ಈ ಪೋಸ್ಟರ್ ಗಳನ್ನು ನೋಡಲು ಮರೆಯದಿರಿ , ಮರೆತು ನಿರಾಶರಾಗದಿರಿ

Update: 2016-03-12 07:28 GMT

ನ್ಯೂಯಾರ್ಕ್ ಸಬ್ ವೇ ಗಳಲ್ಲಿ ನಿಮಗೆ ಯಾವತ್ತೂ ಏನಾದರೊಂದು ಅಚ್ಚರಿ ಇದ್ದೇ ಇರುತ್ತೆ. ಈಗ ಸೃಜನಶೀಲ ಪೋಸ್ಟರ್ ಸರಣಿಯ ಸರದಿ. ಹೊಸ ಡಾಕ್ಯುಮೆಂಟರಿ ಚಿತ್ರವೊಂದರ ಪ್ರಚಾರಕ್ಕಾಗಿ ಹಾಕಿರುವ ಪೋಸ್ಟರ್ ಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ಈ ಡಾಕ್ಯುಮೆಂಟರಿಯ ಹೆಸರು " ದಿ ಮುಸ್ಲಿಮ್ಸ್ ಆರ್ ಕಮಿಂಗ್ " !

ಈಗ 144 ಕಡೆ ಹಾಕಲಾಗಿರುವ ಈ ಪೋಸ್ಟರ್ ಗಳಲ್ಲಿ ಮುಸ್ಲಿಮರ ಬಗ್ಗೆ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಪೂರ್ವಗ್ರಹಗಳನ್ನು ತಮಾಷೆ ಮಾಡಲಾಗಿದೆ. ಮುಸ್ಲಿಮರ ಕುರಿತ ತಪ್ಪು ಗ್ರಹಿಕೆಗಳನ್ನು ಹಾಸ್ಯದ ಮೂಲಕ ದೂರ ಮಾಡುವ ಜೊತೆಗೆ ಹೊಸ ಸಾಕ್ಷ್ಯ ಚಿತ್ರಕ್ಕೆ ಭರ್ಜರಿ ಪ್ರಚಾರವನ್ನೂ ನೀಡುತ್ತಿರುವ ಈ ವಿಶಿಷ್ಟ ಪೋಸ್ಟರ್ ಗಳು ಈಗ ಪ್ರತಿದಿನ ಸಾವಿರಾರು ಪ್ರಯಾಣಿಕರ ನಗೆಗೆ ಕಾರಣವಾಗಿವೆ. 

ಇಬ್ಬರು ಹಾಸ್ಯಗಾರರು ಹಾಗು ನಿರ್ದೇಶಕರು ಈ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿ , ಪೋಸ್ಟರ್ ಅಭಿಯಾನವನ್ನು ರೂಪಿಸಿದ್ದಾರೆ. ಅವರಲ್ಲೊಬ್ಬರಾದ  ನೆಗಿನ್ ಫ಼ರ್ಸದ್ " ಈಗ  ಮುಸ್ಲಿಮರೆಂದರೆ ಮರುಭೂಮಿಯಲ್ಲಿ ಆಯುಧ ಹಿಡಿದುಕೊಂಡು ಅಲೆದಾಡುವ ಹಳೆಕಾಲದ ಜನರು ಎಂಬಂತಹ ಇಮೇಜ್ ಅನ್ನು ನಿರ್ಮಿಸಲಾಗಿದೆ. ಅದಕ್ಕೆ ಎದುರಾಗಿ ಮುಸ್ಲಿಮರ ಇನ್ನೊಂದು ಇಮೇಜ್ ಅನ್ನು ಪರಿಚಯಿಸುವುದು ನಮ್ಮ ಉದ್ದೇಶ " ಎಂದು ಹೇಳಿದ್ದಾರೆ. 

ಈ ಪೋಸ್ಟರ್ ಜಾಹಿರಾತುಗಳನ್ನು  ನ್ಯೂಯಾರ್ಕ್ ಸಬ್ ವೇ ನೋಡಿಕೊಳ್ಳುವ ಸಾರಿಗೆ ಪ್ರಾಧಿಕಾರ " ರಾಜಕೀಯ ಅಂಶವಿದೆ " ಎಂಬ ಕಾರಣ ನೀಡಿ ತಿರಸ್ಕರಿಸಿತ್ತು.  ಆದರೆ ನ್ಯಾಯಾಲಯ ಇದರಲ್ಲಿ ರಾಜಕೀಯ ಇಲ್ಲ ಎಂದು ಅವರುಗಳಿಗೆ ಹಸಿರು ನಿಶಾನೆ ನೀಡಿತು. 

courtesy : http://indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News