ಎಲ್ಲಿಸಲ್ಲುವರಯ್ಯಗಾಂಧಿ ತಾತ?

Update: 2016-03-13 18:34 GMT

ಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರೆನಿಸಿರುವ ಭಗತ್ ಸಿಂಗ್, ರಾಜ್ ಗುರು, ಸುಖದೇವ, ನೇತಾಜಿ ಸುಭಾಶ್ಚಂದ್ರ ಬೋಸ್ ಅಂದು ತಮ್ಮ ಜೀವ ಬಲಿದಾನಕ್ಕೆ ಸಿದ್ಧರಾಗಿ ಹೋರಾಡುತ್ತಿದ್ದ ವೇಳೆ ಅಂದಿನ ಹಿಂದುತ್ವವಾದಿ ನಾಯಕರು ಏನು ಮಾಡುತ್ತಿದ್ದರು?
 

ಇಂಗ್ಲೆಡ್ ನಲ್ಲಿ ಉನ್ನತ ಕಾನೂನು ವ್ಯಾಸಂಗ ಮೂಲಕ ಪ್ರತಿಷ್ಠೆಯ ಬಾರ್‌ಎಟ್‌ಲಾ ಪದವಿ ಸಂಪಾದಿಸಿದ ಮೋಹನದಾಸ ಕರಮ ಚಂದ ಗಾಂಧಿ 19ನೆ ಶತಮಾನದ ಕೊನೆಯ ದಶಕದಲ್ಲಿ ವೃತ್ತಿ ಜೀವನ ಆರಂಭಿಸಲು ದಕ್ಷಿಣ ಆಫ್ರಿಕಾ ತಲುಪುತ್ತಾರೆ. ಆಫ್ರಿಕಾದಲ್ಲಿ ಅಲ್ಲಿಯ ಮೂಲ ನಿವಾಸಿಗಳಾದ ಕರಿಯ (ನೀಗ್ರೊ)ರಿಗೆ ಬಿಳಿಯರು ಮಾಡುತ್ತಿದ್ದ (ಜನಾಂಗೀಯ) ಶೋಷಣೆಯ ಪ್ರಕಾರಗಳನ್ನು ಕಂಡು ಗಾಂಧಿಯವರು ವಿಚಲಿತರಾಗುತ್ತಾರೆ. ಚಲಿಸುವ ರೈಲಿನಿಂದಬಿಳಿಯರು ತನ್ನನ್ನೇ ಹೊರದಬ್ಬಿದಾಗ ಅದನ್ನು ಪ್ರತಿಭಟಿಸುವ ಛಾತಿ ತೋರಿಸುತ್ತಾರೆ ಗಾಂಧಿ. ಹೀಗೆ ಅವರಿಗೆ ಅರಿವಿಲ್ಲದೆ ಅವರಲ್ಲಿ ಬೀಜಾಂಕುರವಾಗುತ್ತದೆ. ಅನ್ಯಾಯ ಮತ್ತು ಶೋಷಣೆಯನ್ನು ಪ್ರತಿಭಟಿಸಿ ಹೋರಾಡುವ ಮನೋಭೂಮಿಕೆ, ಮುಂದೆ ಕೆಲವೆ ವರ್ಷ ಮಾತ್ರವೇ ದ.ಆಫ್ರಿಕಾದಲ್ಲಿದ್ದ ಗಾಂಧಿ 20ನೆ ಶತಮಾನದ ಆರಂಭದಲ್ಲಿ ಸ್ವದೇಶಕ್ಕೆ ಮರಳುತ್ತಾರೆ. ಇಲ್ಲಿ ಮತ್ತೆ ಅದೇ ಬಿಳಿಯ ಬ್ರಿಟಿಷ್ ವಸಾಹತುಶಾಹಿ ಶಕ್ತಿಗಳ ಕಪಿಮುಷ್ಟಿಯ ದಬ್ಬಾಳಿಕೆಯಿಂದ ನಲುಗಿ ಹೋಗಿರುವ ದೇಶ ಮತ್ತು ದೇಶವಾಸಿಗಳನ್ನು ಕಂಡು ಮರುಗುತ್ತಾರೆ. ದೇಶ ಎದುರಿಸುತ್ತಿದ್ದ ಈ ಗಂಭೀರ ಸಮಸ್ಯೆಯ ಬಗ್ಗೆ ಚಿಂತಿಸುತ್ತಾ ದೇಶದ ಉದ್ದಗಲ ಸುತ್ತುತ್ತಾರೆ. ಹೀಗೆ ಆರಂಭವಾಗುತ್ತದೆ ಗಾಂಧಿಯವರ ಸುದೀರ್ಘ ಸ್ವಾತಂತ್ರ್ಯ ಹೋರಾಟದ ಪಯಣ. ದೇಶದಾದ್ಯಂತ ಪ್ರಥಮ ಬಾರಿಗೆ ದೇಶವಾಸಿಗಳಿಗೆ ತಮ್ಮ ದಾಸ್ಯದ ಬಗ್ಗೆ ಅರಿವು ಮೂಡಿಸುತ್ತಾ ಎಲ್ಲೆಡೆ ಬಡಿದೆಬ್ಬಿಸುತ್ತಾರೆ-ಸ್ವಾತಂತ್ರದ ಕಿಚ್ಚು. ಹೀಗೆ ವಿವಿಧ ಹಂತದ, ವಿವಿಧ ಮಜಲುಗಳ ನಾಲ್ಕು ದಶಕಗಳ ಸುದೀರ್ಘ ಸ್ವಾತಂತ್ರ್ಯ ಹೋರಾಟದ ಪರಿಣಾಮ ಸುಮಾರು 160 ವರ್ಷಗಳಿಗೂ ಮೀರಿದ್ದ ಬ್ರಿಟಿಷ್ ದಬ್ಬಾಳಿಕೆ ಕೊನೆಗೊಂಡು 1947ರ ಆಗಸ್ಟ್ 15ರದು ದೇಶಕ್ಕೆ ಪೂರ್ಣ ಸ್ವರಾಜ್ಯ ತಂದುಕೊಡುತ್ತಾರೆ ಗಾಂಧೀಜಿ. ಈ ಸುಧೀರ್ಘ ಅಹಿಂಸಾ ಮಾರ್ಗ (ಕನಿಷ್ಠ ಸಾವು ನೋವುಗಳ)ದ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ ಪರಿಯನ್ನು ಕಂಡು ದೇಶವಾಸಿಗಳು ಮತ್ತು ಜಗತ್ತು ಮೋಹನ್ ಕರಮಚಂದ ಗಾಂಧಿಯವರನ್ನು ಗೌರವ ಆದರಗಳೊಂದಿಗೆ, ಮಹಾತ್ಮ ಗಾಂಧಿ ಎಂದು ಕರೆದರು.
 ಹೀಗೆ ಒಂದೆಡೆ ಗಾಂಧೀಜಿಯವರು ದೇಶ ಮತ್ತು ದೇಶ ವಾಸಿಗಳನ್ನು ಸುದೀರ್ಘ ಬ್ರಿಟಿಷ್ ದಾಸ್ಯದಿಂದ ಬಿಡುಗಡೆಗೊಳಿಸಿದರೆ, ಇನ್ನೊಂದೆಡೆ ಶತಮಾನ ಕಾಲದಿಂದ ಹಿಂದೂ ಸಮಾಜದಲ್ಲಿ ಅಂತರ್ಗತವಾಗಿದ್ದ ಅನಿಷ್ಟ ಜಾತಿ ವ್ಯವಸ್ಥೆ ಮತ್ತು ಹಲವು ತೆರನಾದ ಶೋಷಣೆಗಳ ಬಗೆಗೇಕೆ ಅವರು ವೌನವಾಗಿದ್ದರು ಎಂಬ ಸಹಜ ಪ್ರಶ್ನೆಗಳು ಮತ್ತು ಗಂಭೀರ ಆರೋಪಗಳು ಮುಂದಿನ ದಿನಗಳಲ್ಲಿ ಕೇಳಿಬರುತ್ತದೆ. ಹೌದು, ಈ ದೇಶದಲ್ಲಿ ಆಚರಣೆಯಲ್ಲಿದ್ದ ಚತುರ್ವಣ್ಯ ಆಧಾರಿತ ಜಾತಿ ಮತ್ತು ಕಸುಬುಗಳನ್ನು ಬಳಸಿ ಹಿಂದೂ ಸಮಾಜದ ಒಟ್ಟು ಜನಸಂಖ್ಯೆಯ ಕೇವಲ ಶೇ.10ರ ಒಳಗಿದ್ದ ಮೇಲ್ಜಾತಿ/ವರ್ಗಗಳು ಶೇ.70 ಕ್ಕೂ ಮೀರಿದ್ದ ಕೆಳಜಾತಿಗಳ ಜನಸಮುದಾಯವನ್ನು ವಿವಿಧ ಪ್ರಕಾರಗಳಲ್ಲಿ ಶತಮಾನ ಕಾಲದಿಂದ ಶೋಷಿಸುತ್ತಲೇ ಬಂದಿದ್ದರು. ಈ ಶೋಷಣೆಗಳು ಅದೆಷ್ಟು ಅಸಹ್ಯ ಮತ್ತು ಅಮಾನುಷವಾಗಿತ್ತೆಂದರೆ-ಉಳ್ಳವರು ಮೃಷ್ಟಾನ್ನ ಉಂಡು ತೇಗಿ ವಿಸರ್ಜಿಸುವ ಮಲಮೂತ್ರವನ್ನು ತಲೆಮೇಲೆ ಹೊತ್ತು ಹೊರಹಾಕಲು ಭಂಗಿ ಇಲ್ಲವೇ ತೋಟಿಗಳೆಂಬ ಸಮಾಜವನ್ನು ಸೃಷ್ಟಿಸಿದ್ದರು. ಈ ಮೇಲ್ವರ್ಗಗಳ ಜನ ತಾವು ಸಾಕುವ ನಾಯಿ, ಬೆಕ್ಕುಗಳನ್ನು ತಮ್ಮ ಮನೆ, ಬೆಡ್ ರೂಂವರೆಗೂ ಬಿಟ್ಟು ಪ್ರೀತಿಸಬಲ್ಲರು. ಆದರೆ ಮನುಷ್ಯರನ್ನು ಕೆಳಜಾತಿಯ ಅಸ್ಪಶ್ಯರೆಂದು ಅವರನ್ನು ಮುಟ್ಟುವುದು ಬಿಡಿ, ಅವರ ನೆರಳು ಮೈಗೆ ಸೋಂಕಿದರೂ ಮೂರು ಸಲ ಸ್ನಾನ ಮಾಡಿ ಶುದ್ಧ ಮಾಡಿಕೊಳ್ಳುತ್ತಿದ್ದರು! ಈ ಕ್ರೂರ, ಅಮಾನುಷ ಶೋಷಣೆಗಳು ಬಹು ವ್ಯಾಪಕವಾಗಿ ಆಚರಣೆಯಲ್ಲಿದ್ದ ಕೇರಳದಲ್ಲಿ ಅಂದು ಸಮಾಜ ಸುಧಾರಕರಾಗಿ ಹೋರಾಟವನ್ನು ಸಂಘಟಿಸಿದ್ದ ಶ್ರೀ ನಾರಾಯಣ ಗುರುಸ್ವಾಮಿಗಳನ್ನು ಮಾನ್ಯ ಗಾಂಧೀಜಿಯವರು ಭೇಟಿಯಾದ ಸಂದರ್ಭದಲ್ಲಿ ಸ್ವಾಮೀಜಿಯವರು ಅವರಿಗೆ ಈ ಅನಿಷ್ಟ ಶೋಷಣೆಯ ಬಗ್ಗೆ ವಿವರಿಸಿದ್ದರೆಂದು ತಿಳಿದು ಬರುತ್ತದೆ. ಶತಶತಮಾನಳಿಂದ ಇಂತಹ ಶೋಷಣೆಯ ವಿವಿಧ ಪ್ರಕಾರಗಳು ಹಿಂದೂ ಸಮಾಜದಲ್ಲಿ ಅಂತರ್ಗತವಾಗಿದ್ದರೂ ಹಿಂದೂ ಸಮಾಜದ ಮತ್ತು ದೇಶದ ಉದ್ದಾರಕರೆಂದು ತಮ್ಮನ್ನು ತಾವೇ ಅಧಿಕೃತ ಪೇಟೆಂಟ್ ಹೋಲ್ಡರ್‌ಗಳಂತೆ ಬ್ರಾಂಡ್ ಮಾಡುತ್ತ, ದೇಶ ಮತ್ತು ಹಿಂದೂ ಸಮಾಜದ ಭವ್ಯ, ದಿವ್ಯ ಮತ್ತು ಉಜ್ವಲ ಪರಂಪರೆ ಬಗ್ಗೆ ತಾಸುಗಟ್ಟಲೆ ಮಾತಾಡಿದ್ದರೂ ಸಾಲದು ಇವರಿಗೆ. ಏನದು ಇವರು ತಾಸುಗಟ್ಟಲೆ ಕೊರೆಯುವ ಭವ್ಯ, ದಿವ್ಯ ಪರಂಪರೆ? ತಮ್ಮಂತೆ ಇರುವ ಮನುಷ್ಯರನ್ನು ಮಲ ಹೊರುವ ಭಂಗಿ, ತೋಟಿ ಅಸ್ಪಶ್ಯರೆಂದು ಶೋಷಣೆ ಮಾಡಿರುವುದು, ಇದೇ ತಾನೇ ಇವರ ಭವ್ಯ ದಿವ್ಯ ಉಜ್ವಲ ಪರಂಪರೆ!
