ಹಾಲಾಹಲ: 68% ಹಾಲು ಕಲಬೆರಕೆ

Update: 2016-03-17 03:56 GMT

ದೇಶದಲ್ಲಿ ಸುಮಾರು ಶೇ.68ರಷ್ಟು ಹಾಲು ಆಹಾರ ನಿಯಂತ್ರಕರು ಹೇಳಿರುವ ಗುಣಮಟ್ಟವನ್ನು ಹೊಂದಿರುವುದಿಲ್ಲ. ಹಾಲಿನಲ್ಲಿ ಕಂಡು ಬರುವ ಅತೀ ಸಾಮಾನ್ಯವಾದ ಕಲಬೆರಕೆಗಳು ಎಂದರೆ ಕಾಸ್ಟಿಕ್ ಸೋಡ, ಗ್ಲುಕೋಸ್, ಬಿಳಿ ಪೈಂಟ್ ಮತ್ತು ಸಂಸ್ಕರಿತ ಎಣ್ಣೆ. ಇವುಗಳು ಅತೀ ಅಪಾಯಕಾರಿ ಮತ್ತು ಗಂಭೀರ ರೋಗಗಳಿಗೆ ಕಾರಣವಾಗಬಹುದು ಎನ್ನುವ ವಿಷಯ ಲೋಕಸಭೆಯಲ್ಲಿ ಚರ್ಚೆಗೆ ಬಂದಿದೆ.


ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷ ವರ್ಧನ್ ಪ್ರಶ್ನೋತ್ತರ ಸಮಯದಲ್ಲಿ ಈ ವಿಷಯವನ್ನು ತಿಳಿಸಿ ಹೊಸ ಸ್ಕಾನರ್ ಒಂದನ್ನು 40 ಸೆಕೆಂಡುಗಳಲ್ಲಿ ಹಾಲಿನ ಕಲಬೆರಕೆ ಪತ್ತೆ ಮಾಡಲು ಅಭಿವೃದ್ಧಿಪಡಿಸಿರುವ ಸುದ್ದಿ ಹೇಳಿದ್ದಾರೆ.

ಈ ಸ್ಕಾನರ್ ಯಾವ ವಸ್ತುವನ್ನು ಕಲಬೆರಕೆ ಮಾಡಲಾಗಿದೆ ಎನ್ನುವುದನ್ನೂ ಪತ್ತೆ ಹಚ್ಚುತ್ತದೆ ಎನ್ನಲಾಗಿದೆ. ಈ ಮೊದಲು ಪ್ರತೀ ವಿಭಿನ್ನ ರೀತಿಯ ಕಲಬೆರಕೆಗೆ ಭಿನ್ನ ರಾಸಾಯನಿಕ ಪರೀಕ್ಷೆಯ ಅಗತ್ಯವಿತ್ತು. ಈಗ ಏಕ ಸ್ಕಾನರ್ ಆ ಕೆಲಸವನ್ನು ಮಾಡಬಲ್ಲದು. ಆದರೆ ಈ ಸ್ಕಾನರುಗಳನ್ನು ಸಂಸದರು ತಮ್ಮ ಕ್ಷೇತ್ರಕ್ಕೆ ನೀಡಿರುವ ನಿಧಿಯಿಂದ ಖರೀದಿಸಬೇಕು ಎಂದು ಹೇಳಿದಾಗ ಸದಸ್ಯರ ನಡುವೆ ಕಲರವ ಕೇಳಿಬಂತು.

ಸ್ಕಾನರ್‌ಗಳು ದುಬಾರಿಯಾಗಿದ್ದರೂ, ಪ್ರತೀ ಪರೀಕ್ಷೆಗೆ ರು. 10 ಪೈಸಾ ಅಷ್ಟೇ ಬೀಳಲಿದೆ. ಭವಿಷ್ಯದಲ್ಲಿ ಹಾಲು ಎಲ್ಲಿಂದ ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಲೂ ಜಿಪಿಎಸ್ ಆಧರಿತ ತಂತ್ರಜ್ಞಾನ ಅಳವಡಿಸುವ ವ್ಯವಸ್ಥೆಯ ಬಗ್ಗೆಯೂ ಸಚಿವರು ವಿವರ ನೀಡಿದರು. ದೇಶದಲ್ಲಿ 2 ಲಕ್ಷ ಹಳ್ಳಿಗಳಿಂದ ಹಾಲು ಸಂಗ್ರಹಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News