

Similar News