ವಿಶ್ವಸಂಸ್ಕೃತಿ ಉತ್ಸವ ಒಂದು ದುಃಸ್ವಪ್ನ-ಕಲಾವಿದರು
ರವಿವಾರ ಸಮಾರೋಪಗೊಂಡ ರವಿಶಂಕರರ ಆರ್ಟ್ ಆಫ್ ಲಿವಿಂಗ್‌ನ ‘ವಿಶ್ವ ಸಂಸ್ಕೃತಿ ಉತ್ಸವ’ವು ಪ್ರತಿಯೊಬ್ಬರ ಪಾಲಿಗೂ ಒಂದು ಭವ್ಯ ಕಾರ್ಯಕ್ರಮವಾಗಿತ್ತು... ಅಲ್ಲಿ ಪ್ರದರ್ಶನ ನೀಡುತ್ತಿದ್ದ ಕಲಾವಿದರನ್ನು ಹೊರತುಪಡಿಸಿ. ಒದ್ದೆ ಬಟ್ಟೆಗಳಲ್ಲೇ ಪ್ರದರ್ಶನವನ್ನು ನಿಲ್ಲಿಸಿದವರಿಂದ ಹಿಡಿದು ಯಮುನಾ ತೀರದಲ್ಲಿಯ ಮಂದ ಬೆಳಕಿನ ಕೆಸರು ರಸ್ತೆಯಲ್ಲಿ ಕಾಲೆಳೆದುಕೊಂಡು ಹೋಗುತ್ತಿದ್ದ ಶಾಲಾ ಮಕ್ಕಳವರೆಗೆ ಎಲ್ಲರ ಪಾಲಿಗೆ ಇದೊಂದು ದುಃಸ್ವಪ್ನದ ಅನುಭವವಾಗಿತ್ತು.
ಫ್ರಾನ್ಸ್‌ನ ಕಥಕ ನೃತ್ಯ ಕಲಾವಿದೆ ಓಲ್ಗಾ ಶೆಪೆಲಿಯಾನ್ಸ್ಕಿಯಾ ಅವರು ಆರು ತಿಂಗಳ ಹಿಂದೆಯೇ ಮಾ.11 ಮತ್ತು 13ರಂದು ತನ್ನ ನೃತ್ಯ ಪ್ರದರ್ಶನ ನೀಡಲು ಅಣಿಯಾಗಿದ್ದರು. ಉದ್ಘಾಟನಾ ಅಧಿವೇಶನದಲ್ಲಿ 8,500 ಕಲಾವಿದರೊಂದಿಗೆ ಅವರು ನೃತ್ಯ ಪ್ರದರ್ಶನ ನೀಡಿದ್ದರು. ರವಿವಾರದ ಸಮಾರೋಪ ಸಮಾರಂಭದಲ್ಲಿಯೂ ಅವರು ನೃತ್ಯ ಪ್ರದರ್ಶನ ನೀಡಬೇಕಾಗಿತ್ತು. ದರೆ ನಾನು ಅಂತಿಮ ದಿನದ ಕಾರ್ಯಕ್ರಮದಿಂದ ಹಿಂದೆ ಸರಿದೆ ಎಂದು ವಿಶ್ವಸಂಸ್ಥೆಗೆ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ನಗರಾಭಿವೃದ್ಧಿ ಕುರಿತು ಸಲಹೆಗಾರರಾಗಿರುವ ಓಲ್ಗಾ ಹೇಳಿದರು. ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿ ಕಾರ್ಯಕ್ರಮದ ಮೊದಲಿನ ಪರಿಸರ ಹಾನಿ ಕುರಿತ ಕಳವಳಕಾರಿ ಸುದ್ದಿಗಳು ನನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಮಾಡಿದ್ದವು. ದರೆ ಸಂಘಟಕರಿಗೆ ಮಾತು ನೀಡಿದ್ದರಿಂದ ಕಾರ್ಯಕ್ರಮ ನೀಡಲು ನಿರ್ಧರಿಸಿದ್ದೆ. ಎಷ್ಟೆಂದರೂ ಅದು ಗುರೂಜಿಯವರ ಕಾರ್ಯಕ್ರಮವಾಗಿತ್ತು. ಆದರೆ ಕಲಾವಿದರು ಅನುಭವಿಸಬೇಕಾಗಿ ಬಂದ ಅಮಾನವೀಯ ಸ್ಥಿತಿಯನ್ನು ಕಂಡು ನಾನು ಆಘಾತಗೊಂಡಿದ್ದೇನೆ ಎಂದರು.ಾರ್ಯಕ್ರಮದ ಮೊದಲ ಎರಡು ದಿನಗಳ ಕಾಲ ಸುರಿದ ಮಳೆ ಕಲಾವಿದರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿತ್ತು. ಅವರು ಕುಳಿತುಕೊಳ್ಳಲು ಕಾರ್ಪೆಟ್‌ಗಳನ್ನು ಹಾಸಲಾಗಿತ್ತಾದರೂ ಅವು ಒದ್ದೆಯಾಗಿದ್ದವು. ಅಷ್ಟೇ ಅಲ್ಲ...