ಪ್ರತೀದಿನ ಬೇಕಾದರೂ ಮಟನ್ ತಿನ್ನುತ್ತೇನೆ ಆಹಾರದ ಗುಟ್ಟು ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರಲ್ಲಿ ಕೇಳಿ
ಬಾಲಿವುಡ್‌ನ ಜನಪ್ರಿಯ ನಟ ರಣವೀರ್ ಸಿಂಗ್‌ರಿಗೆ ಪ್ರಿಯವಾಗಿರುವುದು ಸಿಹಿಗೆಣಸು, ಇಂಡಿಯನ್ ಚೈನೀಸ್ ಮತ್ತು ಚಾಕೋಲೇಟ್ ಫಡ್ಜ್ ಆಹಾರ! ಹೌದು, ರಣವೀರ್ ಸಿಂಗ್‌ರಿಗೆ ಸಿಹಿ ಎಂದರೆ ಇಷ್ಟ. ವಾಸ್ತವದಲ್ಲಿ ಅವರ 32 ಹಲ್ಲುಗಳೂ ಸಿಹಿಯನ್ನೇ ಕಚ್ಚಲು ಬಯಸುತ್ತವೆ. ಆದರೆ ಭಾರತೀಯ-ಚೀನೀ ಮಸಾಲೆಭರಿತ ಆಹಾರವೂ ಅವರಿಗೆ ಇಷ್ಟ.
ಕ್ಯಾಲೊರಿಗಳು ಏರುತ್ತವೆ ಎಂದುಕೊಂಡು ಆಹಾರದಲ್ಲಿ ಮಿತಿ ಮಾಡಲು ಅವರಿಗೆ ಇಷ್ಟವಿಲ್ಲ. ರಜಾ ಇರುವಾಗ ಸರಿಯಾಗಿ ತಿಂದುಂಡು ಮಾಡುತ್ತಾರೆ. ನಟನೆಯಿಂದ ನಿವೃತ್ತಿಯಾದ ದಿನ ಗೋವಾಗೆ ಹೋಗಿ ಅಡುಗೆ ಮಾಡುವುದು ಮತ್ತು ಚಿತ್ರ ಬರೆಯುವುದರಲ್ಲಿಯೇ ಅವರು ಕಾಲ ಕಳೆಯುತ್ತಾರಂತೆ!
ಹಾಗಿದ್ದರೆ ಪ್ರತೀ ದಿನ ತಿನ್ನಬೇಕು ಎಂದು ಅವರು ಬಯಸುವ ಆಹಾರ ಯಾವುದು? ಕುರಿಮಾಂಸ! ಕುರಿ ಮಾಂಸದಲ್ಲಿ ಮಾಡಿದ ಯಾವುದೇ ಅಡುಗೆಯಾದರೂ ನನಗೆ ಇಷ್ಟ. ಹೈದರಾಬಾದಿ ಮತ್ತು ಲಖನೌ ಶೈಲಿಯ ಮಟನ್ ತಿನಿಸುಗಳನ್ನು ಚಪ್ಪರಿಸಿ ತಿನ್ನುತ್ತೇನೆ. ಖಾರವಿರುವ ಆಹಾರ ನನಗೆ ಇಷ್ಟವಾಗುತ್ತದೆ. ಮಟನ್ ಮಸಾಲೆಯನ್ನು ರೋಟಿಗಳ ಜೊತೆಗೆ ಕೊಟ್ಟರೆ ಬಹಳ ಇಷ್ಟವಾಗುತ್ತದೆ ಎನ್ನುವುದು ರಣವೀರ್ ಅಭಿಪ್ರಾಯ.
ಭಾರತೀಯ ಮತ್ತು ಚೀನೀ ಅಡುಗೆಯ ಮಿಶ್ರಣವನ್ನು ರಣವೀರ್ ಬಯಸುತ್ತಾರೆ. ಬಹಳಷ್ಟು ಮಂದಿಗೆ ಪೂರ್ಣ ಚೀನೀ ಆಹಾರ ಇಷ್ಟ. ಆದರೆ ನನಗಲ್ಲ. ಭಾರತೀಯ-ಚೀನೀ ಅಡುಗೆ ನನಗಿಷ್ಟ. ಅದರಲ್ಲಿ ಹಗುರವಾದ ಮಸಾಲೆಯ ಜೊತೆಗೆ ಸರಿಯಾದ ಪ್ರಮಾಣದಲ್ಲಿ ವಸ್ತುಗಳನ್ನು ಬೆರೆಸಿರುತ್ತಾರೆ ಎನ್ನುತ್ತಾರೆ ರಣವೀರ್.
ಸಿಹಿಯ ವಿಷಯಕ್ಕೆ ಬಂದರೆ ರಣವೀರ್‌ಗೆ ಚಾಕೋಲೇಟುಗಳು ಬಹಳ ಇಷ್ಟ. ಚಾಕೋಲೇಟ್ ಕೇಕ್ ಅನ್ನು ವೆನಿಲಾ ಐಸ್ ಕ್ರೀಮ್ ಜೊತೆಗೆ ಅಥವಾ ಚಾಕೋಲೇಟ್ ತುಂಬಿದ ಮಕರಾನ್‌ಗಳನ್ನು ಅವರು ಇಷ್ಟಪಡುತ್ತಾರೆ. ನನಗೆ ಸಿಹಿ ಇಷ್ಟ. ದೀಪಾವಳಿಗೆ ನನ್ನ ಅಜ್ಜಿ ಲಡ್ಡುಗಳನ್ನು ಮಾಡಿ ತಿನಿಸುತ್ತಾಳೆ. ಅದು ನನಗೆ ಇಷ್ಟವಾಗುತ್ತದೆ ಎನ್ನುತ್ತಾರೆ ರಣವೀರ್.