ಮೇಲಿನ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಉಲ್ಲೇಖಿಸುವಾಗ ಇನ್ನೊಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಪ್ರಸ್ತುತವಾಗುತ್ತದೆ. ಇತ್ತೀಚೆಗೆ ಬಿಜೆಪಿಯ ಪದಾಧಿಕಾರಿಯೊಬ್ಬರು ಅಖಂಡ ವಿಶಾಲ ಭಾರತ ರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ಇವರು ಪ್ರಸ್ತಾಪಿಸುವ ಅಖಂಡ ವಿಶಾಲ ಭಾರತ ಪಶ್ಚಿಮ/ವಾಯವ್ಯದ ಗಾಂಧಾರ (ಈಗಿನ ಕಂದಹಾರ, ಅಫ್ಘಾನಿಸ್ತಾನ) ದೇಶದಿಂದ ಪೂರ್ವದ ಬರ್ಮಾ (ಈಗಮ್ಯಾನ್ಮಾರ್) ದೇಶದ ಗಡಿಗೆ ಹೊಂದಿಕೊಂಡಿರುವ ಮಣಿಪುರ (ಮಹಾಭಾರತದ ರಾಣಿ ಪ್ರಮೀಳೆಯ ಸ್ತ್ರೀ ಸಾಮ್ರಾಜ್ಯ) ದೇಶದವರೆಗೆ ಮತ್ತು ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಇರುವ ಈ ಪ್ರದೇಶ ಇತಿಹಾಸ ಮೂಲಕ ನಾವೆಲ್ಲ ಓದಿ ತಿಳಿದಂತೆ ನೂರಾರು ಸಣ್ಣ ಪುಟ್ಟ ಸ್ವತಂತ್ರ ಸಂಸ್ಥಾನ/ದೇಶಗಳಿಂದ ಕೂಡಿತ್ತು. ಅಂದು ಈ ಭೂ ಪ್ರದೇಶ ಒಂದೇ ಆಡಳಿತದ ಭಾರತ ದೇಶವಾಗಿರಲಿಲ್ಲ. ಬ್ರಿಟಿಷರು 19 ನೆ ಶತಮಾನದ ಪೂರ್ವಾರ್ಧದಲ್ಲಿ ವ್ಯಾಪಾರ ನಿಮಿತ್ತ ಇಲ್ಲಿ ಬಂದಾಗ ಇಲ್ಲಿನ ವಿಪುಲ ನೈಸರ್ಗಿಕ ಸಂಪತ್ತುಗಳನ್ನು ಗಮನಿಸಿ ಈ ಪ್ರದೇಶವನ್ನು ಸ್ವಾಧೀನಗೊಳಿಸುವ ಉದ್ದೇಶದಿಂದ ಮೇಲಿನ ಸಂಸ್ಥಾನ / ದೇಶಗಳ ರಾಜ ಮಹಾರಾಜರುಗಳ ಮಧ್ಯೆ ಇದ್ದ ವೈಮನಸ್ಸು ಮತಭೇದಗಳನ್ನು ಬಳಸಿ ಅವರ ಮಧ್ಯೆ ಇನ್ನಷ್ಟು ವೈಮನಸ್ಸನ್ನು ಹಚ್ಚಿ (ಈಜಿಜಿಛಿ ಚ್ಞ ್ಕ್ಠ್ಝಛಿ) ಸುಲಭವಾಗಿಯೇ ತಮ್ಮ ಆಡಳಿತದ ಸಾಮ್ರಾಜ್ಯವನ್ನು ಕಟ್ಟಿದ್ದರು. ಬ್ರಿಟಿಷರು ಅಂದು ಮೇಲಿನ ಈ ಭೂ ಪ್ರದೇಶವನ್ನು ಪ್ರಥಮ ಬಾರಿಗೆ ರಾಜಕೀಯವಾಗಿ ಇಂಡಿಯಾ (ಐಘೆಈಐಅ) ಎಂದು ಕರೆದರು ವಿನಹ ಅದು ಹಿಂದೆಂದೂ ಇವರು ಹೇಳುವಂತೆ ಅಖಂಡ ವಿಶಾಲಭಾರತ ಎಂಬ ಒಂದೇ ದೇಶವಾಗಿರಲಿಲ್ಲ.
