ದಿಲ್ಲಿಎತ್ತರಕ್ಕೆಬೆಳೆದ ಈಶಾನ್ಯಭಾರತದ ಕುಬ್ಜನಾಯಕ

Update: 2016-03-08 17:53 GMT

ಸಂಗ್ಮಾ ಅವರು ತಮ್ಮ ಇಹಲೋಕದ ಯಾತ್ರೆ ಮುಗಿಸಿದಾಗ ನಾವು ಅವರ ನಗೆ, ಮಿನುಗುವ ಕಣ್ಣು, ಅವರು ಸಿಡಿಸುತ್ತಿದ್ದ ಹಾಸ್ಯಚಟಾಕಿಗಳು ಕೂಡಾ ಕಳೆದುಹೋದವು. ಅವರ ರಾಜಕೀಯ ಉತ್ತರಾಧಿಕಾರಿಗಳು, ತುಂಬಬೇಕಾದ ಸ್ಥಾನ ಅತ್ಯಂತ ದೊಡ್ಡದು. ಕುಬ್ಜ ದೇಹದ, ಅಪೂರ್ವ ಹೃದಯದ ಅವರ ಪರಂಪರೆಗೆ ಸಾಠಿಯಾಗುವುದು ಸುಲಭ ಸಾಧ್ಯವಲ್ಲ.

ಮತಾಂತರ ನಿಷೇಧ ಕಾಯ್ದೆಗೆ ಒತ್ತಾಯಿಸುತ್ತಿದ್ದ ಜನತಾ ಪಕ್ಷದ ಸಂಸದರೊಬ್ಬರ ಮೇಲೆ ಸಂಸತ್ತಿನಲ್ಲಿ ಅದ್ಭುತ ವಾಗ್ದಾಳಿ ನಡೆಸಿದ ಯುವ, ಕುಬ್ಜ ಹಾಗೂ ಪ್ರಭಾವಿ ಸಂಸದ 1978ರಲ್ಲಿ ದೊಡ್ಡ ಸುದ್ದಿ ಮಾಡಿದ. 1975ರಿಂದ 77ರ ಅವಧಿಯಲ್ಲಿ ತುರ್ತು ಪರಿಸ್ಥಿತಿ ಹೇರಿದ ಕ್ರಮದ ವಿರುದ್ಧದ ಜನಾಕ್ರೋಶದಿಂದ ಅಧಿಕಾರದಿಂದ ಕಿತ್ತೆಸೆಯಲ್ಪಟ್ಟ ಇಂದಿರಾಗಾಂಧಿಯವರ ಗಮನವನ್ನು ಸಂಸತ್ತು ಮತ್ತು ಮಾಧ್ಯಮದ ಮೂಲಕ ಬಿರುಗಾಳಿ ಎಬ್ಬಿಸಿದ ಈ ಯುವಕ ತಕ್ಷಣ ಸೆಳೆದ.
ಚಿಕ್ಕ, ಚೂಟಿ ಹಾಗೂ ವಾಗ್ಮಿ ಸಂಸದ, ಕೆಥೊಲಿಕ್ ಬಿಷಪ್ ಕಾನ್ಫೆರನ್ಸ್ ಆಫ್ ಇಂಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ತುಡಿತದಲ್ಲಿದ್ದುದು ನನಗೆ ಇಂದಿಗೂ ನೆನಪಿದೆ. ಆ ವ್ಯಕ್ತಿ 30 ವರ್ಷದ ಪುರ್ನೊ ಅಜಿತೊಕ್ ಸಂಗ್ಮಾ. ಅಲ್ಲಿ ಮೊದಲ ಬಾರಿಗೆ ಅವರ ಉಪಸ್ಥಿತಿ ಎದ್ದುಕಂಡದ್ದು ಹಾಗೂ ಅವರ ಧ್ವನಿ ಕೇಳಿದ್ದು.