ಬ್ಯಾಂಕ್‌ಗಳ ವಿಲೀನ? ಪರಿಣಿತರ ಸಮಿತಿಯ ತೆಕ್ಕೆಗೆ

Update: 2016-03-07 18:28 GMT

ಇಂಗ್ಲಿಷ್ ನಾಣ್ಣುಡಿ so near...so at far ಇದು ಬ್ಯಾಂಕ್‌ಗಳು ವಿಲೀನದ ಪ್ರಹಸನದ ಗೊಂದಲವನ್ನು ಒಂದೇ ಸಾಲಿನಲ್ಲಿ ಹೇಳುತ್ತದೆ. 19 ರಲ್ಲಿ ಅಂದಿನ ಸರಕಾರ ಬ್ಯಾಂಕಿಂಗ್ ತಜ್ಞ ಎಮ್. ನರಸಿಂಹನ್ ನೇತೃತ್ವದ ಸಮಿತಿಯನ್ನು ನೇಮಿಸಿ ಬ್ಯಾಂಕ್‌ಗಳ ವಿಲೀನದ ಸಾಧಕ-ಬಾಧಕ ವಿಶ್ಲೇಷಿಸಿ,ಕಾರ್ಯ ಸೂಚಿ ಮತ್ತು ಸುದೀರ್ಘವಾದ ನೀಲನಕ್ಷೆಯನ್ನು ಸಿದ್ಧ್ದಪಡಿಸಿ, ಈ ನಿಟ್ಟಿನಲ್ಲಿ ಸೂಕ್ತ ಶಿಾರಸನ್ನು ಮಾಡಲು ನಿರ್ದೇಶಿಸಿತ್ತು. ಈ ಸಮಿತಿ ಆಳವಾಗಿ ಅಭ್ಯಸಿಸಿ, ಸಂಬಂಧಪಟ್ಟವರೊಡನೆ ಚರ್ಚಿಸಿ ಆಮೂಲಾಗ್ರವಾದ ರೋಡ್‌ಮ್ಯಾಪ್ ಅನ್ನು ಸಿದ್ಧ್ದಗೊಳಿಸಿತ್ತು.ಆದರೆ, ಸರಕಾರ 1998 ರ ವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅದಕ್ಕೆ ಬದಲಾಗಿ, 1998 ರಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಇನ್ನೊಂದು ವರದಿ ಕೊಡುವಂತೆ ಇದೇ ಸಮಿತಿಯನ್ನು ಕೇಳಿಕೊಂಡಿದ್ದು ಈ ಸಮಿತಿ ಇನ್ನೊಮ್ಮೆ ಪುನರ್ ಪರಿಶೀಲಿಸಿ 1998 ರಲ್ಲಿ ತನ್ನ ಪರಿಷ್ಕೃತ ವರದಿಯನ್ನು ನೀಡಿತು. ಈ ವರದಿಯಲ್ಲಿ ಬ್ಯಾಂಕ್‌ಗಳ ಕೇಂದ್ರ ಸ್ಥಾನ, ಭೌಗೋಳಿಕ ವ್ಯಾಪ್ತಿ, ಪ್ರದೇಶವಾರ ಬ್ಯಾಂಕ್ ಶಾಖೆ, ಮಾನವ ಸಂಪನ್ಮೂಲದ ಲಭ್ಯತೆ ಮತ್ತು ಅವರ ಭಾಷೆ,technical compitability ಗಳನ್ನು ಗಣನೆಗೆ ತೆಗೆದುಕೊಂಡು, ಈ ದೇಶದಲ್ಲಿ ಎಷ್ಟು ಬ್ಯಾಂಕ್‌ಗಳು ಇರಬೇಕು ಮತ್ತು ಯಾವ ಬ್ಯಾಂಕ್‌ಗಳನ್ನು ಯಾವ ಬ್ಯಾಂಕಿನಲ್ಲಿ ವಿಲೀನಗೊಳಿಸಬಹುದು ಎನ್ನುವುದರ ಬಗ್ಗೆೆ ವಿಸ್ತೃತ ವರದಿ ನೀಡಿತ್ತು. ಈ ವರದಿಯನ್ನು ನೋಡಿ ಬ್ಯಾಂಕಿಂಗ್ ವಲಯ ಮತ್ತು ಸಿಬ್ಬಂದಿ ತಲ್ಲಣಗೊಂಡಿದ್ದರು. ಶೇರು ಮಾರುಕಟ್ಟೆಯಲ್ಲಿ ಬ್ಯಾಂಕ್ ಶೇರುಗಳು ಒಂದೆರಡು ದಿನ ಭಾರೀ ಏರಿಳಿತ ಕಂಡಿದ್ದವು.ಕೆಲವು ದಿನಗಳಲ್ಲಿ ಅಲ್ಲದಿದ್ದರೂ ಕೆಲವು ತಿಂಗಳುಗಳಲ್ಲಿ ವಿಲೀನ ಖಚಿತ ಎನ್ನುವ ಭಾವನೆ ಸಂಬಂಧಪಟ್ಟವರಿಗೆಲ್ಲಾ ಉಂಟಾಗಿತ್ತು.

ನರಸಿಂಹನ್ ಸಮಿತಿ ತನ್ನ ಎರಡನೆ ಮತ್ತು ಪರಿಷ್ಕೃತ ವರದಿ ನೀಡಿ ಎಂಟು ವರ್ಷಗಳಾಗಿವೆ.ಈ ಮಧ್ಯೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ಆಡಳಿತದ ಗದ್ದುಗೆ ಏರಿ ಇಳಿದು ಆಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸ್ಟೇಟ್ ಬ್ಯಾಂಕ್‌ನಲ್ಲಿ ಅದರ ಎರಡು ಸಹವರ್ತಿ ಬ್ಯಾಂಕ್‌ಗಳ ವಿಲೀನ,19 ರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ ನ್ಯೂ ಬ್ಯಾಂಕ್ ಅ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆ್ ಕಾಮರ್ಸ್‌ದಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವಿಲೀನ ಬಿಟ್ಟರೆ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಕಾಣಲಿಲ್ಲ. ಈ ವಿಲೀನಗಳೂ ಉದ್ದೇಶಿತ ಮಹಾವಿಲೀನದ ಭಾಗವಾಗಿರದೆ, ಬೇರೆ ಬೇರೆ ಸಂದರ್ಭದಲ್ಲಿ ಪ್ರತ್ಯೇಕ ಕಾರಣಗಳಿಗಾಗಿ ನಡೆದಿವೆ. ಈ ಮಧ್ಯೆ, ಬ್ಯಾಂಕ್‌ಗಳ ವಿಲೀನದ ವಿಷಯ ಆಗೊಮ್ಮೆ-ಈಗೊಮ್ಮೆ ಮಿಂಚಿ ಮಾಯವಾಗುವುದನ್ನು ಬಿಟ್ಟು ಯಾವುದೇ ಮಹತ್ವದ ತಿರುವನ್ನು ಪಡೆಯಲಿಲ್ಲ. ರೈಲು ಇಲಾಖೆಯಲ್ಲಿif there is a will, then railway otherwise only surey ಎನ್ನುವಂತೆ ಇತರ ರಂಗದಲ್ಲಿ if there is a political will ...then there is a decision....otherwise oly commision and commitee ಎನ್ನುವ ಮಾತು ನೆನಪಿಗೆ ಬರುತ್ತದೆ.ಈ ಮಾತಿಗೆ ಪೂರಕ ಎನ್ನುವಂತೆ ಈ ನಿಟ್ಟಿನಲ್ಲಿ ಈಗ ಇನ್ನೊಮ್ಮೆ ಇನ್ನೊಂದು ಸಮಿತಿಯನ್ನು ರಚಿಸಿ ಶೀಘ್ರ ವರದಿ ಸಲ್ಲಿಸುವಂತೆ ಹಣಕಾಸು ಮಂತ್ರಿಗಳು ಆದೇಶಿಸಿದ್ದಾರಂತೆ.
ಬ್ಯಾಂಕ್‌ಗಳ ವಿಲೀನ ಏಕೆ?