ದೇಶಾಭಿಮಾನಿ ಹಿಂದುತ್ವವಾದಿಗಳು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ್ದರೇ?


ಗಾಂಧೀಜಿಯವರು ಅಂದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶದ ಉದ್ದಗಲಕ್ಕೆ ಸಂಚರಿಸಿ ಸ್ವಾತಂತ್ರ ಹೋರಾಟವನ್ನು ಸಂಘಟಿಸುತ್ತಿದ್ದರೆ, ಅಂದಿನ ಹಿಂದುತ್ವವಾದಿಗಳಾದ ಗುರುಗೋಳ್ವಾಲ್ಕರ್, ವೀರಸಾವರ್ಕರ್, ಹೆಗಡೇವಾರ್ ಮತ್ತು ಅವರ ಅನುಯಾಯಿಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದೂ ಮಹಾಸಭಾ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿ ತಮ್ಮ ಹಿಂದುತ್ವದ ಪರವಾದ ಚಟುವಟಿಕೆಗಳಲ್ಲಿ ತೊಡಗಿದ್ದರೇ ವಿನಹ ಎಂದೂ ದೇಶದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ. ಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರೆನಿಸಿರುವ ಭಗತ್ ಸಿಂಗ್, ರಾಜ್ ಗುರು, ಸುಖದೇವ, ನೇತಾಜಿ ಸುಭಾಶ್ಚಂದ್ರ ಬೋಸ್ ಅಂದು ತಮ್ಮ ಜೀವ ಬಲಿದಾನಕ್ಕೆ ಸಿದ್ಧರಾಗಿ ಹೋರಾಡುತ್ತಿದ್ದ ವೇಳೆ ಮೇಲಿನ ಹಿಂದುತ್ವವಾದಿ ನಾಯಕರು ಏನು ಮಾಡುತ್ತಿದ್ದರು? ಇವರ ಅನುಯಾಯಿಗಳ ಪೈಕಿ ಯಾರೇ ಒಬ್ಬನಾದರೂ ಭಗತ್ ಸಿಂಗ್ ಜತೆ ಬಲಿದಾನ ಮಾಡಿದ್ದ ಉದಾಹರಣೆ ಇದೆಯೇ? ಅಂದು ಅಂತಹ ಯಾವುದೇ ತ್ಯಾಗ ಬಲಿದಾನ ಮಾಡದೇ ಈಗ ಆ ಮಹಾಪುರಷರ ಕಥೆಯನ್ನು ಇಂದಿನ ಮುಗ್ಧ ಯುವಕರಿಗೆ ಹೇಳಿ ಮೈರೋಮಾಂಚನಗೊಳಿಸಿ ತಮ್ಮ ಕಾರ್ಯ ಸಾಧನೆಗಾಗಿ ಬಳಸಲು ಇವರಿಗೆ ಯಾವ ನೈತಿಕ ಹಕ್ಕು ಇದೆ? ಹೀಗೆ ಅತ್ತ ಗಾಂಧೀಜಿ ನೇತೃತ್ವದ ಚಳುವಳಿ, ಇಲ್ಲವೇ ಕ್ರಾಂತಿಕಾರಿಗಳ ಉಗ್ರ ಸ್ವಾತಂತ್ರ ಹೋರಾಟ ಯಾವುದರಲ್ಲೂ ಭಾಗವಹಿಸದೆ ಮೇಲಿನ ಆದರಣೀಯ ನಾಯಕರ ಹೆಸರುಗಳನ್ನು ಕೇವಲ ತಮ್ಮ ಉದ್ದೇಶ ಸಾಧನೆಗಳಿಗೆ ಬಳಸುತ್ತಿರುವುದನ್ನು ಇಂದಿನ ಯುವ ಪೀಳಿಗೆ ಪ್ರಶ್ನಿಸಲೇಬೇಕಾಗಿದೆ. ನಾಲ್ಕು ದಶಕಗಳ ಸುದೀರ್ಘ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಶಕ್ತಶಾಲಿ ಬ್ರಿಟಿಷ್ ಸರಕಾರವನ್ನು ಗಾಂಧೀಜಿ ತಮ್ಮ ಹೋರಾಟದ ಮೂಲಕ ಎಷ್ಟೇ ಕೆಣಕಿದ್ದರೂ ಎಂದೂ ಬ್ರಿಟಿಷರಿಗೆ ಅವರ ಕೂದಲ ಕೊಂಕಲೂ ಸಾಧ್ಯವಾಗಿರಲಿಲ್ಲ. ಆದರೆ ಸ್ವತಂತ್ರ ಭಾರತದಲ್ಲಿ ನಮಗೆ ಮಹಾತ್ಮಾಗಾಂಧಿಯವರನ್ನು ಆರು ತಿಂಗಳ ಕಾಲವೂ ಉಳಿಸಲು ಸಾಧ್ಯವಾಯಿತೇ? ಆ ನಿಸ್ವಾರ್ಥ ತ್ಯಾಗಮಯಿ ಮಹಾತ್ಮಾ ಗಾಂಧೀಜಿಯ ಕೊಲೆ ಮಾಡಿದವರು ಯಾರು? ಈ ಮಹಾನ್ ದೇಶಭಕ್ತರೆಂದು ಬುರುಡೆ ಬಿಡುವ ಗೋಡ್ಸೆ ಪಂಥದ ಉಗ್ರ ಹಿಂದೂ ವಾದಿಗಳು ತಾನೇ? ಅಂದರೆ ದೇಶ ಭಕ್ತಿ ರಾಷ್ಟ್ರಾಭಿಮಾನ ಪದಗಳ ದುರ್ಬಳಕೆ ಇವರು ಮಾಡುತ್ತಿಲ್ಲವೇ? ಸದ್ಯ ಈ ನಕಲಿ ದೇಶಾಭಿಮಾನಿಗಳ ಕಥೆ ಬದಿಗಿಟ್ಟು, ಗಾಂಧೀಜಿ ಮೇಲಿನ ಆರೋಪದ ಬಗ್ಗೆ ಚರ್ಚಿಸೋಣ. ಗಾಂಧೀಜಿಯವರು ಸ್ವಾತಂತ್ರ ಸಂಗ್ರಾಮವನ್ನು ಸಂಘಟಿಸುವ ಮೊದಲು ದೇಶ ವ್ಯಾಪಿ ಬೇರಾರೂ ಅಷ್ಟು ಪರಿಣಾಮಕಾರಿಯಾಗಿ ಪ್ರಯತ್ನಿಸಿದ ಉದಾಹರಣೆ ಕಂಡು ಬರುವುದಿಲ್ಲ. ಹೌದು, ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್, ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಉಗ್ರ ಹೋರಾಟ ಸಂಘಟಿಸಿದ್ದರೂ ಅದು ಒಟ್ಟಾರೆ ದೇಶಮಟ್ಟದ ಸ್ವಾತಂತ್ರ್ಯ ಸಂಗ್ರಾಮ ಆಗಿರಲಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಗಾಂಧೀಜಿ ಸಂಘಟಿಸಿದ ಸ್ವಾತಂತ್ರ ಹೋರಾಟದಲ್ಲಿ ಮೂರು ವಿಚಾರಗಳನ್ನು ಗಮನಿಸಬಹುದಾಗಿದೆ. ಮೊದಲ ವಿಚಾರ- ಸಮಗ್ರ ದೇಶವನ್ನು ಸ್ವಾತಂತ್ರ್ಯ ಚಳವಳಿಗೆ ತೊಡಗಿಸಿ, ನಾಲ್ಕು ದಶಕಗಳ ನಿರಂತರ ಹೋರಾಟದ ಮೂಲಕ ಈ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟ ಕೀರ್ತಿಯ ಅಗ್ರಶ್ರೇಯ ನಿಸ್ಸಂದೇಹವಾಗಿ ಗಾಂಧೀಜಿಯವರಿಗೆ ಸಲ್ಲುತ್ತದೆ. ಎರಡನೆಯದಾಗಿ ಜಗತ್ತಿನಲ್ಲೇ ಪ್ರಥಮಬಾರಿಗೆ ಬೃಹತ್ ಹಾಗೂ ಸುದೀರ್ಘ ಅಹಿಂಸಾ ಮತ್ತು ಶಾಂತಿಯುತ ಚಳುವಳಿ (ಅಂದರೆ ಕನಿಷ್ಠ ಸಾವು ನೋವುಗಳ) ಮೂಲಕ ಒಂದು ಬೃಹತ್ ಸಾಮ್ರಾಜ್ಯಶಾಹೀ ಶಕ್ತಿಯನ್ನು ಮಣಿಸಿ ದೇಶವನ್ನು ಸ್ವತಂತ್ರಗೊಳಿಸಿರುವ ವಿಚಾರ ಜಗತ್ತಿಗೇ ಒಂದು ಮಾದರಿ ಹೋರಾಟವಾಗಿ ಕಂಡಿತ್ತು.