ಕಾಲದಲ್ಲಿ ಆ ಯುವಕನ ಊರನ್ನು ಬಹುತೇಕ ಭಾರತೀಯರು ಕೇಳಿಯೇ ಇರಲಿಲ್ಲ. ಅದು ಗಾರೊ ಹಿಲ್ಸ್ ಜಿಲ್ಲೆ. (ಬಹುತೇಕ ಭಾರತೀಯರು ಇಂದಿಗೂ ಅದನ್ನು ನಕ್ಷೆಯಲ್ಲಿ ವಿಕಿಪೀಡಿಯಾ ಆಥವಾ ಗೂಗಲ್ ನೆರವು ಇಲ್ಲದೇ ಹುಡುಕುವುದು ಕಷ್ಟ). ಗಾರೊ ಹಿಲ್ಸ್ ಹುಲುಸಾದ ಹಾಗೂ ಪ್ರಶಾಂತ ಪ್ರದೇಶ. ಈಗಲೂ ಹಸಿರಾಗಿದ್ದರೂ, ದೇಶವಿರೋಧಿ ಸಶಸ್ತ್ರ ಗುಂಪುಗಳ ದ್ವೇಷ, ಅನುಮಾನ, ಕ್ರೌರ್ಯ ಹಾಗೂ ರಕ್ತಪಾತದಿಂದ ಕುಖ್ಯಾತವಾಗಿದೆ. ಇದು ಶಿಲ್ಲಾಂಗ್ ನಗರವನ್ನು ರಾಜಧಾನಿಯಾಗಿ ಹೊಂದಿರುವ ಮೇಘಾಲಯದಲ್ಲಿದೆ. ಹಿಂದಿನ ಅವಿಭಜಿತ ಅಸ್ಸಾಂನ ಕೋಟೆ ಪ್ರದೇಶ.
ಆರಂಭ ಎಲ್ಲಿ?
ಸಂಗ್ಮಾ ಅವರ ರಾಜಕೀಯ ವೃತ್ತಿಯ ಅಂಶಗಳು ನಮಗೆ ಚೆನ್ನಾಗಿ ತಿಳಿದಿದೆ. ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರೆಡೆಗಳಲ್ಲಿ ಯಥೇಚ್ಛವಾಗಿ ಈ ಬಗ್ಗೆ ವಿವರ ಸಿಗುತ್ತದೆ. ಅವರ ಬೆಳವಣಿಗೆ ನಿಜಕ್ಕೂ ಅಚ್ಚರಿ. ತೀರಾ ಹಿಂದುಳಿದ ಪ್ರದೇಶದ, ಅಭಿವೃದ್ಧಿಯ ಸೂಚಕಗಳೇ ಕಂಡುಬಾರದ ಪ್ರದೇಶದಿಂದ ಅವರು ಬೆಳೆದವರು. ಆದರೆ ತ್ಯಾಗಿ ಮಸೂದೆ (ಕ್ರೈಸ್ತಧರ್ಮಕ್ಕೆ ಮತಾಂತರವನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದ್ದು) ಅವರು ನಿಜಕ್ಕೂ ರಾಷ್ಟ್ರಮಟ್ಟದ ನಾಯಕನಾಗಿ ಬೆಳೆಯಲು ವೇದಿಕೆ ಕಲ್ಪಿಸಿಕೊಟ್ಟಿತು. ಇದಕ್ಕಾಗಿ ಬಲಪಂಥೀಯ ಹಿಂದೂ ಗುಂಪುಗಳ ವಿರೋಧ ಕಟ್ಟಿಕೊಂಡರು. ಮತಾಂತರದ ಹಕ್ಕನ್ನು ದಮನಿಸುವ ಪ್ರಯತ್ನವನ್ನು ಪ್ರಶ್ನಿಸಿದರು. ಈ ಮಸೂದೆಯಲ್ಲಿ ಮತಾಂತರದ ಉದ್ದೇಶ ಹಾಗೂ ಕಾರಣಗಳನ್ನು ಸೌಮ್ಯವಾಗಿ ವಂಚನೆ, ಆಮಿಷ, ಬಲಾತ್ಕಾರ ಹಾಗೂ ಭಯ ಹುಟ್ಟಿಸಿ ಮಾಡಲಾಗುತ್ತದೆ ಎಂದು ಬಿಂಬಿಸಲಾಗಿತ್ತು.