ಅವುಗಳ ಮೇಲೆ ಅಲ್ಲಲ್ಲಿ ನೀರೂ ತುಂಬಿಕೊಂಡಿತ್ತು. ಕಲಾವಿದರಲ್ಲಿ ಹೆಚ್ಚಿನವರು.. ವಿಶೇಷವಾಗಿ ಮಕ್ಕಳು ತಮ್ಮ ಕಲಾ ಪ್ರದರ್ಶನ ಮುಗಿದಿದ್ದರೂ ಕಾರ್ಯಕ್ರಮದುದ್ದಕ್ಕೂ ಆ ನರಕದಲ್ಲಿಯೇ ಕುಳಿತುಕೊಳ್ಳುವಂತಾಗಿತ್ತು. ಜೊತೆಗೆ ಸೊಳ್ಳೆಗಳ ಕಾಟ ಅವರ ಸಹನೆಯನ್ನು ಕೊನೆಯವರೆಗೂ ಪರೀಕ್ಷಿಸಿತ್ತು. ಕೆಲವು ಡ್ಯಾನ್ಸ್ ಅಕಾಡಮಿಗಳ ಮಕ್ಕಳು ಈಗ ಜ್ವರದಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿಗಾಗಿ ಅನೇಕರು ತತ್ವಾರ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಿಷ್ಟು ಸಾಲದು ಎಂಬಂತೆ ಎಳೆಯ ಹೆಣ್ಣುಮಕ್ಕಳನ್ನು ಕರೆದೊಯ್ಯಬೇಕಾಗಿದ್ದ ಬಸ್ಸುಗಳು ಕೊನೆಗೂ ಬಾರದೇ ಅವರೆಲ್ಲ ಚಿಂತೆಯಲ್ಲಿ ಮುಳುಗುವಂತಾಗಿತ್ತು.ಂಟು ವರ್ಷ ಪ್ರಾಯದ ಎಳೆಯ ಹೆಣ್ಣುಮಕ್ಕಳೂ ಅಲ್ಲಿದ್ದರು. ಆದರೆ ಕಾರ್ಯಕ್ರಮದ ನಂತರ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಸ್ವಯಂಸೇವಕರು ನಾಪತ್ತೆಯಾಗಿದ್ದರು. ಬಸ್ಸುಗಳು ಮತ್ತು ಕಾರುಗಳು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಗ್ರೀನ್‌ರೂಮ್‌ವರೆಗೆ ಬರಲು ಸಾಧ್ಯವಿಲ್ಲದ ಸ್ಥಿತಿ ಸೃಷ್ಟಿಯಾಗಿತ್ತು ಎಂದು ಮನೋಜ ಶರ್ಮಾ ಹೇಳಿದರು. ಅವರ 11ರ ಹರೆಯದ ಪುತ್ರಿ ಅನಿಷ್ಕಾ ಕೂಡ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಳು.
ಭರವಸೆ ನೀಡಿದ್ದಂತೆ ಸಂಘಟಕರು ಅನಿಷ್ಕಾಳನ್ನು ಬಸ್ಸಿನಲ್ಲಿ ಮನೆಗೆ ಕರೆತಂದು ಬಿಟ್ಟಿರಲಿಲ್ಲ. ಬೆಳಗ್ಗೆ ಏಳೂವರೆಗೆ ತೆರಳಿದ್ದ ಮಗು ವಾಪಸ್ ಬರದಿದ್ದಾಗ ಶರ್ಮಾ ತನ್ನ ಕಾರಿನಲ್ಲಿ ಯಮುನಾ ತೀರಕ್ಕೆ ತೆರಳಿದ್ದರು. ದೀಪದ ವ್ಯವಸ್ಥೆ ಸರಿಯಿರದಿದ್ದ ಆ ಸ್ಥಳದಲ್ಲಿ ಮಗಳನ್ನು ಹುಡುಕುವಾಗ ಅವರಿಗೆ ಸಾಕಾಗಿಬಿಟ್ಟಿತ್ತು. ಕೊನೆಗೂ ಮಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಮನೆ ಸೇರಿದಾಗ ಗಡಿಯಾರದಲ್ಲಿ ನಸುಕಿನ ಎರಡು ಹೊಡೆದಿತ್ತು.
ರವಿವಾರವೂ ಅನಿಷ್ಕಾ ಇನ್ನೊಂದು ಪ್ರದರ್ಶನ ನೀಡಬೇಕಾಗಿತ್ತು. ಆದರೆ ಜಾಣ ಹುಡುಗಿ ಅದನ್ನು ರದ್ದುಪಡಿಸಿ ಮನೆಯಲ್ಲೇ ಹಾಯಾಗಿರಲು ನಿರ್ಧರಿಸಿದ್ದಳು.