ಮೂರನೆಯದಾಗಿ ಮೇಲೆ ವಿವರಿಸಿರುವಂತೆ ಭಾರತೀಯ ಸಮಾಜ ಎಂದೂ ಒಂದು ಸಮಾನ ತಳಹದಿಯ ಏಕತೆಯ ಸಮಾಜವಾಗಿರದೆ ಸಾವಿರಾರು ಜಾತಿ, ಉಪಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ವೈರುಧ್ಯವುಳ್ಳ ಸಮಾಜವಾಗಿತ್ತು ಅಥವಾ ಆರೀತಿ ಮಾಡಲಾಗಿತ್ತು. ಇದೂ ಅಲ್ಲದೆ ದೇಶದ ಉದ್ದಗಲಕ್ಕೂ ತಮ್ಮ ತಮ್ಮ ನೂರಾರು ಸಾಮ್ರಾಜ್ಯಗಳನ್ನು ಸ್ಥಾಪಿಸಿ ರಾಜ್ಯಭಾರ ಮಾಡುತ್ತಿದ್ದ ರಾಜ /ಮಹಾರಾಜರು, ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಒಂದಾಗಿಸಿ ಆ ಮಹಾನ್ ಸ್ವಾತಂತ್ರ್ಯ ಚಳುವಳಿಯನ್ನು ಗಾಂಧೀಜಿ ಸಂಘಟಿಸಿದ ರೀತಿ ಒಂದು ಅಪೂರ್ವ ಮಾದರಿ, ಹೌದು, ಈ ಮೂರನೆಯ ಅಂಶದಲ್ಲೇ ಅಡಗಿದೆ ಗಾಂಧೀಜಿ ವಿರುದ್ಧದ ಆರೋಪಗಳಿಗೆ ಉತ್ತರ. ಾಂಧೀಜಿಯವರ ಪ್ರಥಮ ಆದ್ಯತೆ ದೇಶದ ಸ್ವಾತಂತ್ರ್ಯ:
ಹೌದು, ಗಾಂಧೀಜಿಯವರು ದೇಶದ ಉದ್ದಗಲ ಸುತ್ತಿದ್ದಾಗ ದೇಶದ ಅನಿಷ್ಠ, ಅಸಮಾನ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿಲ್ಲ ಎನ್ನಲು ಸಾಧ್ಯವಿಲ್ಲ. ಅಂದಿನ ಶಿಕ್ಷಣ ವ್ಯವಸ್ಥೆ ಮೇಲ್ವರ್ಗಗಳಿಗೆ ಸೀಮಿತವಾಗಿದ್ದರಿಂದ ಸ್ರ್ಯಾತಂತ್ರ್ಯ ಚಳುವಳಿಯ ಸ್ಥಳೀಯ ನಾಯಕತ್ವ ಹೆಚ್ಚಾಗಿ ಸುಶಿಕ್ಷಿತರಾಗಿದ್ದ ಮೇಲ್ಜಾತಿಯವರ ಕೈಯಲ್ಲೆ ಇದ್ದರೆ ಅದು ಸ್ವಾಭಾವಿಕವಾಗಿತ್ತು. ಇಂತಹ ಸನ್ನಿವೇಶದಲ್ಲಿ ತನ್ನ ಆದ್ಯತೆಯ ಸ್ವಾತಂತ್ರ ಚಳುವಳಿಯೊಂದಿಗೆ ಸಮಾಜ ಸುಧಾರಣೆಯತ್ತ ಗಾಂಧೀಜಿ ಮನಸ್ಸು ಮಾಡಿದ್ದೇ ಆದರೆ ಬಹುತೇಕ ಮೇಲ್ಜಾತಿ ನಾಯಕರ ಕೈಯಲ್ಲೇ ಇದ್ದ ಸ್ವಾತಂತ್ರ ಚಳುವಳಿ ದಿಕ್ಕು ತಪ್ಪುವ ಸಾಧ್ಯತೆ ಇತ್ತು. ಹೀಗೆ ಅವರು ತಮ್ಮ ಆದ್ಯತೆಯನ್ನು ಸ್ವಾತಂತ್ರ ಚಳುವಳಿಗೆ ಸೀಮಿತಗೊಳಿಸಿ, ಅವಕಾಶ ಲಭಿಸಿದಾಗ ಗ್ರಾಮ ಸ್ವರಾಜ್ಯ (ದೀನ ದಲಿತರು ಹಳ್ಳಿಗಳಲ್ಲೇ ಬಹು ಸಂಖ್ಯೆಯಲ್ಲಿ ವಾಸಿಸುವ ಕಾರಣಕ್ಕೆ ಅವರು ಗ್ರಾಮಸ್ವರಾಜ್ಯ ಅಂದರೆ ಆ ದೀನ ದಲಿತರ ಸ್ವರಾಜ್ಯ ಎಂದೇ ಹೇಳಿರಲು ಸಾಧ್ಯ) ಸ್ವಚ್ಚಗ್ರಾಮ ಇತ್ಯಾದಿ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರೆ ವಿನಹ ಸಾಮಾಜಿಕ ಸುಧಾರಣೆಯಂತಹ ವಿಚಾರವನ್ನು ಬಹುತೇಕ ಮತ್ತೊಂದು ಅನುಕೂಲ ಸಂದರ್ಭಕ್ಕಾಗಿ ಅವರು ಮುಂದೂಡಿರಬಹುದೆಂದು ಹೇಳಬಹುದು. ಅಸ್ಪಶ್ಯರನ್ನು ಇತರೇ ಸಮಾಜದ ಎಲ್ಲರೂ ಗೌರವದಿಂದ ಕಾಣುವಂತಾಗಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರನ್ನೂ ಹರಿಜನ ಅಥವಾ ದೇವರ ಮಕ್ಕಳೆಂದು ಕರೆದು ಅಮೂಲಕ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತಿಳಿದಿದ್ದೇನೆ ಎಂದು ಸೂಚಿಸಿರಬಹುದೆ? ಇನ್ನೊಂದು ಮಹತ್ವದ ವಿಚಾರವೇನೆಂದರೆ, ಗಾಂಧೀಜಿ ಎಂದೂ ತಮ್ಮ ಸ್ವಾರ್ಥದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅವರಿಗೆ ಸ್ವಾರ್ಥ ಇಲ್ಲ ಎಂದಾದರೆ ಅವರು ಯಾರನ್ನಾದರೂ, ಅದರಲ್ಲೂ ಶೋಷಿತವರ್ಗಗಳನ್ನು ಉದ್ದೇಶ ಪೂರ್ವಕವಾಗಿ ಉಪೇಕ್ಷಿಸುವ ಅವಶ್ಯಕತೆ ಇತ್ತೇ?


ಸಂವಿಧಾನ ಶಿಲ್ಪಿ ಡಾ॥
ಮೇಲೆ ವಿವರಿಸಿರುವಂತೆ ಬಲ ಪಂಥೀಯರೆನಿಸಿರುವ ಹಿಂದುತ್ವವಾದಿಗಳು ಎಂದೂ ಗಾಂಧಿವಾದವನ್ನು ಮಾನ್ಯ (ರಾಜಕೀಯ ಲಾಭಕ್ಕೆ ಬಳಸುವುದರ ಹೊರತಾಗಿ) ಮಾಡಿದ್ದೇ ಇಲ್ಲ. ಮಾನ್ಯ ಮಾಡುವುದು ಬಿಡಿ, ಬ್ರಿಟಿಷರಿಗೆ ಸಾಧ್ಯವಾಗದ ಗಾಂಧೀಜಿ ಅವರ ಬರ್ಬರ ಹತ್ಯೆ ಮಾಡಿದ ಇವರು ಸಮಗ್ರ ಗಾಂಧಿವಾದವೆನ್ನೆ ಮುಗಿಸಲು ಯತ್ನಿಸುತ್ತಿರುವವರು. ಇನ್ನು ಎಡ ಪಂಥೀಯರು ಗಾಂಧೀವಾದವನ್ನು ತೀವ್ರವಾಗಿ ಟೀಕಿಸದಿದ್ದರೂ ಅವರನ್ನು ಎಂದೂ ಪೂರ್ತಿ ಸಮರ್ಥಿಸಿಕೊಂಡವರೂ ಅಲ್ಲ. ಇನ್ನೊಂದೆಡೆ ಅಂಬೇಡ್ಕರ್‌ವಾದಿಗಳು ಇತ್ತೀಚೆಗಿನ ದಿನಗಳಲ್ಲಿ ಗಾಂಧೀವಾಧದ ಉಗ್ರ ವಿರೋಧಿಗಳಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಲೇಖಕನ ಪ್ರಶ್ನೆ ಇಷ್ಟೆ- ಎಲ್ಲಿ ಸಲ್ಲುವರಯ್ಯ ನೀ ಗಾಂಧೀ ತಾತಾ?
 

Writer - ಸ್.ವಿ. ಅಮೀನ್

contributor

Editor - ಸ್.ವಿ. ಅಮೀನ್

contributor

Similar News