ಒಳ್ಳೆಯದು; ಆದರೆ ವಂಚನೆ ಹಾಗೂ ಆಮಿಷವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಸಂಗ್ಮಾ ಪ್ರಶ್ನಿಸಿದ್ದರು. ಜನರಿಗೆ ಇಂಗ್ಲಿಷ್ ಬೋಧಿಸುವುದು ಅಥವಾ ಅವರಿಗೆ ಆರೋಗ್ಯ ಸೇವೆ ಒದಗಿಸುವುದು ವಂಚನೆ ಅಥವಾ ಆಮಿಷ ಎನಿಸುತ್ತದೆಯೇ?ಂದಿನ ರಾಷ್ಟ್ರೀಯತೆ ಚರ್ಚೆ ಅಥವಾ ಪರಸ್ಪರ ನಿಂದನೆಯ ಗದ್ದಲ, ಘೋಷಣೆ ಹಾಗೂ ಪ್ರತಿದಾಳಿಯ ನಡುವೆ ಚರ್ಚೆಯಲ್ಲಿ ಅಂಗೀಕಾರವಾಗುವ ವಿಷಯಗಳ ಬಗ್ಗೆ ನಾನು ಹೇಳಬೇಕಾದ್ದು ಬಹಳಷ್ಟಿದೆ ಎಂದು ಹೇಳುತ್ತಲೇ ಸಂಗ್ಮಾ ಒಂದಷ್ಟು ಅಂಶಗಳನ್ನು ಸ್ಪಷ್ಟಪಡಿಸಿದ್ದರು. ಸಂಗ್ಮಾ ಬದುಕಿನಲ್ಲಿ ಶಿಕ್ಷಣ ಹಾಗೂ ಸುತ್ತಲಿನ ಜಗತ್ತಿನ ಬಗೆಗೆ ತಿಳಿಸಿಕೊಟ್ಟದ್ದು ಇಟಲಿಯ ಯಹೂದಿ ಧರ್ಮಗುರು, ಪಾದರ್ ಗಿಮೊವನ್ನಿ ಬಟ್ಟಿಸ್ತಾ ಬ್ಯುಸೊಲಿನಿ. ದನ ಕಾಯುವ ಬಾಲಕನನ್ನು ಶಾಲೆಗೆ ಕರೆತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೊದಲು ಶಿಲ್ಲಾಂಗ್ ಹಾಗೂ ಬಳಿಕ ದಿಬ್ರೂಘರ್‌ನಲ್ಲಿ ಅಧ್ಯಯನ ನಡೆಸಿದ ಅವರು, ಸ್ನಾತಕೋತ್ತರ ಪದವೀಧರ. ಅವರು ಅಸ್ಸಾಮಿ ಭಾಷೆಯಲ್ಲಿ ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರು ಎಂದರೆ, ರ್ಯಾಲಿಗಳಲ್ಲಿ ಭಾಷಣ ಮಾಡಿ, ಸಂವಾದ ನಡೆಸಿಕೊಡುತ್ತಿದ್ದರು. ನಾವು ಪ್ರತಿ ಬಾರಿ ಭೇಟಿಯಾದಾಗಲೂ ಆ ಭಾಷೆಯಲ್ಲೇ ಚರ್ಚಿಸುತ್ತಿದ್ದೆವು.ೀ ಅವರ ರಾಜಕೀಯ ಜೀವನದಲ್ಲಿ, ಸಂಗ್ಮಾ ಬಹುಶಃ ಅವರ ಸಮತೋಲನ ಹಾಗೂ ಮೂಲವನ್ನು ಕಳೆದುಕೊಂಡ ನಿದರ್ಶನ ಇಲ್ಲ. ಎಲ್ಲರೂ ಮರೆತ, ನಿರ್ಲಕ್ಷಿಸಿದ, ಪ್ರದೇಶದ ಸಲುವಾಗಿ ದೊಡ್ಡ ಹೋರಾಟವನ್ನೇ ಮಾಡಿದರು. ಆದರೆ ಈ ವಿಷಯಗಳನ್ನು ಮೀರಿ ಅವರು ಬೆಳೆದು ನಿಂತರು. ಇದು 1977ರಿಂದ ಸತತ ಒಂಬತ್ತು ಬಾರಿ ಗೆಲುವು ಸಾಧಿಸಲು ಅವರಿಗೆ ನೆರವಾಯಿತು.
ಮಹತ್ವದ ವ್ಯಕ್ತಿ
ಹೊಸದಾಗಿ ಆಯ್ಕೆಯಾದ ಸಂಸದರ ಬಗ್ಗೆ ಇಂದಿರಾಗಾಂಧಿ ಹೇಗೆ ಕಾಳಜಿ ವಹಿಸುತ್ತಿದ್ದರು ಎಂಬ ಬಗ್ಗೆ ಒಂದು ಕಥೆಯಿದೆ. ಮೊದಲ ಬಾರಿ ಆಯ್ಕೆಯಾದ ಸಂಸದರನ್ನು ಅವರು ಮನೆಗೆ ಕರೆಯುತ್ತಿದ್ದರು. ಔಪಚಾರಿಕವಾಗಿ ಮೇಜಿನ ಮುಂದೆ ಹೇಗೆ ಕುಳಿತುಕೊಳ್ಳಬೇಕು ಎಂದು ಮೊದಲು ತೋರಿಸಿಕೊಡುತ್ತಿದ್ದರು. ಯಾವ ಭಾಗದ ಚಾಕುಕತ್ತರಿಯನ್ನು ಮೊದಲು ಬಳಸಬೇಕು ಎಂದು ತೋರಿಸುತ್ತಿದ್ದರು. ಏಕೆಂದರೆ ಹೊರದೇಶಗಳಿಗೆ ಹೋದಾಗ ಹೇಗೆ ವರ್ತಿಸಬೇಕು ಮತ್ತು ಮುಜುಗರಕ್ಕೀಡಾಗಬಾರದು ಎಂಬ ಕಾರಣಕ್ಕೆ ಇದನ್ನು ಹೇಳಿಕೊಡುತ್ತಿದ್ದರು. ನೀವು ಭಾರತದ ಪ್ರತಿನಿಧಿಗಳಾಗಿ ಪಾಲ್ಗೊಳ್ಳುವವರು. ಒಂದು ಪಕ್ಷ ಅಥವಾ ಸರಕಾರದ ಪ್ರತಿನಿಧಿಗಳಾಗಿ ಅಲ್ಲ ಎಂದು ಸಂಗ್ಮಾ ಒಮ್ಮೆ ಇಂದಿರಾ ಗಾಂದಿಯನ್ನು ನೆನಪಿಸಿಕೊಂಡಿದ್ದರು.
ಸಂಗ್ಮಾ ಅತಿ ದೀರ್ಘ ಅವಧಿಯ ಕಾರ್ಮಿಕ ಸಚಿವರಾಗಿ (ರಾಜ್ಯಖಾತೆ) ಮುಂದುವರಿದರು. ಜತೆಗೆ ತಮ್ಮ ವೃತ್ತಿಜೀವನದಲ್ಲಿ ಐದು ಇತರ ಖಾತೆಗಳನ್ನೂ ನಿರ್ವಹಿಸಿದರು. ಪ್ರಧಾನಿ ನರಸಿಂಹರಾವ್, ಸಂಗ್ಮಾ ಅವರನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಂಪುಟ ದರ್ಜೆ ಸಚಿವರಾಗಿ 1990ರ ದಶಕದಲ್ಲಿ ನೇಮಿಸಿಕೊಂಡರು. ಈ ಅವಧಿಯಲ್ಲಿ ಸಂಗ್ಮಾ ಹಲವು ಮಂದಿ ಸ್ನೇಹಿತರನ್ನು ಮತ್ತು ಬೆರಳೆಣಿಕೆಯ ಶತ್ರುಗಳನ್ನು ಮಾಡಿಕೊಂಡರು. ಅವರ ವಾಮನರೂಪ ಹಾಗೂ ಲವಲವಿಕೆಯ ಶೈಲಿಯಿಂದ ಸದಾ ಹಸನ್ಮುಖರಾಗಿ ಸ್ನೇಹಹಸ್ತ ಚಾಚುತ್ತಿದ್ದರು. ಬಳಿಕ ಅವರು, ಪ್ರಧಾನಿ ಹುದ್ದೆಯೊಂದನ್ನು ಹೊರತುಪಡಿಸಿ ಸಂಪುಟದ ಎಲ್ಲ ಹೊಣೆಗಾರಿಕೆಯನ್ನೂ ನಾನು ನಿರ್ವಹಿಸಿದ್ದೇನೆ ಎಂದು ತಮಾಷೆಯಾಗಿ ಹೇಳುತ್ತಿದ್ದರು.