ಜಾಗತಿಕ ಬ್ಯಾಂಕ್‌ಗಳಿಗೆ ಹೋಲಿಸಿದರೆ ಭಾರತೀಯ ಬ್ಯಾಂಕ್‌ಗಳು ಸಂಖ್ಯೆಯಲ್ಲಿ ದೊಡ್ಡದಾಗಿದ್ದು, ಸಾಮರ್ಥ್ಯದಲ್ಲಿ ತೀರಾ ಸಣ್ಣದಾಗಿವೆ. ಭಾರತದಲ್ಲಿ ಬ್ಯಾಂಕ್‌ಗಳ ದೊಡ್ಡಣ್ಣ ಎಂದು ಕರೆಯುವ ಮತ್ತು ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಎಂದು ಕರೆಯಲ್ಪಡುವ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ಜಾಗತಿಕ ಬ್ಯಾಂಕ್‌ಗಳ ಪಟ್ಟಿಯಲ್ಲಿ 6ನೆ ಸ್ಥಾನದಲ್ಲಿದೆ. ಇದನ್ನು ಬಿಟ್ಟರೆ ಐಸಿಐಸಿಐ ಬ್ಯಾಂಕ್, ಬ್ಯಾಂಕ್‌ಗಳ ಆಸ್ತಿಯ ದೃಷ್ಟಿಯಲ್ಲಿ 20ನೆ ಸ್ಥಾನದಲ್ಲಿದೆ. ಭಾರತೀಯ ಬ್ಯಾಂಕ್‌ಗಳ ಶೇರ್ ಕ್ಯಾಪಿಟಲ್ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಗೆ ಹೋಲಿಸಿದರೆ ತೀರಾ ಕಡಿಮೆಯಾಗಿದ್ದು, ಈ ಬ್ಯಾಂಕ್‌ಗಳು ಭಾರತೀಯ ಬ್ಯಾಂಕಗಳ ಸಂಗಡ ವ್ಯವಹರಿಸಲು ಹಿಂಜರಿಯುತ್ತವೆ ಎನ್ನುವ ಅಭಿಪ್ರಾಯಗಳೂ ಇವೆ. ಅಂತೆಯೇ ಬ್ಯಾಂಕ್‌ಗಳನ್ನು ವಿಲೀನ ಗೊಳಿಸಿ, ತನ್ಮೂಲಕ ಅವುಗಳ ಕ್ಯಾಪಿಟಲ್ ಬೇಸ್‌ನ್ನು ವೃದ್ಧ್ದಿಸಿ ಅವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಸುವಂತೆ ಮಾಡುವುದೇ ಈ ವಿಲೀನದ ಹಿಂದಿನ ಉದ್ದೇಶವಾಗಿದೆ. ಹಾಗೆಯೇ ಯಾವುದಾದರೂ ದೊಡ್ಡ ಸಾಲದ ಬೇಡಿಕೆಯನ್ನು ಏಕಾಂಗಿಯಾಗಿ ಬೇರೆ ಬ್ಯಾಂಕ್‌ಗಳ ಸಹಾಯವಿಲ್ಲದೆ ಪೂರೈಸುವುದೂ ಕೂಡಾ ಇದರಲ್ಲಿ ಅಡಕವಾಗಿದೆ. ಈ ವರೆಗಿನ ಎಲ್ಲಾ ವಿಲೀನಗಳು ಕೃಶ (weak) ಬ್ಯಾಂಕ್‌ಗಳನ್ನು ಉಳಿಸುವ ಮತ್ತು ಠೇವಣಿದಾರರನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಮಾಡಲಾಗಿತ್ತು. ಈಗ ಪ್ರಸ್ತಾಪಿಸಲಾಗಿರುವ ವಿಲೀನದ ಪ್ರಕ್ರಿಯೆ ಬ್ಯಾಂಕ್‌ಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವ, ಶಾಖೆಗಳ ದಟ್ಟನೆಯನ್ನು ನಿಯಂತ್ರಿಸುವ,ಬ್ಯಾಂಕ್‌ಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿದೆ
ಇದುವರೆಗೂ ಯಾಕೆ ಸಾಧ್ಯವಾಗಿಲ್ಲ?