ವರ ಬೆಡಗು, ವಿನೋದ, ಸಹನೆ ಹಾಗೂ ಸಂಧಾನ ಕೌಶಲದಿಂದಾಗಿ ಅವರು 1996ರಲ್ಲಿ ಲೋಕಸಭೆಯ ಸ್ಪೀಕರ್ ಹುದ್ದೆಗೆ ಏರಿದರು. ಒಂದು ಸಂಜೆ ಸ್ನೇಹಿತರ ಜತೆಗಿನ ಪಾನಗೋಷ್ಠಿಯಲ್ಲಿ ಅವರು, ಇಂಥದ್ದೇ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು. ಆಗ ಲೋಕಸಭೆಯಲ್ಲಿ ಗದ್ದಲ ಮಿತಿಮೀರಿತ್ತು. ಅವರು ಅದನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದರು. ವೌನದಿಂದ ಇರುವಂತೆ ಸೂಚನೆ ನೀಡಿ, ಅಲ್ಪಾರ್ಥಕವಾಗಿ ಸ್ಪೀಕರ್ ಈಗ ವಿನೋದದ ಅಧಿವೇಶನ ಎಂದು ಸಾರಿದರು. ಇಡೀ ಸದನದಲ್ಲಿ ಮತ್ತೆ ಕೋಲಾಹಲ ಸ್ಫೋಟಗೊಂಡಿತು. ಆಗ ಕೇವಲ ನಗುವಿನೊಂದಿಗೆ ಅದನ್ನು ನಿಯಂತ್ರಿಸಿದರು.
ಸಾಧನೆಯ ಪಯಣ
ರಾಜೀವ್‌ಗಾಂಧಿ 1980ರ ದಶಕದಲ್ಲಿ ಸಂಗ್ಮಾ ಅವರನ್ನು ಶಿಲ್ಲಾಂಗ್ ಮುಖ್ಯಮಂತ್ರಿಯಾಗಿ ಕಳುಹಿಸಿದಾಗ, ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಿದರು. ಸರಕಾರೇತರ ಗುತ್ತಿಗೆದಾರರ ಮೇಲೆ ಚಾಟಿ ಬೀಸಿದ ಅವರು, ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸದೇ, ದೊಡ್ಡ ಸಂಪತ್ತನ್ನು ಕ್ರೋಡೀಕರಿಸಿದ್ದನ್ನು ಆಕ್ಷೇಪಿಸಿದರು. ಇದಕ್ಕೆ ಅವರ ಪಕ್ಷದಲ್ಲೇ ಪ್ರಬಲ ವಿರೋಧ ವ್ಯಕ್ತವಾಯಿತು. ಕೇಳಿ ರಾಜೀವ್, ಈ ಚಿಕ್ಕ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಕಾಂಗ್ರೆಸ್‌ನಂತಹ ಪಕ್ಷದ ನಾಯಕನಾಗಿ, ಇಂದು ದಿಲ್ಲಿಗಿಂತಲೂ ಕಠಿಣ ಪರಿಸ್ಥಿತಿ ಇದೆ ಎಂದು ಶಿಲ್ಲಾಂಗ್‌ನ ಪೋಲೊ ಮೈದಾನ ಬಳಿಯ ತಮ್ಮ ಅಧಿಕೃತ ನಿವಾಸದಲ್ಲಿ ನಗುತ್ತಾ ಹೇಳಿದ್ದರು.
ಆಂತರಿಕ ಕಚ್ಚಾಟ ಮತ್ತು ಕಾಯ್ದಿರಿಸಿದ ಪಟ್ಟಿಯ ಮುಖ್ಯಮಂತ್ರಿಗಳಿರುವ ಮೇಘಾಲಯದಂಥ ರಾಜ್ಯದಲ್ಲಿ ಎರಡು ಅವಧಿಯನ್ನು ಸದ್ದಿಲ್ಲದೆ ಪೂರೈಸಿದರು.
ದಶಕದ ಬಳಿಕ ಸೋನಿಯಾಗಾಂಧಿ ಪಕ್ಷದ ಮುಖ ಹಾಗೂ ಶಕ್ತಿಯಾಗಿ ರೂಪುಗೊಂಡ ತಕ್ಷಣ ಅವರು ಕಾಂಗ್ರೆಸ್ ಹಡಗಿನಿಂದ ಶರದ್ ಪವಾರ್ ಹಾಗೂ ತಾರೀಕ್ ಅನ್ವರ್ ಜತೆ ಹೊರನಡೆದರು. ಅವರ ವಿದೇಶಿ ಮೂಲ ಹಾಗೂ ವಂಶಪಾರಂಪರ್ಯ ರಾಜಕೀಯದ ವಿರುದ್ಧ ಸಿಡಿದೆದ್ದು, ಹೊಸದಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯನ್ನು 1999ರಲ್ಲಿ ಸ್ಥಾಪಿಸಿದರು. ಮಹಾರಾಷ್ಟ್ರ ಹಾಗೂ ಮೇಘಾಲಯದಲ್ಲಿ ಪ್ರಬಲವಾಗಿದ್ದ ಪಕ್ಷ ಕ್ರಮೇಣ ತನ್ನ ಸಾಮರ್ಥ್ಯ ಹಾಗೂ ಪ್ರಭಾವವನ್ನು ಕುಗ್ಗಿಸಿಕೊಂಡಿತು.ನ್‌ಸಿಪಿಯಿಂದ ಸಿಡಿದ ಅವರನ್ನು 2012ರ ರಾಷ್ಟ್ರಪತಿ ಚುನಾವಣೆಯಲ್ಲಿ, ಪ್ರಣಬ್ ಮುಖರ್ಜಿಗೆ ಸ್ಪರ್ಧೆ ನೀಡುವ ಸ್ಥಿತಿಯೇ ಇಲ್ಲದಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ ಬಿಂಬಿಸಲಾಯಿತು. ಬಳಿಕ ಅವರು ನ್ಯಾಶನಲ್ ಪೀಪಲ್ಸ್ ಪಾರ್ಟಿಯನ್ನು ರಚಿಸಿ, ಒಂಬತ್ತನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಈ ಅವಧಿಯಲ್ಲಿ ಅವರು ಬಿಜೆಪಿಗೆ ಸನಿಹವಾದರು.ದರೆ ಅವರ ಯಶಸ್ಸಿನ ಓಟವನ್ನು ಅವರು ಹಗುರವಾಗಿ ಪರಿಗಣಿಸಿದರು. 2004ರ ಚುನಾವಣೆಯಲ್ಲಿ ಅವರಿಗೆ ಮುಕುಲ್ ಸಂಗ್ಮಾ (ಈಗ ಮೇಘಾಲಯ ಮುಖ್ಯಮಂತ್ರಿ) ಅವರಿಂದ ಕಠಿಣ ಸ್ಪರ್ಧೆ ಎದುರಾಯಿತು. ತಮ್ಮ ಹಿರಿಯ ಮುಖಂಡನನ್ನು ವಿಧಾನಸಭೆಯಲ್ಲಿ ಹೊಗಳುವ ವೇಳೆ ಭಾವುಕರಾಗಿ ಮುಕುಲ್ ಅತ್ತಿದ್ದರು. ಚುನಾವಣಾ ಪ್ರಚಾರ ವೇಳೆ ಕೂಡಾ ನಾನು ಪಿ.ಎ.ಸಂಗ್ಮಾ ಅವರಿಗೆ ನಿಮ್ಮ ಗೆಲುವು ಖಚಿತ ಎಂದು ಹೇಳಿದ್ದೆ. ಆಗ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ ಅವರು, ಅದು ಹಾಗಲ್ಲ; ಇದು ಕಠಿಣ ಸ್ಪರ್ಧೆ. ಕಾಂಗ್ರೆಸ್ ಸಾಧ್ಯವಾದ ಎಲ್ಲವನ್ನೂ ನನ್ನತ್ತ ಎಸೆಯುತ್ತಿದೆ. ಈ ಚುನಾವಣೆ ಸುಲಭವಲ್ಲ ಎಂದು ಹೇಳಿದ್ದರು. ಆ ಚುನಾವಣೆಯಲ್ಲೂ ಅವರು ಗೆಲುವು ಸಾಧಿಸಿದರು. ಆದರೆ ಪ್ರತಿಯೊಂದನ್ನೂ ನಿರ್ಧರಿಸುವವರು ಮತದಾರರು; ನಮ್ಮ ಅದೃಷ್ಟ ಅಲ್ಲ ಎನ್ನುವುದನ್ನು ಖಚಿತವಾಗಿ ಅವರು ಅರ್ಥ ಮಾಡಿಕೊಂಡಿದ್ದರು ಎನ್ನುವುದು ಇದರಿಂದ ಸ್ಪಷ್ಟವಾಯಿತು.
ಪರಂಪರೆಗೆ ಕೊನೆ
ಅವರು ಕಾರ್ನಾಡ್, ಜೇಮ್ಸ್ ಮತ್ತು ಅಗತಾ ಹೀಗೆ ತಮ್ಮ ಮಕ್ಕಳನ್ನೂ ರಾಜಕೀಯಕ್ಕೆ ಸಜ್ಜುಗೊಳಿಸಿದರು. ಮಕ್ಕಳು ಮೇಘಾಲಯ ವಿಧಾನಸಭೆಯಲ್ಲಿ ಶಾಸಕ ಹಾಗೂ ಸಚಿವರಾದರೆ, ಅವರು ಸಂಸತ್ ತೊರೆದ ಬಳಿಕ ಮಗಳು 2008ರ ಚುನಾವಣೆಯಲ್ಲಿ ಲೋಕಸಭೆಯಲ್ಲಿ ತಂದೆಯ ಸ್ಥಾನ ತುಂಬಿದರು. ಸಂಗ್ಮಾ ಮತ್ತೆ ರಾಜ್ಯ ರಾಜಕೀಯಕ್ಕೆ ಮರಳಿ, ತಮ್ಮ ಇಬ್ಬರು ಮಕ್ಕಳೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರು.
ಮುಂದಿನ ವರ್ಷಗಳಲ್ಲಿ ಆ ಭಾಗದಲ್ಲಿ ಹಾಗೂ ಅವರ ತವರು ರಾಜ್ಯದಲ್ಲಿ ಕೂಡಾ ಅವರ ಪ್ರಭಾವ ಕಡಿಮೆಯಾದರೂ, ಕಳೆದ 40 ವರ್ಷಗಳಲ್ಲಿ ಈಶಾನ್ಯ ಭಾರತ ಬೆಳೆಸಿದ ಯಾವ ನಾಯಕರು ಕೂಡಾ ಸಂಗ್ಮಾ ಅವರ ರಾಜಕೀಯ ಎತ್ತರ ಹಾಗೂ ದೃಷ್ಟಿಕೋನಕ್ಕೆ ಬೆಳೆಯಲಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಅವರು ತಮ್ಮ ಇಹಲೋಕದ ಯಾತ್ರೆ ಮುಗಿಸಿದಾಗ ನಾವು ಅವರ ನಗೆ, ಮಿನುಗುವ ಕಣ್ಣು, ಅವರು ಸಿಡಿಸುತ್ತಿದ್ದ ಹಾಸ್ಯಚಟಾಕಿಗಳು ಕೂಡಾ ಕಳೆದುಹೋದವು. ಅವರ ರಾಜಕೀಯ ಉತ್ತರಾಧಿಕಾರಿಗಳು, ತುಂಬಬೇಕಾದ ಸ್ಥಾನ ಅತ್ಯಂತ ದೊಡ್ಡದು. ಕುಬ್ಜ ದೇಹದ, ಅಪೂರ್ವ ಹೃದಯದ ಅವರ ಪರಂಪರೆಗೆ ಸಾಠಿಯಾಗುವುದು ಸುಲಭ ಸಾಧ್ಯವಲ್ಲ.

Writer - ಸಂಜಯ್ ಹಜಾರಿಕಾ

contributor

Editor - ಸಂಜಯ್ ಹಜಾರಿಕಾ

contributor

Similar News