      ಸಾಮಾನ್ಯವಾಗಿ ಪ್ರತಿಯೊಂದು ಬ್ಯಾಂಕ್‌ಗಳ ಹಿಂದೆೆ, ಕೆಲವು ನಿರ್ದಿಷ್ಟ ಜಾತಿ, ಧರ್ಮ, ಭಾಷೆಗಳ ಮತ್ತು ಭೌಗೋಳಿಕ ಪ್ರದೇಶದ ಅಗೋಚರ ಹಿನ್ನೆಲೆ ಇದ್ದು, ದೇಶದಲ್ಲಿ ಪ್ರಚಲಿತ ಇರುವ ಮತಬ್ಯಾಂಕ್ ತುಷ್ಟೀಕರಣ ಸರಕಾರವನ್ನು ಕಟ್ಟಿಹಾಕಿರಬೇಕೆಂದು ರಾಜಕೀಯ ವೀಕ್ಷಕರು ಮತ್ತು ಬ್ಯಾಂಕಿಂಗ್ ಪರಿಣಿತರು ಸಂದೇಹ ವ್ಯಕ್ತ ಮಾಡುತ್ತಾರೆ. ಹಾಗೆಯೇ ಬ್ಯಾಂಕ್‌ಗಳ ವಿಲೀನದಿಂದ ಕೆಲಸ ಕಳೆದುಕೊಳ್ಳಬಹುದಾದ ಕೆಲವು ಉನ್ನತ ಬ್ಯೂರಾಕ್ರಸಿಗಳು ಈ ವಿಳಂಬದ ಹಿಂದೆ ಇರಬಹುದು ಎನ್ನುವ ಶಂಖೆಯೂ ಇದೆ.ಲಾಗಾಯ್ತನಿಂದ ಬ್ಯಾಂಕ್‌ಗಳ ವಿಲೀನವನ್ನು ವಿರೋಸುತ್ತಿರುವ ಕಾರ್ಮಿಕ ಸಂಘಗಳ ಒತ್ತಡವೂ ಕಾರಣ ಇರಬಹುದು ಎಂದು ವ್ಯಾಖ್ಯಾನಿಸಲಾಗುತ್ತದೆ.
     ಬ್ಯಾಂಕ್‌ಗಳ ವಿಲೀನದ ನಿಟ್ಟಿನಲ್ಲಿ ಈಗಾಗಲೇ ಎರಡು ಸಮಿತಿಗಳ ವಿಸ್ತೃತ ವರದಿಗಳು ಸರಕಾರದ ಕೈಯಲ್ಲಿ ಇದ್ದು,ಮತ್ತು ಇತ್ತೀಚೆಗೆ ಸ್ಥಾಪಿಸಿದ bank board bureau ಕೂಡಾ ಬ್ಯಾಂಕ್‌ಗಳ ವಿಲೀನದ consolidation) ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದು, ಈ ವಿಷಯದಲ್ಲಿ ಇನ್ನೊಂದು ಸಮಿತಿಯ ಆವಶ್ಯಕತೆ ಇತ್ತೇ ಎನ್ನುವ ಜಿಜ್ಞಾಸೆ ಕೇಳುತ್ತಿದೆ. ಈ ಸಮಿತಿಯು ವರದಿ ನೀಡಿದ ಮೇಲೆ, ಅದರ ಶಿಾರಸುಗಳನ್ನು ಆಮೂಲಾಗ್ರವಾಗಿ ವಿಶ್ಲೇಷಿಸಲು ಇನ್ನೊಂದು ಸಮಿತಿಯ ರಚನೆಯನ್ನು ತಳ್ಳಿ ಹಾಕುವಂತಿಲ್ಲ. ಪರಿಣಿತರ ಪ್ರಕಾರ, ಈಗ ಬೇಕಾಗಿರುವುದು ಇಂದಿರಾ ಗಾಂಯವರಂತೆ, ದೃಢ ಮನಸ್ಸು ಮತ್ತು ರಾಜಕೀಯ ಇಚ್ಛಾಶಕ್ತಿ.ಲೋಕಸಭೆಯಲ್ಲಿ ಸರಕಾರಕ್ಕೆ ಬಹುಮತವಿದೆ. ಈ ವಿಲೀನ ಹಿಂದಿನ ಯುಪಿಎ ಸರಕಾರದ ಅಜೆಂಡಾ ಆಗಿರುವುದರಿಂದ ರಾಜ್ಯ ಸಭೆಯಲ್ಲೂ ಅಡತಡೆಗಳು ಬರಲಿಕ್ಕಿಲ್ಲ. ಸರಕಾರ ವಿಳಂಬ ಮಾಡದೇ ಮುಂದೆ ಹೆಜ್ಜೆ ಇಡಬೇಕಷ್ಟೇ?

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News